Homeಅಂಕಣಗಳುಕಳೆದು ಹೋದ ದಿನಗಳು -24: ಶಾಪ್ ಸಿದ್ಧೇಗೌಡ ಚಿನ್ನದ ಪದಕದ ಸ್ಥಾಪಕರ ಕುರಿತು

ಕಳೆದು ಹೋದ ದಿನಗಳು -24: ಶಾಪ್ ಸಿದ್ಧೇಗೌಡ ಚಿನ್ನದ ಪದಕದ ಸ್ಥಾಪಕರ ಕುರಿತು

- Advertisement -
- Advertisement -

ನಂತರ ಗಣಪಯ್ಯನವರು ಸಕ್ರಿಯ ರಾಜಕಾರಣದಿಂದ ಹೆಚ್ಚೂ ಕಡಿಮೆ ದೂರವಿದ್ದರು. ಕೃಷಿ ಮತ್ತು ಜನಸಂಪರ್ಕಗಳಲ್ಲಿ ಕಾಲ ಕಳೆಯುತ್ತಿದ್ದರು. ಹಾರ್ಲೆ ಎಸ್ಟೇಟಿಗೆ ಬಂದು ಹೋಗುತ್ತಿದ್ದ ಗಣ್ಯರು ನೂರಾರು ಮಂದಿ, ಅವರಲ್ಲಿ ಭಾನು ಪ್ರತಾಪ್ ಸಿಂಗ್, ಎ.ಎಸ್. ರಸ್ತೋಗಿ, ಪಿ.ಸಿ.ಚಾಕೋ, ಮುತ್ತುಸ್ವಾಮಿ ಗೌಂಡರ್, ಚಂದ್ರಶೇಖರ ಭೂಪಾಲಮ್, ಮುಂತಾದವರಿದ್ದರು. ಸಿ.ಎಂ.ಪೂಣಚ್ಚ, ಗ್ರೆಗೊರಿ ಮಥಾಯಿಸ್ ಮುಂತಾದವರ ತೋಟಗಳನ್ನು ಇವರೇ ನೋಡಿಕೊಳ್ಳುತ್ತಿದ್ದರಾದ್ದರಿಂದ ಅವರು ನಿರಂತರ ಸಂಪರ್ಕದಲ್ಲಿದ್ದರು.

ಅಷ್ಟು ದೊಡ್ಡ ವ್ಯವಹಾರಗಳನ್ನು ನಡೆಸುತ್ತಾ ರಾಷ್ಟ್ರ ಮಟ್ಟದಲ್ಲಿ ರಾಜಕಾರಣ ಮತ್ತು ರೈತ ಸಂಘಟನೆಗಳಲ್ಲಿ ಮುಂದಾಳುವಾಗಿದ್ದ ಅವರು ಸಾಮಾನ್ಯರ ಜೊತೆ ಅತಿ ಸಾಮಾನ್ಯರಾಗಿದ್ದರು. ಪ್ರತಿವಾರ ವಾರದ ಸಂತೆಗೆ ಅವರೇ ಹೋಗುವರು. ಇಡೀ ಸಂತೆಯಲ್ಲಿ ತಿರುಗಿ ತರಕಾರಿಯನ್ನು ಕೊಳ್ಳುವರು. ಅದೂ ಸಹಾ ಹೆಚ್ಚಾಗಿ ಮುದುಕರು ಮತ್ತು ಮಹಿಳೆಯರ ಬಳಿಯೇ ವ್ಯಾಪಾರ. ಸಂತೆಯಲ್ಲಿ ಮಾರುವ ಕರಿದ ತಿಂಡಿಗಳನ್ನು ಕೊಂಡು ಜೊತೆಯಲ್ಲಿ ಇದ್ದವರಿಗೂ ಕೊಡುವರು ಯಾರಾದರೂ, ಮಕ್ಕಳು ಮತ್ತು ಮುದುಕರು ಕಂಡರೆ ಅವರಿಗೂ ಹಂಚುವರು. ಇವೆಲ್ಲದರಿಂದ ಗಣಪಯ್ಯ ಒಂದು ವಾರ ಸಂತೆಗೆ ಬಾರದಿದ್ದರೆ “ಈ ವಾರ ಹಾರ್ಲೆ ಅಜ್ಜಾವ್ರು ಬಂದಿಲ್ಲ” ಎಂದು ಇಡೀ ಸಂತೆಯಲ್ಲಿ ಸುದ್ದಿಯಾಗುತ್ತಿತ್ತು. ಅವರು ಅಲ್ಲಿ ಕೊಳ್ಳುತ್ತಿದ್ದ ವಸ್ತುಗಳಿಗಿಂತೂ ಎಲ್ಲರನ್ನೂ ಮಾತಾಡಿಸುತ್ತ, ನಗುತ್ತ ತಿರುಗಾಡುತ್ತಿದ್ದುದೇ ನೋಡುಗರಿಗೆ ಒಂದು ವಿಶೇಷವಾಗಿತ್ತು. ಆ ಕ್ಷಣಗಳನ್ನು ಇಂದಿಗೂ ಅಲ್ಲಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಆಲಪ್ಪ ಶೆಟ್ಟಿ ಎಂಡ್ ಸನ್ಸ್

ಒಮ್ಮೆ ಸಂತೆಯಲ್ಲಿ ಜೀಪ್ ನಿಲ್ಲಿಸಿದ್ದರು. ಜೀಪು ನಿಂತಿದ್ದ ಸ್ಥಳದ ಪಕ್ಕದಲ್ಲಿಯೇ ಜಾಯ್ ಸೆಬಾಸ್ಟಿಯನ್ ಎಂಬವರೊಬ್ಬರ ಟೈರ್ ರಿಪೇರಿ ಅಂಗಡಿ. ಅದುವರೆಗೆ ಸಣ್ಣ ಪುಟ್ಟ ರಿಪೇರಿ ಕೆಲಸ ಮಾಡುತ್ತಿದ್ದವರು. ಟೈರ್ ರಿಟ್ರೆಡಿಂಗ್ ಕೆಲಸ ಪ್ರಾರಂಭಿಸಿದ್ದರು. ಅವರು ಗಣಪಯ್ಯನವರ ಜೀಪನ್ನು ನೋಡಿದರು. ನಾಲ್ಕೂ ಟೈರುಗಳು ಸಾಕಷ್ಟು ಸವೆದಿದ್ದವು.

ಆತ ಗಣಪಯ್ಯನವರ ಬಳಿ ಬಂದು “ಸಾರ್ ನಿಮ್ಮ ಜೀಪಿನ ಟೈರುಗಳು ಸವೆದಿವೆ, ಅದು ಪೂರ್ತಿ ಸವೆದರೆ ನೀವು ಹೊಸ ಟೈರು ಹಾಕಿಸಬಲ್ಲಿರಿ, ಆದರೆ ಈಗ ನನಗೆ ಕೊಟ್ಟರೆ ರಿಟ್ರೆಡ್ ಮಾಡಿ ಕೊಡುತ್ತೇನೆ. ನನಗೆ ಒಂದು ದಿನ ಮನೆಯಲ್ಲಿ ಎಲ್ಲರಿಗೂ ಊಟಕ್ಕೆ ಆಗುತ್ತದೆ” ಎಂದರು.

ಗಣಪಯ್ಯ ಆಗ “ನೋಡುವ” ಎಂದು ಹೇಳಿ ಮನೆಗೆ ಬಂದವರು ಮಾರನೆಯ ದಿನ ಡ್ರೈವರಲ್ಲಿ ಜೀಪು ಕೊಟ್ಟು ನಾಲ್ಕೂ ಟೈರುಗಳನ್ನು ರಿಟ್ರೆಡಿಂಗಿಗೆ ಅಲ್ಲಿಗೇ ಕೊಟ್ಟು ಕಳುಹಿಸಿದರು. ನಂತರ ವರ್ಷಗಳ ಕಾಲ ಹಾರ್ಲೆ ವಾಹನಗಳ ಟೈರುಗಳು ಸವೆದಾಗ ಅಲ್ಲಿಗೆ ಕಳುಹಿಸುತ್ತಿದ್ದರು.

ಸಾಮಾನ್ಯವಾಗಿ ಜೀಪನ್ನು ಅವರೇ ಡ್ರೈವ್ ಮಾಡುತ್ತಿದ್ದರು. ಕೆಲವು ಸಲ ಡ್ರೈವರ್ ಕರೆದೊಯ್ಯುವುದೂ ಇತ್ತು. ಯಾರ ಮನೆಗಾದರೂ ಮದ್ಯಾಹ್ನ ಹೋದರೆ ಡ್ರೈವರ್‌ಗೂ ಅವರ ಜೊತೆಯಲ್ಲೇ ಊಟ. ಅವರ ಮನೆಯಲ್ಲಿಯೂ ಅಷ್ಟೇ ಇಡೀ ಮನೆಗೆ ಎಲ್ಲರಿಗೂ ಮುಕ್ತ ಪ್ರವೇಶ ಅಲ್ಲಿ ಜಾತಿ, ವರ್ಗಗಳ ಪ್ರಶ್ನೆ ಇರಲಿಲ್ಲ.

ವಾಸಣ್ಣ ಶೆಟ್ಟರು

ಇತರ ದಿನಗಳಲ್ಲಿಯೂ ಅಷ್ಟೇ ಅವರ ಜೀಪು ಹೊರಟಿತೆಂದರೆ ಮನೆಯ ಎರಡು ನಾಯಿಗಳು ಮೊದಲು ಹತ್ತಿಕೂರುವವು. ಮತ್ತೆ ಜೀಪಿನ ತುಂಬ ಹಿಂದೆ ಮುಂದೆ ತೋಟದ ಕಾರ್ಮಿಕರ ಮಕ್ಕಳು. ಗಣಪಯ್ಯ ದಾರಿಯುದ್ದಕ್ಕೂ ಮಕ್ಕಳ ಜೊತೆ ಮಾತಾಡುತ್ತ ಮಕ್ಕಳಿಗೆ ಭಜನೆ ಹಾಡುಗಳನ್ನು ಹೇಳಿಕೊಡುತ್ತಾ ಹೋಗುವರು. ತೋಟದ ನೂರಾರು ಮಕ್ಕಳಲ್ಲಿ ಪ್ರತಿಯೊಬ್ಬನ ಹೆಸರೂ ಗಣಪಯ್ಯನವರಿಗೆ ತಿಳಿದಿತ್ತು. ದಾರಿಯಲ್ಲಿ ಕಂಡ ಅಂಗಡಿಯಲ್ಲಿ ಕಾಯಿ, ಬೆಲ್ಲ, ಕಡ್ಳೆಪುರಿ, ಮಿಠಾಯಿಗಳನ್ನು ಕೊಂಡು ತಾವೂ ತಿಂದು ಮಕ್ಕಳಿಗೆ ಹಂಚುವರು.  ಮಕ್ಕಳ ಕೂಗಾಟದಿಂದ ಇಡೀ ಊರಿಗೇ ಗಣಪಯ್ಯನವರ ಜೀಪು ಬಂತೆಂದು ತಿಳಿಯುತ್ತಿತ್ತು.

ಗಣಪಯ್ಯನವರು ಸಕಲೇಶಪುರಕ್ಕೆ ಬಂದು ನೆಲೆಸಿದ ನಂತರ ಇಲ್ಲಿ ಅವರ ಬಳಗ ಬೆಳೆಯುತ್ತ ಹೋಯಿತು.  ಅವರಲ್ಲಿ ಹಲವಾರು ಕ್ಷೇತ್ರಗಳ ಜನರಿದ್ದರು, ರಾಜಕೀಯ ವಲಯದವರಲ್ಲದೆ, ಕೃಷಿಕರು, ಕೃಷಿ ವಿಜ್ಞಾನಿಗಳು, ಶಿಕ್ಷಣ -ವೈದ್ಯಕೀಯ ಕ್ಷೇತ್ರಗಳವರು, ಮುಂತಾದವರೆಲ್ಲ ಇದ್ದರು.

ಸಕಲೇಶಪುರದ ಅಂದಿನ ಗಣ್ಯರೆಲ್ಲರೂ ಗಣಪಯ್ಯನವರ ಜೊತೆ ಇದ್ದವರೇ, ಆಲಪ್ಪ ಶೆಟ್ಟಿ ಎಂಡ್ ಸನ್ಸ್‌ನ ನಾಗರಾಜ ಶೆಟ್ಟರ ಅಂಗಡಿ, ಸಕಲೇಶಪುರದ ನಗರದಲ್ಲಿ ಗಣಪಯ್ಯನವರ ಕಛೇರಿಯಂತೇ ಇತ್ತು. ಪೇಟೆಗೆ ಬಂದಾಗ ಅಲ್ಲೇ ಕುಳಿತು ವ್ಯವಹಾರಗಳನ್ನು ಮುಗಿಸುವರು.  ಹಾರ್ಲೆಗೆ ಕೆಲಸ ಕೇಳಿಕೊಂಡು ಬರುವ ಹೊಸ ಉದ್ಯೋಗಾರ್ಥಿಗಳ ಸಂದರ್ಶನಗಳು ಕೂಡಾ ಅಲ್ಲೇ ನಡೆಯುತ್ತಿದ್ದವು.

ನಾಗರಾಜ ಶೆಟ್ಟರ ಸಹೋದರ ವಾಸಣ್ಣ ಶೆಟ್ಟರು ಗಾಂಧೀಜಿ ಅನುಯಾಯಿ. ಮದ್ಯಪಾನ ನಿಷೆಧ ಚಳುವಳಿಯಲ್ಲಿ ಮುಂದಾಳುವಾಗಿದ್ದವರು. ಸ್ವಾತಂತ್ರ್ಯಾನಂತರದಲ್ಲಿ ಮೊದಲ ಬಾರಿಗೆ ಸಕಲೇಶಪುರದ ಪುರಸಭಾಧ್ಯಕ್ಷರಾಗಿ ಆಯ್ಕೆಯಾದರು. ವಾಸಣ್ಣ ಶೆಟ್ಟರಿಗೆ ಏಲಕ್ಕಿ ವ್ಯಾಪಾರವಿತ್ತು. ಪುರಸಭೆಯಲ್ಲಿ ಹಣದ ಕೊರತೆ ಆದಾಗಲೆಲ್ಲ, ತಮ್ಮ ಹಣದಿಂದ ನೌಕರರರಿಗೆ ವೇತನ ಕೊಡುತ್ತಿದ್ದರಂತೆ. 1962 ರಲ್ಲಿ ಇವರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಸಕಲೇಶಪುರದ ಶಾಸಕರೂ ಆದರು. ಇವರ ಅಣ್ಣ ತಮ್ಮಂದಿರೂ ಸೇರಿದಂತೆ ಇಡೀ ಕುಟುಂಬ ಗಣಪಯ್ಯನವರ ಸ್ನೇಹಿತರಾಗಿದ್ದರು.

ಶಾಪ್ ಸಿದ್ದೇಗೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಸಕಲೇಶಪುರದಲ್ಲಿ ಇನ್ನೊಂದು ಕುಟುಂಬ ಶಾಪ್ ಸಿದ್ದೇಗೌಡರದ್ದು. ಅವರ ಕುಟುಂಬಕ್ಕೆ ಶಾಪ್ ಕುಟುಂಬ ಹೆಸರು ಬಂದದ್ದೇ ಒಂದು ರೋಚಕ ಕಥೆ.

ಸಕಲೇಶಪುರದ ಸಿದ್ಧೇಗೌಡರು 1860ರಲ್ಲಿ ಹುಟ್ಟಿದ ಸಿದ್ಧೇಗೌಡರದು ಸಾಕಷ್ಟು ಶ್ರೀಮಂತ ಮನೆತನ, ಆಗಲೇ ಸುತ್ತಮತ್ತ ಇದ್ದಂತಹ ಬ್ರಿಟಿಷ್ ಪ್ಲಾಂಟರುಗಳ ಒಡನಾಟ. ಸಿದ್ದೇಗೌಡರು ಸಕಲೇಶಪುರ ಉಪ್ಪಿನಂಗಡಿ ರಸ್ತೆಯ ನಿರ್ಮಾಣದ ಕಂಟ್ರಾಕ್ಟರ್ ಆಗಿದ್ದರಂತೆ. ಆಗಿ ಕಬ್ಬಿಣದ ಸೇತುವೆಗಳೆಲ್ಲ ಜರ್ಮನ್ ಇಂಜಿನಿಯರ್‌ಗಳ ಉಸ್ತುವಾರಿಯಲ್ಲಿ ಆದವುಗಳಂತೆ. ಕಬ್ಬಿಣ ಸಾಮಗ್ರಿಯೆಲ್ಲ ಇಂಗ್ಲೆಂಡಿನಿಂದ ಬರಬೇಕಾಗಿತ್ತು.

ಸಿದ್ಧೇಗೌಡರಿಗೆ ಕಾಫಿ ವ್ಯಾಪಾರವೂ ಇತ್ತು. ಅದರ ನಿಮಿತ್ತ ಮದ್ರಾಸಿಗೂ ಹೋಗಿ ಬರುತ್ತಿದ್ದರು. ಆಗ ಮದ್ರಾಸಿನಲ್ಲಿ ಸ್ಪೆನ್ಸರ್ ಎಂಡ್ ಕಂಪೆನಿಯ ಸರ್ವ ಸಾಮಗ್ರಿ ಮಳಿಗೆಯನ್ನು ನೋಡಿದ ಸಿದ್ಧಗೌಡರು 1895ರಲ್ಲಿ ಸಕಲೇಶಪುರದಲ್ಲಿ ಅಂತದ್ದೇ ಒಂದು ಸರ್ವಸಾಮಗ್ರಿ ಮಳಿಗೆಯನ್ನು ತೆರೆದರು, ಅದಕ್ಕೆ ಸಿದ್ಧೇಗೌಡ ಎಂಡ್ ಕಂಪೆನಿ ಎಂದು ಹೆಸರಿಟ್ಟರು. ಅಲ್ಲಿ ತೋಟಗಳಿಗೆ ಬೇಕಾದ ಉಪಕರಣಗಳು, ಕಟ್ಟಡ ಸಾಮಗ್ರಿಗಳು, ಆಹಾರ ಪದಾರ್ಥ, ಚರ್ಮದ ವಸ್ತುಗಳು, ಅಡಿಗೆ ಎಣ್ಣೆಗಳು, ಮಾಂಸಗಳು ಹಾಗೆಯೇ ಇತರ ಕಟ್ಲೆರಿ ಸಾಮಾನುಗಳಿಂದ ಹಿಡಿದು ಗುಂಡುಸೂಜಿಯವರೆಗೆ ಎಲ್ಲವೂ ದೊರೆಯುತ್ತಿತ್ತು. ಇಡೀ ಎರಡು ಮೂರು ತಾಲ್ಲೂಕಿನಲ್ಲಿ ಹರಡಿ ಹೋಗಿದ್ದ ಬ್ರಿಟಿಷ್ ಪ್ಲಾಂಟರುಗಳು ಇವರ ಗಿರಾಕಿಗಳು.

ಆಗ ಸುತ್ತ ಮತ್ತ ಹಲವರು ಸಿದ್ಧೇಗೌಡರು ಇದ್ದುದರಿಂದ ಬ್ರಿಟಿಷರು ಇವರನ್ನು ಶಾಪ್ ಸಿದ್ಧೇಗೌಡ ಎಂದು ಕರೆಯಲಾರಂಭಿಸಿದರು. ಮುಂದೆ ಅದೇ ಪ್ರಚಲಿತವಾಯಿತು.

ಇವರು ವೀರಶೈವರಾದ್ದರಿಂದ ಮಾಂಸದ ವಸ್ತುಗಳ ಮಾರಾಟಕ್ಕೆಂದು ಮದ್ರಾಸಿನಿಂದಲೇ ಲಬ್ಬೆಯವರ (ಪಠಾಣರು) ನಾಲ್ಕು ಕುಟುಂಬಗಳನ್ನು ಕರೆತಂದರು. ಹಾಗೆ ಬಂದ ಕುಟುಂಬವೊಂದರ ಕುಡಿ ಮುಂದೆ ಜಾನಪದ ಜಂಗಮರೆಂದು ಖ್ಯಾತರಾದ ಎಸ್.ಕೆ. ಕರೀಂಖಾನರು.

ಆ ಕಾಲದಲ್ಲಿ ಮಂಗಳೂರಿನ ಕಡೆಯಿಂದ ಬರುವ ಸರಕು ಪಾಣೆಮಂಗಳೂರಿನವರೆಗೆ ದೋಣಿಯಲ್ಲಿ ಬರುತ್ತಿತ್ತು. ಅಲ್ಲಿಂದ ಎತ್ತಿನ ಗಾಡಿಗಳಲ್ಲಿ ಅದು ಶಿರಾಡಿ ಘಾಟಿಯ ಮೂಲಕ ಸಕಲೇಶಪುರಕ್ಕೆ ಬರಬೇಕಿತ್ತು. ಈ ಸರಕು ಸಾಗಣೆಗಾಗಿ ಸಿದ್ದೇಗೌಡರು, ರಾಮನಗರದಿಂದ ಕೆಲವು ಮುಸ್ಲಿಂ ಕುಟುಂಬವನ್ನು ಕರೆತಂದಿದ್ದರಂತೆ. ಆ ಕುಟುಂಬಗಳೂ ಸಕಲೇಶಪುರದಲ್ಲಿಯೇ ನೆಲೆಸಿದರು.

ಈ ಸಿದ್ಧೇಗೌಡರ ಮೂರನೆಯ ಮಗನಿಗೂ ಸಿದ್ಧೇಗೌಡರೆಂದೇ ಇಟ್ಟಿದ್ದರು. ಇವರ ಕಾಲದಲ್ಲಿ ಅಂಗಡಿ ವ್ಯಾಪಾರ ಇನ್ನಷ್ಟು ವೃದ್ಧಿಯಾಯಿತಲ್ಲದೆ. ಈ ಎರಡನೆಯ ಸಿದ್ಧೇಗೌಡರು ಅಂಗಡಿಯ ಹೆಸರನ್ನು “ಶಾಪ್ ಸಿದ್ಧೇಗೌಡ ಎಂಡ್ ಕಂಪನಿ” ಎಂದು ಬದಲಾಯಿಸಿದರು. ನಂತರ ಇವರ ಕುಟುಂಬಕ್ಕೆ ಶಾಪ್ ಕುಟುಂಬ ಹೆಸರು ಬಂತು. 1930 ರವೇಳೆಗೆ ಇಂಗ್ಲೆಂಡಿನ ಪತ್ರಿಕೆಗಳಲ್ಲಿ ಇವರ ಅಂಗಡಿಯ ಜಾಹೀರಾತು ಪ್ರಕಟವಾಗುತ್ತಿತ್ತು.!

ನಗರ ಮದ್ಯದಲ್ಲಿ ದೊಡ್ಡ ಮಸೀದಿ

ಆ ಕಾಲದಲ್ಲಿ ಹಾಸನದಲ್ಲಿ ಕೂಡಾ ವಾರದ ಸಂತೆಯ ದಿನ ಮಾತ್ರ ಅಂಗಡಿಗಳು ತೆರದಿದ್ದು ಉಳಿದ ದಿನ ಮುಚ್ಚಿರುತ್ತಿದ್ದವಂತೆ. ಆದರೆ ಸಕಲೇಶಪುರದ ಇವರ “ಶಾಪ್ ಸಿದ್ಧೇಗೌಡ ಎಂಡ್ ಕೊ” ಇಡೀ ವಾರ ತೆರೆದಿರುತ್ತಿತ್ತು.

ಸಕಲೇಶಪುರದ ಶಾಪ್ ಸಿದ್ಧೇಗೌಡ ಹಿರಿಯ ಪ್ರಾಥಮಿಕ ಶಾಲೆ. ಶಾಪ್ ಬಸಪ್ಪ ಪಶುವೈದ್ಯಶಾಲೆ, ಕ್ರಾಫರ್ಡ್ ಆಸ್ಪತ್ರೆಯ ಒಂದು ವಾರ್ಡ್ ಮುಂತಾದವೆಲ್ಲ ಇವರ ಕುಟುಂಬದ ಕೊಡುಗೆ.

ಆಗ ಸಕಲೇಶಪುರದಲ್ಲಿ ಮಸೀದಿ ಇರಲಿಲ್ಲ. ಇವರು ಮದ್ರಾಸಿನಿಂದ ಮತ್ತು ರಾಮನಗರದಿಂದ ಕರೆತಂದ ಮುಸ್ಲಿಂ ಕುಟುಂಬಗಳೂ ಸೇರಿದಂತೆ ಎಲ್ಲ ಮುಸ್ಲಿಮರಿಗಾಗಿ ಸಕಲೇಶಪುರದಲ್ಲಿ ಇವರ ನೇತೃತ್ವ ಮತ್ತು ಸಹಾಯದಿಂದ ಮಸೀದಿಯೊಂದು ನಿರ್ಮಾಣವಾಯಿತು. ಅದೇ ಇಂದಿನ ಸಕಲೇಶಪುರದ ನಗರ ಮದ್ಯದಲ್ಲಿರುವ ದೊಡ್ದ ಮಸೀದಿ.

ಇಂದಿಗೂ ಈ ಮಸೀದಿ ಸಮಿತಿಯವರು ಇವರ ಗೌರವಾರ್ಥ ವರ್ಷದಲ್ಲಿ ಒಂದು ಹಬ್ಬದ ಸಂದರ್ಭದಲ್ಲಿ ಶಾಪ್ ಸಿದ್ದೇಗೌಡ ಕುಟುಂಬದವರನ್ನು ಮಸೀದಿಗೆ ಆಹ್ವಾನಿಸಿ ಗೌರವಿಸುತ್ತಾರೆ.

ಬ್ರಿಟಿಷರ ಒಡನಾಡಿಯಾಗಿದ್ದು, ಅವರ ಭಾಷೆಯನ್ನು ಕಲಿತು, ಅವರೊಂದಿಗೆ ನಿರಂತರ ವ್ಯವಹಾರವನ್ನು ಇಟ್ಟುಕೊಂಡಿದ್ದ ಸಿದ್ಧೇಗೌಡರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯಲ್ಲಿ ಉನ್ನತ ಶ್ರೇಣಿಗಳಿಸುವ ವಿದ್ಯಾರ್ಥಿಗಳಿಗೆ ಕೊಡಲಾಗುವ “ಶಾಪ್ ಸಿದ್ಧೇಗೌಡ ಚಿನ್ನದ ಪದಕ”ದ ಸ್ಥಾಪಕರು.!

ಈ ಕುಟುಂಬದ ಬಸಪ್ಪನವರು ಕಾಂಗ್ರೆಸ್ಸಿನಲ್ಲಿಇದ್ದು ಪುರಸಭಾದ್ಯಕ್ಷರೂ ಆಗಿದ್ದರು. ನಂತರದ ದಿನಗಳಲ್ಲಿ ಗಣಪಯ್ಯನವರ ನೇತೃತ್ವದ ಸ್ವತಂತ್ರ ಪಾರ್ಟಿ ಸೇರಿ ಸಕಲೇಶಪುರದಲ್ಲಿ ಸ್ವತಂತ್ರ ಪಕ್ಷದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದರು.

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಜನತಾ ಮನೆಗಳ ನಿರ್ಮಾಣಕ್ಕೆ ದಿನವೊಂದಕ್ಕೆ 70 ಕಿ.ಮೀ ಸೈಕಲ್ ತುಳಿಯುತ್ತಿದ್ದ ದಿನಗಳು – ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...