Homeಮುಖಪುಟ#NationalUnemploymentDay | ಪ್ರಧಾನಿ ಜನ್ಮದಿನದಂದೆ ಉದ್ಯೋಗ ಕೇಳಿದ ದೇಶದ ಜನತೆ

#NationalUnemploymentDay | ಪ್ರಧಾನಿ ಜನ್ಮದಿನದಂದೆ ಉದ್ಯೋಗ ಕೇಳಿದ ದೇಶದ ಜನತೆ

ಗ್ರಹಚಾರ ದಿವಸ - #अखंड_पनौती_दिवस - ಎಂಬ ಹ್ಯಾಶ್‌ಟ್ಯಾಗ್‌‌ ಕೂಡಾ ಟ್ರೆಂಡ್ ಆಗಿದೆ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ 71 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ದೇಶದ ಜನತೆ ಸಾಮಾಜಿಕ ಜಾಲತಾಣಗಳಲ್ಲಿ, ನಿರುದ್ಯೋಗದ ಬಗ್ಗೆ ಟ್ವೀಟ್ ಮಾಡಿ ಧ್ವನಿ ಎತ್ತಿದ್ದು, ರಾಷ್ಟ್ರೀಯ ನಿರುದ್ಯೋಗ ದಿನ(#NationalUnemploymentDay, #राष्ट्रीय_बेरोजगार_दिवस), ಮೋದಿ ನಮಗೆ ಉದ್ಯೋಗ ನೀಡಿ(#मोदी_रोजगार_दो), ಅಖಂಡ ಗ್ರಹಚಾರ ದಿವಸ (#अखंड_पनौती_दिवस) ಹ್ಯಾಶ್‌ಟ್ಯಾಗ್‌ಗಳು ಕ್ರಮವಾಗಿ ಟ್ವಿಟರ್‌ ಟ್ರೆಂಡ್‌‌‌ನಲ್ಲಿದೆ. ಇದರ ಜೊತೆಗೆ ‘ವಿಶ್ವ ಫೇಕು ದಿನ’ #WorldFekuDay ಮತ್ತು ಜುಮ್ಲಾ ದಿವಸ್ #JumlaDiwas ಹ್ಯಾಶ್‌ಟ್ಯಾಗ್‌ಗಳು ಕೂಡಾ ಟ್ರೆಂಡ್‌ ಆಗಿವೆ.

ಬಿಜೆಪಿ ಅವರ ಹುಟ್ಟುಹಬ್ಬವನ್ನು ಒಂದು ವಾರಗಳ ಕಾಲ ಆಚರಿಸುವುದಾಗಿ ಹೇಳಿದೆ. ಜೊತೆಗೆ ಬಿಜೆಪಿಯ ನಾಯಕರು, ಬೆಂಬಲಿಗರು ಸಾಮಾಜಿಕ ಜಾಲತಾಣಲ್ಲಿ ಪ್ರಧಾನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದು, ಈ ಹ್ಯಾಶ್‌ಟ್ಯಾಗ್‌ಗಳು 4 ಲಕ್ಷ ಟ್ವೀಟ್‌ಗಳಿದ್ದರೆ, ರಾಷ್ಟ್ರೀಯ ನಿರುದ್ಯೋಗ ದಿನ ಎಂಬ ಹಿಂದಿ ಹ್ಯಾಶ್‌ಟ್ಯಾಗ್‌ ಇದುವರೆಗೂ 11 ಲಕ್ಷ ಟ್ವೀಟ್‌ಗಳಾಗಿದೆ. ಉಳಿದ ಟ್ವೀಟ್‌ಗಳು ಕೂಡಾ ಕ್ರಮವಾಗಿ ಐದರಿಂದ ಎಂಟು ಲಕ್ಷಗಳವರೆಗೂ ಟ್ವೀಟ್‌ ಆಗಿದೆ.

ಇದನ್ನೂ ಓದಿ: #WorldFekuDay | ಪ್ರಧಾನಿ ಮೋದಿ ಜನ್ಮದಿನ – ‘ವಿಶ್ವ ಫೇಕು ದಿನ’ ಟ್ವಿಟರ್‌ ಟ್ರೆಂಡ್‌!

ಪ್ರಧಾನಿ ಮೋದಿಯ ಜನ್ಮದಿನವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಆಚರಿಸುವುದಾಗಿ ಕಾಂಗ್ರೆಸ್‌ ಸೇರಿದಂತೆ ಹಲವಾರು ವಿಪಕ್ಷಗಳು, ಜನಪರ ಸಂಘಟನೆಗಳು ಈ ಹಿಂದೆಯೆ ಹೇಳಿದ್ದವು. ಯುವ ಕಾಂಗ್ರೆಸ್‌ ಇಂದು ದೇಶದಾದ್ಯಂತ ಪ್ರತಿಭಟನೆಯನ್ನೂ ನಡೆಸುತ್ತಿದೆ.

ಟ್ವಿಟರ್‌ ಬಳಕೆದಾರ ವಿವೇಕ್ ಕುಮಾರ್‌ ಅವರು, “ನಿರುದ್ಯೋಗದ ಬಗ್ಗೆ ಇತ್ತೀಚಿನ ಎನ್‌ಸಿಆರ್‌ಬಿ ವರದಿ ಭಯಾನಕವಾಗಿದೆ. ಈ ವಿಷಯದ ಕುರಿತು ತುರ್ತು ಚಿಂತನೆಯ ಅಗತ್ಯವಿದ್ದು, ರಾಜಕೀಯ ಪಕ್ಷಗಳು ಈ ವಿಷಯವನ್ನು ಜವಾಬ್ದಾರಿಯಿಂದ ತೆಗೆದುಕೊಳ್ಳಬೇಕು” ಎಂದು ಟ್ವೀಟ್ ಮಾಡಿದ್ದಾರೆ. ನಿರುದ್ಯೋಗ ಸಂಬಂಧಿ ಆತ್ಮಹತ್ಯೆಗಳು 2016 ರಿಂದ 2019 ರವರೆಗೆ 24% ಹೆಚ್ಚಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ವರದಿಯ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಮುಕ್ತಾರ್‌ ರಾವ್‌ ಅವರು, “ಆಗಸ್ಟ್ 2021 ರ ಸಾಂಕ್ರಾಮಿಕ ಸಮಯದಲ್ಲಿ ಸುಮಾರು 15 ಲಕ್ಷ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇದೇ ಸಮಯ ಗ್ರಾಮೀಣ ಭಾಗದ ಸುಮಾರು 13 ಲಕ್ಷ ಜನರು ಕೆಲಸ ಕಳೆದುಕೊಂಡಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಹುಟ್ಟುಹಬ್ಬವನ್ನು ‘ನಿರುದ್ಯೋಗ, ಜುಮ್ಲಾ ದಿನ’ವನ್ನಾಗಿ ಆಚರಿಸಲು ಸಜ್ಜು

ಹಂಸರಾಜ್ ಮೀನಾ ಅವರು, “ಹಲೋ ಪ್ರಧಾನಿ ನರೇಂದ್ರ ಮೋದಿ, ನೀವು ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದೀರಿ. ಆದರೆ ನಿಮ್ಮ ಸರ್ಕಾರವು 7 ವರ್ಷಗಳಲ್ಲಿ 12.50 ಕೋಟಿ ಯುವಕರ ಉದ್ಯೋಗಗಳನ್ನು ಕಸಿದುಕೊಳ್ಳುವ ಕೆಲಸವನ್ನು ಮಾಡಿದೆ. ಇದು ನೇರವಾಗಿ ಯುವಕರ ಭವಿಷ್ಯದ ಜೊತೆ ಮಾಡುವ ವಂಚನೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೀಶ್ ಆನಂದ್ ಅವರು, “ಪ್ರಧಾನಿಗೆ ಒಂದೇ ಒಂದು ಪ್ರಶ್ನೆ, 14 ಕೋಟಿ ಉದ್ಯೋಗಗಳು ಎಲ್ಲಿ?” ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ಚುನಾವಣೆಯ ಪ್ರಣಾಳಿಕೆಯಲ್ಲಿ ಒಂದು ಕೋಟಿ ಉದ್ಯೋಗವನ್ನು ನೀಡುವುದಾಗಿ ಹೇಳಿದ್ದರು.

ಇದನ್ನೂ ಓದಿ: ಮುಂಬೈ ದಾಳಿಯ ಬಗ್ಗೆ ಮನಮೋಹನ್‌ ಸಿಂಗ್ ಅವರನ್ನು ಪ್ರಶ್ನಿಸಿದ ಮಾಧ್ಯಮ ಪುಲ್ವಾಮ ದಾಳಿ ಬಗ್ಗೆ ಮೋದಿಯನ್ನು ಪ್ರಶ್ನಿಸಲಿಲ್ಲ!

ಜಾನ್ ಅವರು, “ರೈಲ್ವೇ ಇಲಾಖೆಯ ಗ್ರೂಪ್ ಡಿ ನೇಮಕಾತಿ ಪರೀಕ್ಷೆಯ ದಿನಾಂಕಕ್ಕಾಗಿ ಕಾಯುತ್ತಿದ್ದೇವೆ. ಈ ವರ್ಷದಲ್ಲಿ ಮುಗಿಯಬೇಕಿರುವ ಅನೇಕ ಪರೀಕ್ಷೆಗಳು ಇದೆ. ಆದರೆ ನಾವು ಅಂತಿಮವಾಗಿ ಮಾಡುವುದು ಕಾಯುವುದು ಕಾಯುವುದು ಮತ್ತು ಕಾಯುವುದಾಗಿದೆ” ಎಂದು ಹೇಳಿದ್ದಾರೆ.

ರೈಲ್ವೇ ಇಲಾಖೆಯ ಡಿಗ್ರೂಪ್‌ ಹುದ್ದೆಗಳಿಗೆ ನಡೆಯಬೇಕಿದ್ದ ಪರೀಕ್ಷೆಯನ್ನು ಜೂನ್‌ನಲ್ಲಿ ಮುಂದೂಡಲಾಗಿತ್ತು. ಆದರೆ ಇನ್ನೂ ಕೂಡಾ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿಲ್ಲ. ಇದರಲ್ಲಿ 1 ಲಕ್ಷಕ್ಕೂ ಅಧಿಕ ಹುದ್ದೆಗಳಿದ್ದು, ಈಗಾಗಲೆ 1.25 ಲಕ್ಷಕ್ಕಿಂತಲೂ ಅಧಿಕ ಅಭ್ಯರ್ಥಿಗಳು ಅರ್ಜಿಸಲ್ಲಿಸಿದ್ದಾರೆ.

 

ಸೋನಿಯಾ ಅವರು, “ನಮ್ಮ ಪ್ರಧಾನಿಯ ಅವರು ‘ಗಜನಿ’ ಚಿತ್ರದ ಅಮೀರ್‌ ಖಾನ್ ತರ. ಅವರು ಚುನಾವಣೆ ಸಮಯದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಮರೆತಿದ್ದಾರೆ” ಎಂದು ಬರೆದಿದ್ದಾರೆ.

ರೋಹಿತಾಶ್ ಅವರು, “ನಿರುದ್ಯೋಗವು ನಿರುದ್ಯೋಗಿ ಯುವಕರಿಗೆ ಶಾಪವಾಗಿ ಪರಿಣಮಿಸಿದೆ. ಸಾರ್ವಜನಿಕ ವಲಯದಲ್ಲಿ ಉದ್ಯೋಗಗಳನ್ನು ಕಡಿಮೆ ಮಾಡಿರುವ ಮೋದಿ ಸರ್ಕಾರದ ತಂತ್ರಗಳು ನಿರುದ್ಯೋಗದ ಮೇಲೆ ದೊಡ್ಡ ಹೊಡೆತ ನೀಡಿದೆ” ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಆಗಸ್ಟ್‌ನಲ್ಲಿ 15 ಲಕ್ಷ ಭಾರತೀಯರ ಉದ್ಯೋಗ ನಷ್ಟ; ಶೇ. 8.32ಕ್ಕೇರಿದ ನಿರುದ್ಯೋಗ ಪ್ರಮಾಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...