Homeಮುಖಪುಟಆಗಸ್ಟ್‌ನಲ್ಲಿ 15 ಲಕ್ಷ ಭಾರತೀಯರ ಉದ್ಯೋಗ ನಷ್ಟ; ಶೇ. 8.32ಕ್ಕೇರಿದ ನಿರುದ್ಯೋಗ ಪ್ರಮಾಣ

ಆಗಸ್ಟ್‌ನಲ್ಲಿ 15 ಲಕ್ಷ ಭಾರತೀಯರ ಉದ್ಯೋಗ ನಷ್ಟ; ಶೇ. 8.32ಕ್ಕೇರಿದ ನಿರುದ್ಯೋಗ ಪ್ರಮಾಣ

- Advertisement -
- Advertisement -

ಆಗಸ್ಟ್‌ ತಿಂಗಳಲ್ಲಿ 15 ಲಕ್ಷ ಭಾರತೀಯರು ಉದ್ಯೋಗ ಕಳೆದುಕೊಂಡಿದ್ದು, ಜುಲೈನಲ್ಲಿ ಶೇ. 6.95ರಷ್ಟಿದ್ದ ರಾಷ್ಟ್ರೀಯ ನಿರುದ್ಯೋಗ ದರವು ಆಗಸ್ಟ್‌ ತಿಂಗಳಲ್ಲಿ ಶೇ. 8.32ಕ್ಕೆ ಏರಿದೆ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ) ಹೇಳಿದೆ.

ಔಪಚಾರಿಕ ಹಾಗೂ ಅನೌಪಚಾರಿಕ ಕ್ಷೇತ್ರಗಳನ್ನು ಒಳಗೊಂಡು 15 ಲಕ್ಷ ಜನರು ಕೆಲಸ ಕಳೆದುಕೊಂಡಿದ್ದಾರೆ. ಜುಲೈನಲ್ಲಿ 39.938 ಕೋಟಿ ಇದ್ದ ಉದ್ಯೋಗಿಗಳ ಸಂಖ್ಯೆ ಆಗಸ್ಟ್‌ ವೇಳೆಗೆ 39.778 ಕೋಟಿ ಆಗಿದೆ. ಗ್ರಾಮೀಣ ಭಾರತದಲ್ಲಿ 13 ಲಕ್ಷ ಮಂದಿ ಕೆಲಸ ಕಳೆದುಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಜುಲೈನಲ್ಲಿ ಶೇ. 8.3ರಷ್ಟಿದ್ದ ನಗರ ನಿರುದ್ಯೋಗ ದರ, ಆಗಸ್ಟ್‌ನಲ್ಲಿ ಶೇ. 9.78ಕ್ಕೆ ಏರಿಕೆ ಕಂಡಿದೆ ಎಂದು ಸಿಎಂಐಇ ತಿಳಿಸಿದೆ.

ಇದನ್ನೂ ಓದಿ: ’ಮಾಸ್ಟರ್‌ಸ್ಟ್ರೋಕ್’: ಪ್ರಧಾನಿ ಮೋದಿ ಬಗ್ಗೆ ’ನಿರುದ್ಯೋಗಿ ಭಕ್ತ’ನ 56 ಪುಟಗಳ ಖಾಲಿ ಪುಸ್ತಕ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...