Homeಮುಖಪುಟಪ್ಯಾರಾಲಿಂಪಿಕ್ಸ್‌: ಶೂಟರ್‌ ಮನೀಶ್‌ಗೆ ಚಿನ್ನ, ಸಿಂಗ್‌ ರಾಜ್‌ಗೆ ಬೆಳ್ಳಿ ಪದಕ

ಪ್ಯಾರಾಲಿಂಪಿಕ್ಸ್‌: ಶೂಟರ್‌ ಮನೀಶ್‌ಗೆ ಚಿನ್ನ, ಸಿಂಗ್‌ ರಾಜ್‌ಗೆ ಬೆಳ್ಳಿ ಪದಕ

- Advertisement -
- Advertisement -

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಪಿ.4 ಮಿಕ್ಸಡ್ ಪಿಸ್ತೂಲ್‌ ಎಸ್‌ಎಚ್‌1 ಸ್ಪರ್ಧೆಯಲ್ಲಿ ಭಾರತದ ಮನೀಷ್‌ ನಾರ್ವಲ್‌ ಚಿನ್ನ ಗೆದ್ದರೆ, ಸಿಂಗ್ ರಾಜ್‌ ಅದಾನ ಬೆಳ್ಳಿಗೆ ಮುತ್ತಿಕ್ಕಿದರು. ಈ ಮೂಲಕ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಯಿತು.

ಮನೀಶ್‌ ಫೈನಲ್‌ನಲ್ಲಿ ಒಟ್ಟು 218.2 ಪಾಯಿಂಟ್‌ ಪಡೆದರೆ, ತಂಡದ ಮತ್ತೊಬ್ಬ ಆಟಗಾರ ಸಿಂಗ್ ರಾಜ್‌ 216.7 ಪಾಯಿಂಟ್‌ ಪಡೆದರು. ಫೈನಲ್‌ ಪ್ರವೇಶಕ್ಕಾಗಿ ನಡೆದ ಅರ್ಹತಾ ಸುತ್ತುಗಳಲ್ಲಿ ಈ ಇಬ್ಬರೂ ಆಟಗಾರರು ಗಮನಾರ್ಹ ಪ್ರದರ್ಶನ ನೀಡಿದ್ದರು. ಆರು ಸುತ್ತುಗಳಲ್ಲಿ ಮನೀಶ್‌ 533-7x ಪಾಯಿಂಟ್‌ ಪಡೆದರೆ, ಸಿಂಗ್ ರಾಜ್‌ 536-4x ಪಾಯಿಂಟ್‌ ಗಳಿಸಿದ್ದರು. ಮತ್ತೊಬ್ಬ ಭಾರತೀಯ ಆಟಗಾರ ಆಕಾಶ್‌ 507-3x ಪಾಯಿಂಟ್‌ ಪಡೆಯುವ ಮೂಲಕ ಆಟ ಕೊನೆಗೊಳಿಸಿದ್ದರು.

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌: ಪದಕ ಬೇಟೆ ಮುಂದುವರೆಸಿರುವ ಭಾರತ; ಬೆಳ್ಳಿ ಗೆದ್ದ ಮರಿಯಪ್ಪನ್‌!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...