HomeದಿಟನಾಗರFact Check: ಅರವಿಂದ್ ಕೇಜ್ರಿವಾಲ್ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದರು ಎಂಬುವುದು ಸುಳ್ಳು

Fact Check: ಅರವಿಂದ್ ಕೇಜ್ರಿವಾಲ್ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದರು ಎಂಬುವುದು ಸುಳ್ಳು

- Advertisement -
- Advertisement -

ಆಪಾದಿತ ಅಬಕಾರಿ ನೀತಿ ಹಗರಣ ಪ್ರಕರಣದ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಪ್ರಸ್ತುತ ಅವರು ಜೈಲಿನಲ್ಲಿದ್ದಾರೆ.

ಕೇಜ್ರಿವಾಲ್ ಬಂಧನದ ಬಳಿಕ ಹಳೆಯ ಪತ್ರಿಕಾ ವರದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆ ವರದಿಯನ್ನು ಆಧರಿಸಿ ಕೇಜ್ರಿವಾಲ್ ವಿದ್ಯಾರ್ಥಿ ಜೀವನದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದರು ಎಂದು ಹೇಳಲಾಗ್ತಿದೆ.

ಜೂನ್ 8, 1987ರಲ್ಲಿ ವೈರಲ್ ಪತ್ರಿಕಾ ವರದಿ ಪ್ರಕಟಗೊಂಡಿದೆ. ಅದರಲ್ಲಿ ಸ್ಥಳೀಯ ಯುವತಿಯನ್ನು ಅತ್ಯಾಚಾರಗೈದ ಆರೋಪದಲ್ಲಿ ಐಐಟಿ ಖರಗ್‌ಪುರದ 19 ವರ್ಷದ ವಿದ್ಯಾರ್ಥಿ ಅರವಿಂದ್ ಕೇಜ್ರಿವಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಬರೆಯಲಾಗಿದೆ.

ಅನೇಕ ಎಕ್ಸ್‌ ಬಳಕೆದಾರರು ವೈರಲ್ ವರದಿಯನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ವೈರಲ್ ವರದಿಗೆ ಸಂಬಂಧಪಟ್ಟಂತೆ ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ. ಮೊದಲು ನಾವು ಕೀ ವರ್ಡ್‌ಗಳನ್ನು ಬಳಸಿ ವರದಿ ಕುರಿತು ಗೂಗಲ್ ಸರ್ಚ್ ಮಾಡಿದ್ದೇವೆ. ಈ ವೇಳೆ ಅರವಿಂದ್ ಕೇಜ್ರಿವಾಲ್ ಅವರು ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದರು ಎಂಬ ಯಾವುದೇ ಮಾಧ್ಯಮ ವರದಿಗಳು ಲಭ್ಯವಾಗಿಲ್ಲ.

ವೈರಲ್ ವರದಿಯಲ್ಲಿ ಪತ್ರಿಕೆಯ ಹೆಸರು ‘ದಿ ಟೆಲಿಗ್ರಾಫ್’ ಎಂದು ಬರೆಯಲಾಗಿದೆ. ಆ ಹೆಸರು ಬಳಸಿ ನಾವು ಹುಡುಕಾಡಿದರೂ ಕೇಜ್ರಿವಾಲ್‌ ಅವರು ಅತ್ಯಾಚಾರ ಪ್ರಕರಣದ ಆರೋಪಿ ಎಂಬುವುದರ ಕುರಿತು ಯಾವುದೇ ವರದಿ ನಮಗೆ ದೊರೆತಿಲ್ಲ. ಇನ್ನು ವೈರಲ್‌ ಪತ್ರಿಕಾ ವರದಿಯನ್ನು ಗಮನಿಸಿದಾಗ ನಮಗೆ ಕೆಲವೊಂದು ವ್ಯಾತ್ಯಾಸಗಳು ಕಂಡು ಬಂದಿವೆ.

ವೈರಲ್‌ ಆಗುತ್ತಿರುವ ಪತ್ರಿಕೆಯ ಹೆಸರು ‘ದಿ ಟೆಲಿಗ್ರಾಫ್‌’ ಎಂದಿದೆ ಮತ್ತು ಅದರಲ್ಲಿನ ಶೀರ್ಷಿಕೆಯಲ್ಲಿಐಐಟಿ ವಿದ್ಯಾರ್ಥಿ ಅತ್ಯಾಚಾರದ ಆರೋಪಿ ಎಂದು ಅರ್ಧ ಸುದ್ದಿಯನ್ನು ಪ್ರಕಟಿಸಲಾಗಿದೆ. ಆದರೆ ಮೂರನೇ ಕಾಲಂನಲ್ಲಿ ಬೇರೆಯದ್ದೇ ಸುದ್ದಿ ಇದೆ. ಹಾಗಾಗಿ, ಪತ್ರಿಕಾ ವರದಿಯು fodey.com ನಂತಹ ವೆಬ್‌ಸೈಟ್‌ ಬಳಸಿ ಸೃಷ್ಠಿಸಿರುವ ನಕಲಿ ವರದಿ ಎಂಬುವುದು ಪತ್ತೆಯಾಗಿದೆ.

fodey.com ನಲ್ಲಿರುವ ಪತ್ರಿಕೆಯಾದ ‘ದಿ ಡೈಲಿ ವಾಟ್‌ಎವರ್‌’ ಎಂಬುವುದರಲ್ಲಿ 30 ಆಗಸ್ಟ್‌ 2006 ಎಂಬ ದಿನಾಂಕವಿದೆ. ಅದರ ಹೆಡ್‌ಲೈನ್‌ನಲ್ಲಿ ‘ಮಂಗಳ ಗ್ರಹದ ನಿವಾಸಿಗಳು ಭೂಮಿಯನ್ನು ಆಕ್ರಮಿಸುತ್ತಾರೆ’ ಎಂಬ ಶೀರ್ಷಿಕೆ ಇದೆ. ಅದನ್ನೇ ಟೆಲಿಗ್ರಾಫ್ ಹೆಸರಿನಲ್ಲಿ ಬದಲಾಯಿಸಿ ಸುಳ್ಳು ಸುದ್ದಿ ಹಬ್ಬಿರುವುದು ಗೊತ್ತಾಗಿದೆ.


ಹಾಗಾಗಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಐಐಟಿ ಖರಗ್‌ಪುರ ವಿದ್ಯಾರ್ಥಿಯಾಗಿದ್ದಾಗ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದರು ಎಂಬುವುದು ಸುಳ್ಳು

ಇದನ್ನೂ ಓದಿ : Fact Check: ಯೂಟ್ಯೂಬರ್ ಧ್ರುವ್ ರಾಠೀ ಪಾಕಿಸ್ತಾನದವರು ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...