HomeದಿಟನಾಗರFact Check: ಯೂಟ್ಯೂಬರ್ ಧ್ರುವ್ ರಾಠೀ ಪಾಕಿಸ್ತಾನದವರು ಎಂಬುವುದು ಸುಳ್ಳು

Fact Check: ಯೂಟ್ಯೂಬರ್ ಧ್ರುವ್ ರಾಠೀ ಪಾಕಿಸ್ತಾನದವರು ಎಂಬುವುದು ಸುಳ್ಳು

- Advertisement -
- Advertisement -

ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಭಾರೀ ಚರ್ಚೆಯಲ್ಲಿರುವ ಯೂಟ್ಯೂಬರ್ ‘ಧ್ರುವ್ ರಾಠೀ’. ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ ಸಾಗುತ್ತಿರುವ ಭಾರತದ ಆಡಳಿತ, ರಾಜಕೀಯ ವ್ಯವಸ್ಥೆಯ ಕುರಿತು ಬೆಳಕು ಚೆಲ್ಲುವ ವಿಡಿಯೋಗಳನ್ನು ಮಾಡುವ ಮೂಲಕ ‘ಧ್ರುವ್‌ ರಾಠೀ’ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

ಯೂಟ್ಯೂಬ್‌ನಲ್ಲಿ 16.8 ಮಿಲಿಯನ್ ಸೇರಿ ಮಾರ್ಚ್ 2024ರ ಹೊತ್ತಿಗೆ ಧ್ರುವ್ ರಾಠೀಯ ಎಲ್ಲಾ ಚಾನೆಲ್‌ಗಳ ಚಂದಾದಾರರ ಸಂಖ್ಯೆ ಸುಮಾರು 21.56 ಮಿಲಿಯನ್ ಆಗಿದೆ. ಒಟ್ಟು 4.1 ಬಿಲಿಯನ್ ವಿಡಿಯೋ ವೀಕ್ಷಣೆಗಳನ್ನು ಹೊಂದಿದ್ದಾರೆ.

ಇಂತಹ ಧ್ರುವ್ ರಾಠೀ ಪಾಕಿಸ್ತಾನ ಮೂಲದವರು, ಹಿಂದೂ ವಿರೋಧಿ, ಮೋದಿ ವಿರೋಧಿ ಎಂಬ ಸಂದೇಶವೊಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ.

“ಧ್ರುವ್ ರಾಠೀ ಅವರ ನಿಜವಾದ ಹೆಸರು ಬದ್ರುದ್ದೀನ್ ಲಾಹೋರಿ. ಅವರು ಹುಟ್ಟಿರುವುದು ಪಾಕಿಸ್ತಾನದಲ್ಲಿ. ಅವರ ಪತ್ನಿ ಜೂಲಿ ಅವರು ಮೂಲತಃ ಮುಸ್ಲಿಂ. ಆಕೆಯ ನಿಜವಾದ ಹೆಸರು ಝುಲೈಕಾ. ಧ್ರುವ್ ಅವರು ಕರಾಚಿಯಲ್ಲಿರುವ ನಟೋರಿಯಸ್ ಗ್ಯಾಂಗ್‌ಸ್ಟರ್‌ ದಾವೂದ್ ಇಬ್ರಾಹಿಂನ ಅಲಿಶಾನ್ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರಿಗೆ ಐಎಸ್ಐ ಮತ್ತು ಪಾಕಿಸ್ತಾನ ಸೇನೆಯ ವೈ + ಮತ್ತು ಝಡ್ + ಭದ್ರತೆಯನ್ನು ಒದಗಿಸಲಾಗುತ್ತಿದೆ” ಎಂದು ವೈರಲ್ ಸಂದೇಶದಲ್ಲಿ ಹೇಳಲಾಗಿದೆ.

ಫ್ಯಾಕ್ಟ್‌ಚೆಕ್ : ಧ್ರುವ್ ರಾಠಿಯ ಕುರಿತು ವೈರಲ್ ಸಂದೇಶಕ್ಕೆ ಸಂಬಂಧಪಟ್ಟಂತೆ ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ.

ನಾವು ಗೂಗಲ್‌ನಲ್ಲಿ ಕೀ ವರ್ಡ್‌ ಬಳಸಿ ಸರ್ಚ್ ಮಾಡಿದಾಗ ವಿಕಿಪೀಡಿಯಲ್ಲಿ ಮಾಹಿತಿ ದೊರೆತಿದ್ದು, “ರಾಠೀ ಅವರು ಭಾರತದ ಹರಿಯಾಣ ರಾಜ್ಯದಲ್ಲಿ ಹಿಂದೂ ಜಾಟ್ ಕುಟುಂಬದಲ್ಲಿ ಜನಿಸಿದವರು. ಜರ್ಮನಿಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವ ಮೊದಲು ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರಿಯಾಣದಲ್ಲಿ ಪಡೆದರು. ಕಾರ್ಲ್ಸ್‌ರುಹೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ರಾಠೀ ಪದವಿ ಪಡೆದಿದ್ದಾರೆ. ನಂತರ ಅದೇ ಸಂಸ್ಥೆಯಿಂದ ನವೀಕರಿಸಬಹುದಾದ ಇಂಧನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ” ಎಂದು ಬರೆಯಲಾಗಿದೆ.

ವಿಕಿಪೀಡಿಯ ಲಿಂಕ್ ಇಲ್ಲಿದೆ 

ಧ್ರುವ್ ರಾಠೀಯ ಯೂಟ್ಯೂಬ್ ಪರಿಶೀಲಿಸಿದಾಗ ಅದರಲ್ಲಿ 16 ಮಾರ್ಚ್ 2023ರಂದು “The Real Story of Dhruv Rathee”ಎಂಬ ಶೀರ್ಷಿಕೆಯಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ದೊರೆತಿದೆ. ಈ ವಿಡಿಯೋದಲ್ಲಿ ಸ್ವತಃ ಧ್ರುವ್ ರಾಠೀ ಅವರೇ ತಾನು ಅಕ್ಟೋಬರ್ 1994ರಲ್ಲಿ ಹರಿಯಾಣದ ರೋಹ್ಟಕ್‌ನಲ್ಲಿ ಜನಿಸಿದೆ ಎಂದು ಹೇಳಿಕೊಂಡಿದ್ದಾರೆ.

ಯೂಟ್ಯೂಬ್ ಲಿಂಕ್ ಇಲ್ಲಿದೆ

ನಾವು ನಡೆಸಿದ ಪರಿಶೀಲನೆಯಲ್ಲಿ ಧ್ರುವ್ ರಾಠೀ ಅವರು ಜನಿಸಿದ್ದು ಭಾರತದ ಹರಿಯಾಣದ ರೋಹ್ಟಕ್‌ನಲ್ಲಿ ಎಂದು ತಿಳಿದು ಬಂದಿದೆ. ಹಾಗಾಗಿ, ಅವರು ಪಾಕಿಸ್ತಾನ ಮೂಲದವರು, ದಾವೂದ್ ಗ್ಯಾಂಗ್‌ನವರು ಎಂಬ ಸಂದೇಶವು ಸುಳ್ಳು.

ಇದನ್ನೂ ಓದಿ : Fact Check: ಆಪ್ ನಾಯಕರು ಕೇಜ್ರಿವಾಲ್ ಅವರನ್ನು ಎಕ್ಸ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...