Homeಮುಖಪುಟಮೋದಿ ಆಡಳಿತದಲ್ಲಿ ಸ್ವತಂತ್ರ ಮಾದ್ಯಮಗಳಿಗೆ ಕಿರುಕುಳ, ಮುಕ್ತ ಅಭಿವ್ಯಕ್ತಿಗೆ ಧಕ್ಕೆ: ಫೈನಾನ್ಶಿಯಲ್ ಟೈಮ್ಸ್‌

ಮೋದಿ ಆಡಳಿತದಲ್ಲಿ ಸ್ವತಂತ್ರ ಮಾದ್ಯಮಗಳಿಗೆ ಕಿರುಕುಳ, ಮುಕ್ತ ಅಭಿವ್ಯಕ್ತಿಗೆ ಧಕ್ಕೆ: ಫೈನಾನ್ಶಿಯಲ್ ಟೈಮ್ಸ್‌

- Advertisement -
- Advertisement -

ಭಾರತದಲ್ಲಿ ಮೋದಿ ಆಡಳಿತದಲ್ಲಿ ಸ್ವತಂತ್ರ ಮಾದ್ಯಮಗಳಿಗೆ ಕಿರುಕುಳ ನೀಡಲಾಗುತ್ತಿದೆ, ಮುಕ್ತ ಅಭಿವ್ಯಕ್ತಿಗೆ ಧಕ್ಕೆ ಉಂಟಾಗಿದೆ ಎಂದು ಫೈನಾನ್ಶಿಯಲ್ ಟೈಮ್ಸ್‌ ವರದಿಯು ಉಲ್ಲೇಖಿಸಿದೆ. ವಿರೋಧ ಪಕ್ಷಗಳ ಮೇಲಿನ ದಾಳಿ ಮತ್ತು ಲೋಕಸಭೆ ಚುನಾವಣೆಗೆ ಅದರ ಪರಿಣಾಮಗಳನ್ನು ಉಲ್ಲೇಖಿಸಿ, ನಿನ್ನೆ ಫೈನಾನ್ಶಿಯಲ್ ಟೈಮ್ಸ್‌ ಸಂಪಾದಕೀಯವನ್ನು ಬರೆದಿದ್ದು, ಅದರಲ್ಲಿ ಭಾರತದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು “ಪ್ರಜಾಪ್ರಭುತ್ವದ ತಾಯಿ” ಎಂದು ಕರೆಯಬಹುದು, ಆದರೆ ದೇಶದ ಪ್ರಜಾಪ್ರಭುತ್ವವು “ಅನಾರೋಗ್ಯ”ದಲ್ಲಿದೆ ಎಂದು ಸಂಪಾದಕೀಯ ಹೇಳಿದೆ. ಇದು “ಮೋದಿಯವರ ಬಿಜೆಪಿಯ ಆಡಳಿತ” ಮತ್ತು ‘ಸ್ವಾತಂತ್ರ್ಯ ಅಭಿವ್ಯಕ್ತಿ’ ಮತ್ತು ವಿರೋಧ ಪಕ್ಷಗಳ ಮೇಲಿನ ದಾಳಿ ಅದರಲ್ಲೂ ಮೋದಿಯ ಎರಡನೇ ಅಧಿಕಾರಾವಧಿಯಲ್ಲಿ ಹೆಚ್ಚಳವಾಗಿರುವುದನ್ನು ಫೈನಾನ್ಶಿಯಲ್ ಟೈಮ್ಸ್‌ ಟೀಕಿಸಿದೆ.

ಸಾಮಾನ್ಯವಾಗಿ ತೆರಿಗೆ ಅಥವಾ ಕಾನೂನು ಅಧಿಕಾರಿಗಳಿಂದ ಕಿರುಕುಳವು ಸರ್ಕಾರದ ವಿಮರ್ಶಕರಿಗೆ ಸಾಮಾನ್ಯವಾಗಿದೆ, ಸ್ವತಂತ್ರ ಮಾಧ್ಯಮಗಳು, ಶಿಕ್ಷಣ ತಜ್ಞರು, ಅಥವಾ ನಾಗರಿಕ ಸಮಾಜದ ಗುಂಪುಗಳ ಮೇಲೆ ಈ ರೀತಿ ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿಯ ಹಿಂದೂ ರಾಷ್ಟ್ರೀಯತೆಯು ಭಾರತದ ಜಾತ್ಯತೀತ ಪ್ರಜಾಪ್ರಭುತ್ವದ ಸಂಪ್ರದಾಯವನ್ನು ನಾಶಪಡಿಸಿದೆ ಎಂದು ಸಂಪಾದಕೀಯವು ಹೇಳಿದೆ.

ಚುನಾವಣೆ ಸಮೀಪಿಸುತ್ತಿರುವಂತೆ ವಿರೋಧ ಪಕ್ಷಗಳು ಮತ್ತು ರಾಜಕಾರಣಿಗಳನ್ನು ನಿಗ್ರಹಿಸಲು ಜಾರಿ ನಿರ್ದೇಶನಾಲಯಗಳ ಹೆಚ್ಚಳದ ಬಳಕೆ ಮತ್ತು ಈ ಬಗ್ಗೆ ವಿರೋಧಪಕ್ಷದ ಪ್ರಬಲ ನಾಯಕ ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನವನ್ನು ಉಲ್ಲೇಖಿಸಿದೆ.

ಸಂಪಾದಕೀಯದಲ್ಲಿ ತನ್ನ ಬ್ಯಾಂಕ್ ಖಾತೆಗಳನ್ನು ತೆರಿಗೆ ವಿವಾದದಿಂದ ವಾರಗಳವರೆಗೆ ಸ್ಥಗಿತಗೊಳಿಸಲಾಗಿದೆ ಮತ್ತು ಪಕ್ಷವು ಪ್ರಚಾರ, ಜಾಹೀರಾತು ಮತ್ತು ಪ್ರಯಾಣಕ್ಕಾಗಿ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾಂಗ್ರೆಸ್‌ನ ಆರೋಪಗಳನ್ನು ಉಲ್ಲೇಖಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಾನನಷ್ಟ ಪ್ರಕರಣ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ಬಗ್ಗೆ ಕೂಡ ಉಲ್ಲೇಖಿಸಿದೆ.

ಆಡಳಿತ ಪಕ್ಷವು ವಿರೋಧ ಪಕ್ಷಗಳನ್ನು ತೊಡೆದು ಹಾಕುವ ಅಗತ್ಯವನ್ನು ನೋಡುತ್ತಿದೆ. ಬಿಜೆಪಿ ಮೂರನೇ ಬಾರಿಗೆ ಅಧಿಕಾರದೆಡೆ ದಾಪುಗಾಲಿಡುತ್ತಿದೆ ಎಂಬ ಬಗ್ಗೆ ಅಭಿಪ್ರಾಯ ಸಮೀಕ್ಷೆಗಳು ಸೂಚಿಸಿವೆ. ಇದು ಪ್ರತಿಸ್ಪರ್ಧಿಗಳು ಬಲವಾದ ಪರ್ಯಾಯವನ್ನು ಪ್ರಸ್ತುತಪಡಿಸಲು ವಿಫಲರಾಗಿದ್ದಾರೆ ಎಂದು ಅದು ಹೇಳಿದೆ. ಇಂಡಿಯಾ ಮೈತ್ರಿಕೂಟದ ಬಗ್ಗೆ ಕೂಡ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ಪ್ರಪಂಚದ ಇತರ ಭಾಗಗಳಲ್ಲಿನ ಬಲವಾದ ನಾಯಕರಂತೆಯೇ ಮೋದಿ ಮತ್ತು ಅವರ ಬೆಂಬಲಿಗರು ಒಟ್ಟು ರಾಜಕೀಯ ಪ್ರಾಬಲ್ಯವನ್ನು ಸಾಧಿಸುವ ಬಯಕೆ ಹೊಂದಿದ್ದಾರೆ. ಮೋದಿಯವರ ಪ್ರಜಾಪ್ರಭುತ್ವದ ಪರವಾದ ಮಾತುಗಳು ಮತ್ತು ವಾಸ್ತವತೆಯ ನಡುವಿನ ವಿಶಾಲವಾದ ಅಂತರವನ್ನು ಉಲ್ಲೇಖಿಸಿದೆ.

ಅದಾನಿ ಗ್ರೂಪ್‌ನ ಗೌಪ್ಯ ಹೂಡಿಕೆದಾರರ ಕುರಿತು ಆಗಸ್ಟ್‌ನಲ್ಲಿ ಪ್ರಕಟವಾದ ವರದಿಯ ಪ್ರಾಥಮಿಕ ತನಿಖೆಯ ಭಾಗವಾಗಿ ಗುಜರಾತ್ ಪೊಲೀಸರು ಕಳೆದ ವರ್ಷ ಇಬ್ಬರು ಫೈನಾನ್ಷಿಯಲ್ ಟೈಮ್ಸ್ ಪತ್ರಕರ್ತರಿಗೆ ನೋಟಿಸ್‌ಗಳನ್ನು ನೀಡಿದ್ದರು ಎಂಬುದನ್ನು ಗಮನಿಸಬೇಕು. ಇಬ್ಬರೂ ಪತ್ರಕರ್ತರು ಅಂತಿಮವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನು ಓದಿ: ಸಂಘಪರಿವಾರ, ಬಿಜೆಪಿ ನಾಯಕರ ಅಂಗಸಂಸ್ಥೆಗಳಿಗೆ 62% ಸೈನಿಕ ಶಾಲೆಗಳನ್ನು ಹಸ್ತಾಂತರಿಸಿದ ಕೇಂದ್ರ ಸರಕಾರ: ವರದಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...