HomeದಿಟನಾಗರFact Check: ರಾಮ ಭಕ್ತರ ಮೇಲೆ ದಾಳಿ ಮಾಡಿದವರನ್ನು ಪೊಲೀಸರು ಮನೆಗೆ ನುಗ್ಗಿ ಎಳೆದೊಯ್ದಿದ್ದಾರೆ ಎಂದು...

Fact Check: ರಾಮ ಭಕ್ತರ ಮೇಲೆ ದಾಳಿ ಮಾಡಿದವರನ್ನು ಪೊಲೀಸರು ಮನೆಗೆ ನುಗ್ಗಿ ಎಳೆದೊಯ್ದಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

- Advertisement -
- Advertisement -

ಮುಂಬೈನ ಮೀರಾ ರಸ್ತೆಯಲ್ಲಿ ರಾಮ ಮಂದಿರದ ಉದ್ಘಾಟನೆಯಂದು ರ್‍ಯಾಲಿ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿದವರನ್ನು ಪೊಲೀಸರು ಮನೆಗೆ ನುಗ್ಗಿ ಎಳೆದೊಯ್ದಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು “ಮುಂಬೈನ ಮೀರಾ ನಾಯರ್ ಪ್ರದೇಶದಲ್ಲಿ ಜನವರಿ 22ರಂದು ರಾಮ ಯಾತ್ರೆ ಮೇಲೆ ದಾಳಿ ಮಾಡಿದವರನ್ನುಅವರ ಮನೆಯಿಂದ ಎಳೆದೊಯ್ಯಲಾಗಿದೆ. ಇದು ತುಂಬಾ ಹೆಮ್ಮೆಯ ಸಂಗತಿ. ಈಗ ಅವರಿಗೆ ಉತ್ತಮ ಬಹುಮಾನ ಸಿಗಲಿದೆ” ಎಂದು ಬರೆದುಕೊಂಡಿದ್ದಾರೆ.

ಮೀರಾ ರಸ್ತೆಯಲ್ಲಿ ರಾಮ ಭಕ್ತರ ಯಾತ್ರೆ ಮೇಲೆ ದಾಳಿ ಮಾಡಿದವರು ಮುಸ್ಲಿಮರು. ಪೊಲೀಸರು ಮುಸ್ಲಿಮರ ಮನೆಗಳಿಗೆ ನುಗ್ಗಿ ಎಳೆದೊಯ್ದಿದ್ದಾರೆ ಎಂಬರ್ಥದಲ್ಲಿ ಸುದ್ದಿ ಹಂಚಿಕೊಳ್ಳಲಾಗ್ತಿದೆ.

ಫ್ಯಾಕ್ಟ್ ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಲು ನಾವು ಮೊದಲು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಡಿದ್ದೇವೆ. ಈ ವೇಳೆ ಅನೇಕ ಎಕ್ಸ್‌ ಖಾತೆಗಳಲ್ಲಿ ಈ ವಿಡಿಯೋ ಫೋಸ್ಟ್‌ ಆಗಿರುವುದು ಕಂಡು ಬಂದಿದೆ. ಈ ಪೈಕಿ ಆಗಸ್ಟ್‌ 25,2022ರಂದು ಬೆಳಿಗ್ಗೆ 7:38 ಗಂಟೆಗೆ ಎನ್‌ಡಿಟಿವಿ ಈ ವಿಡಿಯೋ ಪೋಸ್ಟ್ ಮಾಡಿತ್ತು.

ವಿಡಿಯೋದಲ್ಲಿ “ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಪ್ರವಾದಿ ಮುಹಮ್ಮದರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವುದುನ್ನು ಖಂಡಿಸಿ ಹೈದರಾಬಾದ್‌ನ ಶಾಲಿಬಂದಾದಲ್ಲಿ ಜನರು ಜಮಾಯಿಸಿದ್ದರು. ಅವರನ್ನು ಪೊಲೀಸರು ಚದುರಿಸಿದ್ದಾರೆ” ಎಂದು ಬರೆದುಕೊಂಡಿತ್ತು.

ಒಂದು ವರ್ಷದ ಹಿಂದೆ ಎನ್‌ಡಿವಿಯ ಯೂಟ್ಯೂಬ್‌ ಚಾನೆಲ್‌ನಲ್ಲೂ ಈ ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ಅದರಲ್ಲಿಯೂ ಹೈದರಾಬಾದ್‌ನಲ್ಲಿ ರಾಜಾಸಿಂಗ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಜನರನ್ನು ಪೊಲೀಸರು ಲಾಠಿಚಾರ್ಜ್‌ ಮಾಡಿ ಚದುರಿಸಿದ್ದಾರೆ ಎಂದು ತಿಳಿಸಿತ್ತು.

ಆಗಸ್ಟ್‌ 25,2022ರಂದಯ ‘Paul Oommen’ಎಂಬ ಎಕ್ಸ್‌ ಖಾತೆಯಲ್ಲೂ ಈ ವಿಡಿಯೋ ಪೋಸ್ಟ್‌ ಮಾಡಿ, “ಹೈದರಾಬಾದ್‌ನ ಓಲ್ಡ್‌ ಸಿಟಿಯಲ್ಲಿ ಹಿಂಸಾತ್ಮಕ ಪೊಲೀಸ್‌ಗಿರಿ ಮುಂದುವರೆದಿದೆ. ಯುವಕರನ್ನು ಅವರ ಮನೆಗೆ ನುಗ್ಗಿ ಎಳೆದೊಯ್ಯಲಾಗಿದೆ” ಎಂದು ಬರೆದುಕೊಳ್ಳಲಾಗಿತ್ತು.

ಇನ್ನೂ ಹೆಚ್ಚಿನ ಸಾಕ್ಷ್ಯ ನೀಡುವುದಾದರೆ, ವೈರಲ್ ವಿಡಿಯೋದಲ್ಲಿ ಕಾಣಿಸಿರುತ್ತಿರುವ ಪೊಲೀಸ್‌ ಜೀಪ್‌ನ ನಂಬರ್‌ ಪ್ಲೇಟ್‌ನಲ್ಲಿ ತೆಲಂಗಾಣದ ‘TS’ನೋಡಬಹುದು.

ನಮ್ಮ ಪರಿಶೀಲನೆಯಿಂದ ವೈರಲ್ ವಿಡಿಯೋ ಮುಂಬೈನ ಮೀರಾ ರಸ್ತೆಯಲ್ಲಿ ರಾಮ ಯಾತ್ರೆಯ ಮೇಲೆ ನಡೆದ ದಾಳಿಯದ್ದಲ್ಲ. ಅದು ಹೈದರಾಬಾದ್‌ನಲ್ಲಿ 2022ರಲ್ಲಿ ನಡೆದ ಘಟನೆಯದ್ದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Fact Check: ಮುಂಬೈ ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹಳೆಯ ವಿಡಿಯೋ ಹಂಚಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...