HomeದಿಟನಾಗರFact Check: ಮುಂಬೈ ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹಳೆಯ ವಿಡಿಯೋ ಹಂಚಿಕೆ

Fact Check: ಮುಂಬೈ ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹಳೆಯ ವಿಡಿಯೋ ಹಂಚಿಕೆ

- Advertisement -
- Advertisement -

ಮುಂಬೈನ ಮೀರಾ ರಸ್ತೆಯಲ್ಲಿ ಹಿಂಸಾಚಾರದ ವೇಳೆ ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದ್ದು, ಹೊತ್ತಿ ಉರಿದಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ರಾಮ ಮಂದಿರ ಉದ್ಘಾಟನೆಯ ವೇಳೆ ಮುಂಬೈನ ನಯಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೀರಾ ರಸ್ತೆಯಲ್ಲಿ ಹಿಂಸಾಚಾರ ನಡೆದಿತ್ತು. ಪ್ರಸ್ತುತ ಅಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ. ಆದರೆ, ಮೀರಾ ರಸ್ತೆಯಲ್ಲಿ ಹಿಂಸಾಚಾರ ಮುಂದುವರೆದಿದೆ ಎಂಬ ಅರ್ಥದಲ್ಲಿ ವಿಡಿಯೋ ಹಂಚಿಕೊಳ್ಳಲಾಗ್ತಿದೆ.

ಮೀರಾ ರಸ್ತೆಯಲ್ಲಿ ಮುಸ್ಲಿಮರು ರಾಮ ಭಕ್ತರ ರ್‍ಯಾಲಿ ಮೇಲೆ ದಾಳಿ ನಡೆಸಿದ್ದು, ಇದರಿಂದ ಹಿಂಸಾಚಾರ ಭುಗಿಲೆದ್ದಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹಬ್ಬಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಹಲವು ವಿಡಿಯೋ, ಪೋಟೋಗಳಿಗೆ ಮೀರಾ ರಸ್ತೆಯ ಹಿಂಸಾಚಾರದ್ದು ಎಂದು ಶೀರ್ಷಿಕೆ ಕೊಟ್ಟು ಹಂಚಲಾಗ್ತಿದೆ. ಈ ಪೈಕಿ ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದೆ ಎಂಬುವುದು ಕೂಡ ಒಂದು.

ಬಲಪಂಥೀಯ ಸಾಮಾಜಿಕ ಜಾಲತಾಣ ಖಾತೆಗಳು ಮೀರಾ ರಸ್ತೆಯಲ್ಲಿ ಮುಸ್ಲಿಮರು ರೈಲ್ವೆ ನಿಲ್ಧಾಣಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬ ದಾಟಿಯಲ್ಲಿ ವಿಡಿಯೋವನ್ನು ಹಂಚಿಕೊಳ್ತಿದೆ.

ಫ್ಯಾಕ್ಟ್‌ಚೆಕ್ : ನಾನುಗೌರಿ.ಕಾಂ ಮೇಲಿನ ವೈರಲ್ ವಿಡಿಯೋದ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ. ಇದಕ್ಕಾಗಿ ನಾವು ಮೊದಲು ವೆಸ್ಟರ್ನ್‌ ರೈಲ್ವೆಯ ಟ್ವಿಟ್ಟರ್ ಖಾತೆಯನ್ನು ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಮೀರಾ ರಸ್ತೆ ರೈಲ್ವೆ ನಿಲ್ದಾಣದ ಹೆಸರಿನಲ್ಲಿ ಹರಿದಾಡುತ್ತಿರುವ ವಿಡಿಯೋ ಸುಳ್ಳು. ಪ್ರಸ್ತುತ ಮೀರಾ ರಸ್ತೆ ರೈಲ್ವೆ ನಿಲ್ದಾಣದ ಪರಿಸ್ಥಿತಿ ಯಥಾಸ್ಥಿತಿಯಲ್ಲಿದೆ ಎಂದು ಸ್ವತಃ ವೆಸ್ಟರ್ನ್‌ ರೈಲ್ವೆ ಹೇಳಿಕೊಂಡಿರುವ ವಿಡಿಯೋ ಲಭ್ಯವಾಗಿದೆ.

‘Sangbad Pratidin’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ 9 ತಿಂಗಳ ಹಿಂದೆ ಇದೇ ವಿಡಿಯೋ ಅಪ್ಲೋಡ್ ಆಗಿದ್ದು, “Massive fire break out in Santoshpur station” “ಸಂತೋಷಪುರ ರೈಲ್ಬೆ ನಿಲ್ದಾಣದಲ್ಲಿ ಭಾರೀ ಬೆಂಕಿ ಅವಘಡ” ಎಂದು ಶೀರ್ಷಿಕೆ ಕೊಡಲಾಗಿದೆ. ಈ ಸಂತೋಷಪುರ ರೈಲ್ವೆ ನಿಲ್ದಾಣ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಉಪನಗರವಾಗಿದೆ.

‘ABP ANANDA’ ಯೂಟ್ಯೂಬ್ ಚಾನೆಲ್‌ನಲ್ಲಿಯೂ 9 ತಿಂಗಳ ಹಿಂದೆ ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಸಂತೋಷ್‌ಪುರ ರೈಲು ನಿಲ್ದಾಣದಲ್ಲಿ ಭಾರೀ ಬೆಂಕಿ ಅವಘಡ. ಸೀಲ್ಡಾ-ಬಜ್ಬಾಜ್ ನಡುವಿನ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಬರೆಯಲಾಗಿದೆ.

ಏಪ್ರಿಲ್ 7, 2023ರಂದು ಟೈಮ್ಸ್ ಆಫ್ ಇಂಡಿಯಾ ಸಂತೋಷ್‌ಪುರ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿದ ಬಗ್ಗೆ ವರದಿ ಪ್ರಕಟಿಸಿತ್ತು. ಸೀಲ್ದಾಹ್-ಬಡ್ಜ್ ಬಡ್ಜ್ ವಿಭಾಗದ ಸಂತೋಷಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2 ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ನಂತರ ಈ ವಿಭಾಗದ ಎರಡೂ ಕಡೆಯ ರೈಲು ಸೇವೆಗಳನ್ನು ಸಂಜೆ 6 ರಿಂದ ರಾತ್ರಿ 8 ರ ನಡುವೆ ಸ್ಥಗಿತಗೊಳಿಸಲಾಗಿದೆ. ಸಂಜೆ 5.30ರ ಸುಮಾರಿಗೆ ರೈಲು ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 25 ಅಂಗಡಿಗಳು ಮತ್ತು ರೈಲ್ವೆ ಪ್ಲಾಟ್‌ಫಾರ್ಮ್‌ಗೆ ಹೊಂದಿಕೊಂಡಿರುವ ಕೆಲವು ಗುಡಿಸಲುಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ನಂದಿಸಲು ಏಳು ಅಗ್ನಿಶಾಮಕ ತಂಡಗಳು ಆಗಮಿಸಿವೆ ಎಂದು ವರದಿಯಲ್ಲಿ ತಿಳಿಸಿತ್ತು.

ಸುದ್ದಿ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ 

ಹಲವು ಮೂಲಗಳನ್ನು ಆಧರಿಸಿ ನಾವು ನಡೆಸಿದ ಪರಿಶೀಲನೆಯಲ್ಲಿ ರೈಲ್ವೆ ನಿಲ್ದಾಣಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದಿರುವ ವಿಡಿಯೋ ಕೊಲ್ಕತ್ತಾ ಬಳಿಯ ಸಂತೋಷಪುರದಲ್ಲಿ ಏಪ್ರಿಲ್ 7, 2023ರಂದು ನಡೆದ ಬೆಂಕಿ ಅವಘಡದ್ದು, ಮುಂಬೈನ ಮೀರಾ ರಸ್ತೆಯ ರೈಲು ನಿಲ್ದಾಣದ್ದು ಅಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Fact Check: ರಾಮಭಕ್ತ ಉಲ್ಟ ನಡಿಗೆಯ ಮೂಲಕ ಅಯೋಧ್ಯೆಗೆ ತೆರಳಿದ್ದು ನಿಜಾನಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...