Homeಮುಖಪುಟಆದಿವಾಸಿ ಪರ ಹೋರಾಟಗಾರ ಮೈಸೂರಿನ ಸೋಮಣ್ಣ ಅವರಿಗೆ 'ಪದ್ಮಶ್ರೀ' ಪ್ರಶಸ್ತಿ

ಆದಿವಾಸಿ ಪರ ಹೋರಾಟಗಾರ ಮೈಸೂರಿನ ಸೋಮಣ್ಣ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ

- Advertisement -
- Advertisement -

2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ದೇಶದ 34 ಸಾಧಕರನ್ನು ಮಾಡಲಾಗಿದೆ. ಈ ಪೈಕಿ ಕರ್ನಾಟಕದ ಇಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದ್ದು, ಆದಿವಾಸಿ ಸಮುದಾಯಗಳ ಪರ ಹಲವು ವರ್ಷಗಳಿಂದ ಹೋರಾಡುತ್ತಿರುವ ಮೈಸೂರಿನ ಸೋಮಣ್ಣ ಹಾಗೂ 25 ಸಾವಿರ ಜನರಿಗೆ ಉಚಿತ ಪ್ಲಾಸ್ಟಿಕ್ ಸರ್ಜರಿ ಮಾಡಿರುವ ಪ್ರೇಮಾ ಧನರಾಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಕಳೆದ ನಾಲ್ಕು ದಶಕಗಳಿಂದ ಹಾಡಿ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸೋಮಣ್ಣ ಅವರಿಗೆ ಪದ್ಮಶ್ರೀ ಲಭಿಸಿರುವುದು ಅವರಿಗೂ ಅಚ್ಚರಿ ಮೂಡಿಸಿದೆ. ಜೇನು ಕುರುಬ ಸಮುದಾಯಕ್ಕೆ ಸೇರಿರುವ 66 ವರ್ಷದ ಸೋಮಣ್ಣ ಅವರು, ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಅಂತರ ಸಂತೆ ಹೋಬಳಿಯ ಮೊತ್ತ ಹಾಡಿ ನಿವಾಸಿಯಾಗಿದ್ದಾರೆ. ಬಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ಎಚ್.ಡಿ.ಕೋಟೆ ತಾಲೂಕಿನಲ್ಲಿ ಪ್ರಾರಂಭಗೊಂಡ ಹೋರಾಟದಲ್ಲಿ 1981ರಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸರ್ಕಾರತೇರ ಸಂಸ್ಥೆ ಮುಖ್ಯಸ್ಥ ದಿವಂಗತ ಕ್ಷೀರಸಾಗರ್ ಅವರ ಮಾರ್ಗದರ್ಶನದಲ್ಲಿ ಬುಡಕಟ್ಟು ಸಮುದಾಯದ ಪರ ಹೋರಾಟ ಮಾಡುತ್ತಿದ್ದ ನಂಜುಂಡಯ್ಯ ಮತ್ತು ಪ್ರಸನ್ನ ಅವರ ಸಹಕಾರದಲ್ಲಿ ಬುಡಕಟ್ಟು ಸಮುದಾಯದ ಪರವಾಗಿ ಸೋಮಣ್ಣ ಹೋರಾಟ ಮಾಡುತ್ತಿದ್ದರು.

ಬುಡಕಟ್ಟು ಸಮುದಾಯದ ಕೃಷಿಕರ ಸಂಘದ ಅಧ್ಯಕ್ಷರಾಗಿ ಅರಣ್ಯ ಹಕ್ಕು ಕಾಯ್ದೆ, ಅರಣ್ಯ ಒತ್ತುವರಿ ತೆರವುಗೊಳಿಸುವುದು, ಬುಡಕಟ್ಟು ಸಮುದಾಯದವರ ಒತ್ತುವರಿ ಭೂಮಿ ಬಿಡಿಸುವುದು ಸೇರಿದಂತೆ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಸರ್ಕಾರದ ಮಟ್ಟದಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಬುಡಕಟ್ಟು ಸಮುದಾಯದ ಪರವಾಗಿ ನಿರಂತರವಾಗಿ ಸೋಮಣ್ಣ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನ ಜೇನು ಕುರುಬ, ಬೆಟ್ಟ ಕುರುಬ, ಸೋಲಿಗ, ಪಂಜರೆ, ಹೆರವ, ಸಣ್ಣ ಹೆರವ ಸಮುದಾಯಗಳ ಪರ ಧ್ವನಿ ಎತ್ತುತ್ತಿದ್ದರು. ಇವರಿಗೆ ಇತ್ತೀಚೆಗೆ ರಾಜ್ಯ ವಾಲ್ಮೀಕಿ ಪ್ರಶಸ್ತಿಯೂ ಲಭಿಸಿತ್ತು.

ಪ್ರೇಮಾ ದೇವರಾಜ್:

ರಾಜ್ಯದ ಮತ್ತೋರ್ವ ಪದ್ಮಶ್ರೀ ಪ್ರಶಸ್ತಿ ವಿಜೇತೆ ಪ್ರೇಮಾ ದೇವರಾಜ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಅಗ್ನಿ ರಕ್ಷಾ ಎಂಬ ಸರ್ಕಾರೇತರ ಸಂಸ್ಥೆಯ ಮೂಲಕ ಇವರು ಹಲವು ವರ್ಷಗಳಿಂದ ಸುಟ್ಟ ಗಾಯಗಳಿಗೆ ತುತ್ತಾದ 25,000ಕ್ಕೂ ಅಧಿಕ ಮಂದಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಕುರಿತು ಹವಾರು ಪುಸ್ತಕಗಳನ್ನು ಬರೆದಿರುವ ಪ್ರೇಮಾ, 1965ರಲ್ಲಿ ಅವರಿಗೆ 8 ವರ್ಷವಾಗಿದ್ದಾಗ, ಬೆಂಗಳೂರಿನಲ್ಲಿ ಮನೆಯ ಅಗ್ನಿ ದುರಂತದಲ್ಲಿ ಶೇ 50ರಷ್ಟು ಸುಟ್ಟ ಗಾಯಗಳಿಂದ ಬದುಕುಳಿದಿದ್ದಾರೆ. ಇವರು ಬಾಲ್ಯದಲ್ಲಿ 14ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಕೊಂಡಿದ್ದಾರೆ.

ಅಡುಗೆ ಮನೆಯಲ್ಲಿ ಆಟವಾಡುವ ವೇಳೆ ಸ್ಟವ್ ಸ್ಪೋಟಗೊಂಡು ಮುಖ, ಕುತ್ತಿಗೆ ಹಾಗೂ ದೇಹ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಸಿಟ್ಟು ಗಾಯ ಹಾಗೂ ಶಸ್ತ್ರಚಿಕಿತ್ಸೆಯ ನೋವಿನ ನಡುವೆಯೂ ಅವರು ತಮ್ಮಹೋರಾಟ ಹಾಗೂ ಛಲ ಬಿಟ್ಟಿರಲಿಲ್ಲ. ಶೇ. 50ರಷ್ಟು ಸುಟ್ಟ ಗಾಯಗಳಾಗಿದ್ದ ಪ್ರೇಮಾ ಬದುಕುವುದೇ ಅನುಮಾನ ಎಂದು ವೈದ್ಯರು ತಿಳಿಸಿದ್ದರು. ಅಂದಾಜು ಒಂದು ತಿಂಗಳ ಚಿಕಿತ್ಸೆಯ ಬಳಿಕ ಪ್ರೇಮಾ ಅವರನ್ನು ಅವರ ತಂದೆ ಸಿಎಸ್ ಧನರಾಜ್ ಹಾಗೂ ತಾಯಿ ರೋಸಿ ಧನರಾಜ್ ತಮಿಳುನಾಡಿನ ವೆಲ್ಲೂರ್ನಲ್ಲಿರುವ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ಸೇರಿಸಿದ್ದರು.

ಇದನ್ನೂ ಓದಿ; ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ ಚಿರಂಜೀವಿ ಸೇರಿದಂತೆ 132 ಜನರಿಗೆ ಪದ್ಮ ಪ್ರಶಸ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...