Homeಚಳವಳಿಅಯೋಧ್ಯೆ ತೀರ್ಪು- ವಿಚಿತ್ರ ತರ್ಕದ ಆಧಾರ: ಮಾರ್ಕಂಡೇಯ ಕಟ್ಜು

ಅಯೋಧ್ಯೆ ತೀರ್ಪು- ವಿಚಿತ್ರ ತರ್ಕದ ಆಧಾರ: ಮಾರ್ಕಂಡೇಯ ಕಟ್ಜು

- Advertisement -
- Advertisement -

| ಮಾರ್ಕಂಡೇಯ ಕಟ್ಜು |
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಅಯೋಧ್ಯೆಯ ಈ ತೀರ್ಪೂ ಸಹ 1975ರ ಎಡಿಎಮ್ ಜಬಲ್‍ಪುರ ವರ್ಸಸ್ ಶಿವಕಾಂತ ಶುಕ್ಲ ತೀರ್ಪಿನ ಗುಂಪಿಗೇ ಸೇರಿಕೊಳ್ಳುತ್ತೆ. ಆದರೆ ಅಲ್ಲಿ ಒಂದು ವ್ಯತ್ಯಾಸವಿತ್ತು- ಅಯೋಧ್ಯೆಯ ತೀರ್ಪಿನಂತೆ ಆ ತೀರ್ಪು ಅವಿರೋಧವಾದ, ಭಿನ್ನಮತವಿಲ್ಲದ ತೀರ್ಪಾಗಿರಲಿಲ್ಲ.

ನ್ಯಾಯಾಲಯವು ಹೇಳಿದ್ದು ಸರಿಯೇ ಇರಬಹುದು. ಆದರೆ ಈ ತೀರ್ಪು ಆಕ್ರಮಣಶೀಲತೆಯನ್ನು ಪೋಷಿಸುವ ಒಂದು ಆತಂಕಕಾರಿ ಬೆಳವಣಿಗೆಯನ್ನು ಹುಟ್ಟುಹಾಕಿದೆ.

ಬಾಬರಿ ಮಸೀದಿಯನ್ನು ಒಂದು ಹಿಂದೂ ದೇವಾಲಯದ ಮೇಲೆ ಅಥವಾ ಅದನ್ನು ನಾಶಗೊಳಿಸಿ ಅದರ ಮೇಲೆ ಕಟ್ಟಲಾಗಿರಬಹುದೇ ಎನ್ನುವುದರ ಪರಿಶೀಲನೆಯ ಅವಶ್ಯಕತೆ ಇಲ್ಲ. ಹಿಂದೂ ದೇವಾಲಯಗಳನ್ನು ಮುಸ್ಲಿಮ್ ದಾಳಿಕೋರರು ಧ್ವಂಸಗೊಳಿಸಿದ್ದು ಹಾಗೂ ಆ ಜಾಗೆಗಳಲ್ಲಿ ಮಸೀದಿಗಳನ್ನು ನಿರ್ಮಿಸಿದ್ದು ಸುಳ್ಳಲ್ಲ. ಉದಾಹರಣೆಗೆ, ದೆಹಲಿಯ ಕುತುಬ್ ಮಿನಾರ್‍ದ ಬಳಿ ಇರುವ ಕುವ್ವತ್-ಉಲ್-ಇಸ್ಲಾಮ್ ಮಸೀದಿಯಲ್ಲಿ ಇರುವ ಕಂಬಗಳ ಮೇಲೆ ಹಿಂದು ಕೆತ್ತನೆಗಳಿವೆ ಅಥವಾ ವಾರಣಾಸಿಯಲ್ಲಿಯ ಗ್ಯಾನ್‍ವ್ಯಾಪಿ ಮಸೀದಿಯಲ್ಲೂ ಹಿಂದೂ ಕೆತ್ತನೆಗಳನ್ನು ಕಾಣಬಹುದು ಅಥವಾ ಜೌವನಪುರದ ಅಟಲಾ ದೇವಿ ಮಸೀದಿಯನ್ನು ನೋಡಿ. ಆದರೆ ಭಾರತ ಮುಂದುವರೆಯಬೇಕೆ ಅಥವಾ ಹಿಂದಕ್ಕೆ ಕಾಲನ್ನು ಹಾಕಬೇಕೇ?

ಒಂದು ಹಿಂದು ಮಂದಿರವನ್ನು ಇಂದು ಅಕ್ರಮವಾಗಿ ಧ್ವಂಸಗೊಳಿಸಿ ಅಲ್ಲಿ ಮಸೀದಿಯನ್ನು ಕಟ್ಟಲಾಗಿದ್ದರೆ ಅದು ಬೇರೆ ಮಾತು. ಆದರೆ ಈಗ ಹೇಳಲಾಗುವ ಅಯೋಧ್ಯೆಯ ಘಟನೆ ಆಗಿರುವುದು 500 ವರ್ಷಗಳ ಹಿಂದೆ, ಹಾಗಿರುವಾಗ ಅಂತಹ ಕಟ್ಟಡವನ್ನು ಮರಳಿ ಹಿಂದೂ ಮಂದಿರವಾಗಿ ಮರುನಿರ್ಮಾಣ ಮಾಡುವುದರಲ್ಲಿ ಎಷ್ಟು ಅರ್ಥವಿದೆ? ಈ ರೀತಿಯ ಸೇಡಿನ ಪ್ರವೃತ್ತಿ, ವಿಶ್ವ ಹಿಂದೂ ಪರಿಷತ್‍ನ ಈ ಪ್ರತಿಪಾದನೆ ನಮ್ಮ ಸಮಾಜವನ್ನು ಧ್ರುವೀಕರಿಸುವುದನ್ನು ಬಿಟ್ಟರೆ ಮತ್ತೇನೂ ಮಾಡುವುದಿಲ್ಲ; ಚುನಾವಣೆಯಲ್ಲಿ ಮತಗಳನ್ನು ಪಡೆಯಲೋಸುಗ ಕೋಮು ದಳ್ಳುರಿಯನ್ನು ಕಾಪಿಡಲು ಬಯಸುವ ಕೆಲವು ವ್ಯಕ್ತಿಗಳ ರಾಜಕೀಯ ಅಜೆಂಡಾಗೆ ಸಹಾಯವಾಗುವುದಷ್ಟೇ ಇದರಿಂದ ಆಗುತ್ತದೆ.

786 ಮತ್ತು 798 ಪ್ಯಾರಾಗಳಲ್ಲಿ ನ್ಯಾಯಾಲಯ ಹೇಳಿರುವುದು; 1528ರಲ್ಲಿ ನಿರ್ಮಾಣವಾದಾಗಿನಿಂದ 1857ರ ತನಕ ನಮಾಜ್ ಮಾಡುವವರ ಒಡೆತನದಲ್ಲಿ ಈ ಮಸೀದಿ ಇತ್ತು ಎಂದು ಹೇಳಲು ಸಾಕ್ಷಾಧಾರಗಳನ್ನು ಒದಗಿಸಿಲ್ಲ. ಆದರೆ ಇದನ್ನು ಸಾಧಿಸುವುದಾದರೂ ಹೇಗೆ? ಆ ಕಾಲದ ಪ್ರತ್ಯಕ್ಷ ಸಾಕ್ಷಿಗಳನ್ನಂತೂ ಇಂದು ತರಲು ಸಾಧ್ಯವಿಲ್ಲ ಹಾಗೂ 1857ರ ಪ್ರಥಮ ಸ್ವಾತಂತ್ರ ಸಮರದಲ್ಲಿ ಅವಧ್‍ನ ಎಲ್ಲಾ ದಾಖಲೆಗಳು ಧ್ವಂಸಗೊಳಿಸಲಾಗಿತ್ತು. ಇರಲಿ, ಆರಾಧನೆಗಾಗಿ ಒಂದು ಮನೆಯನ್ನು ಕಟ್ಟಲಾಗಿದೆ ಎಂದರೆ, ಅದು ಮಂದಿರವೇ ಇರಲಿ ಅಥವಾ ಮಸೀದಿ ಅಥವಾ ಚರ್ಚು ಅಥವಾ ಗುರುದ್ವಾರವೇ ಆಗಿರಲಿ, ಅಲ್ಲಿ ಆರಾಧನೆ ಮಾಡುವ ಸಲುವಾಗಿಯೇ ಕಟ್ಟುತ್ತಾರೆಯೇ ಹೊರತು ಅಲಂಕಾರಕ್ಕಾಗಿ ಅಲ್ಲ ಎನ್ನುವುದು ಸಾಮಾನ್ಯ ಜ್ಞಾನ.

ತೀರ್ಪಿನ 798 ಪ್ಯಾರಾ ಹೀಗಿದೆ: ಮುಸ್ಲಿಮರನ್ನು ಆರಾಧನೆಯಿಂದ ಮತ್ತು ಒಡೆತನದಿಂದ ಹೊರಗಿಡುವುದು ನಡೆದದ್ದು 1949ರ ಡಿಸೆಂಬರ್ 22/23 ಮಧ್ಯದ ರಾತ್ರಿಯಲ್ಲಿ. ಆಗ ಮಸೀದಿಯನ್ನು ಅಪವಿತ್ರಗೊಳಿಸಿ ಹಿಂದೂ ವಿಗ್ರಹಗಳನ್ನು ಸ್ಥಾಪಿಸುವುದರ ಮೂಲಕ ಇದನ್ನು ಮಾಡಲಾಯಿತು. ಆ ಸಂದರ್ಭದಲ್ಲಿ ಮುಸ್ಲಿಮ್‍ರನ್ನು ಹೊರಗಿಡುವ ಈ ಕ್ರಿಯೆಯನ್ನು ಯಾವುದೇ ಕಾನೂನಾತ್ಮಕ ಕ್ರಮದಿಂದ ಮಾಡಲಿಲ್ಲ. ಅದನ್ನು ಅವರ ಆರಾಧನೆಯ ಜಾಗೆಯಿಂದ ವಂಚಿತಗೊಳಿಸುವ ಲೆಕ್ಕಾಚಾರದ ಕ್ರಮದಿಂದ ಮಾಡಲಾಗಿತ್ತು.

ಇಂತಹ ಸ್ಪಷ್ಟವಾದ ತೀರ್ಮಾನದ ಹೊರತಾಗಿಯೂ, ನ್ಯಾಯಾಲಯವು ಒಂದು ಯಾವುದೋ ವಿಚಿತ್ರ ತರ್ಕದ ಆಧಾರದ ಮೇಲೆ ವಿವಾದಿತ ಜಾಗೆಯನ್ನು ಹಿಂದುಗಳಿಗೆ ಒಪ್ಪಿಸಿದೆ.

ಹಾಗಾಗಿ, ಅಯೋಧ್ಯೆಯ ತೀರ್ಪು ಕೋಮು ಸಾಮರಸ್ಯಕ್ಕೆ ಕಾರಣವಾಗಬಹುದು ಎನ್ನುವುದು ಮೂರ್ಖತನವಾದೀತು. ಯಾವುದೇ ತುಷ್ಟೀಕರಣವು, 1938ರ ಮೂನಿಕ್ ಒಪ್ಪಂದದಲ್ಲಿ ಆದಂತೆ, ಆಕ್ರಮಣಕಾರಿಯ ಹಸಿವನ್ನು ಹೆಚ್ಚಿಸುತ್ತದೆಯೇ ಹೊರತು, ತಣಿಸುವುದಿಲ್ಲ. “ಅಭಿ ತೋ ಯೆ ಝಾಂಕಿ ಹೈ, ಕಾಶಿ ಮಥುರಾ ಬಾಕಿ ಹೈ”. ಎನ್ನುವ ಘೋಷಣೆಗಳು 1992 ಡಿಸೆಂಬರ್ 6ರ ನಂತರ ಕೇಳಿಬಂದವು ಹಾಗೂ ಮತ್ತೆ ಕೇಳಿಬರಲು ಪ್ರಾರಂಭಿಸಿದರೆ ಆಶ್ಷರ್ಯವಿಲ್ಲ. ದೆಹಲಿಯ ಜಾಮಾ ಮಸ್ಜಿದ್ ಕಟ್ಟಿರುವುದು ಒಂದು ಹಿಂದೂ ಮಂದಿರದ ಮೇಲೆ ಹಾಗೂ ಅದನ್ನು ಮರುಪಡೆಯಬೇಕು ಎಂದು ಬಿಜೆಪಿಯ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ತಾಜ್‍ಮಹಲ್ ಬಗ್ಗೆಯೂ ಬಿಜೆಪಿಯ ಕೆಲವು ಇದೇ ರೀತಿ ಹೇಳಿದ್ದಾರೆ. ಇದು ಕೊನೆಗೊಳ್ಳುವುದು ಯಾವಾಗ?

ರಾಮ ಒಂದು ನಿರ್ದಿಷ್ಟ ಸ್ಥಳದಲ್ಲಿ ಹುಟ್ಟಿದ್ದು ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ. ಒಂದು ವೇಳೆ ರಾಮನನ್ನು ಪೌರಾಣಿಕ ವ್ಯಕ್ತಿ ಅಲ್ಲ, ಅವನೊಬ್ಬ ಐತಿಹಾಸಿಕ ವ್ಯಕ್ತಿ ಎಂದು ಪರಿಗಣಿಸಿದರೂ ಸಾವಿರಾರು ವರ್ಷಗಳ ಮುಂಚೆ ಎಲ್ಲಿ ಹುಟ್ಟಿದ್ದು ಎಂದು ಹೇಗೆ ಹೇಳಬಲ್ಲರು?

ಭಾರತವು ಒಂದು ಭಯಾನಕ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದೆ. ಜಿಡಿಪಿ ಬೆಳವಣಿಗೆ ಕುಸಿದಿದೆ, ಉತ್ಪಾದನಾ ಕ್ಷೇತ್ರ ಕುಸಿದಿದೆ, ವ್ಯಾಪಾರ ಇಳಿಮುಖದಲ್ಲಿದೆ, ನಿರುದ್ಯೋಗದ ದರ ದಾಖಲೆ ಸೃಷ್ಟಿಸುತ್ತಿದೆ, (ಸರಕಾರಿ ದಾಖಲೆಗಳೇ ಇದನ್ನು ಹೇಳುತ್ತಿವೆ). ಮಕ್ಕಳ ಅಪೌಷ್ಟಿಕತೆಯ ಮಟ್ಟ ಭೀಕರವಾಗಿದೆ (ಜಾಗತಿಕ ಹಸಿವು ಸೂಚ್ಯಾಂಕದ ಅನುಗುಣವಾಗಿ, ಪ್ರತಿ ಎರಡನೇ ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ.), 50% ಭಾರತೀಯ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ರೈತರ ಆತ್ಮಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ, ಆರೋಗ್ಯ ಸೇವೆ ಮತ್ತು ಉತ್ತಮ ಶಿಕ್ಷಣ ಚಿಂತಾಜನಕ ಸ್ಥಿತಿಯಲ್ಲಿವೆ, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ನಮ್ಮ ನಾಯಕರಿಗೆ ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎನ್ನುವುದರ ಬಗ್ಗೆ ಯಾವುದೇ ಕಲ್ಪನೆ ಇಲ್ಲದಿರುವುದು ಸ್ಪಷ್ಟ. ಹಾಗಾಗಿ, ಇವುಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಹಲವು ಗಿಮಿಕ್ ಮಾಡಲಾಗುತ್ತಿದೆ.

ವಿಧ್ವಂಸಕ ರಾಜಕೀಯ ಶಕ್ತಿಗಳಿಂದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು 1947ರ ವಿಭಜನೆಯ ನಂತರದ ಅತ್ಯಂತ ದೊಡ್ಡ ದುರಂತ. ಅಯೋಧ್ಯೆಯ ತೀರ್ಪು ಸಹಾ ಮಸೀದಿಯನ್ನು ಧ್ವಂಸಗೊಳಿದ್ದು ಕಾನೂನುಬಾಹಿರ ಎಂದು ಹೇಳುತ್ತದೆ. ಆದರೆ ಅದೇ ಉಸಿರಿನಲ್ಲಿ ಆ ಘಟನೆಯನ್ನು ಪವಿತ್ರಗೊಳಿಸುವ ಕೆಲಸವನ್ನೂ ಮಾಡುತ್ತದೆ.

ಭಾಳ ಒಳ್ಳೆಯ ಕೆಲಸ ಮಾಡಿದ್ರಿ, ಮೈ ಲಾಡ್ರ್ಸ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...