Homeಅಂಕಣಗಳುಜನಪರ ವಿದ್ವಾಂಸ, ರಾಜಕಾರಣಿ ಅಶೋಕ್ ಮಿತ್ರ

ಜನಪರ ವಿದ್ವಾಂಸ, ರಾಜಕಾರಣಿ ಅಶೋಕ್ ಮಿತ್ರ

- Advertisement -
- Advertisement -

ಕಳೆದ ಮೇ ಒಂದರಂದು ಅಶೋಕ್ ಮಿತ್ರ ಅವರು ತೀರಿಕೊಂಡರು. ಅವರದು ಡಿeಟಿಚಿissಚಿಟಿಛಿe (ಪುನರುಜ್ಜೀವನ)ದ ಬಹುಮುಖೀ ವ್ಯಕ್ತಿತ್ವ ಎನ್ನಬಹುದು. ಬಂಗಾಳಿ ಭಾಷೆಯ ಲೇಖಕರಾಗಿದ್ದ ಅವರು ತಮ್ಮ ಪ್ರಬಂಧಗಳ ಅನೇಕ ಸಂಪುಟಗಳನ್ನು ಪ್ರಕಟಿಸಿದ್ದಾರೆ. ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ. ಇಛಿoಟಿomiಛಿ ತಿeeಞಟಥಿ (ಈಗ eಛಿoಟಿomiಛಿ ಚಿಟಿಜ ಠಿoಟiಣiಛಿಚಿಟ ತಿeeಞಟಥಿ, ಇPW), ಖಿhe ಖಿeಟegಡಿಚಿಠಿh ಪತ್ರಿಕೆಗಳಿಗೆ ಅಂಕಣಕಾರರಾಗಿದ್ದ ಅವರು ಸಾವಿರಾರು ಓದುಗರನ್ನು ಗಳಿಸಿದ್ದರು.ತೀಕ್ಷ್ಣಮತಿಯ ಅರ್ಥಶಾಸ್ತ್ರಜ್ಞರಾಗಿದ್ದ ಅವರು ಆ ವಿಷಯದಲ್ಲಿ ಎರಡು ವಿಶೇಷವಾದ ಕೃತಿಗಳನ್ನೂ ರಚಿಸಿದ್ದಾರೆ, ಖಿhe Shಚಿಡಿe oಜಿ Wಚಿges iಟಿ ಓಚಿಣioಟಿಚಿಟ Iಟಿಛಿome ಚಿಟಿಜ ಖಿeಡಿms oಜಿ ಖಿಡಿಚಿಜe ಮತ್ತು ಅಟಚಿss ಖeಟಚಿಣioಟಿs, ಈ ಎರಡು ಕೃತಿಗಳು ಇಂದಿಗೂ ಪ್ರಸ್ತುತ.
ಅರ್ಥಶಾಸ್ತ್ರಜ್ಞರಾಗಿ ಪಶ್ಚಿಮ ಬಂಗಾಳದ ಸರಕಾರದೊಂದಿಗೆ ಕೆಲಸ ಮಾಡಿದ್ದ ಅವರು ಕೃಷಿ ಬೆಲೆ ಆಯೋಗದ ಅಧ್ಯಕ್ಷರೂ ಆಗಿದ್ದರು; ವಿತ್ತ ಸಚಿವಾಲಯದ ಮುಖ್ಯ ಸಲಹೆಗಾರರೂ ಆಗಿದ್ದರು. ತಮ್ಮ ಜೀವನದುದ್ದಕ್ಕೂ ಕಮ್ಯುನಿಸ್ಟರಾಗಿದ್ದ ಅವರು ತಮ್ಮ ಸೈದ್ಧಾಂತಿಕ ನಿಲುವುಗಳಲ್ಲಿ ಅತ್ಯಂತ ಪಾರದರ್ಶಕವಾಗಿದ್ದರು. ಭಾರತದ ಎಡಪಂಥೀಯ ಬುದ್ಧಿಜೀವಿಗಳಲ್ಲಿ ಅಶೋಕ್ ಮಿತ್ರ ಪ್ರಮುಖ ಹೆಸರು.
1977ರಲ್ಲಿ ಪಶ್ಚಿಮ ಬಂಗಾಳದ ಮೊದಲ ಕಮ್ಯುನಿಸ್ಟ್ ಸರಕಾರದಲ್ಲಿ ವಾಣಿಜ್ಯ, ಅಭಿವೃದ್ಧಿ ಹಾಗೂ ಯೋಜನಾ ಸಚಿವರಾಗಿದ್ದರು. 1986ರವರೆಗೆ ಆ ಸ್ಥಾನದಲ್ಲಿ ಕಾರ್ಯನಿರ್ವಹಿಸಿ ರಾಜೀನಾಮೆ ನೀಡಿದರು. ಈ ಎಲ್ಲ ಕ್ಷೇತ್ರಗಳಲ್ಲಿ ಅವರ ಸಾಧನೆ ಅಗಾಧವಾದ್ದು. ಹೀಗೆ ತಮ್ಮ ಚಿಂತನೆ, ಬರವಣಿಗೆ ಹಾಗೂ ನಿರ್ವಹಿಸಿದ ಕಾರ್ಯಗಳ ಕಾರಣಕ್ಕಾಗಿ ಅವರು ಸ್ವಾತಂತ್ರ್ಯೋತ್ತರ ಭಾರತದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಇಂದಿನ ಬಾಂಗ್ಲಾದೇಶದಲ್ಲಿ 1928ರ ಏಪ್ರಿಲ್ 10 ರಂದು ಜನಿಸಿದ ಅಶೋಕ್ ಮಿತ್ರ, ಢಾಕಾದ ಅರ್ಮನಿಟೋಲ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಶಿಕ್ಷಣಕ್ಕಾಗಿ ಢಾಕಾ ವಿಶ್ವವಿದ್ಯಾಲಯಕ್ಕೆ ಹೋದರು. ಆದರೆ ಅವರು ಅರ್ಥಶಾಸ್ತ್ರದಲ್ಲಿ ಎಂಎ ಪರೀಕ್ಷೆ ಕಟ್ಟಬೇಕೆನ್ನುವಷ್ಟರಲ್ಲಿ ದೇಶ ವಿಭಜನೆಯಾಗಿ ಢಾಕಾ ಬಿಡಬೇಕಾಗಿ ಬಂತು. ಆಗ ಅವರು ತಮ್ಮ ಗುರು ಎ.ಕೆ.ದಾಸಗುಪ್ತ ಅವರನ್ನು ಹಿಂಬಾಲಿಸಿ ಬನಾರಸ್ ಹಿಂದು ವಿಶ್ವವಿದ್ಯಾಲಯಕ್ಕೆ ಬಂದು ಸೇರಿ, ಅಲ್ಲಿ ತಮ್ಮ ಎಂಎ ಡಿಗ್ರಿ ಮುಗಿಸಿದರು. ಆ ಪರೀಕ್ಷೆಯ ಭಾಗವಾಗಿ ಬರೆದ ಪ್ರಬಂಧವನ್ನು ಓದಿದ ಪರೀಕ್ಷಕರಾಗಿದ್ದ ಡಿ.ಪಿ. ಮುಖರ್ಜಿಯವರು ಆ ಪ್ರಬಂಧದ ಆಧಾರದ ಮೇಲೆಯೇ ಅಶೋಕ್ ಮಿತ್ರ ಅವರನ್ನು ಲಖನೌ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಲು ಆಹ್ವಾನಿಸಿದರು. ಹೀಗೆ ಅಶೋಕ್ ಮಿತ್ರ ಅವರು ಲಖನೌನಲ್ಲಿ ಉಪನ್ಯಾಸಕರಾಗಿ ಕೆಲಕಾಲ ಕೆಲಸ ಮಾಡಿ, ನಂತರ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಸೇರಿದರು. ನ್ಯಾಷನಲ್ ಕೌನ್ಸಿಲ್ ಫಾರ್ ಅಪ್ಲೈಡ್ ಎಕನಾಮಿಕ್ ರಿಸರ್ಚ್‍ನಲ್ಲಿಯೂ ಕೆಲವು ವರ್ಷ ದುಡಿದಿದ್ದರು.
ನೆದರ್ಲ್ಯಾಂಡ್ ನಲ್ಲಿ ನೋಬೆಲ್ ಪುರಸ್ಕøತ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಜಾನ್ ಟಿನ್ಬರ್ಗೆನ್ ಅವರ ಮೇಲ್ವಿಚಾರಣೆಯಲ್ಲಿ ಅಶೋಕ್ ಮಿತ್ರ ತಮ್ಮ ಡಾಕ್ಟೋರಲ್ ಪ್ರಬಂಧವನ್ನು ಬರೆದು ಮಂಡಿಸಿದರು. ಆ ಪ್ರಬಂಧದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ ಮೈಕಲ್ ಕಲೆಕೀ ಅವರು ಪ್ರತಿಪಾದಿಸಿದ ವಿತರಣೆಯ ಸಿದ್ಧಾಂತಕ್ಕೆ ತಿದ್ದುಪಡಿಗಳನ್ನು ಸೂಚಿಸಿದ್ದರು. ಈ ಪ್ರಬಂಧ ಮಿತ್ರ ಅವರಿಗೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿತು. ಭಾರತಕ್ಕೆ ಮರಳಿದ ನಂತರ ಕೊಲ್ಕೋತದಲ್ಲಿರುವ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ (IIಒ) ಜೊತೆಗೆ ಸೇರಿಕೊಂಡು, ಆ ಸಂಸ್ಥೆಯನ್ನು ಸಾಮಾಜಿಕ ವಿಜ್ಞಾನದ ದೇಶದ ಒಂದು ಅತ್ಯುನ್ನತ ಸಂಸ್ಥೆಯಾಗಿ ರೂಪಿಸುವ ಮಹತ್ಕಾರ್ಯದಲ್ಲಿ ಭಾಗಿಯಾದರು.
ಐಐಎಂನ ನಂತರದಲ್ಲಿ ಅಶೋಕ್ ಸರಕಾರವನ್ನು ಸೇರಿಕೊಂಡರು, ತುರ್ತುಪರಿಸ್ಥಿತಿ ಹೇರಿದಾಗ ಕೆಲಕಾಲ ವಿದೇಶದಲ್ಲಿ ಅಜ್ಞಾತವಾಸದಲ್ಲಿ ಕಳೆದು, 1977ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾದರು; ಜ್ಯೋತಿ ಬಸು ಸರಕಾರದಲ್ಲಿ ಸಚಿವರೂ ಆದರು. ಅವರು ಸಚಿವರಾಗಿದ್ದ ಕಾಲದಲ್ಲಿಯೇ ಪಶ್ಚಿಮ ಬಂಗಾಳದ ಗ್ರಾಮೀಣ ಭಾಗದಲ್ಲಿ ಅತ್ಯದ್ಭುತ ಬದಲಾವಣೆಗಳಾದವು ಹಾಗೂ ಈ ಬದಲಾವಣೆಗಳಲ್ಲಿ ಅಶೋಕ್ ಮಿತ್ರ ಅವರ ಪಾತ್ರ ನಿರ್ಣಾಯಕವಾದುದು. ಈ ಅವಧಿಯನ್ನು ‘ಆಪರೇಷನ್ ಬರ್ಗಾ’ ಎಂದು ಕರೆಯಲಾಗುತ್ತದೆ. ಆಗ ಭೂಮಿ ಹಂಚಿಕೆಯ ಪ್ರಕ್ರಿಯೆಯನ್ನು ಪುನರಾರಂಭಿಸಲಾಯಿತು ಮತ್ತು ಹೆಚ್ಚಿನ ಸಂಪನ್ಮೂಲಗಳ ಒಡೆತನವನ್ನು ಮತ್ತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಪಂಚಾಯತಿಗಳಿಗೇ ವಹಿಸಲಾಯಿತು. ಅದರೊಂದಿಗೆ ಕೃಷಿ, ನೀರಾವರಿ ಹಾಗೂ ಗ್ರಾಮೀಣ ಮೂಲಸೌಕರ್ಯಗಳ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಯಿತು. ಈ ಎಲ್ಲ ಕ್ರಮಗಳು ಪಶ್ಚಿಮ ಬಂಗಾಳದಲ್ಲಿ ಅನೇಕ ದಶಕಗಳಿಂದ ಕೃಷಿ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ಜಡತೆಯನ್ನು ಹೋಗಲಾಡಿಸಿ, ಗ್ರಾಮೀಣ ಆರ್ಥಿಕತೆಗೆ ಹೊಸ ಜೀವ ತುಂಬಿದವು
ಅತ್ಯಂತ ಸೌಜನ್ಯ, ಅಸೀಮ ಧೈರ್ಯ ಹಾಗೂ ಪ್ರಾಮಾಣಿಕತೆಯನ್ನು ಹೊಂದಿದ್ದ ಅಶೋಕ್ ಮಿತ್ರ, ಅತ್ಯಂತ ನೇರನಡೆಯವರು, ನಿಷ್ಠುರ ಮಾತುಗಳಿಗೆ ಹೆಸರಾಗಿದ್ದವರು, ಸ್ನೇಹಪೂರ್ಣ ನಡವಳಿಕೆಯ ಜೊತೆಜೊತೆಗೇ ತಮ್ಮ ನೇರಾನೇರ ಟೀಕೆಗಳಿಗೂ ಖ್ಯಾತರಾಗಿದ್ದರು. (ಈ ಮಾತನ್ನು ನಾನು ಅನುಭವದಿಂದ ಹೇಳುತ್ತಿದ್ದೇನೆ). ಪಕ್ಷಕ್ಕೆ ಸಂಪೂರ್ಣವಾಗಿ ಬದ್ಧರಾಗಿದ್ದರೂ ಕೂಡ ಪಕ್ಷದ ಕ್ರಮಗಳು ತಪ್ಪೆಂದು ಕಂಡಾಗ ಕಟುವಾದ ಟೀಕೆಗಳಿಗೆ ಒಳಪಡಿಸುತ್ತಿದ್ದರು. ಆದರೆ ಅವರ ನಿಷ್ಕಲ್ಮಷ ಮನಸ್ಸನ್ನು ಎಲ್ಲರೂ ಬಲ್ಲವರಾದುದರಿಂದ ಯಾರೂ ಬೇಸರಿಸಿಕೊಳ್ಳುತ್ತಿದ್ದಿಲ್ಲ.
ತಾತ್ವಿಕ ಭಿನ್ನಾಭಿಪ್ರಾಯದಿಂದ ಎಡಪಕ್ಷದ ಸರಕಾರಕ್ಕೆ ರಾಜೀನಾಮೆ ನೀಡಿ ಹೊರಬಂದರೂ, ಸಿಪಿಎಂ ಪಕ್ಷ ಅವರನ್ನು ರಾಜ್ಯಸಭೆಗೆ ನಾಮಿನೇಟ್ ಮಾಡಿತು. ದೇಶದಲ್ಲಿ ನವಉದಾರೀಕರಣದ ನೀತಿಗಳನ್ನು ಜಾರಿಗೊಳಿಸಲು ಪ್ರಾರಂಭಿಸಿದ್ದ ಸಮಯ ಅದು. ರಾಜ್ಯಸಭೆಯ ಸದಸ್ಯರಾಗಿ ಅವರು ಕೈಗಾರಿಕೆ ಮತ್ತು ವಾಣಿಜ್ಯದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ಅಲ್ಲಿದ್ದುಕೊಂಡು ಆ ಸಮಯದಲ್ಲಿ ಡಬ್ಲುಟಿಒ ಮುಖಾಂತರ ಅಮೆರಿಕ, ಮತ್ತು ಇತರ ಮುಂದುವರೆದ ರಾಷ್ಟ್ರಗಳ ಬೆಂಬಲದಿಂದ ಹೇರಲಾಗುತ್ತಿದ್ದ ಬೌದ್ಧಿಕ ಆಸ್ತಿ ಹಕ್ಕುಗಳ  ಆಧಿಪತ್ಯವನ್ನು ತಡೆಗಟ್ಟಲು ಹೋರಾಡಿದರು.
ಅಶೋಕ್ ಮಿತ್ರ ಅವರನ್ನು ಎಲ್ಲಕ್ಕಿಂತ ಹೆಚ್ಚಾಗಿ ನೆನಪಿಸಿಕೊಳ್ಳುವುದು ರಾಜ್ಯಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದ ಕಾರಣಕ್ಕಾಗಿ. ಕೇಂದ್ರ ಸರ್ಕಾರದಲ್ಲಿದ್ದ ಅಧಿಕಾರ ಮತ್ತು ಸಂಪನ್ಮೂಲಗಳ ಅಪಾರ ಕೇಂದ್ರೀಕರಣವನ್ನು ಬಯಲು ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಇಂತಹ ಕೇಂದ್ರೀಕರಣದ ವ್ಯವಸ್ಥೆ ಯಾರ ಗಮನಕ್ಕೂ ಬರದಂತೆ ಸಾಗುತ್ತಿತ್ತು. ದೇಶದ ಒಕ್ಕೂಟ ವ್ಯವಸ್ಥೆಗೆ ಮಹತ್ವ ನೀಡುವಂತೆ ಅವರು ದೇಶದ ಎಡಪಕ್ಷಗಳಿಗೆ ಮನವರಿಕೆ ಮಾಡಿಕೊಟ್ಟರು. ಜ್ಯೋತಿಬಸು ಜೊತೆಗೂಡಿ ಎಲ್ಲ ವಿರೋಧ ಪಕ್ಷಗಳು ಮತ್ತು ಸರಕಾರಗಳನ್ನು ಒಕ್ಕೂಟದ ವೇದಿಕೆಯಡಿಯಲ್ಲಿ ಒಗ್ಗೂಡಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರು. ಅವರ ಪರಿಶ್ರಮದ ಫಲವಾಗಿ ಕಾಂಗ್ರೆಸೇತರ ಮುಖ್ಯಮಂತ್ರಿಗಳ ಹಲವಾರು ಸಭೆಗಳು ನಡೆದು, ಶ್ರೀನಗರದಲ್ಲಿ ಒಂದು ಭಾರೀ ಸಭೆಯೊಂದಿಗೆ ಅಂತಿಮ ರೂಪ ತಳೆದಿತ್ತು.
ಎಂಬತ್ತರ ದಶಕದ ಮಧ್ಯದ ನಂತರ ಇಡೀ ದೇಶದ ಗಮನ ಬೇರೆಡೆ ಹೊರಳಿದರೂ ಅಶೋಕ್ ಮಿತ್ರ ಅವರು ದೇಶದ ಒಕ್ಕೂಟ ತತ್ವದ ಬಗ್ಗೆ ತಮಗಿದ್ದ ಬದ್ಧತೆ ಬಿಟ್ಟು ಕದಲಲಿಲ್ಲ. ಅವರು ಸರಕು ಮತ್ತು ಸೇವಾ ತೆರಿಗೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದರು, ಅದು ರಾಜ್ಯಗಳ ಹಿತಾಸಕ್ತಿಗಳ ವಿರುದ್ಧವಿದ್ದು, ರಾಜ್ಯಗಳ ಹಕ್ಕುಗಳ ಮೇಲೆ ಉSಖಿ ಗಂಭೀರ ಅತಿಕ್ರಮಣ ಮಾಡುತ್ತದೆಂದು ಅವರು ವಾದಿಸಿದರು. ತಮ್ಮ ಆರೋಗ್ಯ ಹದಗೆಡುತ್ತಿದ್ದರೂ ಅವರು ಈ ವಿಷಯದ ಬಗ್ಗೆ ನಿರಂತರವಾಗಿ ಬರೆದರು ಹಾಗೂ ಅಂತಿಮವಾಗಿ ರಾಜ್ಯಗಳು ಉSಖಿ ವ್ಯವಸ್ಥೆಗೆ ಸಮ್ಮತಿ ನೀಡಿದಾಗ ಸಹಜವಾಗಿಯೇ ನಿರಾಶೆಗೊಂಡಿದ್ದರು.
ಹೀಗೆ, ತಮ್ಮ ಜೀವನದುದ್ದಕ್ಕೂ ಹಲವಾರು ರಂಗಗಳಲ್ಲಿ ದಣಿವರಿಯದೆ ದುಡಿದ ಮೇರು ವ್ಯಕ್ತಿ ಅಶೋಕ್ ಮಿತ್ರ. ಅವರ ನಿಧನದೊಂದಿಗೆ, ನಮ್ಮ ದೇಶ ಸದಾ ದುಡಿವ ವರ್ಗಗಳ ಜನರ ಹಕ್ಕುಗಳ ಬಗ್ಗೆಯೇ ಚಿಂತಿಸುತ್ತಿದ್ದ ಒಬ್ಬ ಶ್ರೇಷ್ಠ ಜ್ಞಾನಿಯನ್ನು ಕಳೆದುಕೊಂಡಿದೆ.

ಇಂಗ್ಲಿಷ್ ಮೂಲ : ಪ್ರಭಾತ್ ಪಟ್ನಾಯಕ್
ಕನ್ನಡಕ್ಕೆ : ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...