ರಾಜ್ಯದ ಗೋಲ್ಪಾರ ಜಿಲ್ಲೆಯಲ್ಲಿ 667 ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ಅಸ್ಸಾಂನ ಬಿಜೆಪಿ ಸರ್ಕಾರ ಪ್ರಾರಂಭಿಸಿದ್ದು, ತೊಂದರೆಗೊಳಗಾದ ಹೆಚ್ಚಿನವರು ಬಂಗಾಳಿ ಮೂಲದ ಮುಸ್ಲಿಮರು ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ. ಅಸ್ಸಾಂ | 600 ಕ್ಕೂ
ಹಸಿಲಾ ಬೀಲ್ ಪ್ರದೇಶದಲ್ಲಿ ಅತಿಕ್ರಮಣ ಮಾಡಲಾಗಿದೆ ಎಂದು ಹೇಳಲಾದ ಭೂಮಿಯಲ್ಲಿರುವ 45% ಮನೆಗಳನ್ನು ಸೋಮವಾರ ನೆಲಸಮ ಮಾಡಲಾಗಿದೆ ಎಂದು ಗೋಲ್‌ಪಾರ ಜಿಲ್ಲಾ ಆಯುಕ್ತ ಖಾನೀಂದ್ರ ಚೌಧರಿ ಸ್ಕ್ರೋಲ್‌ಗೆ ತಿಳಿಸಿದ್ದಾರೆ.
ಉಳಿದ ಕಟ್ಟಡಗಳನ್ನು ತೆರವುಗೊಳಿಸಲು ಮಂಗಳವಾರವೂ ನೆಲಸಮ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ. “ಅತಿಕ್ರಮಣಕಾರಿಂದ ಯಾವುದೇ ಪ್ರತಿರೋಧ ಬಂದಿಲ್ಲ ಮತ್ತು ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ” ಎಂದು ಅವರು ಹೇಳಿದ್ದಾರೆ.
ಜಿಲ್ಲಾಡಳಿತವು 2023 ಮತ್ತು 2024 ರಲ್ಲಿ “ಜೌಗು ಪ್ರದೇಶ”ವನ್ನು ಖಾಲಿ ಮಾಡುವಂತೆ ಸೂಚಿಸಿ ಗ್ರಾಮಸ್ಥರಿಗೆ ತೆರವು ನೋಟಿಸ್‌ಗಳನ್ನು ನೀಡಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. “ನಾವು ಶುಕ್ರವಾರ ಮತ್ತೆ ಅವರಿಗೆ ನೋಟಿಸ್ ನೀಡಿದ್ದೇವೆ ಮತ್ತು ಸೋಮವಾರ ಬೆಳಿಗ್ಗೆ ಅವರ ಮನೆಗಳನ್ನು ತೆರವುಗೊಳಿಸಲು ಕೇಳಿಕೊಂಡಿದ್ದೇವೆ” ಎಂದು ಚೌಧರಿ ಹೇಳಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.
ಅನೇಕ ನಿವಾಸಿಗಳು ತಮ್ಮ ಸಾಮಗ್ರಿಗಳೊಂದಿಗೆ ಗ್ರಾಮವನ್ನು ತೊರೆದಿದ್ದು, ಉಳಿದ ಕುಟುಂಬಗಳು ಜಿಲ್ಲಾಡಳಿತವು ಅವರಿಗೆ ಪುನರ್ವಸತಿ ಕಲ್ಪಿಸಬೇಕೆಂದು ವಿನಂತಿಸಿದ್ದಾರೆ.
2016 ರ ವೇಳೆ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 10,620 ಕ್ಕೂ ಹೆಚ್ಚು ಕುಟುಂಬಗಳು – ಅವರಲ್ಲಿ ಹೆಚ್ಚಿನವರು ಮುಸ್ಲಿಮರು – ಸರ್ಕಾರಿ ಭೂಮಿಯಿಂದ ಹೊರಹಾಕಲ್ಪಟ್ಟಿದ್ದಾರೆ ಎಂದು ಆಗಸ್ಟ್‌ನಲ್ಲಿ ರಾಜ್ಯದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.
ಸೆಪ್ಟೆಂಬರ್‌ನಲ್ಲಿ ಕೂಡಾ ಗೋಲ್‌ಪಾರ ಜಿಲ್ಲಾಡಳಿತವು ನೆಲಸಮ ಕಾರ್ಯಾಚರಣೆಯನ್ನು ನಡೆಸಿತ್ತು. ಈ ವೇಳೆ ಅಲ್ಲಿ 450 ಕುಟುಂಬಗಳು ಅಥವಾ ಸುಮಾರು 2,000 ಜನರನ್ನು ಹೊರಹಾಕಲಾಗಿತ್ತು. ಬಂದರ್‌ಮಾಥ ಮೀಸಲು ಅರಣ್ಯದ 55 ಹೆಕ್ಟೇರ್ ಪ್ರದೇಶವನ್ನು ಈ ಕುಟುಂಬಗಳು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದವು ಎಂದು ಅಧಿಕಾರಿಗಳು ಆರೋಪಿಸಿದ್ದರು. ಹೈಕೋರ್ಟ್ ಆದೇಶದ ಪ್ರಕಾರ ಈ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿತ್ತು.
ಮೋರೆಗಾಂವ್‌ನಲ್ಲಿ ನಡೆದ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಗುಂಡಿಕ್ಕಿ ಕೊಂದ ಎರಡು ವಾರಗಳೊಳಗೆ ಇದು ಸಂಭವಿಸಿತ್ತು.
ಸೆಪ್ಟೆಂಬರ್ 9 ರಂದು, ಜಿಲ್ಲಾಡಳಿತ ಸುಮಾರು 240 ಮನೆಗಳನ್ನು ಬುಲ್ಡೋಜರ್‌ನಿಂದ ಕೆಡವಿತು, ಅವರಲ್ಲಿ ಹೆಚ್ಚಿನವರು ಮೋರಿಗಾಂವ್ ಜಿಲ್ಲೆಯ ಬಂಗಾಳಿ ಮೂಲದ ಮುಸ್ಲಿಮರಾಗಿದ್ದರು. ಈ ನಿವಾಸಿಗಳು ಹಲವಾರು ದಶಕಗಳಿಂದ ಆ ಪ್ರದೇಶದಲ್ಲಿ ತಮ್ಮ ಮನೆಗಳನ್ನು ನಿರ್ಮಿಸಿದ್ದರು.
ಅದಾಗಿ ಮೂರು ದಿನಗಳ ನಂತರ, ಸೆಪ್ಟೆಂಬರ್ 12 ರಂದು, ಅಧಿಕಾರಿಗಳು ಮತ್ತೆ ಬಂದು ಎರಡು ಗಂಟೆಗಳಲ್ಲಿ ಭೂಮಿಯನ್ನು ಖಾಲಿ ಮಾಡುವಂತೆ ಅವರಿಗೆ ಅಂತಿಮ ಎಚ್ಚರಿಕೆ ನೀಡಿದ್ದರು. ಇದರ ನಂತರ ನಿವಾಸಿಗಳು ಮತ್ತು ಅಧಿಕಾರಿಗಳ ನಡುವೆ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದು ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಗುಂಡು ಹಾರಿಸಿದರು.
ಘರ್ಷಣೆಯಲ್ಲಿ 22 ಸರ್ಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಮೂವತ್ಮೂರು ಜನರು ಗಾಯಗೊಂಡಿದ್ದರು. ಅಸ್ಸಾಂ | 600 ಕ್ಕೂ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಂಗಾಳಿ ಭಾಷಿಕರನ್ನು ಬಾಂಗ್ಲಾದೇಶಿಗಳು ಎಂದು ಬಿಜೆಪಿ ಹಣೆಪಟ್ಟಿ ಕಟ್ಟುತ್ತಿದೆ: ಸಿಎಂ ಮಮತಾ
ಬಂಗಾಳಿ ಭಾಷಿಕರನ್ನು ಬಾಂಗ್ಲಾದೇಶಿಗಳು ಎಂದು ಬಿಜೆಪಿ ಹಣೆಪಟ್ಟಿ ಕಟ್ಟುತ್ತಿದೆ: ಸಿಎಂ ಮಮತಾ

