HomeUncategorizedಏರ್ ಇಂಡಿಯಾದ್ದು ಒಂದು ಅಪಘಾತವಲ್ಲ, ಆದರೆ ಆಗುವುದಕ್ಕೆ ಕಾಯುತ್ತಿದ್ದ ವಿಪತ್ತು: ಏಕೆ?

ಏರ್ ಇಂಡಿಯಾದ್ದು ಒಂದು ಅಪಘಾತವಲ್ಲ, ಆದರೆ ಆಗುವುದಕ್ಕೆ ಕಾಯುತ್ತಿದ್ದ ವಿಪತ್ತು: ಏಕೆ?

- Advertisement -
- Advertisement -

ನಾನು ಆ ಏರ್ ಇಂಡಿಯಾ ವಿಮಾನದ ಪ್ರಯಾಣಿಕಳಾಗಿರಲಿಲ್ಲ. ಆದರೆ ನಾನು ಅಂದು ಅದೇ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಈಗ ಅದರಲ್ಲಿ ಪ್ರಯಾಣಿಸುತ್ತಿದ್ದ 242 ಜನರಲ್ಲಿ ಒಬ್ಬ ಪ್ರಯಾಣಿಕನನ್ನು ಹೊರತುಪಡಿಸಿ ಮಿಕ್ಕಿದವರೆಲ್ಲಾ ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ನಿರ್ಲಕ್ಷ್ಯವು ಕಾರಣವಾಗಿದೆ. ಸಂಪೂರ್ಣವಾಗಿ ಈ ವಿಪತ್ತನ್ನು ತಪ್ಪಿಸಬಹುದಾಗಿತ್ತು. ಇದು ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಸಾಧ್ಯವಾಗಿಸಿದ ದುರಂತ.

ಈ ವಿಮಾನ ದುರಂತದ ಹಿಂದಿನ ರಾತ್ರಿ ನಾನು ಲಂಡನ್‌ನಿಂದ ಅಹಮದಾಬಾದ್‌ಗೆ ಬಂದಿಳಿದಿದ್ದೆ. ಮರುದಿನ ಬೆಳಿಗ್ಗೆ ಈ ದುರಂತದ ಸುದ್ದಿಯನ್ನು ಕೇಳಿ ಕಿರುಚಿಕೊಂಡು ಎದ್ದೇಳಬೇಕಾಯಿತು. ಅಂದು ನಡೆದ ಘಟನೆ ಕನಸಿನಂತೆ ಭಾಸವಾಗಿತ್ತು. ಈ ಘಟನೆಯ  ಫೋಟೋ, ವೀಡಿಯೋಗಳನ್ನು ನೋಡಿ ವಾಸ್ತವವನ್ನು ಒಪ್ಪಿಕೊಳ್ಳಲು ಸಾಕಷ್ಟು ಹರಸಾಹಸಪಡಬೇಕಾಯಿತು.

ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗಬೇಕಿದ್ದ ಬೋಯಿಂಗ್ ಡ್ರೀಮ್‌ಲೈನರ್ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲೇ ಅಪಘಾತಕ್ಕೀಡಾಯಿತು. ಅದು ಅಹಮದಾಬಾದ್ ವಿಮಾನ ನಿಲ್ದಾಣದ ಆವರಣದಿಂದ ಕೇವಲ ನೂರು ಮೀಟರ್ ಹೊರಗೆ ಇದ್ದ ವೈದ್ಯಕೀಯ ಹಾಸ್ಟೆಲ್‌ ನ ಕಟ್ಟಡದ ಮೇಲೆ ಅಪ್ಪಳಿಸಿದೆ. ಈ ಸಂದರ್ಭದಲ್ಲಿ ವಿಮಾನಕ್ಕೆ ಸಂಪೂರ್ಣವಾಗಿ ಇಂಧನವನ್ನು ತುಂಬಿಸಲಾಗಿತ್ತು. ಇದರ ಪರಿಣಾಮವಾಗಿ ಅದು ಬಹುಬೇಗನೆ ಸ್ಫೋಟಗೊಂಡಿತು. ಆಗ ವಿಮಾನದಲ್ಲಿದ್ದ 242 ಮಂದಿಯಲ್ಲಿ 241 ಪ್ರಯಾಣಿಕರು ಸಾವನ್ನಪ್ಪಬೇಕಾಯಿತು. ಮೃತಪಟ್ಟ ಪ್ರಯಾಣಿಕರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರಾಗಿದ್ದಾರೆ.

ಆದರೆ ಈ ದುರಂತವು ಅದೃಷ್ಟದ ಕಥೆಯಲ್ಲ. ಇದು ನಿರ್ಲಕ್ಷ್ಯದ ಕುರಿತಾದ ಕಥೆ. ನಮ್ಮನ್ನಾಳುವವರು ಈ ಪ್ರಯಾಣಿಕರ ಜೀವ ಉಳಿಸಲು ವಿಫಲವಾದ ಕಥೆ. ಆದರೆ ಇದು ಹಾಗೆಯೇ ಮುಂದುವರಿದರೆ ಮುಂದೆ ಜನರನ್ನು ತೀವ್ರವಾಗಿ ಅಪಾಯಕ್ಕೊಳಪಡಿಸುತ್ತದೆ. ಇದು ಹಲವು ಸಮಯದಿಂದ ರಾಜಕೀಯ ಉದಾಸೀನತೆಯ ಫಲ. ಹೀಗೆ ಜನರನ್ನು ಸಾಕಷ್ಟು ಸಮಯದವರೆಗೆ ನಿರ್ಲಕ್ಷಿಸಿದರೆ ಒಂದು ದಿನ ಆಕ್ರೋಶ ಸ್ಫೋಟಗೊಳ್ಳುತ್ತದೆ.

ಒಂದು ವಿಷಯ ಕುರಿತು ನಾವೆಲ್ಲ ಸ್ಪಷ್ಟಪಡಿಸಿಕೊಳ್ಳೋಣ. ಇದು ಕೇವಲ ಒಂದು ವಿಮಾನಯಾನದ ಅಪಘಾತವಾಗಿರಲಿಲ್ಲ. ಇದು ವ್ಯವಸ್ಥೆಯ ವೈಫಲ್ಯ. ಉದ್ದೇಶಪೂರ್ವಕ ರಾಜಕೀಯ ನಿರ್ಲಕ್ಷ್ಯದಿಂದ ಕೂಡಿದೆ. ಗುಜರಾತಿನಲ್ಲಿರುವ ಈ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ನಿಲ್ದಾಣವು ಬಹಳ ಹಿಂದಿನಿಂದಲೂ ಅಪಾಯಕಾರಿಯಾಗಿ ಇಕ್ಕಟ್ಟಾದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದರ ರನ್‌ವೇಗಳ ಅಕ್ಕಪಕ್ಕ ಜನನಿಬಿಡ ಪ್ರದೇಶವಾಗಿದೆ. ಒಂದು ಅಂತರರಾಷ್ಟ್ರೀಯ ವಿಮಾನವು ಟೇಕ್ ಆಫ್ ಆದ ನಂತರ ದೋಷವುಂಟಾದರೆ ಸರಿಪಡಿಸಿಕೊಳ್ಳಲು ಹೋಗುವುದಕ್ಕಾಗಿ ಎಲ್ಲಿಯೂ ಜಾಗವಿಲ್ಲ. ಈ ವಿಮಾನ ನಿಲ್ದಾಣವು ಕುಣಿಕೆಯಂತೆ ನಗರವನ್ನು ಸುತ್ತುವರೆದಿದೆ.

ಅಂದು ವಿಮಾನವು ಬಿಜೆ ವೈದ್ಯಕೀಯ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದೆ. ಇದು ಕೇವಲ ವಾಯುಯಾನ ವಿಪತ್ತು ಮಾತ್ರ ಅಲ್ಲ; ಇದು ನಗರ ಪ್ರದೇಶವನ್ನು ಬೆಂಕಿಯ ಬಿರುಗಾಳಿಯನ್ನಾಗಿಸಿತ್ತು. ವೈದ್ಯಕೀಯ ವೃತ್ತಿಜೀವನದ ತುತ್ತ ತುದಿಯಲ್ಲಿದ್ದ ವಿದ್ಯಾರ್ಥಿಗಳು, ವೈದ್ಯರು ಜೀವಂತ ಸಮಾಧಿಯಾದರು. ಇದೆಲ್ಲವೂ ನಗರದಿಂದ ನೂರಾರು ಕಿಲೋಮೀಟರ್ ದೂರದಲ್ಲೆಲ್ಲೋ ಸಂಭವಿಸಿಲ್ಲ.  ಈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅದರ ವಾಯುಪ್ರದೇಶ ಮತ್ತು ಜನವಸತಿ ನಡುವೆ ಯಾವುದೇ ರಕ್ಷಣಾತ್ಮಕ ಕ್ರಮಕೈಗೊಳ್ಳದೇ ಅದರ ನಿರ್ಮಾಣಕ್ಕೆ ಅನುಮತಿಸಲಾಗಿದೆ.

ಯಾವುದೋ ಒಂದು ರೀತಿಯಲ್ಲಿ ಕೆಟ್ಟದ್ದಾಗುತ್ತದೆ ಎಂದು ತಿಳಿದಿತ್ತು. ಅಹಮದಾಬಾದ್‌ನ ರನ್‌ವೇ ಯಿಂದ ಆಚೆ ಇರುವ ಮೇಲ್ಮೈಗಳು ಅಪಾಯಕಾರಿ ಎಂದು ಪುನರಾವರ್ತಿತ ಸುರಕ್ಷತಾ ಲೆಕ್ಕಪರಿಶೋಧನೆಗಳು ಎಚ್ಚರಿಸಿವೆ.  2019ರ ಡಿಜಿಸಿಎ ವರದಿಯು ಅಪಾಯಗಳನ್ನು ಸ್ಪಷ್ಟವಾಗಿ ವಿವರಿಸಿದೆ. 2018ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ರನ್‌ವೇಯ ಸುರಕ್ಷತಾ ಪ್ರದೇಶವನ್ನು ವಿಸ್ತರಿಸಲು 29.79 ಎಕರೆ ಭೂಮಿ ಹಂಚಿಕೆ ಮಾಡಲು ಗುಜರಾತ್ ಸರ್ಕಾರವನ್ನು ಕೇಳಿಕೊಂಡಿತ್ತು.  ಪ್ರಾಧಿಕಾರಕ್ಕೆ ಅನುಮೋದನೆ ಸಿಕ್ಕಿತು. ಆದರೆ ಇಂದಿಗೂ ಸಂಬಂಧಿಸಿದ ಭೂಮಿಯನ್ನು ಹಸ್ತಾಂತರ ಮಾಡಲಾಗಿಲ್ಲ. ಏಕೆಂದರೆ  ಈ ಭೂಮಿಯನ್ನು ವಶಪಡಿಸಿಕೊಳ್ಳಲು ಹತ್ತಿರದಲ್ಲಿ ವಾಸಿಸುವ 350 ಕುಟುಂಬಗಳನ್ನು ಸ್ಥಳಾಂತರಿಸುವ ಅಗತ್ಯವಿತ್ತು. ಈ ರೀತಿ ಮಾಡುವುದು ರಾಜಕೀಯ ವ್ಯಕ್ತಿಗಳಿಗೆ ರಾಜಕೀಯವಾಗಿ ಅನುಕೂಲಕರವಾಗಿರಲಿಲ್ಲ. ಹೀಗೆ ಮಾಡುವುದರಿಂದ ಯಾವುದೇ ಮತಗಳು ಬರುವುದಿಲ್ಲವಾದ್ದರಿಂದ ಇಲ್ಲಿಯ ಜನರನ್ನು ಸ್ಥಳಾಂತರ ಮಾಡಲಾಗಿಲ್ಲ. ವಿಮಾನ ನಿಲ್ದಾಣವನ್ನು ಪ್ರಯಾಣಿಕರ ದೃಷ್ಟಿಯಿಂದ ವಿಸ್ತರಿಸುತ್ತಲೇ ಬೇಕಿತ್ತು. ಈಗ ಇರುವ ವಿಮಾನ ನಿಲ್ದಾಣದಿಂದ ಎಂದಿಗೂ ಸುರಕ್ಷತೆ ಇಲ್ಲ. ಅಲ್ಲಿ ಅಪಾಯದ ಸಂದರ್ಭಗಳು ಹೆಚ್ಚುತ್ತಲೇ ಇವೆ. ಅದು ಹೇಗೆಂದರೆ ತನ್ನದೇ ನಗರದ ಮೇಲೆ ನೇರವಾಗಿ ಗುರಿಯಿಟ್ಟು ಲೋಡ್ ಮಾಡಿದ ಬಂದೂಕಿನಂತೆ ಆಗಿದೆ.

ಈ ಎಲ್ಲಾ ವೈಫಲ್ಯದ ಪ್ರಮಾಣವು ದಿಗ್ಭ್ರಮೆಗೊಳಿಸುವಂತಿದೆ.  ಆದರೆ ಆಶ್ಚರ್ಯಗೊಳ್ಳುವಂತಹದ್ದೇನೂ ಇಲ್ಲ. ಅಹಮದಾಬಾದ್ ನಗರದ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಅಭಿವೃದ್ಧಿಯ “ಮಾದರಿ ನಗರ” ಎಂದು ಬಹಳ ಹಿಂದಿನಿಂದಲೂ ಬಿಂಬಿಸಲಾಗುತ್ತಿದೆ.  ಆದರೆ ಈ ದುರಂತದಿಂದಾಗಿ ಮೋದಿಯವರ ಸ್ವಂತ ಹಿತ್ತಲಿನಲ್ಲಿ ಆ “ಅಭಿವೃದ್ಧಿ” ಎಂದರೆ ಏನು ಎಂಬುದನ್ನು ನಾವು ಕಾಣುತ್ತಿದ್ದೇವೆ. 2022ರಲ್ಲಿ ಘೋಷಿಸಲ್ಪಟ್ಟ ಮತ್ತು ಅಹಮದಾಬಾದ್‌ನ ದಟ್ಟಣೆ ಬಿಕ್ಕಟ್ಟಿಗೆ ಪರಿಹಾರವೆಂದು ಹೇಳಲಾದ ಧೋಲೆರಾದಲ್ಲಿ ಭರವಸೆ ನೀಡಿದ ಎರಡನೇ ವಿಮಾನ ನಿಲ್ದಾಣವನ್ನು ಈಗ ಕಾರ್ಯನಿರ್ವಹಿಸಲು ಉದ್ದೇಶಿಸಲಾಗಿತ್ತು. ಅದರ ರನ್‌ವೇಗಳು ಇನ್ನೂ ಅಸ್ತಿತ್ವದಲ್ಲಿಲ್ಲದ ಕಾರಣ ಅಲ್ಲಿಂದ ಒಂದು ವಿಮಾನವು ಹಾರಾಟ ನಡೆಸಿಲ್ಲ.

ಗುಜರಾತ್‌ನವರಾದ ಗೃಹ ಸಚಿವ ಅಮಿತ್ ಶಾ ಅವರು ತಾವು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ನಗರದಲ್ಲಿ ಸುರಕ್ಷತೆಗಾಗಿ ಹೊಸತೇನನ್ನೂ ಮಾಡಿಲ್ಲ. ಈ ದುರಂತದಲ್ಲಿ ನಿಧನರಾದವರಲ್ಲಿ ಒಬ್ಬರಾದ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರು. ಈ ರೂಪಾನಿಯವರಿಗೆ ಈ ವಿಮಾನ ನಿಲ್ದಾಣದ ಮೂಲಸೌಕರ್ಯವನ್ನು ಸರಿಪಡಿಸಲು ಈ ಹಿಂದೆ ಅಧಿಕಾರದಲ್ಲಿದ್ದಾಗ ಅವಕಾಶವಿತ್ತು. ಅವರು 2016 ರಿಂದ 2021 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇದಕ್ಕಿಂತ ದೊಡ್ಡ ದೋಷಾರೋಪಣೆ ಇನ್ನೇನು ಇರಲು ಸಾಧ್ಯ? ಅಭಿವೃದ್ಧಿಯನ್ನು ಕಡೆಗಣಿಸಿದಾಗ ಇದೆಲ್ಲಾ ಸಂಭವಿಸುತ್ತದೆ. ಇದು ದೇವರು ಮಾಡಿದ ದುರಂತವಲ್ಲ. ಇದು ಮಾನವ ನಿರ್ಮಿತ ದುರಂತ. ಈ ವಿಮಾನ ನಿಲ್ದಾಣದ ಲೋಪದೋಷಣಗಳ ಕುರಿತು ಬಂದ ವರದಿಗಳನ್ನು ನಿರ್ಲಕ್ಷಿಸುವುದರಿಂದ ಉಂಟಾಗಿದೆ. ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು ನಿರ್ಮಿಸಲು ಆದ್ಯತೆ ನೀಡುವ ಬದಲು ಈ ವಿಮಾನ ನಿಲ್ದಾಣದ ಮೂಲಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿತ್ತು.

ನಾವು 241 ಜನರ ಸಾವಿಗೆ ಮೌನವಾಗಿ ದುಃಖಿಸಬಾರದು. ಇದಕ್ಕಾಗಿ ನಾವೆಲ್ಲಾ ಗುಜರಾತ್ ಸರ್ಕಾರವನ್ನು ಹೊಣೆ ಮಾಡಬೇಕು. ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು. ಅಮಿತ್ ಶಾ ಕೂಡ ಉತ್ತರಿಸಬೇಕು. ಇಷ್ಟು ಮಾತ್ರವಲ್ಲದೇ  3,000 ಕೋಟಿ ರೂ. ಟರ್ಮಿನಲ್ ವಿಸ್ತರಣಾ ಯೋಜನೆಗಾಗಿ ಘೋಷಿಸಿದ, ಆದರೆ ರನ್‌ವೇ ಸುರಕ್ಷತೆಯ ಮೂಲ ಸಮಸ್ಯೆಯನ್ನು ಪರಿಹರಿಸಲು ಏನನ್ನೂ ಮಾಡದ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್ ಕೂಡ ಉತ್ತರಿಸಬೇಕು. ಸುರಕ್ಷತಾ ವರದಿಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರದ ಪ್ರತಿಯೊಬ್ಬ ಅಧಿಕಾರಿಯೂ ಉತ್ತರಿಸಬೇಕು.  ಹಾಗೆಯೇ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸದ ಮಾಧ್ಯಮ ಸಂಸ್ಥೆಗಳು ಕೂಡ ಇದಕ್ಕೆ ಹೊಣೆ ಹೊರಬೇಕು. ಈ ರೀತಿ ವಿಮಾನ ಅಪಘಾತಕ್ಕೆ ಪರೋಕ್ಷವಾಗಿ ಇವರೆಲ್ಲರೂ ಕಾರಣವಾಗಿರುವುದರಿಂದ ಉತ್ತರಿಸಬೇಕಿದೆ.

ನಾವು ಜಾಗತಿಕ ಶಕ್ತಿಯಾಗುವ ಬಗ್ಗೆ ಮಾತನಾಡುತ್ತೇವೆ. ಆದರೆ ಗುಜರಾತ್ ರಾಜಧಾನಿಯಲ್ಲಿ ಸಾಕಷ್ಟು ಅಗ್ನಿಶಾಮಕ ವಾಹನಗಳಿಲ್ಲ. ಈ ವಿಮಾನ ನಿಲ್ದಾಣದ ರನ್‌ವೇಗಳು ಕೊಳೆಗೇರಿಗಳಿಂದ ಸುತ್ತುವರೆದಿವೆ. ಇಲ್ಲಿಗೆ ಇಷ್ಟು ಸಾಕು. ಆಡಳಿತದಲ್ಲಿ ಯಾವುದೇ ಘನತೆ ಉಳಿದಿದ್ದರೆ, ಪತ್ರಿಕೋದ್ಯಮದಲ್ಲಿ ಯಾವುದೇ ಜವಾಬ್ದಾರಿ ಉಳಿದಿದ್ದರೆ ಮತ್ತು ಸಾರ್ವಜನಿಕರಲ್ಲಿ ಯಾವುದೇ ಧೈರ್ಯ ಉಳಿದಿದ್ದರೆ, ಇದು ಹ್ಯಾಶ್‌ಟ್ಯಾಗ್‌ಗಳೊಂದಿಗೆ ಕೊನೆಗೊಳ್ಳಬಾರದು. ಇದು ಕೆಲವರ ರಾಜೀನಾಮೆಗಳೊಂದಿಗೆ ಕೊನೆಗೊಳ್ಳಬೇಕು. ತನಿಖೆಗಳು, ವಿಚಾರಣೆಗಳು, ವಿಮಾನ ನಿಲ್ದಾಣದ ಸುಧಾರಣೆಗಳು ನಡೆಯಬೇಕು.

ಇದನ್ನು ಸಾಕಷ್ಟು ಕೋಪದಲ್ಲಿ ಬರೆಯಲಾಗಿದೆ ಮತ್ತು ನೀವು ಇದನ್ನು ಅಹಮದಾಬಾದ್, ಅಥವಾ ಲಂಡನ್, ಅಥವಾ ದೆಹಲಿ ಅಥವಾ ಎಲ್ಲಿಯೇ ಓದುತ್ತಿದ್ದರೆ, ಇದನ್ನು ತಿಳಿದುಕೊಳ್ಳಿ: ಇದೇ ರೀತಿ ಮುಂದಾಗುವ ದುರಂತದಲ್ಲಿ ನೀವು ಸಿಲುಕಬಹುದು.

ಮತ್ತು ನಾನು ಹೇಳಿದ್ದರಲ್ಲಿ ಯಾವುದು ಬದಲಾಗದಿದ್ದರೆ, ಮುಂದಿನ ಬಾರಿಯ ದುರಂತ ಬೇರೆ ರೀತಿಯದ್ದಾಗಿರಬಹುದು.

ರಾಹುಲ್ ಗಾಂಧಿಯ ‘ಟ್ರಂಪ್‌ಗೆ ಮೋದಿ ಶರಣು’ ಹೇಳಿಕೆ v/s ಸಿಂಗ್ ಪ್ರಧಾನಿಯಾಗಿದ್ದಾಗ ಮೋದಿಯ ಹೇಳಿಕೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...