Homeಮುಖಪುಟಆಧಾರ್‌, ಪ್ಯಾನ್‌, ಬ್ಯಾಂಕ್‌ ಅಕೌಂಟ್‌ ದಾಖಲೆಗಳು ಪೌರತ್ವ ಸಾಬೀತುಪಡಿಸುವುದಿಲ್ಲ! ಗೌಹಟಿ ಹೈಕೋರ್ಟ್

ಆಧಾರ್‌, ಪ್ಯಾನ್‌, ಬ್ಯಾಂಕ್‌ ಅಕೌಂಟ್‌ ದಾಖಲೆಗಳು ಪೌರತ್ವ ಸಾಬೀತುಪಡಿಸುವುದಿಲ್ಲ! ಗೌಹಟಿ ಹೈಕೋರ್ಟ್

- Advertisement -
- Advertisement -

ಇತ್ತೀಚಿನ ಆದೇಶವೊಂದರಲ್ಲಿ, ಭೂ ಕಂದಾಯ ಪಾವತಿಸುವ ರಶೀದಿಗಳು, ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಕಾರ್ಡ್ ಮತ್ತು ಬ್ಯಾಂಕ್ ದಾಖಲೆಗಳು ಪೌರತ್ವವನ್ನು ಸಾಬೀತುಪಡಿಸುವುದಿಲ್ಲ ಎಂದು ಹೇಳುವ ಮೂಲಕ ಅಸ್ಸಾಂನ ನ್ಯಾಯಮಂಡಳಿಯಿಂದ ವಿದೇಶಿಯೆಂದು ಘೋಷಿಸಲ್ಪಟ್ಟ ಮಹಿಳೆಯ ಅರ್ಜಿಯನ್ನು ಗೌಹಟಿ ಹೈಕೋರ್ಟ್ ತಿರಸ್ಕರಿಸಿದೆ.

ನ್ಯಾಯಮೂರ್ತಿ ಮನೋಜಿತ್ ಭುಯಾನ್ ಮತ್ತು ನ್ಯಾಯಮೂರ್ತಿ ಪಾರ್ಥಿವ್ಜ್ಯೋತಿ ಸೈಕಿಯಾ ಅವರ ನ್ಯಾಯಾಲಯವು ಜಬೇದಾ ಬೇಗಂ ಅವರ ಅರ್ಜಿಯನ್ನು ವಜಾಗೊಳಿಸಿದೆ. ಏಕೆಂದರೆ ಅವರು “ತನ್ನ ಪೋಷಕರು ಮತ್ತು ಸಹೋದರನ ಸಂಬಂಧಿ ಎಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕೋರ್ಟ್‌ ಹೇಳಿದೆ.”

ಅಸ್ಸಾಂನಲ್ಲಿ ಪೌರತ್ವದ ನಿರ್ಣಯವು ಹೇಗೆ ಭಿನ್ನವಾಗಿದೆ ಎಂದು ಈ ಆದೇಶವು ತೋರಿಸುತ್ತದೆ. 1951ರಲ್ಲಿ ತಯಾರಿಸಲಾದ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಗೆ ನಂತರ ಕಳೆದ ವರ್ಷ ನವೀಕರಿಸಲಾಗಿದೆ. ಅದರಂತೆ ಕಳೆದ ವರ್ಷ ಆಗಸ್ಟ್‌ನಲ್ಲಿ, ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯ ಐದು ವರ್ಷಗಳ ಪ್ರಕ್ರಿಯೆಯ ನಂತರ, ಅಸ್ಸಾಂನ ನವೀಕರಿಸಿದ ಎನ್‌ಆರ್‌ಸಿ ಪಟ್ಟಿಯಿಂದ 19 ಲಕ್ಷ ಅರ್ಜಿದಾರರ ಹೆಸರನ್ನು (ಅರ್ಜಿ ಸಲ್ಲಿಸಿದ 3.3 ಕೋಟಿಗಳಲ್ಲಿ) ಕೈಬಿಟ್ಟಿದೆ.

ನವೀಕರಿಸಿದ ಎನ್‌ಆರ್‌ಸಿ 1985 ರ ಅಸ್ಸಾಂ ಒಪ್ಪಂದದಲ್ಲಿ ತನ್ನ ಮೂಲವನ್ನು ಹೊಂದಿದೆ. ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ವಿರುದ್ಧ ಆರು ವರ್ಷಗಳ ಕಾಲ ನಡೆದ ಆಂದೋಲನದ ನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಒಪ್ಪಂದವು 1955 ರ ಪೌರತ್ವ ಕಾಯ್ದೆಯಲ್ಲಿ ಸೆಕ್ಷನ್ 6 ಎ ಅನ್ನು ಸೇರಿಸಲು ಕಾರಣವಾಯಿತು. ಇದು ಮಾರ್ಚ್ 25, 1971 ಕ್ಕೆ ಮುಂಚಿತವಾಗಿ ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದ ಅಕ್ರಮ ವಲಸಿಗರನ್ನು ನಾಗರಿಕರೆಂದು ಪರಿಗಣಿಸಲಾಗಿದೆ. ಅದೇ ದಿನಾಂಕವನ್ನು ಎನ್ಆರ್‌ಸಿ ನವೀಕರಣ ಪ್ರಕ್ರಿಯೆಗೆ ಬಳಸಲಾಯಿತು.

ಎನ್ಆರ್‌ಸಿ ಸೇರ್ಪಡೆಗಾಗಿ ಅರ್ಜಿದಾರರು ಪೌರತ್ವವನ್ನು ಸಾಬೀತುಪಡಿಸಲು ಮಾರ್ಚ್ 24, 1971 ರ ಮೊದಲು ನೀಡಲಾದ 14 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕಾಗಿತ್ತು, ಅದು ಅಸ್ಸಾಂನಲ್ಲಿ ವಾಸಿಸುವಿಕೆಯನ್ನು ಸಾಬೀತುಪಡಿಸಲು ಅವರ ಹೆಸರುಗಳು ಅಥವಾ ಅವರ ಪೂರ್ವಜರ ಹೆಸರುಗಳನ್ನು ಹೊಂದಿತ್ತು.

ಈ ದಾಖಲೆಗಳು 1951 ಎನ್‌ಆರ್‌ಸಿಯಿಂದ ಮಾರ್ಚ್ 24, 1971 ರವರೆಗೆ ಮತದಾರರ ಪಟ್ಟಿ, ಭೂಮಿ ಮತ್ತು ಬಾಡಿಗೆ ದಾಖಲೆಗಳು, ಪೌರತ್ವ ಪ್ರಮಾಣಪತ್ರ, ಶಾಶ್ವತ ನಿವಾಸ ಪ್ರಮಾಣಪತ್ರ, ನಿರಾಶ್ರಿತರ ನೋಂದಣಿ ಪ್ರಮಾಣಪತ್ರ, ಪಾಸ್‌ಪೋರ್ಟ್, ವಿಮಾ ಪಾಲಿಸಿ, ಸರ್ಕಾರ ನೀಡಿದ ಪರವಾನಗಿ ಅಥವಾ ಪ್ರಮಾಣಪತ್ರ, ಉದ್ಯೋಗದ ಪುರಾವೆ, ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗಳು, ಜನನ ಪ್ರಮಾಣಪತ್ರ, ಶಿಕ್ಷಣ ಪ್ರಮಾಣಪತ್ರಗಳು ಅಥವಾ ನ್ಯಾಯಾಲಯದ ದಾಖಲೆಗಳು ಅಥವಾ ಪ್ರಕ್ರಿಯೆಗಳ ದಾಖಲೆಗಳಲ್ಲಿ ಕೆಲವನ್ನು ತೋರಿಸಬಹುದಿತ್ತು.

ಇದಲ್ಲದೆ, ಇನ್ನೂ ಎರಡು ಪೂರಕ ದಾಖಲೆಗಳು – ಮದುವೆಯ ನಂತರ ವಲಸೆ ಹೋಗುವ ವಿವಾಹಿತ ಮಹಿಳೆಯರಿಗೆ ಸರ್ಕಲ್ ಅಧಿಕಾರಿ ಅಥವಾ ಗ್ರಾಮ ಪಂಚಾಯತ್ ಕಾರ್ಯದರ್ಶಿ ನೀಡಿದ ಪ್ರಮಾಣಪತ್ರಗಳು (ಮಾರ್ಚ್ 24, 1971 ರ ಮೊದಲು ಅಥವಾ ನಂತರ) ಮತ್ತು ಮಾರ್ಚ್ 24, 1971 ಕ್ಕೆ ಮೊದಲು ನೀಡಲಾದ ಪಡಿತರ ಚೀಟಿಗಳನ್ನು ಅರ್ಜಿದಾರರು ಸೇರಿಸಬಹುದು. ಆದರೆ ಅರ್ಜಿದಾರರು ಮೇಲೆ ಪಟ್ಟಿ ಮಾಡಲಾದ 14 ದಾಖಲೆಗಳಲ್ಲಿ ಒಂದನ್ನು ಹೊಂದಿದ್ದರೆ ಮಾತ್ರ ಈ ಎರಡು ದಾಖಲೆಗಳನ್ನು ಸ್ವೀಕರಿಸಬೇಕಾಗಿತ್ತು.

14 ದಾಖಲೆಗಳಲ್ಲಿ ಹೆಸರಿಲ್ಲದ ಅರ್ಜಿದಾರರಿಗೆ, ಅವರು ಪೂರ್ವಜರೊಂದಿಗೆ (ತಂದೆ, ತಾಯಿ, ಅಜ್ಜ, ಅಜ್ಜಿ ಇತ್ಯಾದಿ) ಸಂಬಂಧವನ್ನು ಸ್ಥಾಪಿಸಲು ಎಂಟು ವಿಭಿನ್ನ ದಾಖಲೆಗಳನ್ನು ಸಲ್ಲಿಸಬೇಕು, ಅವರ ಹೆಸರುಗಳನ್ನು ಮಾರ್ಚ್ 24, 1971ರ ಮೊದಲು 14 ದಾಖಲೆಗಳಲ್ಲಿ ಯಾವುದಾದರೂ ಒಂದು ಪಟ್ಟಿಯಲ್ಲಿ ಸೇರಿಸಲಾಗಿರಬೇಕಿತ್ತು.

ಈ ದಾಖಲೆಗಳು ಜನನ ಪ್ರಮಾಣಪತ್ರ, ಭೂ ದಾಖಲೆಗಳು, ಪರೀಕ್ಷಾ ಪ್ರಮಾಣಪತ್ರಗಳು, ಬ್ಯಾಂಕ್, ವಿಮಾ ಪೊಲೀಸ್ ಅಥವಾ ಅಂಚೆ ಕಚೇರಿ ದಾಖಲೆಗಳು, ವೃತ್ತ ಅಧಿಕಾರಿ ಅಥವಾ ಗ್ರಾಮ ಪಂಚಾಯತ್ ಕಾರ್ಯದರ್ಶಿ (ವಿವಾಹಿತ ಮಹಿಳೆಯ ಸಂದರ್ಭದಲ್ಲಿ) ನೀಡಿದ ಪ್ರಮಾಣಪತ್ರ, ಮತದಾರರ ಪಟ್ಟಿಯಲ್ಲಿ ಹೆಸರು, ಪಡಿತರ ಚೀಟಿ ಅಥವಾ ಕಾನೂನುಬದ್ಧವಾಗಿ ಸ್ವೀಕಾರಾರ್ಹವಾದ ಯಾವುದೇ ಡಾಕ್ಯುಮೆಂಟ್.

ಈ ದಾಖಲೆಗಳನ್ನು ನೀಡಲು ವಿಫಲರಾದ ಅರ್ಜಿದಾರರನ್ನು ಎನ್‌ಆರ್‌ಸಿ ಪಟ್ಟಿಯಿಂದ ಹೊರಗಿಡಲಾಗಿದೆ. ಈ ಅರ್ಜಿದಾರರು ತಮ್ಮ ಪ್ರಕರಣಗಳನ್ನು ವಿದೇಶಿಯರ ನ್ಯಾಯಮಂಡಳಿಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಪೌರತ್ವವನ್ನು ಸಾಬೀತುಪಡಿಸಲು ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಹೊಂದಿದ್ದಾರೆ. ಅದಂರಂತೆ ಅರ್ಜಿ ಸಲ್ಲಿಸಿದ್ದ ಮಹಿಳೆಯ ದಾಖಲೆಗಳನ್ನು ಕೋರ್ಟ್‌ ಒಪ್ಪಿಲ್ಲ.

ಒಟ್ಟಿನಲ್ಲಿ ಈ ಎನ್‌ಆರ್‌ಸಿ ಪ್ರಕ್ರಿಯೆ ಭಾರತದಂತಹ ಬೃಹತ್‌ ದೇಶದಲ್ಲಿ ದೊಡ್ಡ ಕಗ್ಗಂಟು ಉಂಟುಮಾಡುವುದು ನಿಸ್ಸಂದೇಹವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...