ಬ್ರಿಟಿಷ್-ಸ್ವೀಡಿಷ್ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ COVID-19 ಲಸಿಕೆಯ ಹಂತ 3 ಕ್ಲಿನಿಕಲ್ ಪ್ರಯೋಗಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಪ್ರಯೋಗದಲ್ಲಿ ಲಸಿಕೆ ಪಡೆದಿದ್ದ ವ್ಯಕ್ತಿಯೊಬ್ಬರಿಗೆ ಅನಾರೋಗ್ಯ ಉಂಟಾಗಿದ್ದು, ಅದಕ್ಕೆ ಕಾರಣವೇನು ಅನ್ನೋದು ಗೊತ್ತಾಗದ ಹಿನ್ನೆಲೆಯಲ್ಲಿ ಕ್ಲೀನಿಕಲ್ ಟೆಸ್ಟ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು STAT ನ್ಯೂಸ್ ವರದಿ ಮಾಡಿದೆ.
STAT ವರದಿಗಾರ್ತಿ ರೆಬೆಕಾ ರಾಬಿನ್ಸ್ ಸೆಪ್ಟೆಂಬರ್ 9 ರಂದು ಕಂಪನಿಯು ಬಿಡುಗಡೆ ಮಾಡಿದ ಹೇಳಿಕೆಯನ್ನು ಟ್ವೀಟ್ ಮಾಡಿದ್ದಾರೆ.
Here's $AZN's updated statement, making clear that the company *voluntarily* paused vaccination in its P3 trial. https://t.co/kmjVIHGY1T pic.twitter.com/twitF5EFES
— Rebecca Robbins (@RebeccaDRobbins) September 9, 2020
ಇದನ್ನೂ ಓದಿ: ರಿಯಾ ಚಕ್ರವರ್ತಿ ಬಂಧನ: ಡ್ರಗ್ಸ್ ಬಳಕೆ ಒಪ್ಪಿಕೊಂಡ ನಟಿ
ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿವೃದ್ಧಿಪಡಿಸುತ್ತಿರುವವರ ಪೈಕಿ ಅಸ್ಟ್ರಾಜೆನೆಕಾ ಮುಂಚೂಣಿಯಲ್ಲಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಲಸಿಕೆ ಕಂಡುಹಿಡಿದಿತ್ತು. ಸದ್ಯ ಲಸಿಕೆಯ ಕೊನೇ ಹಂತವಾದ ಫೇಸ್-3 ಪರೀಕ್ಷೆ ನಡೆಸುತ್ತಿರುವ 9 ಕಂಪನಿಗಳ ಪೈಕಿ ಅಸ್ಟ್ರಾಜೆನೆಕಾ ಕೂಡ ಒಂದಾಗಿದೆ.
ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿಗೆ ಅನಾರೋಗ್ಯ ಉಂಟಾಗಿದೆ. ಹೀಗಾಗಿ ನಾವು ಸ್ವಯಂಪ್ರೇರಿತರಾಗಿ ವಿಶ್ವದಾದ್ಯಂತ ನಡೆಯುತ್ತಿರುವ ಲಸಿಕೆ ಪ್ರಯೋಗ ನಿಲ್ಲಿಸಿದ್ದೇವೆ. ಸ್ವತಂತ್ರ ಸಮಿತಿಯೊಂದು ಲಸಿಕೆಯ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಅಸ್ಟ್ರಾಜೆನೆಕಾದ ವಕ್ತಾರರು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಉಲ್ಬಣವಾಗುತ್ತಿರುವ ನಿಟ್ಟಿನಲ್ಲಿ ವಿಶ್ವದಲ್ಲಿ ಅತಿದೊಡ್ಡ ಪ್ರಮಾಣದಲ್ಲಿ ಲಸಿಕೆಗಳನ್ನು ತಯಾರಿಸುವ ಪುಣೆಯ ಸೀರಮ್ ಸಂಸ್ಥೆ ಭಾರತದಲ್ಲಿ AZD1222 ಲಸಿಕೆ ವಿತರಿಸಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಈ ನಿಟ್ಟಿನಲ್ಲಿ 3,300 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿದೆ.
ಆಗಸ್ಟ್ ತಿಂಗಳ ಆರಂಭದಲ್ಲಿ ಸೀರಮ್ ಸಂಸ್ಥೆಯ ಸಿಇಒ ಆದರ್ ಪೂನವಾಲ್ಲಾ, ಶೇಕಡಾ 70 ರಿಂದ 80 ರಷ್ಟು ಖಚಿತವಾಗಿ ಲಸಿಕೆ 3 ನೇ ಹಂತವನ್ನು ದಾಟುತ್ತದೆ. ಪ್ರಯೋಗದಲ್ಲಿ ಸಫಲವಾಗುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್ ಜೊತೆ ವಿಶ್ವಾಸ ವ್ಯಕ್ತಪಡಿಸಿದ್ದರು.


