Homeಮುಖಪುಟ₹ 1.12 ಕೋಟಿ ಲಂಚ ಕೇಳಿದ ಹೆಚ್ಚುವರಿ ಕಲೆಕ್ಟರ್ !: 12 ಕಡೆ ದಾಳಿ ಮಾಡಿದ...

₹ 1.12 ಕೋಟಿ ಲಂಚ ಕೇಳಿದ ಹೆಚ್ಚುವರಿ ಕಲೆಕ್ಟರ್ !: 12 ಕಡೆ ದಾಳಿ ಮಾಡಿದ ತೆಲಂಗಾಣ ACB

112 ಎಕರೆ ಭೂಮಿಗೆ ನಿರಾಕ್ಷೇಪಣೆ ಪ್ರಮಾಣಪತ್ರ ನೀಡಲು ಮೇಡಕ್ ಜಿಲ್ಲೆಯ ಹೆಚ್ಚುವರಿ ಕಲೆಕ್ಟರ್ ಗಡ್ಡಮ್ ನಾಗೇಶ್ ಎಕರೆಗೆ  1 ಲಕ್ಷ ಲಂಚ ನೀಡುವಂತೆ ಒತ್ತಾಯಿಸಿರುವುದು ಟೆಲಿಫೋನ್ ಆಡಿಯೋದಲ್ಲಿ ದಾಖಲಾಗಿದೆ

- Advertisement -
- Advertisement -

ಭೂ ನೋಂದಣಿಗಾಗಿ ₹ 1.12 ಕೋಟಿ ಹಣವನ್ನು ಲಂಚವಾಗಿ ಕೇಳಿದ್ದು ದಾಖಲಾಗಿರುವ ಟೆಲಿಫೋನ್ ಆಡಿಯೋ ಆಧಾರದ ಮೇಲೆ ತೆಲಂಗಾಣದ ಹೆಚ್ಚುವರಿ ಕಲೆಕ್ಟರ್‌ ಅವರ ನಿವಾಸ ಸೇರಿದಂತೆ ಸುಮಾರು ಹನ್ನೆರಡು ಜನರ ಸ್ವತ್ತುಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ACB) ದಾಳಿ ನಡೆಸಿದೆ.

“112 ಎಕರೆ ಭೂಮಿಗೆ ನಿರಾಕ್ಷೇಪಣೆ ಪ್ರಮಾಣಪತ್ರ ನೀಡಲು ಮೇಡಕ್ ಜಿಲ್ಲೆಯ ಹೆಚ್ಚುವರಿ ಕಲೆಕ್ಟರ್ ಗಡ್ಡಮ್ ನಾಗೇಶ್ ಎಕರೆಗೆ  1 ಲಕ್ಷ ಲಂಚ ನೀಡುವಂತೆ ಒತ್ತಾಯಿಸಿರುವುದು ಆಡಿಯೋದಲ್ಲಿ ದಾಖಲಾಗಿದೆ” ಎಂದು ಎನ್‌ಡಿಟಿವಿ ವರದಿ ಮಾಡಿದೆ.

₹ 1.12 ಕೋಟಿ ಮೌಲ್ಯದ ಹಣ ಅಥವಾ ಆಸ್ತಿ ನೀಡುವಂತೆ ಕಲೆಕ್ಟರ್ ಒತ್ತಾಯಿಸಿರುವುದು ಆಡಿಯೋದಲ್ಲಿ ದಾಖಲಾಗಿದೆ. ಎಸಿಬಿ ರಾಜ್ಯಾದ್ಯಂತ ಆಶ್ಚರ್ಯಕರವಾಗಿ ತಪಾಸಣೆ ನಡೆಸುತ್ತಿದೆ. ಇನ್ನೂ ಯಾವುದೇ ಆಸ್ತಿ, ಹಣ ಮುಂತಾದ ಮೌಲ್ಯಯುತವಾದ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ. ದಾಳಿ ನಡೆಯುತ್ತಿದೆ ಎಂದು ACB ಅಧಿಕಾರಿಗಳು ತಿಳಿಸಿದ್ದಾರೆ.

ತೆಲಂಗಾಣ ಸರ್ಕಾರವು ತನ್ನ ಹೊಸ ಕಂದಾಯ ಕಾಯ್ದೆ ಜಾರಿಗೆ ಬರುವ ತನಕ ರಾಜ್ಯದಾದ್ಯಂತ ಎಲ್ಲಾ ಭೂ ನೋಂದಣಿಗಳನ್ನು ನಿಲ್ಲಿಸುವ ನಿರ್ಧಾರದ ಹಿನ್ನೆಲೆಯಲ್ಲಿ ಈ ಪ್ರಕರಣವು ಬರುತ್ತದೆ. ಕಂದಾಯ ಅಧಿಕಾರಿಗಳಲ್ಲಿನ ಭ್ರಷ್ಟಾಚಾರವನ್ನು ಪರಿಶೀಲಿಸುವ ಬದಲಾವಣೆಗಳನ್ನು ಪ್ರಸ್ತಾಪಿಸುವ ಮಸೂದೆಯನ್ನು ಕ್ಯಾಬಿನೆಟ್ ಅಂಗೀಕರಿಸಿದ್ದು, ವಿಧಾನಸಭೆಯ ಅಧಿವೇಶನದ ಮುಂದೆ ಮಂಡಿಸಲಾಗಿತ್ತು.


ಇದನ್ನೂ ಓದಿ: ಭ್ರಷ್ಟಾಚಾರ ಪ್ರಶ್ನಿಸಿದ ಪತ್ರಕರ್ತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ: ಅವ್ಯಾಹತವಾಗಿ ನಡೆದಿದೆ ಅರಣ್ಯ ಲೂಟಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read