Homeಅಂತರಾಷ್ಟ್ರೀಯಅಮೆರಿಕಾದಲ್ಲಿ ಅಬ್ಬರಿಸಲಿರುವ 'ಅಸುರನ್' - 72ನೇ ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ಪ್ರದರ್ಶನ

ಅಮೆರಿಕಾದಲ್ಲಿ ಅಬ್ಬರಿಸಲಿರುವ ‘ಅಸುರನ್’ – 72ನೇ ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ಪ್ರದರ್ಶನ

"ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಪ್ರದರ್ಶನಗೊಳ್ಳುವ ಭಾರತೀಯ ಚಿತ್ರಗಳ ಪಟ್ಟಿ ಇಲ್ಲಿದೆ"

- Advertisement -
- Advertisement -

2021 ರ ಫೆಬ್ರವರಿಯಲ್ಲಿ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿರುವ 72ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಧನುಶ್ ನಟನೆಯ ‘ಅಸುರನ್’ ತಮಿಳು ಚಿತ್ರ ಪ್ರದರ್ಶನಗೊಳ್ಳಲಿದ್ದು, ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗದಲ್ಲಿ ಇನ್ನೂ ಹಲವು ಭಾರತೀಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಧನುಷ್ ಮತ್ತು ಮಂಜು ವಾರಿಯರ್ ಅಭಿನಯದ, ವೆಟ್ರಿ ಮಾರನ್ ನಿರ್ದೇಶನದ, ಕಾದಂಬರಿ ಆಧಾರಿತ ಚಿತ್ರ ಅಸುರನ್. 2019 ರಲ್ಲಿ ಬಿಡುಗಡೆಯಾಗಿ ಭಾರತದಲ್ಲಿ ಅಬ್ಬರಿಸಿತ್ತು. ಕಥೆ, ಚಿತ್ರಕಥೆ, ನಟನೆ, ಸಂಗೀತ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಉತ್ತಮ ಪ್ರತಿಕ್ರಿಯೆ ಗಳಿಸಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಅಮೆರಿಕಾದ ಸಮಾರಂಭದಲ್ಲಿ ಪ್ರದರ್ಶನಗೊಳ್ಳುವ ಮೂಲಕ ತನ್ನ ಛಾಪನ್ನು ವಿದೇಶದಲ್ಲಿಯೂ ಮೂಡಿಸಲಿದೆ.

ಇದನ್ನೂ ಓದಿ: ಬರಲಿದೆ ‘ಭೀಮಾ ಕೋರೆಗಾಂವ್’ ಚಿತ್ರ: ಸಾಮಾಜಿಕ ಮಾಧ್ಯಮಗಳಲ್ಲಿ ಫಸ್ಟ್‌ಲುಕ್ ವೈರಲ್!

ಸುಧಾ ಕೊಂಗರಾ ನಿರ್ದೇಶಿಸಿದ, ಸೂರ್ಯ ಅಭಿನಯದ ‘ಸೂರರೈ ಪೊಟ್ರು’ ತಮಿಳು ಚಿತ್ರವೂ ಪ್ರದರ್ಶನಗೊಳ್ಳಲಿದೆ. ಈ ಚಿತ್ರವು 1990 ರ ದಶಕದಲ್ಲಿ ಕಡಿಮೆ ಬೆಲೆಯಲ್ಲಿ ವಿಮಾನಯಾನವನ್ನು ಪ್ರಾರಂಭಿಸುವ ದೊಡ್ಡ ಕನಸು ಹೊತ್ತ ಸಾಮಾನ್ಯ ವ್ಯಕ್ತಿಯೊಬ್ಬನ ಜೀವನ ಚರಿತ್ರೆಯನ್ನು ಆಧರಿಸಿದೆ. ಕೊರೊನಾ ಸಾಂಕ್ರಾಮಿಕ ರೋಗದ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಿ ಅತ್ಯುತ್ತಮ ಪ್ರತಿಕ್ರಿಯೆ ಗಳಿಸಿತ್ತು.

ಇನ್ನು ಭಾರತದಿಂದ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಮಲಯಾಳಂ ಚಿತ್ರ ‘ಜಲ್ಲಿಕಟ್ಟು’ ಕೂಡ ಇಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಮೇಲಿನ ಚಿತ್ರಗಳೂ ಸೇರಿದಂತೆ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗದಡಿ ಗೋಲ್ಡನ್ ಗ್ಲೋಬ್ಸ್ 2021 ರಲ್ಲಿ ಪ್ರದರ್ಶನಗೊಳ್ಳಲಿರುವ ಭಾರತೀಯ ಚಿತ್ರಗಳ ಪೂರ್ಣ ಪಟ್ಟಿಯನ್ನು ಸಿನಿಮಾ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಿಗರು ನೋಡಲೇಬೇಕಾದ ಚಿತ್ರ ‘ದಿ ಸೋಷಲ್ ಡೈಲೆಮಾ’: ನಮಗೇನಾದರೂ ಪಾಠಗಳಿವೆಯೇ?

  1. ಸೂರರೈ ಪೊಟ್ರು
  2. ಅಸುರನ್
  3. ಜಲ್ಲಿಕಟ್ಟು
  4. ತನ್ಹಾಜಿ
  5. ದಿ ಡಿಸಿಪಲ್
  6. ಲುಡೋ
  7. ಈಬ್ ಅಲ್ಲೆ ಓ
  8. ಹರಾಮಿ
  9. ಜಸ್ಟ್‌ ಲೈಕ್ ದಟ್
  10. ಟ್ರೀಸ್ ಅಂಡರ್‌ ದಿ ಸನ್

ಇದನ್ನೂ ಓದಿ: ಮತ್ತೆ ಥಿಯೇಟರ್‌ಗಳಿಗೆ ಲಗ್ಗೆ ಇಡುತ್ತಿವೆ ನಿಮ್ಮ ನೆಚ್ಚಿನ ಚಲನಚಿತ್ರಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾದ ಮೋದಿಯ ದ್ವೇಷ ಭಾಷಣ

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...