Homeಮುಖಪುಟಮತ್ತೆ ಥಿಯೇಟರ್‌ಗಳಿಗೆ ಲಗ್ಗೆ ಇಡುತ್ತಿವೆ ನಿಮ್ಮ ನೆಚ್ಚಿನ ಚಲನಚಿತ್ರಗಳು!

ಮತ್ತೆ ಥಿಯೇಟರ್‌ಗಳಿಗೆ ಲಗ್ಗೆ ಇಡುತ್ತಿವೆ ನಿಮ್ಮ ನೆಚ್ಚಿನ ಚಲನಚಿತ್ರಗಳು!

- Advertisement -
- Advertisement -

ಕೊರೊನಾ ಲಾಕ್‌ಡೌನ್ ಹಿನ್ನೆಲೆ ಬಾಗಿಲು ಹಾಕಿದ್ದ ಚಿತ್ರಮಂದಿರಗಳು ಮತ್ತೆ ಸಿನಿಪ್ರಿಯರಿಗಾಗಿ ಮತ್ತೆ ಓಪನ್ ಆಗಿವೆ. ಆದರೆ ಹೊಸ ಚಿತ್ರಗಳನ್ನು ಥಿಯೇಟರ್‌ಗಳಿಗೆ ಬಿಡುಗಡೆ ಮಾಡಲು ಚಿತ್ರತಂಡಗಳು ಅಷ್ಟೊಂದು ಧೈರ್ಯವಹಿಸುತ್ತಿಲ್ಲ. ಇದರ ಕಾರಣ ಹಳೆಯ ಬ್ಲಾಕ್‌ ಬ್ಲಾಸ್ಟರ್‌ ಚಿತ್ರಗಳನ್ನೇ ರಿರಿಲೀಸ್ ಮಾಡಲು ಹೊರಟಿವೆ.

ಚಿತ್ರಮಂದಿರಗಳಿಗೆ ಹೋಗುವ ಜನರು ಕಡಿಮೆಯಾಗಿದ್ದಾರೆ. ಚಿತ್ರಮಂದಿರ ಓಪನ್ ಇದ್ದರೂ ಕೊರೊನಾ ಆತಂಕ ಇನ್ನು ಜನರನ್ನು ಬಿಟ್ಟಿಲ್ಲ. ಕೆಲವು ಸಿನಿಮಾ ನಿರ್ದೇಶಕರು ಮಾತ್ರ ತಮ್ಮ ಚಿತ್ರಗಳು ಜನರನ್ನು ಚಿತ್ರಮಂದಿರದತ್ತ ಸೆಳೆಯುತ್ತವೆ ಎಂಬ ಭರವಸೆಯಲ್ಲಿ ಚಿತ್ರ ಬಿಡುಗಡೆಗೆ ಸಿದ್ಧರಾಗಿದ್ದಾರೆ.

ಭಾರತೀಯ ಚಿತ್ರರಂಗವೇ ದಕ್ಷಿಣ ಭಾರತದ ಸಿನಿ ರಂಗದ ಕಡೆ ತಿರುಗುವಂತೆ ಮಾಡಿದ ಚಿತ್ರ ಎಂದರೆ ಎಸ್​.ಎಸ್​ ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಸಿನಿಮಾಗಳು. 2015 ರಲ್ಲಿ ರಿಲೀಸ್ ಆಗಿದ್ದ ಬಾಹುಬಲಿ-ದಿ ಬಿಗಿನ್ನಿಂಗ್ ಹಾಗೂ 2017 ರಲ್ಲಿ ಅದರ ಮುಂದುವರಿದ ಭಾಗವಾಗಿ ಬಂದ ಬಾಹುಬಲಿ-ದಿ ಕನ್​ಕ್ಲೂಷನ್ ಸಿನಿಮಾ ಸೂಪರ್‌ ಹಿಟ್ ಆಗಿದ್ದವು.

ಇದನ್ನೂ ಓದಿ: ತೆಲುಗು, ತಮಿಳು ಚಿತ್ರರಂಗದಲ್ಲಿ ಯಶಕಂಡ ಫ್ಯಾಂಟಸಿ ಸಿನಿಮಾಗಳ ನಿರ್ದೇಶಕ, ಕನ್ನಡಿಗ ವಿಠಲಾಚಾರ್ಯ

ಈ ಸಿನಿಮಾಗಳನ್ನು ದೊಡ್ಡಪರದೆಯಲ್ಲಿ ಮಿಸ್ ಮಾಡಿಕೊಂಡವರಿಗಾಗಿ ಮತ್ತೆ ಸಿನಿಮಾ ನೋಡುವ ಅವಕಾಶ ಬರುತ್ತಿದೆ. ಇವತ್ತು ಬಾಹುಬಲಿ-ದಿ ಬಿಗಿನ್ನಿಂಗ್ ಮತ್ತೆ ರಿಲೀಸ್ ಥಿಯೇಟರ್‌ಗಳಿಗೆ ಲಗ್ಗೆ ಇಡುತ್ತಿದೆ. ಬಾಹುಬಲಿ-ದಿ ಕನ್​ಕ್ಲೂಷನ್ ಮುಂದಿನ ಶುಕ್ರವಾರ ಅಂದರೆ ನವೆಂಬರ್​ 13 ರಂದು ರೀ ರಿಲೀಸ್​ ಆಗಲಿವೆ. ಬಾಲಿವುಡ್​ ಟ್ರೇಡ್​ ಅನಲಿಸ್ಟ್​ ತರಣ್​ ಆದರ್ಶ್​ ಈ ವಿಚಾರವನ್ನ ಟ್ವಿಟರ್​​ನಲ್ಲಿ ತಿಳಿಸಿದ್ದಾರೆ

ನಟ ಪ್ರಭಾಸ್​, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ ಮುಂತಾದ ಸ್ಟಾರ್​ ನಟ ನಟಿಯರು ಅಭಿನಯಿಸಿದ್ದ ಈ ಸಿನಿಮಾ ಭಾರತದ ಜೊತೆಗೆ ವಿದೇಶಗಳಲ್ಲೂ ತೆರೆ ಕಂಡಿತ್ತು. ಅಲ್ಲದೆ ಅಂತರಾಷ್ಟ್ರೀಯ ಫಿಲ್ಮ್​​​ ಫೆಸ್ಟ್​​​ಗಳಾದ ಬ್ರಿಟಿಷ್​ ಫಿಲ್ಮ್​​ ಇನ್ಸ್​​ಟಿಟ್ಯೂಟ್​ ಹಾಗೂ 39 ನೇ ಮಸ್ಕೋ ಇಂಟರ್‌ನ್ಯಾಷನಲ್​ ಫಿಲ್ಮ್​​ ಫೆಸ್ಟಿವಲ್​ನಲ್ಲೂ ಉತ್ತಮ ಪ್ರದರ್ಶನ ಕಂಡಿತ್ತು.

ಇನ್ನು ನಟ, ನಿರ್ದೇಶಕ ರಿಷಬ್​ ಶೆಟ್ಟಿ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದು ಸಾಕಷ್ಟು ಮೆಚ್ಚುಗೆ ಗಳಿಸಿದ್ದ, ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಮತ್ತೆ ಸಿನಿಮಾ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ.

PC:Rishabshettyfilms@Instagram

2018 ರ ಆಗಸ್ಟ್​ನಲ್ಲಿ ರಿಲೀಸ್​ ಆಗಿದ್ದ ಈ ಸಿನಿಮಾ 125 ದಿನಗಳ ಭರ್ಜರಿ ಪ್ರದರ್ಶನ ಕಂಡಿತ್ತು. ಸಾಕಷ್ಟು ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದ ಚಿತ್ರ ಮಕ್ಕಳು-ಹಿರಿಯರು ಎಲ್ಲರ ಮನಸ್ಸನ್ನು ಗೆದ್ದುಕೊಂಡಿತ್ತು.


ಇದನ್ನೂ ಓದಿ: ಪ್ರತಿ ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಕ್ಲಾಸ್‌ರೂಂ ಇರುವ ಏಕೈಕ ರಾಜ್ಯ ಕೇರಳ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...