Homeಮುಖಪುಟತೆಲುಗು, ತಮಿಳು ಚಿತ್ರರಂಗದಲ್ಲಿ ಯಶಕಂಡ ಫ್ಯಾಂಟಸಿ ಸಿನಿಮಾಗಳ ನಿರ್ದೇಶಕ, ಕನ್ನಡಿಗ ವಿಠಲಾಚಾರ್ಯ

ತೆಲುಗು, ತಮಿಳು ಚಿತ್ರರಂಗದಲ್ಲಿ ಯಶಕಂಡ ಫ್ಯಾಂಟಸಿ ಸಿನಿಮಾಗಳ ನಿರ್ದೇಶಕ, ಕನ್ನಡಿಗ ವಿಠಲಾಚಾರ್ಯ

- Advertisement -
- Advertisement -

ದಕ್ಷಿಣ ಭಾರತದಲ್ಲಿ ಫ್ಯಾಂಟಸಿ ಸಿನಿಮಾಗಳ ಟ್ರೆಂಡ್ ಆರಂಭಿಸಿದ ನಿರ್ದೇಶಕರು ಬಿ.ವಿಠಲಾಚಾರ್ಯ. ಕನ್ನಡಿಗರಾದ ಅವರು ಯಶಸ್ಸು ಕಂಡದ್ದು ತೆಲುಗು, ತಮಿಳು ಚಿತ್ರರಂಗದಲ್ಲಿ ಎನ್ನುವುದು ಸೋಜಿಗ. ಅವರು ಕಾಲವಾಗಿ ಇಂದಿಗೆ (21) ಇಪ್ಪತ್ತೊಂದು ವರ್ಷ.

***

ರಾಜಮೌಳಿ ನಿರ್ದೇಶನದಲ್ಲಿ ತೆರೆಗೆ ಬಂದ ‘ಬಾಹುಬಲಿ’ ಫ್ಯಾಂಟಸಿ ಸಿನಿಮಾ ಸರಣಿಗಳು ಭಾರತದಾದ್ಯಂತ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಯಲ್ಲೂ ಸದ್ದುಮಾಡಿದವು. ಅತ್ಯಾಧುನಿಕ ತಂತ್ರಜ್ಞಾನವನ್ನು ಅಚ್ಚುಕಟ್ಟಾಗಿ ಬಳಕೆ ಮಾಡಿಕೊಂಡ ನಿರ್ದೇಶಕ ರಾಜಮೌಳಿ ತೆರೆಯ ಮೇಲೆ ಅದ್ಭುತವನ್ನೇ ಸೃಷ್ಟಿಸಿದ್ದರು. ಆದರೆ 50ರ ದಶಕದಲ್ಲಿ ಆಗಿದ್ದ ಅಲ್ಪ ತಂತ್ರಜ್ಞಾನವನ್ನೇ ಸೂಕ್ತವಾಗಿ ಬಳಸಿಕೊಂಡು ಬೆಳ್ಳೆತೆರೆಯಲ್ಲಿ ಇಂಥ ಅಚ್ಚರಿಗಳನ್ನು ಸೃಷ್ಟಿಸಿ ಯಶಸ್ಸು ಕಂಡವರು ಬಿ.ವಿಠಲಾಚಾರ್ಯ. 1954ರಲ್ಲಿ ಅವರು ನಿರ್ಮಿಸಿ, ನಿರ್ದೇಶಿಸಿದ ಜಾನಪದ ಶೈಲಿಯ ಫ್ಯಾಂಟಸಿ ಕನ್ನಡ ಸಿನಿಮಾ “ರಾಜಲಕ್ಷ್ಮಿ’ ಚಿತ್ರೋದ್ಯಮದವರ ಗಮನ ಸೆಳೆದಿತ್ತು. ತಮಿಳು ಮತ್ತು ತೆಲುಗು ಚಿತ್ರೋದ್ಯಮಿಗಳೂ ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಂದಿನ ದಿನಗಳಲ್ಲಿ ಇವರು ನಿರ್ಮಿಸಿದ “ಪಾಲಾಳಮೋಹಿನಿ’, “ಮೋಹಿನಿ ಭಸ್ಮಾಸುರ’ ತೆಲುಗು ಫ್ಯಾಂಟಸಿ ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿದ್ದವು. ದಕ್ಷಿಣ ಭಾರತ ಮಾತ್ರವಲ್ಲ ಹಿಂದಿ ಚಿತ್ರರಂಗದವರೂ ಅವರ ಸಿನಿಮಾ ತಂತ್ರಗಳನ್ನು ಹೊಗಳಿದ್ದರು.

ಮೂಲತಃ ಉಡುಪಿಯವರಾದ ವಿಠಲಾಚಾರ್ಯರು ಕೆಲಸದ ನಿಮಿತ್ತ ಚಿಕ್ಕ ವಯಸ್ಸಿನಲ್ಲೇ ಊರು ಬಿಟ್ಟು ಅರಸೀಕೆರೆ ಸೇರಿದರು. ಅವರು ಓದಿದ್ದು ಏಳನೇ ತರಗತಿಯಷ್ಟೆ. ಶಾಲೆ ಬಿಟ್ಟು ಹೋಟೆಲ್ ಸೇರಿದ ಅವರು ಕೆಲವು ವರ್ಷಗಳ ನಂತರ ಮೈಸೂರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದರು. ಹೋಟೆಲ್ ಉದ್ಯಮಿಯಾದರೂ ಅವರ ಆಸಕ್ತಿ ಇದ್ದುದು ಸಿನಿಮಾರಂಗದೆಡೆ. ಮೊದಲ ಪ್ರಯತ್ನವಾಗಿ ಸಿ.ವಿ.ರಾಜು ನಿರ್ದೇಶನದ “ಶ್ರೀಕೃಷ್ಣಲೀಲಾ” ಸಿನಿಮಾದ ಸಹನಿರ್ಮಾಪಕರಾದರು. ಮುಂದೆ ಡಿ.ಶಂಕರ್‌ಸಿಂಗ್ ಅವರ ಮಹಾತ್ಮಾ ಪಿಕ್ಚರ್ಸ್‍ನೊಂದಿಗೆ ವಿಠಲಾಚಾರ್ಯರು ಗುರುತಿಸಿಕೊಂಡರು. 1952ರಲ್ಲಿ ತಯಾರಾದ ಮಹಾತ್ಮಾ ಪಿಕ್ಚರ್ಸ್‍ನ “ಸೌಭಾಗ್ಯ ಲಕ್ಷ್ಮಿ” ಸಿನಿಮಾ ನಿರ್ದೇಶಿಸುವ ಮೂಲಕ ಸ್ವತಂತ್ರ್ಯ ನಿರ್ಮಾಪಕರಾದರು. ಮರುವರ್ಷ 1953ರಲ್ಲಿ ತಮ್ಮದೇ ವಿಠಲ್ ಪ್ರೊಡಕ್ಷನ್ಸ್ ಆರಂಭಿಸಿದರು. ಈ ಸಂಸ್ಥೆಯಡಿ ವಿಠಲಾಚಾರ್ಯರು “ಕನ್ಯಾದಾನ’ (1954) ನಿರ್ಮಿಸಿ, ನಿರ್ದೇಶಿಸಿದರು. ಫ್ಯಾಂಟಸಿ ಸಿನಮಾ ಮಾಡಬೇಕೆನ್ನುವ ಅವರ ಮಹದಾಸೆ ಕೈಗೂಡಿದ್ದು “ರಾಜಲಕ್ಷ್ಮಿ’ ಚಿತ್ರದ ಮೂಲಕ.

ಇದಾದ ನಂತರ “ಮುತ್ತೈದೆ ಭಾಗ್ಯ” (1956), “ಮನೆ ತುಂಬಿದ ಹೆಣ್ಣು” (1958) ಚಿತ್ರಗಳನ್ನು ಮಾಡಿದರು. “ಮುತ್ತೈದು ಭಾಗ್ಯ” ಚಿತ್ರದಲ್ಲಿ ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ನಾಯಕರಾಗಿದ್ದರು ಎನ್ನುವುದು ವಿಶೇಷ. ಅದೇಕೋ ಈ ಸಿನಿಮಾಗಳು ಗೆಲ್ಲಲಿಲ್ಲ. ಇದರಿಂದ ತೆಲುಗು ಸಿನಿಮಾರಂಗದತ್ತ ಮುಖಮಾಡಿದ ವಿಠಲಾಚಾರ್ಯರು ಅಲ್ಲಿ ಫ್ಯಾಂಟಸಿ ಸಿನಿಮಾಗಳ ಮೂಲಕವೇ ದೊಡ್ಡ ಹೆಸರು ಮಾಡಿದರು. ತಮಿಳಿನಲ್ಲಿ ಅವರು ನಿರ್ಮಿಸಿ, ನಿರ್ದೇಶಿಸಿದ “ಪೆಣ್‍ಕುಲತ್ತಿನ್”, “ತೇನ್‍ವಿಳಕ್ಕು” ಸಿನಿಮಾಗಳು ದೊಡ್ಡ ಯಶಸ್ಸು ಕಂಡವು. ಕನ್ನಡ, ತೆಲುಗು ಮತ್ತು ತಮಿಳಿನ 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿದ ವಿಠಲಾಚಾರ್ಯರು 1996, ಮೇ 28ರಂದು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.

ಚಿತ್ರನಿರ್ಮಾಣ, ನಿರ್ದೇಶನದ ಜೊತೆ ಹಲವಾರು ತಂತ್ರಜ್ಞರು ಮತ್ತು ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆಯೂ ವಿಠಲಾಚಾರ್ಯರಿಗೆ ಸಲ್ಲಬೇಕು. ಆಗ ಸಿನಿಮಾ ಸೇರುವ ಆಸೆಯಿಂದ ಕನ್ನಡ ನಾಡಿನಿಂದ ಮದರಾಸಿಗೆ ಆಗಮಿಸುವವರಿಗೆ ಅವರು ನೆರವಾಗುತ್ತಿದ್ದರು. ಕನ್ನಡ ಚಿತ್ರರಂಗ ಕಂಡ ಮೇರು ನಿರ್ದೇಶಕ ಸಿದ್ದಲಿಂಗಯ್ಯನವರು ಮೊದಲು ತರಬೇತಿ ಪಡೆದದ್ದೇ ವಿಠಲಾಚಾರ್ಯರಲ್ಲಿ. ಹೀಗೆ, ಪರೋಕ್ಷವಾಗಿಯೂ ಅವರು ಕನ್ನಡ ಚಿತ್ರರಂಗದ ಬೆಳವಣಿಗೆಗಳಲ್ಲಿ ಪ್ರೇರಕ ಶಕ್ತಿಯಾಗಿದ್ದರು. ಐವತ್ತು, ಅರವತ್ತರ ದಶಕದಲ್ಲಿ ಅವರು ತಯಾರಿಸಿದ ಫ್ಯಾಂಟಸಿ ಸಿನಿಮಾಗಳು ಮುಂದಿನ ದಿನಗಳಲ್ಲಿ ಅಂತಹ ಸಿನಿಮಾಗಳನ್ನು ನಿರ್ಮಿಸುವವರಿಗೆ ಸ್ಫೂರ್ತಿಯಾದವು. ಇಂದಿಗೂ ದಕ್ಷಿಣ ಭಾರತದ ಫ್ಯಾಂಟಸಿ ಸಿನಿಮಾಗಳ ಬಗ್ಗೆ ಮಾತನಾಡುವಾಗ ವಿಠಲಾಚಾರ್ಯರ (20/01/1920 – 28/05/1999) ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ.


ಇದನ್ನೂ ಓದಿ: ಮರೆಯಲಾಗದ ಮಿನುಗುತಾರೆ ಕಲ್ಪನಾ ನಮ್ಮನಗಲಿದ ದಿನವಿಂದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...