ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಭಿಕ್ಷೆ ಬೇಡುತ್ತಿದ್ದ ಮೂವರು ಮುಸ್ಲಿಂ ಫಕೀರರನ್ನು ಸ್ಥಳೀಯರು ಜಿಹಾದಿ, ಭಯೋತ್ಪಾದಕರು ಎಂದು ನಿಂದಿಸಿ, ಹಲ್ಲೆ ನಡೆಸಿ ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ದುಷ್ಕರ್ಮಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಪ್ರವಾದಿ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಾಜ್ಯದ ಗೊಂಡಾ ಪ್ರದೇಶದ ದೇಗುರ್ ಗ್ರಾಮದಲ್ಲಿ ವೈರಲ್ ವಿಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಸಂತ್ರಸ್ತ್ರ ಫಕೀರರನ್ನು ಹಿಡಿದು, ಧಾರ್ಮಿಕವಾಗಿ ನಿಂದನೆಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ: ದಲಿತ ಯುವಕನಿಗೆ ಥಳಿಸಿ ಮೂತ್ರ ಕುಡಿಸಿದ ಜಾತಿವಾದಿ ದುಷ್ಕರ್ಮಿಗಳು; ಪ್ರಕರಣ ದಾಖಲು
ಜೊತೆಗೆ ದೊಡ್ಡ ದೊಣ್ಣೆ ಹಿಡಿರುವ ಯುವಕನೊಬ್ಬ ಫಕೀರರನ್ನು ನಿಂದಿಸಿ ಗುರುತಿನ ಚೀಟಿ ಕೇಳುತ್ತಾನೆ. ಈ ವೇಳೆ ಆತ ಒಬ್ಬ ವ್ಯಕ್ತಿಗೆ ಹಲ್ಲೆ ಕೂಡಾ ಮಾಡುತ್ತಾನೆ. ಜೊತೆಗೆ ಅವನ್ನು ಜಿಹಾದಿ, ಭಯೋತ್ಪಾದಕರು ಎಂದು ಕರೆಯಯುತ್ತಾನೆ.
“ನಿಮ್ಮ ಆಧಾರ್ ಅನ್ನು ನಮಗೆ ತೋರಿಸಿ, ಇಲ್ಲದಿದ್ದರೆ ನಾವು ನಿಮ್ಮ ವಸ್ತುಗಳನ್ನು ಹೊರಹಾಕುತ್ತೇವೆ. ನೀವೆಲ್ಲರೂ ಭಯೋತ್ಪಾದಕರು… ಸದಾ ನಿಮ್ಮ ಆಧಾರ್ ಅನ್ನು ಒಯ್ಯಿರಿ” ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಕೇಳುತ್ತದೆ.
ಈ ನಡುವೆ ಪರಿಸ್ಥಿತಿಯನ್ನು ಶಾಂತಗೊಳಿಸಲು ಮಧ್ಯಪ್ರವೇಶಿಸುವ ವ್ಯಕ್ತಿಯನ್ನು ದುಷ್ಕರ್ಮಿ ಯುವಕ ದೂರ ತಳ್ಳುತ್ತಾನೆ.
2 मिनट का ये वीडियो देखकर आप समझ जाएँगे कि हमारे-आपके बच्चों में कितना जहर भरा जा चुका है. pic.twitter.com/me4qDMRdCn
— Utkarsh Singh (@UtkarshSingh_) June 8, 2022
ಟಿವಿ ಚರ್ಚೆಯೊಂದರಲ್ಲಿ ಪ್ರವಾದಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕೆ ಅಮಾನತುಗೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪ್ರವಾದಿ ನಿಂದನೆಯನ್ನು ಸುಮಾರು 17 ಇಸ್ಲಾಮಿಕ್ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಈ ನಡುವೆ ಪ್ರಸ್ತುತ ಈ ವಿಡಿಯೊ ವೈರಲ್ ಆಗಿದೆ.



All nonsense are going on