Homeದಲಿತ್ ಫೈಲ್ಸ್ರಾಜಸ್ಥಾನ: ದಲಿತ ಯುವಕನಿಗೆ ಥಳಿಸಿ ಮೂತ್ರ ಕುಡಿಸಿದ ಜಾತಿವಾದಿ ದುಷ್ಕರ್ಮಿಗಳು; ಪ್ರಕರಣ ದಾಖಲು

ರಾಜಸ್ಥಾನ: ದಲಿತ ಯುವಕನಿಗೆ ಥಳಿಸಿ ಮೂತ್ರ ಕುಡಿಸಿದ ಜಾತಿವಾದಿ ದುಷ್ಕರ್ಮಿಗಳು; ಪ್ರಕರಣ ದಾಖಲು

8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಯಾರನ್ನೂ ಇನ್ನು ಬಂಧಿಸಿಲ್ಲ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

- Advertisement -
- Advertisement -

ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಜಾಟ್ ಸಮುದಾಯದ ಎಂಟು ಜನರು 25 ವರ್ಷದ ದಲಿತ ಯುವಕನನ್ನು ಅಪಹರಿಸಿ, ಆತನ ಮೇಲೆ ಹಲ್ಲೆ ನಡೆಸಿ ತಮ್ಮ ಮೂತ್ರವನ್ನು ಕುಡಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ದಾಳಿಕೋರರ ವಿರುದ್ಧ ಐಪಿಸಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಆರೋಪಿಗಳ ಬಂಧನವಾಗಿಲ್ಲ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

“ಜನವರಿ 26ರ ರಾತ್ರಿ ಚುರು ಜಿಲ್ಲೆಯ ರುಖಾಸರ್ ಗ್ರಾಮದ ನಿವಾಸಿ ರಾಕೇಶ್ ಮೇಘವಾಲ್ ಮೇಲೆ ದಾಳಿ ನಡೆಸಲಾಯಿತು. ಮರುದಿನ ದಾಖಲಾದ ಎಫ್‌ಐಆರ್‌ನಲ್ಲಿ, ಕಳೆದ ವರ್ಷ ಹೋಳಿಯಲ್ಲಿ ನಡೆದ ವಿವಾದದಿಂದಾಗಿ ಹಲ್ಲೆ ನಡೆದಿದೆ. ಆರೋಪಿಗಳು ಜಾತಿ ನಿಂದನೆ ಮಾಡಿದ್ದಾರೆ ಎಂದು ಸಂತ್ರಸ್ತ ಯುವಕ ಮೇಘವಾಲ್ ತಿಳಿಸಿದ್ದಾರೆ” ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

“ಅದೇ ಗ್ರಾಮದ ನಿವಾಸಿ ಉಮೇಶ್ ಜಾಟ್ ಮತ್ತು ಇತರ ಏಳು ಮಂದಿ ಸೇರಿ ಮೇಘವಾಲ್‌ ಅವರನ್ನು ಅಪಹರಿಸಿದ್ದರು. ಅವರನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ಸಮೀಪದ ಹೊಲಕ್ಕೆ ಕರೆದೊಯ್ದಿದ್ದರು” ಎಂದು ವರದಿಯಾಗಿದೆ.

“ಮದ್ಯದ ಬಾಟಲಿಯನ್ನು ತೆಗೆದುಕೊಂಡು ಬಲವಂತವಾಗಿ ನನಗೆ ಕುಡಿಯುವಂತೆ ಹೇಳಿದರು. ಬಾಟಲಿಯು ಖಾಲಿಯಾದ ನಂತರ ರಾಕೇಶ್, ರಾಜೇಶ್, ಉಮೇಶ್, ತಾರಾಚಂದ್, ಅಕ್ಷಯ್, ದಿನೇಶ್, ಬಿಡದಿಚಂದ್ ಮತ್ತು ಬೀರಬಲ್ ಎಂಬವರು ಆ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ನನಗೆ ಕುಡಿಸಿದರು” ಎಂದು ಮೇಘವಾಲ್‌ ಹೇಳಿದ್ದಾರೆ. ಚುರುವಿನ ರತನ್‌ಗಢ ಪೊಲೀಸ್ ಠಾಣೆಯಲ್ಲಿ ಮೇಘವಾಲ್ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಮೇಘವಾಲ್ ಅವರಿಗೆ ಜಾತಿ ನಿಂದನೆ ಮಾಡಲಾಗಿದೆ. ದಲಿತರಿಗೆ ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಲಾಗಿದೆ ಎಂದು ಎಫ್ಐಆರ್ ಹೇಳಿದೆ.

“ಅವರೆಲ್ಲರೂ ಸುಮಾರು ಅರ್ಧ ಗಂಟೆ ಕಾಲ ಕೋಲುಗಳು ಮತ್ತು ಹಗ್ಗಗಳಿಂದ ನನ್ನನ್ನು ಹೊಡೆದರು. ಹೀಗಾಗಿ ನನ್ನ ದೇಹದ ಮೇಲೆಲ್ಲ ಗಾಯಗಳಾಗಿವೆ” ಎಂದು ಮೇಘವಾಲ್‌ ಹೇಳಿರುವುದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಉಮೇಶ್, ರಾಜೇಶ್, ತಾರಾಚಂದ್, ರಾಕೇಶ್, ಬೀರ್ಬಲ್, ಅಕ್ಷಯ್, ದಿನೇಶ್ ಮತ್ತು ಬಿಡದಿ ಚಂದ್ ಅವರನ್ನು ಆರೋಪಿಗಳೆಂದು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 365 (ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆ 1989ರ ಸಂಬಂಧಿತ ವಿಭಾಗಗಳನ್ನೂ ಪ್ರಕರಣದಲ್ಲಿ ಸೇರಿಸಲಾಗಿದೆ.

ಮೇಘವಾಲ್ ಅವರ ಹಲ್ಲೆ ಆರೋಪ ನಿಜವೆಂದು ತೋರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ನಾವು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ. ಮೇಲ್ನೋಟಕ್ಕೆ ಮೇಘವಾಲ್ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ನಿಜವೆಂದು ಕಂಡುಬಂದಿದೆ. ಎಲ್ಲಾ ಆರೋಪಿಗಳು ಮೇಘವಾಲ್‌ ರವರ ವಯಸ್ಸಿನವರಾಗಿದ್ದು, ಅವರ ನಡುವೆ ಜಗಳ ನಡೆದಿತ್ತು. ಒಂದು ವರ್ಷದ ಹಿಂದೆ ವಾದ್ಯ ನುಡಿಸುವುದನ್ನು ಮೇಘವಾಲ್‌ ಬಿಟ್ಟಿದ್ದರು. ಆರೋಪಿಗಳ ಕಡೆಯವರು ಕೆಲವು ಹೇಳಿಕೆಗಳನ್ನು ನೀಡಿದ್ದರು. ಇದು ದ್ವೇಷಕ್ಕೆ ಕಾರಣವಾಯಿತು ಎಂದು ದೂರುದಾರರು ಹೇಳಿದ್ದಾರೆ. ನಾವು ಈ ಅಂಶಗಳ ಕುರಿತು ತನಿಖೆ ಮಾಡುತ್ತಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿರಿ: ಬೆಂಗಳೂರು: ವಿಕಲಾಂಗ ಮಹಿಳೆಯ ಮೇಲೆ ಟ್ರಾಫಿಕ್‌ ಎಎಸ್‌ಐ ಹಲ್ಲೆ; ಮಹಿಳೆಯ ಮೇಲೆಯೇ ಪ್ರಕರಣ ದಾಖಲು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...