Homeಮುಖಪುಟಹುತಾತ್ಮರ ದಿನ: ’ವ್ಯಕ್ತಿಯನ್ನು ಸಾಯಿಸಬಹುದು, ಸಿದ್ದಾಂತವನ್ನಲ್ಲ’- ವಿಪಕ್ಷ ನಾಯಕ ಸಿದ್ದರಾಮಯ್ಯ

ಹುತಾತ್ಮರ ದಿನ: ’ವ್ಯಕ್ತಿಯನ್ನು ಸಾಯಿಸಬಹುದು, ಸಿದ್ದಾಂತವನ್ನಲ್ಲ’- ವಿಪಕ್ಷ ನಾಯಕ ಸಿದ್ದರಾಮಯ್ಯ

ಧರ್ಮದ ಹೆಸರಿನಲ್ಲಿ ಇಂದಿಗೂ ಜನರನ್ನು ಹತ್ಯೆ ಮಾಡುವ ಶಕ್ತಿಗಳೇ ಮಹಾತ್ಮಗಾಂಧಿ ಅವರನ್ನು ಹತ್ಯೆಗೈದಿವೆ: ಪಿಣರಾಯಿ ವಿಜಯನ್

- Advertisement -
- Advertisement -

ಇಂದು (ಜ.30) ಮಹಾತ್ಮ ಗಾಂಧಿಯವರ ಪುಣ್ಯ ಸ್ಮರಣೆಯಾಗಿದ್ದು, ದೇಶಾದ್ಯಂತ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ’ವ್ಯಕ್ತಿಯನ್ನು ಸಾಯಿಸಬಹುದು, ಸಿದ್ದಾಂತವನ್ನಲ್ಲ’ ಎಂದಿದ್ದಾರೆ.

“ಮಹಾತ್ಮ ಗಾಂಧೀಜಿ ಕೇವಲ ವ್ಯಕ್ತಿ ಅಲ್ಲ, ಅವರೊಂದು ಸಿದ್ದಾಂತ. ಗಾಂಧಿ ತತ್ವ-ಸಿದ್ಧಾಂತದ ಹಾದಿಯಲ್ಲಿ‌ ಮುನ್ನಡೆದು ಅವರನ್ನು ಅಜರಾಮರರನ್ನಾಗಿ‌ ಮಾಡೋಣ” ಎಂದಿದ್ದಾರೆ.

“ಗೋಡ್ಸೆ ಮತ್ತು ಅವನ ಕೃತಜ್ಞತೆಯಿಲ್ಲದ ಸ್ವಾರ್ಥಿ ಗ್ಯಾಂಗ್ ಮಹಾತ್ಮಗಾಂಧಿಯವರನ್ನು ಕೊಂದಿರಬಹುದು, ಆದರೆ ಗಾಂಧೀಜಿ ಆಗಲೇ ಅನೇಕ ಫ್ಯಾಸಿಸ್ಟ್ ಗೋಡ್ಸೆಗಳ ವಿರುದ್ಧ ಹೋರಾಡಲು ಭಾರತವನ್ನು ಬಲಪಡಿಸಿದ್ದರು. ಮಹಾತ್ಮರ ಭಾರತವನ್ನು ರಕ್ಷಿಸಲು ನಾವು ಹೋರಾಟವನ್ನು ಮುಂದುವರಿಸುತ್ತೇವೆ. ಮಹಾತ್ಮರ ಪುಣ್ಯತಿಥಿಯಂದು ಅವರಿಗೆ ನಮನಗಳು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘gandhi’s assassin’: ಇತಿಹಾಸದ ತಾಯಿ ಸತ್ಯದ ಶೋಧನೆಯಲ್ಲಿ

ಮಹಾತ್ಮ ಗಾಂಧೀಯವರಿಗೆ ನಮನ ಸಲ್ಲಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಈ ಹುತಾತ್ಮರ ದಿನದಂದು, ಕೋಮುವಾದದ ವಿರುದ್ಧ ಹೋರಾಡಲು, ಭ್ರಾತೃತ್ವವನ್ನು ಉತ್ತೇಜಿಸಲು ಪ್ರತಿಜ್ಞೆ ಮಾಡೋಣ” ಎಂದಿದ್ದಾರೆ.

“ಧರ್ಮದ ಹೆಸರಿನಲ್ಲಿ ಇಂದಿಗೂ ಜನರನ್ನು ಹತ್ಯೆ ಮಾಡುವ ಶಕ್ತಿಗಳೇ ಮಹಾತ್ಮಗಾಂಧಿ ಅವರನ್ನು ಹತ್ಯೆಗೈದಿವೆ. ಅವರು ಇಂದು ಕೂಡ ನಮ್ಮ ದೇಶಕ್ಕೆ ದೊಡ್ಡ ಬೆದರಿಕೆಯಾಗಿದ್ದಾರೆ. ಗಾಂಧೀಜಿಯವರ ನೆನಪು ಹಿಂದೆಂದಿಗಿಂತಲೂ ಈಗ ಪ್ರಸ್ತುತವಾಗಿದೆ. ಈ ಹುತಾತ್ಮರ ದಿನದಂದು, ಕೋಮುವಾದದ ವಿರುದ್ಧ ಹೋರಾಡಲು, ಭ್ರಾತೃತ್ವವನ್ನು ಉತ್ತೇಜಿಸಲು ಪ್ರತಿಜ್ಞೆ ಮಾಡೋಣ” ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಕರ್ನಾಟಕವನ್ನಾವರಿಸಿದ ರೈತ ಚಳುವಳಿ; ಮತ್ತಷ್ಟು ಸಂಗತಿಗಳು ಮತ್ತು ನೆನಪುಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...