Homeಕರ್ನಾಟಕಶಿಲ್ಪಕಲೆಗಳ ತವರೂರು ಹಾಸನದಲ್ಲಿ ಮಹಾತ್ಮ ಗಾಂಧಿಯ ವಿರೂಪ ಪ್ರತಿಮೆಗಳ ರಚನೆ; ಉದ್ಘಾಟನೆ ರದ್ದು!

ಶಿಲ್ಪಕಲೆಗಳ ತವರೂರು ಹಾಸನದಲ್ಲಿ ಮಹಾತ್ಮ ಗಾಂಧಿಯ ವಿರೂಪ ಪ್ರತಿಮೆಗಳ ರಚನೆ; ಉದ್ಘಾಟನೆ ರದ್ದು!

ಮಹಾತ್ಮ ಗಾಂಧಿಯ ಪ್ರತಿಮೆ ನೋಡಿ ಗಾಬರಿಯಾದ ಕಲಾವಿದರು

- Advertisement -
- Advertisement -

ಹಾಸನವು ಬೇಲೂರು, ಹಳೇಬೀಡು ಮತ್ತು ಶ್ರವಣಬೆಳಗೊಳದ ಅದ್ಭುತ ಶಿಲ್ಪ ಕಲೆಗಳಿಗೆ ವಿಶ್ವದಾದ್ಯಂತ ಹೆಸರುವಾಸಿಯಾದ ಜಿಲ್ಲೆಯಾಗಿದೆ. ಆದರೆ ನಗರದ ಗಾಂಧಿ ಭವನದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಕಳಪೆ ವಿನ್ಯಾಸ ಮತ್ತು ಗುಣಮಟ್ಟವಿಲ್ಲದೆ ರಚಿಸಲಾಗಿದ್ದು, ಕಲಾವಿರು ಸೇರಿದಂತೆ ಸಾಮಾಜಿಕ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಂಧಿ ಭವನವನ್ನು ಗುರುವಾರ ನಡೆಯಲಿರುವ ಗಣರಾಜ್ಯೋತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಹಾಸನ ಜಿಲ್ಲಾ ವಾರ್ತಾ ಇಲಾಖೆಯ ಉಪ ನಿರ್ದೇಶಕರು ನಾನುಗೌರಿ.ಕಾಂಗೆ ಹೇಳಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹಾಸನ ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಮುಂದಾಗಿದೆ. ಗಾಂಧಿ ಭವನದ ನಿರ್ಮಾಣ ಮತ್ತು ಕಲಾಕೃತಿಗಳಿಗೆ ಇಲಾಖೆಯು 3 ಕೋಟಿ ರೂಗಳನ್ನು ವೆಚ್ಚ ಮಾಡಿದೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಹಾಸನದ ಖ್ಯಾತ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರು, ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ನೋಡಿ ನಾನು ಗಾಬರಿಯಾದೆ ಎಂದು ಆಘಾತ ವ್ಯಕ್ತಪಡಿಸಿದರು.

“ಗಾಂಧಿಯಂತಹ ಮಹಾತ್ಮರ ಪ್ರತಿಮೆಯನ್ನು ಮಾಡಬೇಕೆಂದರೆ ಅದಕ್ಕೆ ಅಗಾಧ ಪ್ರತಿಭೆ ಬೇಕಾಗುತ್ತದೆ. ಆದರೆ ಇಲ್ಲಿ ಯಾರನ್ನೊ ಕರೆಸಿ ಅದನ್ನು ನಿರ್ಮಿಸಿದ್ದು, ಪ್ರತಿಮೆ ಭಯಾನಕವಾಗಿದೆ. ಮಹಾತ್ಮ ಗಾಂಧಿ ಹಾಸ್ಯದ ವಸ್ತುವಲ್ಲ. ಈ ಬಗ್ಗೆ ಸಂಬಂಧಪಟ್ಟ ವ್ಯಕ್ತಿಗಳ ಜೊತೆಗೆ ಮಾತುಕತೆ ನಡೆಸುತ್ತೇವೆ. ಪ್ರತಿಮೆಯನ್ನು ಅನಾವರಣ ಮಾಡಲು ಬಿಡುವುದಿಲ್ಲ. ಒಂದು ವೇಳೆ ಅದನ್ನೇ ಅನಾವರಣ ಮಾಡುವುದಾದರೆ ಪ್ರತಿಭಟಿಸಿ ಜೈಲಿಗೆ ಹೋಗಲೂ ಸಿದ್ದ” ಎಂದು ಕಲಾವಿದ ಕೆ.ಟಿ. ಶಿವಪ್ರಸಾದ್ ಹೇಳಿದರು.

ಹಾಸನದ ಚಿತ್ರ ಕಲಾವಿದರಾದ ಬಿ.ಎಸ್‌. ದೇಸಾಯಿ ಮಾತನಾಡಿ, ಅದೊಂದು ಆಕಾರವಲ್ಲ, ವಿಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಗಾಂಧಿ ಪ್ರತಿಮೆಯನ್ನು ನೋಡಿದರೆ ಮಹಾತ್ಮರ ವ್ಯಕ್ತಿತ್ವ, ಅವರ ಚಳವಳಿ ನಮಗೆ ನೆನಪಾಗಬೇಕು. ಆದರೆ ಈ ಪ್ರತಿಮೆಯನ್ನು ನೋಡಿದರೆ ಅದು ಸಾಧ್ಯವಿಲ್ಲ. ಪ್ರತಿಮೆ ಬಹಳ ಕೆಟ್ಟದ್ದಾಗಿದ್ದು, ಒಬ್ಬ ಕಲಾವಿದನಾಗಿ ಹೇಳಬೇಕೆಂದರೆ ಹಾಗೆ ಮಾಡಿದ್ದು ಖಂಡಿತಾ ತಪ್ಪು. ಶಿಲ್ಪಕಲೆಗೆ ಹೆಸರಾದ ಹಾಸನ ಜಿಲ್ಲೆಗೆ ಈ ಪ್ರತಿಮೆ ಒಂದು ಕಪ್ಪುಚುಕ್ಕೆಯಾಗುತ್ತದೆ. ಪ್ರತಿಮೆ ಮರು ಬದಲಾವಣೆಯಾಗಬೇಕು, ಅದು ಇರುವುದು ಶೋಭೆಯಲ್ಲ” ಎಂದು ನಾನುಗೌರಿ.ಕಾಂ ಜೊತೆಗೆ ಮಾತನಾಡುತ್ತಾ ಹೇಳಿದರು.

“ಹಾಸನದಲ್ಲಿ ಉದ್ಘಾಟನೆಗೆ ತಯಾರಾಗಿ ನಿಂತಿರುವ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧಿಯವರ ಮೂರ್ತಿಗಳನ್ನು ಗಾಂಧಿಗೆ ಅವಮಾನ ಮಾಡುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಿಮೆಂಟ್ ನಿಂದ ನಿರ್ಮಿಸಿರುವ ಈ ಕಲಾಕೃತಿಗಳಲ್ಲಿ ಯಾವುದರಲ್ಲಿಯೂ ಗಾಂಧಿಯ ಹೋಲಿಕೆ ಇಲ್ಲ. ಇದು ಬೇಲೂರು, ಹಳೇಬೀಡು, ಶ್ರವಣಬೆಳಗುಳದಂತಹ ಜಗದ್ವಿಖ್ಯಾತ ಶಿಲ್ಪಕಲೆಗಳ ತವರಿನಲ್ಲಿ ಈರೀತಿ ಕಲಾಕೃತಿಗಳ ಅಂದ ಕೆಡಿಸುವುದು ಗಾಂಧಿಜಿಗೂ ಅವಮಾನ, ಹಾಸನ ಜಿಲ್ಲೆಗೂ ಅವಮಾನ” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಹಾಸನ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ ಕುಮಾರ್ ಹೇಳಿದ್ದಾರೆ.

ಕೂಡಲೇ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಮತ್ತು ಕೂಡಲೆ ಈ ಎಲ್ಲಾ ಕಲಾಕೃತಿಗಳನ್ನು ತೆರವುಗೊಳಿಸಿ ಅಂದವಾಗಿ ಗಾಂಧಿಜಿಯ ಕಲಾಕೃತಿಗಳನ್ನು ನಿರ್ಮಾಣಮಾಡಬೇಕೆಂದು ಅವರು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಾರ್ತಾ ಇಲಾಖೆಯ ಆಯುಕ್ತರಾದ ಹರ್ಷ ಕುಮಾರ್‌, ಪ್ರತಿಮೆ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಏನೇ ತಪ್ಪುಗಳಿದ್ದರೂ ಅವುಗಳನ್ನು ಸರಿ ಪಡಿಸಿ ಮಹಾತ್ಮರ ಗೌರವಕ್ಕೆ ಯಾವುದೆ ಧಕ್ಕೆ ಬರದಂತೆ ನಿರ್ಮಾಣ ಮಾಡಿ ಉದ್ಘಾಟನೆ ಬಗ್ಗೆ ಯೋಜಿಸುತ್ತೇವೆ ಎಂದು ಹೇಳಿದರು.

“ನಾವು ಜನರ ಭಾವನೆಗಳಿಗೆ ಸ್ಪಂಧಿಸಿ, ಕೂಡಲೇ ಕಲೆಯ ಬಗ್ಗೆ ಸಮರ್ಪಕವಾದ ಮಾಹಿತಿ ಕಲಾವಿದರನ್ನು ಕರೆಸಿ ಅವರೊಂದಿಗೆ ಮಾತನಾಡುವಂತೆ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅದು ಇನ್ನೂ ಪ್ರಗತಿಯಲ್ಲಿ ಇರುವ ಕಾಮಗಾರಿಯಾಗಿದ್ದು, ಯಾವುದೆ ಕಾರಣಕ್ಕೂ ನಾಳೆ ಉದ್ಘಾಟನೆ ಆಗುವುದಿಲ್ಲ. ಜಿಲ್ಲಾಧಿಕಾರಿಗಳಿಗೆ ನಿರ್ಮಾಣದ ಜವಾಬ್ದಾರಿ ವಹಿಸಿದ್ದು, ಅವರು ಸಮರ್ಪಕವಾಗಿ ಸಮೀಕ್ಷೆ ಮಾಡಿ ಅದರ ಬಗ್ಗೆ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಿರ್ಮಿತಿ ಕೇಂದ್ರಕ್ಕೆ ನಾವು ಟೆಂಡರ್‌ ಕೊಟ್ಟಿದ್ದು, ಸಾರ್ವಜನಿಕರ ಎಳ್ಳಷ್ಟು ಹಣ ಪೋಲಾಗುವುದಿಲ್ಲ” ಎಂದು ನಾನುಗೌರಿ.ಕಾಂಗೆ ಹೇಳಿದರು.

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ವಾರ್ತಾ ಇಲಾಖೆಯ ಹಾಸನ ಜಿಲ್ಲಾ ಉಪ ನಿರ್ದೇಶಕರಾದ ವಿನೋದ್ ಚಂದ್ರ ಅವರು,“ಗಾಂಧಿ ಪ್ರತಿಕೃತಿಯನ್ನು ತಿದ್ದುಪಡಿ ಮಾಡಲು ಸೂಚನೆ ಕೊಟ್ಟಿದ್ದೇವೆ. ನಾಳೆ ನಡೆಸಲು ಉದ್ದೇಶಿಸಿದ್ದ ಉದ್ಘಾಟನಾ ಕಾರ್ಯಕ್ರಮ ರದ್ದು ಮಾಡಲಾಗಿದೆ. ತಪ್ಪುಗಳನ್ನು ಸರಿ ಪಡಿಸಿದ ನಂತರ ಉದ್ಘಾಟನೆ ಮಾಡಲಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ ನಿಷೇಧಿಸುವವರಿಗೆ ಗಾಂಧಿ ಗೋಡ್ಸೆ ಚಿತ್ರ ಕಾಣಿಸಲಿಲ್ಲವೇ?: ಅಸಾದುದ್ದೀನ್ ಓವೈಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...