Homeಮುಖಪುಟಜನರು ದೂರದರ್ಶನ ನಂಬದಿದ್ದರೂ BBC ನಂಬುತ್ತಾರೆ: ಮೋದಿಯ ಹಳೆಯ ವಿಡಿಯೊ ವೈರಲ್‌

ಜನರು ದೂರದರ್ಶನ ನಂಬದಿದ್ದರೂ BBC ನಂಬುತ್ತಾರೆ: ಮೋದಿಯ ಹಳೆಯ ವಿಡಿಯೊ ವೈರಲ್‌

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರು ಬಿಬಿಸಿ ನ್ಯೂಸ್ ಚಾನೆಲ್‌ ಅನ್ನು ಹೊಗಳಿದ್ದ ಹಳೆಯ ವಿಡಿಯೊ ವೈರಲ್ ಆಗುತ್ತಿದೆ. ಜನರು ದೂರದರ್ಶನವನ್ನು ನಂಬದಿದ್ದರೂ ಬಿಬಿಸಿಯನ್ನು ನಂಬುತ್ತಾರೆಂದು ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿರುವ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಆಲ್ಟ್‌ನ್ಯೂಸ್‌’ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್‌ ಅವರು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊವನ್ನು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದಾರೆ. ಗುಜರಾತ್‌ ಗಲಭೆ ಕುರಿತು ಬಿಬಿಸಿ ಮಾಡಿರುವ ಸಾಕ್ಷ್ಯಾಚಿತ್ರವನ್ನು ಭಾರತದಲ್ಲಿ ಸರ್ಕಾರ ನಿರ್ಬಂಧಿಸಿರುವ ಬೆನ್ನಲ್ಲೇ, ‘ಬಿಬಿಸಿಯನ್ನು ಮೋದಿಯವರು ಹೊಗಳಿದ್ದ ವಿಡಿಯೊ’ ಮುನ್ನೆಲೆಗೆ ಬಂದಿದೆ. 2013ರಲ್ಲಿ ಮೋದಿಯವರು ಬಿಬಿಸಿಯನ್ನು ಹೊಗಳಿ ಮಾತನಾಡಿದ್ದರು. ಮಾಧ್ಯಮವೊಂದರ ವಿಶ್ವಾಸಾರ್ಹತೆಗೆ ದೇಶದ ನಾಯಕನೊಬ್ಬ ಸಲ್ಲಿಸಿದ ಮಹೋನ್ನತ ಗೌರವ ಇದಾಗಿದೆ ಎಂದೇ ಬಣ್ಣಿಸಲಾಗುತ್ತಿದೆ.

ವಿಡಿಯೊದಲ್ಲಿ ಏನಿದೆ?

“ಸಾಮಾನ್ಯ ಜನರು ಏನು ಮಾತನಾಡುತ್ತಾರೆ? ನಾನು ಇದನ್ನು ಬಿಬಿಸಿಯಲ್ಲಿ ಕೇಳಿದ್ದೇನೆ ಎನ್ನುತ್ತಾರೆ. ನಮ್ಮ ದೇಶದ ಆಲ್ ಇಂಡಿಯಾ ರೇಡಿಯೋವನ್ನು ಅವರು ನಂಬುವುದಿಲ್ಲ, ದೂರದರ್ಶನವನ್ನು ಅವರು ನಂಬುವುದಿಲ್ಲ, ಅವರು ಪತ್ರಿಕೆಯನ್ನು ನಂಬುವುದಿಲ್ಲ. ನಾನು ಬಿಬಿಸಿಯಲ್ಲಿ ಕೇಳಿದ್ದೇನೆ ಎನ್ನುತ್ತಾರೆ” ಎನ್ನುವ ಮೋದಿಯವರು “ಈ ರೀತಿಯ ವಿಶ್ವಾಸಾರ್ಹತೆ ಇರಬೇಕು” ಎಂಬ ಅಭಿಪ್ರಾಯ ತಾಳುತ್ತಾರೆ.

ವಿವಾದದಲ್ಲಿ ಸಾಕ್ಷ್ಯಾಚಿತ್ರ

ವಿಶ್ವವಿದ್ಯಾಲಯದ ಆಕ್ಷೇಪದ ನಡುವೆಯೂ ಜೆಎನ್‌ಯು ವಿದ್ಯಾರ್ಥಿಗಳು ಪ್ರಧಾನಿ ಮೋದಿ ಕುರಿತು ಬಿಬಿಸಿ ತಯಾರಿಸಿರುವ ‘ಇಂಡಿಯಾ – ದ ಮೋದಿ ಕ್ವಸ್ಚನ್’ ಸಾಕ್ಷ್ಯಚಿತ್ರವನ್ನು ಮಂಗಳವಾರ ರಾತ್ರಿ ಪ್ರದರ್ಶನ ಮಾಡಿದ್ದಾರೆ. ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದಿಂದ ಕ್ಯಾಂಪಸ್‌ನ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ಉಂಟಾಗಬಹುದು, ಆದ್ದರಿಂದ ಪ್ರದರ್ಶನವನ್ನು ರದ್ದುಗೊಳಿಸಬೇಕು ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಅವರು ಸೂಚನೆ ನೀಡಿದ್ದರು.

ವಿದ್ಯಾರ್ಥಿ ಸಂಘವು ರಾತ್ರಿ ಒಂಬತ್ತು ಗಂಟೆಗೆ ಸಾಕ್ಷ್ಯಚಿತ್ರದ ಪ್ರದರ್ಶನ ಎಂದು ಹೇಳಿಕೊಂಡಿತ್ತು.‌ ಅದಕ್ಕಾಗಿ ವಿದ್ಯಾರ್ಥಿಗಳು ತಯಾರಿ ಕೂಡಾ ನಡೆಸಿದ್ದರು. ಆದರೆ, ಸುಮಾರು 8:30 ಕ್ಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿಶ್ವವಿದ್ಯಾಲಯದ ವಿದ್ಯುತ್ ಕಡಿತ ಮಾಡಿತ್ತು.‌ ಹೀಗಾಗಿ ನೆರೆದಿದ್ದ ವಿದ್ಯಾರ್ಥಿಗಳು ತಮ್ಮ ತಮ್ಮ ಲ್ಯಾಪ್‌ಟಾಪ್ ಮೂಲಕ ಸ್ಥಳದಲ್ಲೇ ತಮ್ಮ ಸ್ನೇಹಿತರ ಗುಂಪಿನೊಂದಿಗೆ ಬಿಬಿಸಿ ಸಾಕ್ಷ್ಯಚಿತ್ರವನ್ನು ನೋಡಿದ್ದಾರೆ.

ಸಾಕ್ಷ್ಯಚಿತ್ರ ಪ್ರದರ್ಶನಕ್ಕೂ ಮೊದಲು ಮಾತನಾಡಿದ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್‌, “ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರ ಭಾರತದ ಯಾವ ಪ್ರದೇಶದಲ್ಲೂ ನಿಷೇಧವಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ನೋಡಬಾರದು ಎಂದು ತಡೆಹಿಡಿದಿದ್ದು ಮಾತ್ರವಾಗಿದೆ. ಇದರರ್ಥ ಅದನ್ನು ನಿಷೇಧ ಎಂದಲ್ಲ. ಹೀಗಿರುವಾಗ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲು ಅನುಮತಿ ಯಾಕೆ ಪಡೆಯಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...