2021ರಲ್ಲಿ ಕೇಂದ್ರ ಸರ್ಕಾರ ಹಿಂತೆಗೆದುಕೊಂಡ ಕೃಷಿ ಕಾನೂನುಗಳು, ಅದಾನಿ ಗುಂಪಿಗೆ ಲಾಭ ಮಾಡಲೆಂದೇ ಜಾರಿಗೆ ಬಂದಿದ್ದವು ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.
ಮೋದಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಿರುವ ಸರಣಿಯ ಭಾಗವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, “ಭಾರತದ ಆಹಾರಧಾನ್ಯಗಳ ವಲಯವನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸಲು ಸರ್ಕಾರವು ಪಟ್ಟ ಶ್ರಮಕ್ಕೆ ಈ ವಿಷಯ ಸಂಬಂಧಿಸಿದೆ. ರೈತರ ಪ್ರತಿರೋಧದಿಂದಾಗಿ ತಾತ್ಕಾಲಿಕವಾಗಿ ಈ ಪಿತೂರಿ ವಿಫಲವಾಯಿತು. 2020-21ರ ಆಂದೋಲನದಿಂದಾಗಿ ಕೃಷಿಗೆ ಸಂಬಂಧಿಸಿದ ಕರಾಳ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕಾಯಿತು” ಎಂದು ತಿಳಿಸಿದ್ದಾರೆ.
“ಕೃಷಿ ಕಾನೂನುಗಳ ದೊಡ್ಡ ಫಲಾನುಭವಿಗಳಲ್ಲಿ ಅದಾನಿ ಅಗ್ರಿ ಲಾಜಿಸ್ಟಿಕ್ಸ್ ಒಂದಾಗಿತ್ತು. ಇದು ಭಾರತೀಯ ಆಹಾರ ನಿಗಮದ ಸಿಲೋ ಒಪ್ಪಂದಗಳ ಪ್ರಮುಖ ಫಲಾನುಭವಿ ಅದಾಗಿ ಗುಂಪಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ 3.5 ಲಕ್ಷ ಮೆಟ್ರಿಕ್ ಟನ್ ಸ್ಟೋರೇಜ್‌ಅನ್ನು ತೆರೆಯುತ್ತಿರುವುದು ಇತ್ತೀಚಿನ ಕೊಡುಗೆಯಾಗಿದೆ” ಎಂದು ದೂರಿದ್ದಾರೆ.
A lap of honour around the stadium he got named after himself in his own lifetime is a good occasion for heralding a quarter century of pointed questions with HAHK( Hum Adanike Hain Kaun)-25
Chuppi Todiye Pradhan Mantriji pic.twitter.com/n3sfe590wP
— Jairam Ramesh (@Jairam_Ramesh) March 9, 2023
“ಹಿಮಾಚಲ ಪ್ರದೇಶದಲ್ಲಿ ಸೇಬು ಖರೀದಿಯಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಲು ಅದಾನಿ ಫಾರ್ಮ್-ಪಿಕ್‌ಗೆ ಅನುಮತಿ ನೀಡಲಾಗಿದೆ” ಎಂದು ಆರೋಪಿಸಿದ್ದಾರೆ.
“ಕಳೆದ 70 ವರ್ಷಗಳಲ್ಲಿ ಕಷ್ಟಪಟ್ಟು ನಿರ್ಮಿಸಲಾದ ಭಾರತದ ಸಾರ್ವಜನಿಕ ವಲಯವು ಈಗ ನಿಮ್ಮ ಕಾರ್ಪೊರೇಟ್ ಸ್ನೇಹಿತರ ಪುಷ್ಟೀಕರಣಕ್ಕಾಗಿ ಕುಸಿಯುತ್ತಿದೆಯೇ” ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿರಿ: ಅಸೆಂಬ್ಲಿ ಅಂಗೀಕರಿಸಿದ ಆನ್‌ಲೈನ್ ಜೂಜಾಟ ನಿಷೇಧದ ಮಸೂದೆಯನ್ನು ಹಿಂದಿರುಗಿಸಿದ ತಮಿಳುನಾಡು ರಾಜ್ಯಪಾಲ ರವಿ
‘ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ’ವು ಕೇಂದ್ರ ಉಗ್ರಾಣ ನಿಗಮದ ನಿಲುವನ್ನು ಬೆಂಬಲಿಸಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
ಮುಂದ್ರಾ ಬಂದರಿನ ಸಮೀಪವಿರುವ ಎರಡು ಪ್ರಮುಖ ಸಿಡಬ್ಲುಸಿ ಗೋದಾಮುಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅದಾನಿ ಪ್ರಯತ್ನಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಸಹಾಯ ಮಾಡಿದೆ ಎಂದಿದ್ದಾರೆ.
“ಕರಾಳ ಕೃಷಿ ಕಾನೂನುಗಳ ಹಿಂದಿನ ಉದ್ದೇಶ ಭಾರತದ ಕೃಷಿ ವಲಯವನ್ನು ನಿಮ್ಮ ಕೆಲವು ನಿಕಟ ಕಾರ್ಪೊರೇಟ್ ಆಪ್ತರಿಗೆ ಹಸ್ತಾಂತರಿಸುವುದಾಗಿತ್ತು ಎಂದು ಇಡೀ ದೇಶಕ್ಕೆ ತಿಳಿದಿದೆ” ಎಂದು ರಮೇಶ್ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.


