Homeಅಂಕಣಗಳುಟಿಪ್ಪು ವಿರೋಧಿಗಳು ತಮ್ಮವರನ್ನೇ ವಿರೋಧಿಸುತ್ತಿವೆ!

ಟಿಪ್ಪು ವಿರೋಧಿಗಳು ತಮ್ಮವರನ್ನೇ ವಿರೋಧಿಸುತ್ತಿವೆ!

- Advertisement -
- Advertisement -

ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಬರೀ ಹಗರಣಗಳಲ್ಲೇ ಮುಳುಗಿದ್ದ ಬಿಜೆಪಿ ಪಾರ್ಟಿಗೆ ಮಾಡಾಳು ವಿರೂಪಾಕ್ಷಪ್ಪನ ಹಗರಣ ಆರೋಪ ಮುಟ್ಟಿನೋಡಿಕೊಳ್ಳುವಂತೆ ಮಾಡಿದೆಯಲ್ಲಾ. ಆದರೇನು ಈ ಬಿಜೆಪಿಗಳನ್ನು ಯಾರೂ ಅವಮಾನ ಮಾಡಲಾಗುವುದಿಲ್ಲ. ಮರ್ಯಾದೆ ಕಳೆಯಲಾಗುವುದಿಲ್ಲ. ಮನಸ್ಸಿಗೆ ನೋವು ಮಾಡಲಾಗುವುದಿಲ್ಲ. ಸದರಿ ಹಗರಣದ ಆರೋಪಕ್ಕೆ ಮಾಧುಸ್ವಾಮಿ ಮತ್ತು ಮುಖ್ಯಮಂತ್ರಿ ಉತ್ತರ ಕೊಟ್ಟಾಗಿದೆ. ಏನೆಂದರೆ, ಲೋಕಾಯುಕ್ತದಲ್ಲಿ ನಿಮ್ಮ ಹಗರಣಗಳೂ ಹೊರಬರಲಿವೆ. ಮಗ ಮಾಡಿದ ಹಗರಣಕ್ಕೆ ಅಪ್ಪ ವಿರೂಪಾಕ್ಷನದೇನು ತಪ್ಪು. ನಿಮ್ಮ ಕಾಲದಲ್ಲಿ ಹಗರಣಗಳೇ ಆಗಿರಲಿಲ್ಲವೆ? ಹೀಗೆ. ಇಂತಹ ಉತ್ತರಗಳಿಂದ ಬಿಜೆಪಿಗಳ ಮನಸ್ಸೇನೆಂಬುದು ನಾಡಿನ ಜನಕ್ಕೆ ಅರಿವಾಗುತ್ತಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ಶಾ ಎಂಬಾತ ತನ್ನ ಭಾಷಣದಲ್ಲಿ ಮುಂದೆ ಲಂಚಮುಕ್ತ ಸರಕಾರ ಕೊಡುತ್ತೇವೆ ಎಂದಿದ್ದರು! ಅಲ್ಲಿಗೆ ಈವರೆಗೆ ಲಂಚ ತಿಂದ ಸರಕಾರ ನಡೆಸಿದ್ದೇವೆ ಎಂಬುದನ್ನು ಒಪ್ಪಿಕೊಡಂತಾಯ್ತು. ಈ ಬಿಜೆಪಿಗಳಿಗೆ ತಾವು ಆಡುವ ಮಾತಿನ ಅರ್ಥ ಭಾವ ಒಂದು ತಿಳಿಯುವುದಿಲ್ಲವೆಂಬುದಕ್ಕೆ ಇದು ಸಾಕ್ಷಿ. ಇನ್ನು ನಮ್ಮ ಮಾಡಾಳು ಇರಪಾಕ್ಷಿ ಕೋಟ್ಯಾಧಿಪತಿ ವಡ್ನಾಳು ರಾಜಣ್ಣನನ್ನು ಸೋಲಿಸಿ ಬಂದವರು. ಬರಲಿರುವ ಚುನಾವಣೆಯಲ್ಲಿ ಕೋಟಿಕೋಟಿ ಚೆಲ್ಲಬೇಕಿರುವುದರಿಂದ ಧನ ಸಂಗ್ರಹಕ್ಕೆ ಮಗನನ್ನು ನೇಮಿಸಿದ್ದರು ಅನಿಸುತ್ತೆ. ಮಾಡಾಳನ ಮಗನಂಥವರು ಇನ್ನು ಅದೆಷ್ಟು ಮಂದಿ ಬಿಜೆಪಿಯ ಮಂತ್ರಿ ಶಾಸಕರ ಬೆನ್ನಿಗಿದ್ದಾರೊ ಎಂಬುದು ಆ ಮಾಧುಸ್ವಾಮಿಗೇ ಗೊತ್ತಂತಿಲ್ಲಾ, ಥೂತ್ತೇರಿ.

****

ಉಡುಪಿ ಭಟ್ಟನ ಪ್ರಕರಣದಿಂದ ಹಿಡಿದು, ಮೈಸೂರು ರಾಮದಾಸ, ಅತ್ತ ಬೆಳಗಾವಿಯ ಜಾರಕಿಹೊಳಿ, ಹೊನ್ನಾಳಿಯ ರೇಣುಕಾಚಾರಿ, ಹರತಾಳು ಹಾಲಪ್ಪ ಇಂತಹವರ ಹಲವಾರು ಸಾಮಾಜಿಕ ಸಮಸ್ಯಗೆಳಿಂದ ಬಿಜೆಪಿ ನರಳಿದರೂ, ಅದು ಹೇಗೋ ಚೇತರಿಸಿಕೊಳ್ಳುತ್ತದೆಲ್ಲಾ. ಮತ್ತೆ ಹಗರಣಕ್ಕೆ ಸಂಬಂಧಪಟ್ಟವರೆಲ್ಲಾ ಚುನಾವಣೆಯಲ್ಲಿ ಗೆದ್ದು ಬರುವುದು ಸಾಮಾನ್ಯವಾಗಿದೆಯಲ್ಲಾ. ಅಧಿಕಾರ ದುರುಪಯೋಗದಿಂದ ಲೈಂಗಿಕ ಶೋಷಣೆ ಮಾಡಿದ ರೇಣುಕಾಚಾರಿ ವಿರುದ್ಧದ ಆರೋಪದ ಸುದ್ದಿಗೆ ಈ ನಾಡೇನು ಬೆಚ್ಚಲಿಲ್ಲ. ಬದಲಿಗೆ ಶಾಸಕನಾದಾಗ ಸಿಗುವ ಸವಲತ್ತು ನೋಡಿ ದಂಗುಬಡಿದರು. ಜನ ಸಂತ್ರಸ್ತರನ್ನೇ ಕುರಿತು ಆಡಿಕೊಳ್ಳುವುದು ಜಾಸ್ತಿ. ಆಗ ಈಶ್ವರಪ್ಪನೆಂಬ ಮಹಿಳಾವಾದಿ, ’ನೀವು ಆರೋಪ ಮಾಡಿದ ಮಹಿಳೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೀರಿ, ಆದರೆ ರೇಣುಕಾಚಾರಿ ಪತ್ನಿಯ ಬಗ್ಗೆ ಯೋಚಿಸಿದ್ದೀರಾ?’ ಎಂದು ಪ್ರಶ್ನೆ ಕೇಳಿದ್ದರು! ಬಿಜೆಪಿ ಮತದಾರರು ಕನಿಕರದಿಂದ, ’ಪಾಪ ರೇಣುಕಾಚಾರಿಯದೇನೂ ತಪ್ಪಿಲ್ಲ’ ಎಂದುದಲ್ಲದೆ ಆತನನ್ನು ಮತ್ತೆ ಚುನಾವಣೆಯಲ್ಲಿ ಗೆಲ್ಲಿಸಿದರು. ತಮ್ಮ ನಾಯಕನ ವಿರುದ್ಧ ಬಂದ ಸುಳ್ಳು ಜಾತಿ ಸರ್ಟಿಫಿಕೇಟ್ ಆರೋಪ ಪ್ರಕರಣ, ವಂಚನೆ, ಭ್ರಷ್ಟತೆ, ವ್ಯಭಿಚಾರ ಇವೆಲ್ಲಾ ಸಮಸ್ಯೆಯೇ ಅಲ್ಲವೆಂದು ರೇಣುಕಾಚಾರಿಯನ್ನು ಗೆಲ್ಲಿಸಿ ಅರಾಮವಾಗಿರುವ ಒಂದು ವರ್ಗದ ಪ್ರಜೆಗಳ ಮನೋಗತವೇ, ಮಾಡಾಳು ಮೈಮರೆತು ಮೇದದ್ದು ಕೂಡ ಒಂದು ಅಪರಾಧವಾಗಿ ಕಾಣದಂತೆ ಕಾಯುತ್ತದಂತಲ್ಲಾ. ಮುಂದಿನ ಚುನಾವಣೆಯಲ್ಲಿ ಮಾಡಾಳರನ್ನೇ ಗೆಲ್ಲಿಸುವ ಶಪಥವನ್ನು ಅವರ ಮನೆ ಮುಂದೆ ಸೇರಿದ್ದ ಜನ ಮಾಡಿದರಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಇನ್ನು ಶಿವಮೊಗ್ಗದ ಲೀಡರುಗಳೆಲ್ಲ ಗಗನಗಾಮಿಗಳು!

ಇದ್ದಕ್ಕಿದ್ದಂತೆ ಬೆಲ್ಜಿಯಂನಿಂದ ಹಾರಿಬಂದ ಬಾಲು ಹೆಸರಿನ ಮನುಷ್ಯ ಕುವೆಂಪು ಯೂನಿವರ್ಸಿಟಿ ಆವರಣದಲ್ಲಿ ಹಾರಾಡಿ ಆರೆಸ್ಸೆಸ್ ಭೈಠಕ್‌ನಲ್ಲೂ ಭಾಗವಹಿಸಿ ನಿಮ್ಮಲ್ಲಿ ಸಾಹಿತಿಗಳು, ಕಲಾವಿದರು, ಬುದ್ಧಿವಂತರ ಕೊರತೆಯಿದೆ; ಆದ್ದರಿಂದ ಆ ಬಗ್ಗೆ ಎಚ್ಚರವಹಿಸಿ ಎಂದು ಹೇಳಿದ್ದಲ್ಲದೆ ಭಾರತದಲ್ಲಿ ಭೀಕರ ಜಾತೀಯತೆ ಅಸ್ಪೃಶ್ಯತೆ ಭುಗಿಲೇಳಲು ಬ್ರಿಟಿಷರು ಕಾರಣ ಎಂದು ಹೇಳು ಇಲ್ಲೊಂದೆರಡು ’ಬಾಲು’ಗಳನ್ನು ತಯಾರು ಮಾಡಿ ದೇವನೂರ, ಡಿ. ಎಸ್. ನಾಗಭೂಷಣ್ ಇಂತಹವರೆಲ್ಲಾ ಗದರಿದ ಮೇಲೆ ಮತ್ತೆ ಬೆಲ್ಜಿಯಂಗೆ ಹಾರಿಹೋದುದು ಈಗ ಇತಿಹಾಸ. ಆದರೇನು ಬೆಲ್ಜಿಯಂನಲ್ಲಿ ಕುಳಿತೇ ತನ್ನ ನಿರೂಪಣೆಯ ಜಾಲವನ್ನು ಹರಡುತ್ತಿರುವ ಬಾಲುವಿನ ಬಾಲಬಡುಕರು ಸೆಕ್ಯುಲರ್ ಪದ ಹಿಡಿದುಕೊಂಡು ಬಡಿಯತೊಡಗಿವೆ. ಇನ್ನ ಕೆಲವರು ವಿಜ್ಞಾನವು ಶಂಕರಾಚಾರ್ಯರ ವೇದಾಂತದತ್ತ ವಾಲುತ್ತಿದೆ ಎಂದು ವಾದಿಸತೊಡಗಿದರೆ ಮತ್ತೆ ಕೆಲವು ಸದ್ಯಕ್ಕೆ ತಾವು ಕೈಗೆತ್ತಿಕೊಂಡಿರುವ ಟಿಪ್ಪು ವಿಷಯದಲ್ಲಿ ಬ್ರಿಟಿಷ್ ಲೇಖಕರು ಏನು ಹೇಳಿದ್ದಾರೆಂದು ಹುಡುಕಿ ಅನಾವರಣ ಮಾಡತೊಡಗಿವೆಯಲ್ಲಾ, ಥೂತ್ತೇರಿ.

****

ಇನ್ನೂರು ವರ್ಷದ ಹಿಂದೆ ಆಳಿಹೋದ ಟಿಪ್ಪು ಸಮಾಧಿ ಅಗೆಯುತ್ತ ಬಿಜೆಪಿಗಳು ಕುಳಿತಿರುವಾಗಲೇ ಚಿಕ್ಕಮಗಳೂರಿನ ಉರಿಗೌಡ ಮತ್ತು ಬೆಂಗಳೂರಿನ ನಂಜೇಗೌಡ ಸೇರಿಕೊಂಡು ಮಂಡ್ಯಕ್ಕೆ ಉರಿತಾಗಿಸುವ ಸುದ್ದಿ ಕೇಳಿದ ಮೋದಿ ಮಂಡ್ಯದಿಂದಲೇ ರೋಡ್ ಶೋ ಮಾಡುವ ತೀರ್ಮಾನ ತೆಗೆದುಕೊಂಡರಂತಲ್ಲಾ. ಅಷ್ಟಕ್ಕೂ ಟಿಪ್ಪು ವಿಷಯಕ್ಕೆ ಮರುಜೀವ ಕೊಡುತ್ತಿರುವ ಮಡಕೇರಿ ಕಡೆಯ ಅಡ್ನಾಡಿ ಸಂಶೋಧನೆಯ ವಾದದ ಪ್ರಕಾರ ಟಿಪ್ಪು ಸಾವಿರಾರು ಜನರನ್ನು ಇಸ್ಲಾಂ ಮತಾಂತರ ಮಾಡಿದ ಎಂದು ಬಡಿದುಕೊಳ್ಳುತ್ತಿರುವುದು. ಇದೇನು ಅಲ್ಲಗಳೆವ ಸಂಗತಿಯಲ್ಲ. ಇದಕ್ಕೆ ದಾಖಲೆಗಳಿವೆ. ಟಿಪ್ಪು ರಾಜನಾದ ಮೇಲೆ ದಂಗೆ ಎದ್ದ ಕೊಡಗಿನ ಕೆಲವರನ್ನ ಮತಾಂತರ ಮಾಡಿದ ಎನ್ನಲಾಗುತ್ತದೆ. ಆ ನಂತರ, ಟಿಪ್ಪು ಸತ್ತ ಕೂಡಲೇ ಆತ ಮತಾಂತರ ಮಾಡಿದವರನ್ನು ಮರಳಿ ಅವರ ಧರ್ಮ (ಜಾತಿ ಯಾವುದಕ್ಕೆ ಎಂಬ ಪ್ರಶ್ನೆ ಬೇರೆಯದ್ದು) ಕರೆತರಬಹುದಿತ್ತಲ್ಲವಾ? ಆ ಕೆಲಸವನ್ನು ಮಾಡದೆ ಅಂದು ಮತಾಂತರಗೊಂಡ ಕೊಡವರು ಮತ್ತು ಲಿಂಗಾಯತರನ್ನು ಇಂದು ದ್ವೇಷ ಮಾಡುತ್ತಿರುವ ಮಂದಮತಿಗಳಿಗೆ ತಾವು ತಮ್ಮವರನ್ನೇ ದ್ವೇಷ ಮಾಡುತ್ತಿದ್ದೇವೆ ಎಂಬುದು ಅರಿವಿಗೇ ಬಂದಿಲ್ಲವಲ್ಲಾ, ಥೂತ್ತೇರಿ.

****

ಇತ್ತ ಬೆಲ್ಜಿಯಂ ಬಾಲು ಕಡೆಯವರು ಟಿಪ್ಪು ಮತಾಂಧ ಮತ್ತು ಕ್ರೂರಿ ಎಂಬುದನ್ನು ಸಾಬೀತುಪಡಿಸಲೋಸ್ಕರ ಇತಿಹಾಸ ಪುಸ್ತಕಗಳನ್ನು ಕೆದಕುತ್ತಾ ಕುಳಿತಿವೆಯಂತೆ. ಅದೂ ಬ್ರಿಟಿಷ್ ಲೇಖಕರು ಬರೆದ ಕೃತಿಗಳನ್ನು. ಈ ಪೈಕಿ ಫ್ರಾನ್ಸಿಸ್ ಬುಖನನ್ ಕುರಿತು ಅಧ್ಯಯನ ಮಾಡುತ್ತಿರುವ ಸಂಘಿ ವಿದ್ವಾಂಸರು, ಅದರಲ್ಲಿ ಟಿಪ್ಪು ಬಗ್ಗೆ ಒಂದು ಸಣ್ಣ ಟೀಕೆ ಕಂಡರೂ ಅದನ್ನು ರಾಷ್ಟ್ರೋತ್ಥಾನ ಸಾಹಿತ್ಯದ ಪದಪುಂಜ ಬಳಸಿ ಮರುಕಟ್ಟುತ್ತಿವೆ. ಟಿಪ್ಪು ಬ್ರಿಟಿಷರ ಪಾಲಿಗೆ ಹುಲಿಯಾಗಿದ್ದ. ಅವರನ್ನ ಭಾರತದಿಂದಲೇ ಓಡಿಸುವ ಶಪಥ ಮಾಡಿದ್ದ. ಆದರೆ ಬ್ರಿಟಿಷರ ಆಡಳಿತದಲ್ಲಿ ಕಲೆಕ್ಟರಾಗಿದ್ದವರು, ಅವರ ಆಸ್ಥಾನದಲ್ಲಿದ್ದವರು, ಮಂತ್ರಿಗಳಾಗಿದ್ದವರು, ದಿವಾನರಾಗಿದ್ದವರು ಏಕೆ ಟಿಪ್ಪು ಬಗ್ಗೆ ಏನೂ ಬರೆಯದೆ ಹೊರಟುಹೋಗಿದ್ದಾರೆ ಎಂಬುದನ್ನು ಸಂಘಿ ವಿದ್ವಾಂಸರು ಅಧ್ಯಯನ ಮಾಡಿದರೆ ತಮ್ಮ ಪೂರ್ವಿಕರ ಭೋಜನದ ಇತಿಹಾಸ ತಿಳಿಯಬಹುದುದಲ್ಲವೆ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...