Homeಮುಖಪುಟಆತ್ಮಕಥೆ ಜಟಾಪಟಿ : ಅಂದು ಪುಸ್ತಕ ಪ್ರಿ- ಆರ್ಡರ್ ಮಾಡಿ ಎಂದಿದ್ದ ನರವಾಣೆ, ಇಂದು ಪ್ರಕಟವೇ...

ಆತ್ಮಕಥೆ ಜಟಾಪಟಿ : ಅಂದು ಪುಸ್ತಕ ಪ್ರಿ- ಆರ್ಡರ್ ಮಾಡಿ ಎಂದಿದ್ದ ನರವಾಣೆ, ಇಂದು ಪ್ರಕಟವೇ ಆಗಿಲ್ಲ ಎನ್ನುತ್ತಿದ್ದಾರೆ

- Advertisement -
- Advertisement -

ಕಳೆದ ಹತ್ತು ದಿನಗಳಿಂದ ದೇಶದಾದ್ಯಂತ ಚರ್ಚೆಯಲ್ಲಿರುವ ತನ್ನ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಆತ್ಮಕಥೆಯ ಕುರಿತು ಮಾಜಿ ಭೂ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಮೌನ ಮುರಿದಿದ್ದಾರೆ.

“ಪುಸ್ತಕದ ಮುದ್ರಿತ ಅಥವಾ ಡಿಜಿಟಲ್ ರೂಪದ ಯಾವುದೇ ಪ್ರತಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಲಭ್ಯವಾಗುವಂತೆ ಮಾಡಿಲ್ಲ” ಎಂಬ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದ(ಪಿಆರ್‌ಹೆಚ್‌ಐ) ಹೇಳಿಕೆಯನ್ನು ಅವರು ಮಂಗಳವಾರ (ಫೆ.10,2026) ಪ್ರತಿಧ್ವನಿಸಿದ್ದಾರೆ.

ಪುಸ್ತಕದ ವಿಚಾರ ಸಂಸತ್ತಿನ ಒಳಗೆ ಮತ್ತು ಹೊರಗೆ ರಾಜಕೀಯ ಜಟಾಪಟಿಗೆ ಕಾರಣವಾಗಿರುವ ನಡುವೆ, ಅದರ ಪ್ರಕಾಶಕರಾದ ‘ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ’ ಸೋಮವಾರ (ಫೆ.9,2026) ಸ್ಪಷ್ಟನೆ ಕೊಟ್ಟಿದೆ.

“ಇತ್ತೀಚಿನ ಸಾರ್ವಜನಿಕ ಚರ್ಚೆಗಳು ಮತ್ತು ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ, ಭಾರತದ ಮಾಜಿ ಭೂಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಕಥೆಯಾದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ಸಂಪೂರ್ಣ ಪ್ರಕಟಣಾ ಹಕ್ಕುಗಳನ್ನು ನಾವು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಲು ಬಯಸುತ್ತದೆ. ಈ ಪುಸ್ತಕವು ಇನ್ನೂ ಪ್ರಕಟಗೊಂಡಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ. ಮುದ್ರಿತ ಅಥವಾ ಡಿಜಿಟಲ್ ರೂಪದ ಯಾವುದೇ ಪ್ರತಿಗಳನ್ನು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದಿಂದ ಸಾರ್ವಜನಿಕವಾಗಿ ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಲಭ್ಯವಾಗುವಂತೆ ಮಾಡಿಲ್ಲ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದೆ.

ಮುಂದುವರಿದು, “ಪ್ರಸ್ತುತ ಚಲಾವಣೆಯಲ್ಲಿರುವ ಈ ಪುಸ್ತಕದ ಯಾವುದೇ ಪ್ರತಿಗಳು, ಅವು ಪೂರ್ಣವಾಗಿರಲಿ ಅಥವಾ ಭಾಗಶಃವಾಗಿರಲಿ, ಮುದ್ರಿತ, ಡಿಜಿಟಲ್, ಪಿಡಿಎಫ್‌ ಅಥವಾ ಇನ್ನಾವುದೇ ರೂಪದಲ್ಲಿದ್ದರೂ ಮತ್ತು ಆನ್‌ಲೈನ್ ಅಥವಾ ಆಫ್‌ಲೈನ್ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿದ್ದರೂ, ಅವು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗುತ್ತವೆ ಮತ್ತು ಅದನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಹೇಳಿದೆ.

ಪೆಂಗ್ವಿನ್ ಹೌಸ್‌ನ ಸ್ಪಷ್ಟೀಕರಣದ ಈ ಪೋಸ್ಟ್ ಅನ್ನು ನರವಾಣೆ ಅವರು ಹಂಚಿಕೊಂಡಿದ್ದು, “ಇದು ಪುಸ್ತಕದ ಸ್ಥಿತಿ” ಎಂದು ಬರೆದುಕೊಂಡಿದ್ದಾರೆ.

ಅಂದು ಪ್ರಿ-ಆರ್ಡರ್ ಮಾಡಿ ಎಂದಿದ್ದರು ನರವಾಣೆ

ಪುಸ್ತಕ ಪ್ರಕಟಿಸಿಲ್ಲ ಎಂಬ ಪೆಂಗ್ವಿನ್ ಹೌಸ್‌ನ ಹೇಳಿಕೆಯನ್ನು ಪ್ರತಿಧ್ವನಿಸಿರುವ ನರವಾಣೆ ಅವರು, ಈ ಹಿಂದೆ 2023ರ ಡಿಸೆಂಬರ್ 15ರಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ “ನಮಸ್ಕಾರ ಸ್ನೇಹಿತರೇ. ನನ್ನ ಪುಸ್ತಕ ಈಗ ಲಭ್ಯವಿದೆ. ಲಿಂಕ್ ಫಾಲೋ ಮಾಡಿ, ಓದಿ ಸಂತೋಷವಾಗಿರಿ. ಜೈ ಹಿಂದ್” ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್‌ನಲ್ಲಿ ಅವರು ಪೆಂಗ್ವಿನ್ ಹೌಸ್ ತನ್ನ ಪುಸ್ತಕದ ಕುರಿತು ಹಾಕಿದ್ದ ಪೋಸ್ಟ್‌ನ ಸ್ಕ್ರೀನ್ ಶಾಟ್‌ ಅನ್ನು ಹಂಚಿಕೊಂಡಿದ್ದರು.

ಪೆಂಗ್ವಿನ್ ಹೌಸ್ ಈ ರೀತಿ ಪೋಸ್ಟ್ ಹಾಕಿತ್ತು : “ನಾವು #VijayDiwas (ವಿಜಯ್ ದಿವಸ್) ಆಚರಣೆಗೆ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ, ದಶಕಗಳ ಕಾಲ ಭಾರತಕ್ಕಾಗಿ ಹೋರಾಡಿದ 28ನೇ ಭೂಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ನರವಾಣೆ ಅವರಿಂದ ಆರಂಭಿಸಿ, ನಮ್ಮ ದೇಶದ ವೀರ ನಾಯಕರನ್ನು ಗೌರವಿಸೋಣ. ಅವರ ಕಥೆಯನ್ನು ತಿಳಿಯಲು, #4StarsOfDestiny ಪುಸ್ತಕವನ್ನು ಈಗಲೇ ಮುಂಗಡವಾಗಿ ಕಾಯ್ದಿರಿಸಿ (Pre-order): amzn.eu/d/fM48WQP”

ರಾಹುಲ್ ಗಾಂಧಿಯ ಪ್ರಶ್ನೆ ಏನು?

ಪೆಂಗ್ವಿನ್ ಹೌಸ್ ಪುಸ್ತಕ ಪ್ರಕಟಗೊಂಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿರುವುದನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

“ಅಂದು ಸ್ವತಃ ನರವಾಣೆ ಅವರೇ ನನ್ನ ಪುಸ್ತಕ ಮುಂಗಡ ಆರ್ಡರ್ ಮಾಡಿ, ಓದಿ ಎಂದಿದ್ದರು. ಪೆಂಗ್ವಿನ್ ಹೌಸ್ ಕೂಡ ಇದನ್ನೇ ಹೇಳಿತ್ತು” ಆದರೆ, ಈಗ ಪೆಂಗ್ವಿನ್ ಹೌಸ್ ಪುಸ್ತಕ ಪ್ರಕಟಗೊಂಡಿಲ್ಲ ಎಂದು ಹೇಳುತ್ತಿದೆ. ಹಾಗಾದರೆ, ಇಲ್ಲಿ ಸುಳ್ಳು ಹೇಳುತ್ತಿರುವುದು ಯಾರು?” ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.

ಮಂಗಳವಾರ ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ನಮಸ್ಕಾರ ಸ್ನೇಹಿತರೇ.. ನನ್ನ ಪುಸ್ತಕ ಈಗ ಲಭ್ಯವಿದೆ. ಲಿಂಕ್ ಫಾಲೋ ಮಾಡಿ.. ಓದಿ ಸಂತೋಷವಾಗಿರಿ. ಜೈ ಹಿಂದ್” ಎಂದು ನರವಾಣೆ ಅವರು ಹಾಕಿದ್ದ ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್ ಓದಿ ಕೇಳಿಸಿದ್ದಾರೆ.

“ಇದು ಜನರಲ್ ನರವಾಣೆ ಅವರು ಮಾಡಿರುವ ಟ್ವೀಟ್. ನಾನು ಹೇಳಲು ಬಯಸುತ್ತಿರುವ ಅಂಶವೆಂದರೆ, ಇಲ್ಲಿ ಒಂದೋ ನರವಾಣೆ ಅವರು ಸುಳ್ಳು ಹೇಳುತ್ತಿರಬೇಕು ಅಥವಾ ಪೆಂಗ್ವಿನ್ ಪ್ರಕಾಶನ ಸಂಸ್ಥೆ ಸುಳ್ಳು ಹೇಳುತ್ತಿರಬೇಕು. ಇಬ್ಬರೂ ಏಕಕಾಲಕ್ಕೆ ಸತ್ಯ ಹೇಳಲು ಸಾಧ್ಯವಿಲ್ಲ. ಆದರೆ, ನಾನು ಮಾಜಿ ಸೇನಾ ಮುಖ್ಯಸ್ಥರ ಮಾತನ್ನು ನಂಬುತ್ತೇನೆ; ಅವರು ಸುಳ್ಳು ಹೇಳುತ್ತಾರೆ ಎಂದು ನಾನು ಭಾವಿಸುವುದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮುಂದುವರಿದು, “ಪೆಂಗ್ವಿನ್ ಪ್ರಕಾಶನ ಸಂಸ್ಥೆಯು ಈ ಪುಸ್ತಕ ಪ್ರಕಟವಾಗಿಲ್ಲ ಎಂದು ಹೇಳುತ್ತಿದೆ. ಆದರೆ ಅದೇ ಪುಸ್ತಕವು ಅಮೆಜಾನ್‌ನಲ್ಲಿ ಲಭ್ಯವಿದೆ. ಜನರಲ್ ನರವಾಣೆ ಅವರು 2023ರಲ್ಲೇ ಟ್ವೀಟ್ ಮಾಡಿ, ‘ನನ್ನ ಪುಸ್ತಕವನ್ನು ದಯವಿಟ್ಟು ಖರೀದಿಸಿ’ ಎಂದು ಕೇಳಿಕೊಂಡಿದ್ದರು. ಇದನ್ನು ನಾನು ಆಗಲೇ ಓದಿ ತೋರಿಸಿದ್ದೇನೆ. ಈಗ ನೀವೇ ಹೇಳಿ, ನೀವು ನರವಾಣೆ ಅವರಿಗಿಂತ ಪೆಂಗ್ವಿನ್ ಸಂಸ್ಥೆಯನ್ನು ನಂಬುತ್ತೀರಾ? ನಾನಂತೂ ಜನರಲ್ ನರವಾಣೆ ಅವರನ್ನೇ ನಂಬುತ್ತೇನೆ” ಎಂದಿದ್ದಾರೆ.

ಅಮೆಜಾನ್‌ನಲ್ಲಿತ್ತು ಪುಸ್ತಕ

ಅಮೆಜಾನ್‌ನ ಅಮೆರಿಕದ ವೆಬ್‌ಸೈಟ್‌ನಲ್ಲಿ ನರವಾಣೆ ಅವರ ಪುಸ್ತಕವು ಮೇ 1, 2024 ರಂದೇ ಪ್ರಕಟವಾಗಿದೆ ಎಂದು ತೋರಿಸುತ್ತಿದೆ. ಆದರೆ, ಪ್ರಸ್ತುತ ಅದು “ಲಭ್ಯವಿಲ್ಲ” ಎಂದು ನಮೂದಿಸಲಾಗಿದೆ. ಇದೇ ವೇಳೆ, ಭಾರತದ ಅಮೆಜಾನ್ ವೆಬ್‌ಸೈಟ್‌ನಲ್ಲಿ ಹುಡುಕಿದಾಗ ಈ ಪುಟವು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸಂದೇಶ ಕಾಣಿಸುತ್ತಿದೆ. ಪ್ರಕಾಶಕರು ಪುಸ್ತಕ ಬಿಡುಗಡೆಯೇ ಆಗಿಲ್ಲ ಎನ್ನುತ್ತಿದ್ದರೂ, ಅಂತಾರಾಷ್ಟ್ರೀಯ ವೆಬ್‌ಸೈಟ್‌ಗಳಲ್ಲಿ ಪ್ರಕಟಣೆಯ ದಿನಾಂಕ ನಮೂದಾಗಿರುವುದು ರಾಹುಲ್ ಗಾಂಧಿಯವರ “ಪುಸ್ತಕ ಲಭ್ಯವಿತ್ತು” ಎಂಬ ವಾದಕ್ಕೆ ಆಧಾರ ನೀಡಿದಂತಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.

ಕೊನೆಯದಾಗಿ…ಪೆಂಗ್ವಿನ್ ಹೌಸ್ ಪುಸ್ತಕ ಪ್ರಕಟಿಸುವ ಮುನ್ನವೇ ಮುಂಗಡ ಬುಕ್ಕಿಂಗ್ ಮಾಡಿ ಎಂದು ಪೋಸ್ಟ್ ಹಾಕಿತ್ತೇ..? ನರವಾಣೆ ಕೂಡ ಇದೇ ಅರ್ಥದಲ್ಲಿ ಪೋಸ್ಟ್ ಹಂಚಿಕೊಂಡಿದ್ದರೇ? ಎಂಬ ಪ್ರಶ್ನೆ ಈಗ ಮೂಡಿದೆ. ಒಂದು ವೇಳೆ ಪ್ರಕಟಗೊಳ್ಳುವ ಮುನ್ನವೇ ಮುಂಗಡ ಬುಕ್ಕಿಂಗ್ ಮಾಡಿ ಎಂದಿದ್ದರೆ, ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಬುಕ್ಕಿಂಗ್ ಮಾಡಿದ ಜನರಿಗೆ ತಕ್ಷಣ ಎಲ್ಲಿಂದ ಪುಸ್ತಕ ಕೊಡುತ್ತಿತ್ತು? ಇಲ್ಲ ನಾವು ತಡವಾಗಿ ಕೊಡುತ್ತಿದ್ದೆವು ಎನ್ನುವುದಾದರೆ ಸಂಸ್ಥೆಯ ಉತ್ತಮ ಹೆಸರಿಗೆ (Good Will) ಹಿನ್ನಡೆಯಾದಂತೆ ಅಲ್ಲವೇ?

ಇನ್ನು, 2026ರ ಫೆ.10ರವರೆಗೆ ಪುಸ್ತಕದ ಕುರಿತ ರಾಜಕೀಯ ಜಟಾಪಟಿಯ ಬಗ್ಗೆ ನರವಾಣೆ ಮೌನವಾಗಿದ್ದರು. ಫೆ.10ರಂದು ರಾಹುಲ್ ಗಾಂಧಿ ನರವಾಣೆ ಈ ಹಿಂದೆ ಹೀಗೆ ಹೇಳಿದ್ದಾರೆ, ಈಗ ಪೆಂಗ್ವಿನ್ ಹೌಸ್ ಈ ರೀತಿ ಹೇಳುತ್ತಿದೆ ಎಂದು ನರವಾಣೆ ಅವರ ಹಳೆಯ ಟ್ವೀಟ್ ಓದಿದ ಬಳಿಕ, ನರವಾಣೆ ಮೌನ ಮುರಿದಿದ್ದಾರೆ. ಪೆಂಗ್ವಿನ್ ಹೌಸ್ ಹೇಳಿಕೆಯನ್ನು ಪ್ರತಿಧ್ವನಿಸಿದ್ದಾರೆ. ಹಾಗಾಗಿ, ನರವಾಣೆ ತಾನು ಈ ಹಿಂದೆ ಹಾಕಿದ್ದ ಪೋಸ್ಟ್‌ಗೆ ತದ್ವಿರುದ್ದವಾದ ನಿಲುವು ವ್ಯಕ್ತಪಡಿಸಿದಂತೆ ಕಾಣುತ್ತಿದೆ. ನರವಾಣೆಯ ಇತ್ತೀಚಿನ ಪೋಸ್ಟ್‌ನಿಂದ “ನಾನು ಮಾಜಿ ಸೇನಾ ಮುಖ್ಯಸ್ಥರನ್ನು ನಂಬುತ್ತೇನೆ” ಎಂಬ ರಾಹುಲ್ ಗಾಂಧಿಯ ಫೆ.10ರ ಹೇಳಿಕೆ ಅರ್ಥ ಕಳೆದುಕೊಂಡಂತಾಗಿದೆ. ಯಾವುದು ಸತ್ಯ? ಏನನ್ನು ನಂಬಬೇಕು ಎಂಬ ಗೊಂದಲ ಮೂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತ್ಯತೀತ ತಾಣ ಬಾಬಾ ಬುಡನ್‌ ಗಿರಿಯಲ್ಲಿ ‘ವೈದಿಕ ಆಚರಣೆ’ಗೆ ವಿರೋಧ; ಕಾಂಗ್ರೆಸ್‌ ಸರ್ಕಾರದ ವಿರುದ್ದ ಪ್ರತಿಭಟನೆ

ಕೋಮುವಾದಿಗಳು ಎಷ್ಟೇ ವಿಷಯ ತಿರುಚುವ ಕೆಲಸ ಮಾಡಿದರೂ ಬಾಬಾ ಬುಡನ್ ಗಿರಿಯ ಜಾತ್ಯತೀತ ಹಿನ್ನೆಲೆಯನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಅಲ್ಲಿನ ಸೌಹಾರ್ಧ ಪರಂಪರೆಯನ್ನು ಬದಿಗೆ ಸರಿಸಿ, ವೈದಿಕ ಆಚರಣೆಗೆ ಅನುಮತಿ ನೀಡುವ ಮೂಲಕ ಹಿಂದುತ್ವ...

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಜಲಾಂತರ್ಗಾಮಿ ದಾಳಿ: ಸಮುದ್ರದಲ್ಲಿ ಶವಗಳು ಪತ್ತೆ

ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಬುಧವಾರ ಜಲಾಂತರ್ಗಾಮಿ ದಾಳಿಯ ನಂತರ ಇರಾನ್ ನೌಕಾ ಯುದ್ಧನೌಕೆ ಐರಿಸ್ ದೇನಾ ಮುಳುಗಿದೆ ಎಂದು ವರದಿಯಾಗಿದೆ.  ಈ ದಾಳಿಯಲ್ಲಿ ಕನಿಷ್ಠ 101 ಜನರು ಕಾಣೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ,...

ಹೆದ್ದಾರಿಯಲ್ಲಿ ದ್ವೇಷ ಬರಹ : ಮುಸ್ಲಿಮರು ಭಾರತದಲ್ಲಿ ‘ಬಾಡಿಗೆದಾರರು’ ಅವರು ಹಾಗೆಯೇ ಬದುಕಬೇಕು ಎಂದ ಹಿಂದೂ ರಕ್ಷಾ ದಳದ ಸದಸ್ಯರು

2026ರ ಫೆಬ್ರವರಿ 26 ಮತ್ತು 27ರ ನಡುವಿನ ಮಧ್ಯರಾತ್ರಿ ಉತ್ತರ ಪ್ರದೇಶದ ದೆಹಲಿ–ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಯ ಮೇಲೆ ಹಿಂದೂ ರಕ್ಷಾ ದಳಕ್ಕೆ (ಹೆಚ್‌ಆರ್‌ಡಿ) ಸೇರಿದ ಮಹಿಳೆಯರು ಹಿಂದಿಯಲ್ಲಿ “मुसलमान के लिए...

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಹತ್ಯೆಗೆ ಗುರಿಯಾಗುತ್ತಾನೆ: ಇಸ್ರೇಲ್ ರಕ್ಷಣಾ ಸಚಿವನಿಂದ ಬೆದರಿಕೆ

ದುಬೈ: ‘ಅಯತೊಲ್ಲಾ ಅಲಿ ಖಮೇನಿ ಉತ್ತರಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ ಅವರನ್ನು ಹತ್ಯೆ ಮಾಡುತ್ತೇವೆ’ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಬುಧವಾರ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ...

ಇರಾನ್ ಮೇಲಿನ ಇಸ್ರೇಲ್-ಅಮೆರಿಕ ದಾಳಿಗಳು ಅಂತರರಾಷ್ಟ್ರೀಯ ಕಾನೂನಿಗೆ ಸರಿ ಹೊಂದುವುದಿಲ್ಲ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ

ಸಿಡ್ನಿ: ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು "ವಿಷಾದದಿಂದ" ಬೆಂಬಲಿಸುವುದಾಗಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿದ್ದಾರೆ. ಆದರೆ ಈ ಸಂಘರ್ಷವು ಅಂತರರಾಷ್ಟ್ರೀಯ ಕ್ರಮದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು...

ಉತ್ತರ ಪ್ರದೇಶ | ಅತ್ಯಾಚಾರ ಸಂತ್ರಸ್ತೆಯನ್ನು ಗುಂಡಿಕ್ಕಿ ಕೊಂದ ಆರೋಪಿ

ಸುಮಾರು 17 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು 22 ವರ್ಷದ ಆರೋಪಿ ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಯ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು...

ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್; ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಸಿದ 37 ಭಾರತೀಯ ಹಡಗುಗಳು

ಇಸ್ರೇಲ್-ಯುಎಸ್ ಜಂಟಿ ದಾಳಿಯ ನಂತರ, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಭಾರತೀಯ ಹಡಗುಗಳು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ. ಭಾರತೀಯ ಧ್ವಜ ಹೊಂದಿರುವ 37 ಹಡಗುಗಳು ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ನೀರಿನಲ್ಲಿ ಸಿಲುಕಿಕೊಂಡಿವೆ. 37 ಹಡಗುಗಳು...

ಪಾಲ್ಘರ್: ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟೆಂಪೋ: 28 ವರ್ಷದ ಚಾಲಕ ಸಜೀವ ದಹನ, ಕ್ಲೀನರ್ ಗೆ ಗಾಯ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಟೆಂಪೋಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಪಂಜಾಬ್‌ನ 28 ವರ್ಷದ ಚಾಲಕ ಸುಟ್ಟು ಕರಕಲಾಗಿದ್ದು, ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ಜನನಿಬಿಡ...

ಗುಜರಾತ್| ಅಂತರ್ಧರ್ಮೀಯ ದಂಪತಿಗೆ ಪೊಲೀಸರ ರಕ್ಷಣೆ; ‘ಲವ್ ಜಿಹಾದ್’ ಎಂದು ಕೂಗಿದ ವಿಎಚ್‌ಪಿ

ಮಾರ್ಚ್ 3 ರಂದು ಗುಜರಾತ್‌ನ ಅಹಮದಾಬಾದ್‌ನ ಮೆಟ್ರೋ ನ್ಯಾಯಾಲಯದ ಸಂಕೀರ್ಣದೊಳಗಿನ ವಿವಾಹ ನೋಂದಣಿ ಕಚೇರಿಯು ಅವ್ಯವಸ್ಥೆಯ ತಾಣವಾಯಿತು. ಗಾಂಧಿನಗರದ ಹಿಂದೂ ಮಹಿಳೆಯೊಬ್ಬರು ನಗರದ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಲು ಬಂದ ನಂತರ ಹಿಂದುತ್ವ ಸಂಘಟನೆಯ...

ಖಮೇನಿ ಹತ್ಯೆ ಕುರಿತು ಪೋಸ್ಟ್‌ : ನ್ಯಾಷನಲ್ ಕಾನ್ಫರೆನ್ಸ್ ಸಂಸದ, ಶ್ರೀನಗರದ ಮಾಜಿ ಮೇಯರ್ ವಿರುದ್ಧ ಎಫ್‌ಐಆರ್

ದಾರಿತಪ್ಪಿಸುವ ಆನ್‌ಲೈನ್ ವಿಷಯವನ್ನು ಹಂಚಿಕೊಂಡ ಆರೋಪದ ಮೇಲೆ ಜಮ್ಮು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಅಗಾ ಸೈಯದ್ ರೂಹುಲ್ಲಾ ಮೆಹದಿ ಮತ್ತು ಶ್ರೀನಗರದ ಮಾಜಿ ಮೇಯರ್ ಜುನೈದ್ ಅಝೀಂ ಮಟ್ಟು ವಿರುದ್ಧ...