ಬಾಬರಿ ಮಸೀದಿ ಒಡೆದು ಕಟ್ಟಲಾಗಿರುವ ಅಯೋಧ್ಯೆ ರಾಮ ಮಂದಿರದ ಸ್ವಚ್ಛತಾ ಸಿಬ್ಬಂದಿಯೂ ಆಗಿರುವ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಶುಕ್ರವಾರ ಎಂಟು ಮಂದಿಯನ್ನು ಅಯೋಧ್ಯೆಯಲ್ಲಿ ಬಂಧಿಸಲಾಗಿದೆ. ವಿದ್ಯಾರ್ಥಿನಿಯ ಸ್ನೇಹಿತ ಅಯೋಧ್ಯಾ ಜಿಲ್ಲೆಯ ಸಹದತ್‌ಗಂಜ್‌ನ ನಿವಾಸಿ ವಂಶ್ ಚೌಧರಿ, “ಮನರಂಜನೆಗಾಗಿ” ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗುವುದಾಗಿ ಪುಸಲಾಯಿಸಿ ಕರೆದು ಅತಿಥಿ ಗೃಹದಲ್ಲಿ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಆಗಸ್ಟ್ 16 ರಂದು ಅವರು ನನ್ನನ್ನು ಅತಿಥಿ ಗೃಹಕ್ಕೆ ಕರೆದೊಯ್ದು ಅಲ್ಲಿ ನನ್ನನ್ನು ಬಂಧಿಸಿದರು. ಮೊದಲಿಗೆ ವಂಶ್ ಚೌಧರಿ ತನ್ನ ಇತರ ಇಬ್ಬರು ಸ್ನೇಹಿತರೊಂದಿಗೆ ಸೇರಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದನು. ನಂತರ ನನಗೆ ಆಘಾತವನ್ನುಂಟುಮಾಡಲು ಇನ್ನೂ ಮೂರು ಸ್ನೇಹಿತರನ್ನು ಆಹ್ವಾನಿಸಿದ್ದಾನೆ” ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.
ಅಯೋಧ್ಯಾ ಪಟ್ಟಣದ ಪದವಿ ಕಾಲೇಜಿನಲ್ಲಿ ಮೂರನೇ ವರ್ಷದ ಬಿಎ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಬಾಬರಿ ಮಸೀದಿ ಒಡೆದು ಕಟ್ಟಿರುವ ರಾಮ ಮಂದಿರದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. “ಅತಿಥಿ ಗೃಹದಿಂದ, ಅವರು ನನ್ನನ್ನು ಬಂವೀರ್‌ಪುರದ ಬ್ಯಾರೇಜ್‌ಗೆ ಕರೆದೊಯ್ದು ಮತ್ತೆ ಅತ್ಯಾಚಾರ ನಡೆಸಿದ್ದಾರೆ. ಅವರು ನನ್ನನ್ನು ಆಗಸ್ಟ್ 18 ರಂದು ಬಿಡುಗಡೆ ಮಾಡಿದರು”ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: Arvind Kejriwal | ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆ!
“ನಮ್ಮೆಲ್ಲರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರಿಂದ ನನ್ನ ಕುಟುಂಬದ ಸದಸ್ಯರು, ಜೀವ ಭಯಕ್ಕೆ ನಾವು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ಆಗಸ್ಟ್ 25 ರಂದು ನಾನು ರಾಮ ಮಂದಿರಕ್ಕೆ ಹೋಗುತ್ತಿದ್ದಾಗ ವಂಶ್ ಮತ್ತೆ ನನ್ನನ್ನು ಅಪಹರಿಸಿದ್ದಾನೆ. ಆತನೊಂದಿಗೆ ಆತನ ಸ್ನೇಹಿತರಾದ ಉದಿತ್ ಕುಮಾರ್, ಸತ್ರಾಂ ಚೌಧರಿ ಹಾಗೂ ಇಬ್ಬರು ಅಪರಿಚಿತ ವ್ಯಕ್ತಿಗಳಿದ್ದರು. ಅವರು ಕಾರಿನಲ್ಲಿ ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದಾಗ, ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ನಾನು ಅವರಿಂದ ತಪ್ಪಿಸಿಕೊಂಡಿ ಓಡಿಹೋಗಿದ್ದೆ” ಎಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾಗಿ ಪೊಲೀಸ್ ಮೂಲಗಳ ಹೇಳಿವೆ ಎಂದು ವರದಿಯಾಗಿದೆ.
ಅಪರಾಧದ ಸ್ಥಳಗಳೆಂದು ವಿದ್ಯಾರ್ಥಿನಿ ಗುರುತಿಸಿರುವ ಪ್ರದೇಶಗಳು ರಾಮ ಮಂದಿರ ಪಟ್ಟಣದ ಹೆಚ್ಚಿನ ಭದ್ರತೆ ಇರುವ ವಲಯಗಳಾಗಿವೆ. ಬಾಲಕಿ ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿ, ತಾನು ಮೊದಲು ಆಗಸ್ಟ್ 26 ರಂದು ಪೊಲೀಸರಿಗೆ ದೂರು ನೀಡಲು ಹೋಗಿದ್ದೆ ಆದರೆ ತನ್ನ ಪ್ರಕರಣ ದಾಖಲಿಸಲಾಗಿಲ್ಲ ಎಂದು ಹೇಳಿದ್ದಾರೆ.
“ನಾವು ವಿಚಾರಣೆಯ ನಂತರ ಸೆಪ್ಟೆಂಬರ್ 2 ರಂದು ಪ್ರಕರಣವನ್ನು ದಾಖಲಿಸಿದ್ದೇವೆ. ಅಂತಿಮವಾಗಿ ಎಲ್ಲಾ ಎಂಟು ಆರೋಪಿಗಳನ್ನು ಬಂಧಿಸಿದ್ದೇವೆ. ಅವರನ್ನು ನ್ಯಾಯಾಲಯದಿಂದ ಜೈಲಿಗೆ ಕಳುಹಿಸಲಾಗಿದೆ. ಎಂದು ಅಯೋಧ್ಯೆ ಕ್ಯಾಂಟ್ ಪೊಲೀಸ್ ಠಾಣೆಯ ಉಸ್ತುವಾರಿ ಅಮರೇಂದ್ರ ಸಿಂಗ್ ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪ್ರಮುಖ ಆರೋಪಿ ವಂಶ್ ಚೌದರಿಯನ್ನು ತಿಳಿದಿರುವ ಕಾರಣ ಹುಡುಗಿ ವಂಶ್ ಅವರನ್ನು ನಂಬಿದ್ದಳು ಎಂದು ಅಧಿಕಾರಿ ಹೇಳಿದ್ದಾರೆ.
ವಿಡಿಯೊ ನೋಡಿ: ಚಕ್ರವರ್ತಿ ಸೂಲಿಬೆಲೆ ಪ್ರತಾಪ್ ಸಿಂಹ ಜಗಳವಾಡ್ತಿರೋದು ಏಕೆ? ಫುಲ್ ಎಪಿಸೋಡ್ Sulibele versus Pratap Simha


