Homeಮುಖಪುಟಸುಳ್ಳು ಹೇಳಿದ ಬಾಬಾ ರಾಮ್‌ದೇವ್! - ಪತಂಜಲಿ ಕೊರೊನಿಲ್ ಕುರಿತು ಐಎಂಎ ಆಕ್ರೋಶ

ಸುಳ್ಳು ಹೇಳಿದ ಬಾಬಾ ರಾಮ್‌ದೇವ್! – ಪತಂಜಲಿ ಕೊರೊನಿಲ್ ಕುರಿತು ಐಎಂಎ ಆಕ್ರೋಶ

#COVID19 ಚಿಕಿತ್ಸೆಗಾಗಿ ಯಾವುದೇ ಸಾಂಪ್ರದಾಯಿಕ ಔಷಧದ ಪರಿಣಾಮಕಾರಿತ್ವವನ್ನು WHO ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ" ಎಂದು WHO ಆಗ್ನೇಯ ಏಷ್ಯ ಟ್ವೀಟ್ ಮಾಡಿದೆ.

- Advertisement -
- Advertisement -

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಸಮ್ಮುಖದಲ್ಲಿ ಯೋಗ ಗುರು ರಾಮದೇವ್ “ಕೊವಿಡ್-19 ಗಾಗಿ ಮೊದಲ ಸಾಕ್ಷ್ಯ ಆಧಾರಿತ ಔಷಧ” ಎಂದು ಪತಂಜಲಿಯ ಕೊರೊನಿಲ್ ಕುರಿತು ಸಮರ್ಥಿಸಿಕೊಂಡಿದ್ದನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತೀವ್ರವಾಗಿ ಟೀಕಿಸಿದೆ. ಆರೋಗ್ಯ ಸಚಿವರು ದೇಶದ ಮುಂದೆ “ಸುಳ್ಳು ಕಟ್ಟುಕಥೆ, ಅವೈಜ್ಞಾನಿಕ ಉತ್ಪನ್ನ”ವನ್ನು ಉತ್ತೇಜಿಸಲು ಹೇಗೆ ಸಾಧ್ಯ ಎಂದು ವೈದ್ಯಕೀಯ ಸಂಸ್ಥೆ ಪ್ರಶ್ನಿಸಿದೆ.

ಶುಕ್ರವಾರ, ರಾಮದೇವ್ ಅವರು ಪತಂಜಲಿ ಉತ್ಪನ್ನ ಕೊರೊನಿಲ್ ಅನ್ನು ಆರೋಗ್ಯ ಸಚಿವ ಹಷ್‌ವರ್ಧನ್ ಮತ್ತು ಮತ್ತೊಬ್ಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದರು. ಈ ಮೂವರ ಹಿಂದಿರುವ ದೊಡ್ಡ ಪೋಸ್ಟರ್‌ನಲ್ಲಿ “ಔಷಧಿಯು CoPP ಮತ್ತು WHO- ಜಿಎಂಪಿ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಬರೆಯಲ್ಪಟ್ಟಿತ್ತು. ಅಂದರೆ ಇದು ಔಷಧೀಯ ಉತ್ಪನ್ನದ ಪ್ರಮಾಣಪತ್ರವನ್ನು (CoPP) ಹೊಂದಿದೆ ಮತ್ತು ಇದನ್ನು ವಿಶ್ವ ಆರೋಗ್ಯ ಸಂಸ್ಥೆಯ ಉತ್ತಮ ಉತ್ಪಾದನಾ ಪ್ರಾಕ್ಟೀಸಸ್ (ಜಿಎಂಪಿ) ಗುರುತಿಸಿದೆ ಎಂದರ್ಥ.

ಈ ಎರಡೂ ಮಾನದಂಡಗಳು ಔಷಧೀಯ ಉತ್ಪನ್ನಗಳಲ್ಲಿ ಗುಣಮಟ್ಟದ ಭರವಸೆಯನ್ನು ಬಹುಪಾಲು ವ್ಯಾಖ್ಯಾನಿಸುತ್ತವೆ.

ಇದನ್ನೂ ಓದಿ: ಜನರ ಭಯದ ದುರುಪಯೋಗ: ರಾಮ್‌ದೇವ್ ಪತಂಜಲಿಗೆ 10 ಲಕ್ಷ ರೂ ದಂಡ

ಆದರೆ, ಕೊವಿಡ್-19 ಗೆ ಚಿಕಿತ್ಸೆ ನೀಡಲು ಅಥವಾ ತಡೆಗಟ್ಟಲು ಯಾವುದೇ ಸಾಂಪ್ರದಾಯಿಕ ಔಷಧಿಯನ್ನು ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ ಎಂದು ಡಬ್ಲೂಎಚ್‌ಒ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದೆ. #COVID19 ಚಿಕಿತ್ಸೆಗಾಗಿ ಯಾವುದೇ ಸಾಂಪ್ರದಾಯಿಕ ಔಷಧದ ಪರಿಣಾಮಕಾರಿತ್ವವನ್ನು WHO ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ” ಎಂದು WHO ಆಗ್ನೇಯ ಏಷ್ಯ ಟ್ವೀಟ್ ಮಾಡಿದೆ.

ಸ್ವತ: ವೈದ್ಯರೂ ಆಗಿರುವ ಆರೋಗ್ಯ ಸಚಿವರ ಸಮ್ಮುಖದಲ್ಲಿ ಅನಾವರಣಗೊಂಡ “ರಹಸ್ಯ ಔಷಧ”ಕ್ಕೆ WHO ಪ್ರಮಾಣೀಕರಣದ ಹಸಿ ಸುಳ್ಳು ಕಾಣಿಸಿಕೊಂಡಿದ್ದನ್ನು ಗಮನಿಸಿದಾಗ ಆಘಾತವಾಯಿತು ಎಂದು ಐಎಂಎ ಹೇಳಿದೆ. ದೇಶಕ್ಕೆ ಸಚಿವರ ವಿವರಣೆಯ ಅಗತ್ಯವಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ದೇಶದ ಆರೋಗ್ಯ ಮಂತ್ರಿಯಾಗಿ, ಇಂತಹ ಸುಳ್ಳು ಪ್ರಕ್ಷೇಪಗಳನ್ನು, ಪ್ರಮಾಣೀಕೃತವಲ್ಲದ ಔಷಧಿಗಳನ್ನು ಇಡೀ ದೇಶದ ಮುಂದೆ ಬಿಡುಗಡೆ ಮಾಡುವುದು ಎಷ್ಟು ಸೂಕ್ತ ಮತ್ತು ತರ್ಕಬದ್ಧವಾಗಿದೆ? ಇಂತಹ ಸುಳ್ಳು ಕಟ್ಟುಕಥೆಯ ಅವೈಜ್ಞಾನಿಕ ಉತ್ಪನ್ನವನ್ನು ಜನರಿಗೆ ಬಿಡುಗಡೆ ಮಾಡುವುದು ಎಷ್ಟು ಸಮರ್ಥನೀಯ? ಇಡೀ ದೇಶದ ಆರೋಗ್ಯ ಮಂತ್ರಿಯಾಗಿ, ಉತ್ಪನ್ನವನ್ನು ಅನೈತಿಕ, ತಪ್ಪು ಮತ್ತು ಸುಳ್ಳು ರೀತಿಯಲ್ಲಿ ಉತ್ತೇಜಿಸುವುದು ಎಷ್ಟು ನೈತಿಕವಾಗಿದೆ? ದೇಶದ ಆರೋಗ್ಯ ಸಚಿವರಾಗಿ ಮತ್ತು ಆಧುನಿಕ ವೈದ್ಯರಾಗಿ ಇಂತಹ ಆಧಾರರಹಿತ, ಪ್ರಮಾಣೀಕೃತವಲ್ಲದ ಉತ್ಪನ್ನವನ್ನು ಉತ್ತೇಜಿಸುವುದು ಎಷ್ಟು ನೈತಿಕವಾಗಿದೆ”ಎಂದು ವೈದ್ಯಕೀಯ ಸಂಸ್ಥೆ ಕಟುವಾಗಿ ಪ್ರಶ್ನಿಸಿದೆ.

ಇದನ್ನೂ ಓದಿ: ರಣಕೇಕೆಯ ಮಾಧ್ಯಮಗಳ ನಡುವೆ ನಮ್ಮ ಕರ್ತವ್ಯ; ನ್ಯಾಯಪಥ ಸಂಪಾದಕೀಯ

“ಆರೋಗ್ಯ ಸಚಿವರು ಒಂದು ಅವೈಜ್ಞಾನಿಕ ಔಷಧದ ಸುಳ್ಳು ಮತ್ತು ಕಲ್ಪಿತ ಪ್ರಕ್ಷೇಪಣವನ್ನು ಬೆಂಬಲಿಸುವುದು ಮತ್ತು WHO ಇದನ್ನು ತಿರಸ್ಕರಿಸುವುದು- ದೇಶದ ಜನರಿಗೆ ಮಾಡಿದ ಕಪಾಳಮೋಕ್ಷ ಮತ್ತು ಅವಮಾನ” ಎಂದು ಐಎಂಎ ಟೀಕಿಸಿದೆ.

ಕೊವಿಡ್ ತಡೆಗಟ್ಟಲು ಕೊರೊನಿಲ್ ಪರಿಣಾಮಕಾರಿಯಾಗಿದ್ದರೆ, ವ್ಯಾಕ್ಸಿನೇಷನ್‌ಗಾಗಿ ಸರ್ಕಾರ 35,000 ಕೋಟಿ ರೂ.ಗಳನ್ನು ಏಕೆ ಖರ್ಚು ಮಾಡಿದೆ ಎಂದು ಐಎಂಎ ಕೇಳಿದೆ.

ಪತಂಜಲಿ ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು WHO ಟ್ವೀಟ್‌ಗೆ ಸ್ವಲ್ಪ ಮೊದಲು ಸ್ಪಷ್ಟನೆ ನೀಡಿದ್ದರು.

“ಕೊರೊನಿಲ್‌ಗೆ WHO ಜಿಎಂಪಿ ಕಂಪ್ಲೈಂಟ್ CoPP ಪ್ರಮಾಣಪತ್ರವನ್ನು ಭಾರತ ಸರ್ಕಾರದ ಡಿಸಿಜಿಐ ನೀಡಿದೆ. WHO ಯಾವುದೇ ಔಷಧಿಗಳನ್ನು ಅನುಮೋದಿಸುವುದಿಲ್ಲ ಅಥವಾ ನಿರಾಕರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಜನರಿಗೆ ಉತ್ತಮ, ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು WHO ಕೆಲಸ ಮಾಡುತ್ತದೆ ಎಂದು ಬಾಲಕೃಷ್ಣ ಟ್ವೀಟ್ ಮಾಡಿದ್ದರು.

ಕಳೆದ ವರ್ಷ, ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಲಸಿಕೆಗಳು ಇನ್ನೂ ಪ್ರಯೋಗದ ಹಂತದಲ್ಲಿದ್ದವು, ಕೊರೊನಿಲ್ ಕೊರೊನಾವೈರಸ್ ವಿರುದ್ಧ ಬಲವಾದ ರಕ್ಷಣೆ ನೀಡಬಹುದೆಂದು ಪತಂಜಲಿ ಆಯುರ್ವೇದ ಹೇಳಿಕೊಂಡಿತ್ತು. ಅದರ ಸಮರ್ಥನೆಗಳ ಬಗ್ಗೆ ದೊಡ್ಡ ವಿವಾದದ ನಂತರ, ಆಯುಷ್ ಸಚಿವಾಲಯವು ಕೊರೊನಿಲ್ ಅನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಧನವಾಗಿ ಮಾತ್ರ ಮಾರಾಟ ಮಾಡಬಹುದೆಂದು ಹೇಳಿತ್ತು.


ಇದನ್ನೂ ಓದಿ: ಪತಂಜಲಿಯಿಂದ ಕೊರೊನಾ ಗುಣಪಡಿಸಬಹುದೆಂದು ನಾವು ಹೇಳಿಲ್ಲ: ಸಿಇಒ ಆಚಾರ್ಯ ಬಾಲಕೃಷ್ಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...