Homeಮುಖಪುಟಕಾಶ್ಶೀರ ರಾಜ್ಯ ನೆಲಸಮ ಮಾಡಿದ ವಾರ್ಷಿಕ ದಿನವೇ ಬಾಬ್ರಿ ಮಸೀದಿ ನೆಲಸಮವಾದ ಸ್ಥಳದಲ್ಲಿ ಮಂದಿರ ಶಿಲಾನ್ಯಾಸ...

ಕಾಶ್ಶೀರ ರಾಜ್ಯ ನೆಲಸಮ ಮಾಡಿದ ವಾರ್ಷಿಕ ದಿನವೇ ಬಾಬ್ರಿ ಮಸೀದಿ ನೆಲಸಮವಾದ ಸ್ಥಳದಲ್ಲಿ ಮಂದಿರ ಶಿಲಾನ್ಯಾಸ ಕಾಕತಾಳೀಯವೆ?

ರಾಮಮಂದಿರದ ನಿರ್ಮಾಣವು ಬಿಜೆಪಿಗೆ ಚುನಾವಣಾ ಲಾಭವನ್ನು ತರಬಹುದೆ? ಒಂದು ದೃಷ್ಟಿಕೋನವೆಂದರೆ, ಪ್ರತಿಕೂಲವಾಗಿ ಸುಪ್ರೀಂಕೋರ್ಟ್ ತೀರ್ಪು ಬಂದಿದ್ದರೆ ವಾಸ್ತವವಾಗಿ ಪಕ್ಷಕ್ಕೆ ಒಳ್ಳೆಯದನ್ನು ಮಾಡುತ್ತಿತ್ತು.

- Advertisement -
- Advertisement -

ನೀವು ಯಾವ ದಿಕ್ಕಿನಿಂದಾದರೂ ನೋಡಿ; ಆಗಸ್ಟ್ 5, 2020 ಭಾರತೀಯ ಗಣರಾಜ್ಯದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಲಿದೆ‌.

ಅದು, ಜಮ್ಮು ಮತ್ತು ಕಾಶ್ಮೀರ ಸ್ವಾಯತ್ತತೆಯನ್ನು ಬಿಜೆಪಿ ನೇತೃತ್ವದ ಸರಕಾರ ಏಕಪಕ್ಷೀಯವಾಗಿ ಕಿತ್ತುಹಾಕಲು ನಿರ್ಧರಿಸಿದ, ಅಲ್ಲಿನ ಎಲ್ಲಾ ಜನರನ್ನು ಸಾರಾಸಗಟಾಗಿ ಕರ್ಫ್ಯೂಗೆ ದೂಡಿ, ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ರದ್ದುಪಡಿಸಿ, ಹಿಂದಿನ ಮಿತ್ರರೂ ಸೇರಿದಂತೆ ಕಾಶ್ಮೀರ ಕಣಿವೆಯ ಪ್ರತಿಯೊಬ್ಬ ಪ್ರಮುಖ ರಾಜಕಾರಣಿಯನ್ನು ಜೈಲಿಗೆ ತಳ್ಳಿ, ಭಾರತದ ಏಕೈಕ ಮುಸ್ಲಿಂ ಬಾಹುಳ್ಯದ ರಾಜ್ಯವನ್ನು ಹೊಸದಿಲ್ಲಿಯ ನಿಯಂತ್ರಣಕ್ಕೆ ಬರುವ ಕೇಂದ್ರಾಡಳಿತ ಪ್ರದೇಶವಾಗಿ ಅಪಮೌಲ್ಯಗೊಳಿಸಿದ ಮೊದಲ ವರ್ಷದ ನೆನಪಿನ ದಿನ.

ಇದೇ ದಿನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಆರಂಭವನ್ನು ಸೂಚಿಸುವ ಮತ್ತು ಸರಕಾರಿ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿರುವ ಧಾರ್ಮಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಮಂದಿರ ನಿರ್ಮಾಣವು ಸದ್ಯದ ಭಾರತೀಯ ರಾಜಕೀಯವು ಸುತ್ತುತ್ತಿರುವ ಹಿಂದೂ ರಾಷ್ಟ್ರೀಯವಾದದ ಬೆಳವಣಿಗೆಯ ಗೂಟವನ್ನು ಊರಲಾಗಿರುವ ನಿವೇಶನದಲ್ಲಿಯೇ ಆಗಲಿದೆ.

ನೀವು ಯಾವ ದೃಷ್ಟಿಯಿಂದ ನೋಡುತ್ತೀರೋ ಅದಕ್ಕೆ ಅನುಗುಣವಾಗಿ, ಒಂದು ವರ್ಷ ಮೊದಲು ಸರಕಾವು ಕಾಶ್ಮೀರದಲ್ಲಿ ದಮನಕಾರಿ ಕ್ರಮವನ್ನು ಆರಂಭಿಸಿದ ದಿನದಂದೇ ರಾಮ ಮಂದಿರದ ನಿರ್ಮಾಣ ಕಾರ್ಯ ಆರಂಭವಾಗುತ್ತಿರುವುದು ಈ ಕೆಳಗಿನ ಎರಡು ವಿಷಯಗಳನ್ನು ಸೂಚಿಸುತ್ತದೆ.

* ಗುಜರಾತ್ ಮತ್ತು ದಿಲ್ಲಿಯ ಕೋಮುಗಲಭೆಗಳ ವೇಳೆಯಲ್ಲಿ ಅಧಿಕಾರದಲ್ಲಿ ಇದ್ದ ಹಿಂದೂತ್ವದ ನಾಯಕನಾದ ನರೇಂದ್ರ ಮೋದಿಯ ವ್ಯಕ್ತಿತ್ವ ಮತ್ತು ರಾಜಕೀಯದಲ್ಲಿ ಭಾರತದ ಒಂದು ಶತಮಾನದಷ್ಟು ಹಳೆಯ ಹಿಂದೂ ರಾಷ್ಟ್ರೀಯ ಚಳವಳಿಯು ಪರ್ಯಾವಸಾನವಾಗಿದ್ದು, ಜಾಗತಿಕವಾಗಿ ಒಂದು ನಾಗರಿಕ ಶಕ್ತಿಯಾಗಿ ಭಾರತದ ಸ್ಥಾನಮಾನವನ್ನು ಮರುಸ್ಥಾಪಿಸುವ ಭರವಸೆ ನೀಡಲಿದೆ. ಆಥವಾ…

* ಸ್ವತಂತ್ರ ಭಾರತದ ಜಾತ್ಯತೀತ ಆದರ್ಶವನ್ನು ದೃಢವಾಗಿ ಮೂಲೆಗೆ ತಳ್ಳುವಲ್ಲಿ ಹಿಂದೂತ್ವದ ಮುಸ್ಲಿಂ ವಿರೋಧಿ ಆಷಾಢಭೂತಿ ಸಿದ್ಧಾಂತದ ಯಶಸ್ವಿ ಬಳಕೆಯನ್ನು ಪ್ರತಿಫಲಿಸುತ್ತದೆ. ಇದು ಎಷ್ಟರಮಟ್ಟಿಗೆ ಎಂದರೆ, ಅದು ದೇಶದ ಸಾಂಸ್ಕೃತಿಕ ಸಂರಚನೆಯನ್ನೇ ಚಿಂದಿಮಾಡಿ, ಹಿಂದೂತ್ವದ ಗುಂಪು ಹಿಂಸಾಚಾರವು ಆಳುವವರ ಸಕ್ರಿಯ ಬೆಂಬಲ ಪಡೆಯುವಷ್ಟರ ಮಟ್ಟಿಗೆ. ಮೋದಿಯ ರಾಜಕೀಯ ಉತ್ಥಾನಕ್ಕೆ ಕಾರಣವಾದ ಆರ್ಥಿಕ ಮತ್ತು ಅಭಿವೃದ್ಧಿಯ ಭರವಸೆಗಳು ನುಚ್ಚುನೂರಾಗಿದ್ದರೂ ಬಹುಸಂಖ್ಯಾತ ಹಿಂದೂಗಳ ಗಮನವೇ ಆ ಕಡೆಗೆ ಹೋಗದಂತೆ ಯಶಸ್ವಿಯಾಗಿ ಮಾಡುವಷ್ಟು.

ಹಿಂದೂತ್ವದ ಗುಂಪುಗಳು 1992ರಲ್ಲಿ ನೆಲಸಮ ಮಾಡಿದ ಮಧ್ಯಯುಗೀನ ಬಾಬ್ರಿ ಮಸೀದಿಯಿದ್ದ ಜಾಗದಲ್ಲಿ ಕಟ್ಟಲಾಗುವ ರಾಮ ಮಂದಿರದ ಸಂಕೀರ್ಣ ಇತಿಹಾಸವನ್ನು ಮತ್ತೆ ವಿವರಿಸಲು ಹಲವಾರು ಪುಸ್ತಕಗಳು (ಅಥವಾ ಒಂದು ಗಮನಾರ್ಹವಾದ ಸಾಕ್ಷ್ಯಚಿತ್ರ) ಬೇಕಾದಾವು.

ವಿಷ್ಣುವಿನ ಅವತಾರಗಳಲ್ಲಿ ಒಂದೆಂದು ಹೇಳಲಾಗುವ ರಾಮನ ಜನ್ಮಸ್ಥಳವಿದು ಎಂದು ಹಿಂದೂತ್ವವಾದಿಗಳು ಹೇಳುವುದರೊಂದಿಗೆ, ಬಾಬ್ರಿ ಮಸೀದಿ ಇದ್ದ ಸ್ಥಳದ ಕುರಿತು ಹಿಂದೂಗಳು ಮತ್ತು ಮುಸ್ಲಿಮರು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಸಂಘರ್ಷ ನಡೆಸಿದ್ದಾರೆ. 1948ರಲ್ಲಿ ಹಿಂದೂತ್ವದ ಸಂಘಟನೆಗಳು ಇಲ್ಲಿ ರಾತೋರಾತ್ರಿ ರಾಮನ ಮೂರ್ತಿಯನ್ನು ಸ್ಥಾಪಿಸಿ, ಪರಿಣಾಮಕಾರಿಯಾಗಿ ಅದನ್ನೊಂದು ತಾತ್ಕಾಲಿಕ ರಾಮಮಂದಿರವನ್ನಾಗಿ ಮಾಡಿದುದು, ಈ ಜಾಗದ ಮಾಲಕತ್ವ ಯಾರದ್ದು ಎಂಬ ಕುರಿತು ಕೋರ್ಟ್ ಖಟ್ಲೆಗೆ ಕಾರಣವಾಗಿತ್ತು.

ನಂತರ 1980ರ ದಶಕದಲ್ಲಿ ಬಿಜೆಪಿ ಮತ್ತು ಅದರ ಮಾತೃ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಜನರ ಭಾವನೆಗಳನ್ನು ಕೆರಳಿಸುವ (ಆ ಮೂಲಕ ಹಿಂಸಾಚಾರ ಹುಟ್ಟಿಸುವ) ಸಲುವಾಗಿ ರಾಷ್ಟ್ರವ್ಯಾಪಿ ರಾಮಮಂದಿರ ನಿರ್ಮಾಣ ಅಭಿಯಾನ ಆರಂಭಿಸಿದುದು ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯ ಮತ್ತು 1992ರ ಡಿಸೆಂಬರ್ 6ರಂದು ಮಸೀದಿಯ ನಾಶಕ್ಕೆ ಕಾರಣವಾಗಿತ್ತು.

ತೊಡರಿನ ವಿಷಯಗಳಲ್ಲಿ ಒಂದು ಎಂದರೆ, ಕಾನೂನುಬಾಹಿರವಾಗಿ ನಾಶ ಮಾಡಲಾಗಿದೆ ಎಂದು ತಾನೇ ಹೇಳಿರುವ ಮಸೀದಿಯು ನಿಂತಿದ್ದ ಸ್ಥಳದಲ್ಲಿಯೇ ಮಂದಿರ ಕಟ್ಟುವುದಕ್ಕೆ ವಾಸ್ತವವಾಗಿ ಜವಾಬ್ದಾರನಾಗಿರುವ ಭಾರತದ ಸುಪ್ರೀಂಕೋರ್ಟಿನ ಪಾತ್ರ.

ಭಾರತೀಯ ಸುಪ್ರೀಂಕೋರ್ಟ್, ನ್ಯಾಯಾಂಗದ ಸ್ವಾತಂತ್ರ್ಯದ ಭಾವನೆಯ ನಡುವೆಯೂ ಭಾರತದ ಆ ಕ್ಷಣದ ಬಹುಸಂಖ್ಯಾತರ ಭಾವೊದ್ವೇಗದ ಪರವಾಗಿ ಬಾಗುವಂತೆ ತೋರಿತು. ಇಂತಹಾ ಪ್ರವೃತ್ತಿ ಕಳೆದ ಆರು ವರ್ಷಗಳಿಂದ ಹೆಚ್ಚಾಗುತ್ತಿದೆ.

ರಾಮಮಂದಿರ ನಿರ್ಮಾಣಕ್ಕೆ ಹಾದಿ ಸುಗಮ ಮಾಡಿಕೊಟ್ಟ 2019ರ ತೀರ್ಪು ಈ ಕೆಳಗಿನವುಗಳಿಗೆ ಪರಿಪೂರ್ಣ ಉದಾಹರಣೆಯಾಗಿದೆ:

* 1949ರಲ್ಲಿ ಮಸೀದಿಯೊಳಗೆ ಪ್ರತಿಮೆ ಇರಿಸಿದ್ದು ಮತ್ತು 1992ರಲ್ಲಿ ಗುಂಪು ಸೇರಿ ಮಸೀದಿ ಕೆಡವಿದ್ದು ಕಾನೂನುವಿರೋಧಿ ಎಂದು ನ್ಯಾಯಾಲಯವು ಕಂಡುಕೊಂಡಿತಾದರೂ, ಈ ಕಾನೂನುಬಾಹಿರ ಕೃತ್ಯಗಳಿಗೆ ಪ್ರೇರಣೆಯಾದ ನಂಬಿಕೆಗಳನ್ನು ಆ ಜಮೀನನ್ನು ಹಿಂದೂಗಳಿಗೆ ಹಸ್ತಾಂತರಿಸುವುದಕ್ಕೆ ಬಳಸಿಕೊಂಡಿತು.

* ಅದು ಆ ಜಮೀನನ್ನು ಹಿಂದೂ ಮತ್ತು ಮುಸ್ಲಿಮರ ನಡುವೆ ಹಂಚುವ ಕಲ್ಪನೆಯನ್ನು ತಿರಸ್ಕರಿಸಿತು. ಆದರೆ, ತನ್ನ ಕಾನೂನು ತರ್ಕವನ್ನು ಅದೇ ವಿಭಜನೆಯ ಆಧಾರದಲ್ಲಿ ಮಾಡಿತು.

* ಮುಸ್ಲಿಮರ ಕಕ್ಷಿಯು (ಪಕ್ಷವು) ಜಮೀನಿನ “ವಿಶೇಷ ಸ್ವಾಧೀನತೆ”ಯನ್ನು ಸಾಬೀತುಪಡಿಸುವಂತೆ ವಿಧಿಸಿತು. ಆದರೆ, ಹಿಂದೂ ಕಕ್ಷಿಗೆ (ಪಕ್ಷಕ್ಕೆ) ಇದೇ ಮಾನದಂಡವನ್ನು ಅನ್ವಯಿಸಲಿಲ್ಲ.

ರಾಮಮಂದಿರದ ನಿರ್ಮಾಣವು ಬಿಜೆಪಿಗೆ ಚುನಾವಣಾ ಲಾಭವನ್ನು ತರಬಹುದೆ? ಒಂದು ದೃಷ್ಟಿಕೋನವೆಂದರೆ, ಪ್ರತಿಕೂಲವಾಗಿ ಸುಪ್ರೀಂಕೋರ್ಟ್ ತೀರ್ಪು ಬಂದಿದ್ದರೆ ವಾಸ್ತವವಾಗಿ ಪಕ್ಷಕ್ಕೆ ಒಳ್ಳೆಯದನ್ನು ಮಾಡುತ್ತಿತ್ತು. ಯಾಕೆಂದರೆ, ತನ್ನ ಬೆಂಬಲಿಗರನ್ನು ಒಟ್ಟು ಸೇರಿಸಲು ಅದಕ್ಕೆ ಇನ್ನೊಂದು ಜನಪ್ರಿಯ ವಿಷಯ ಸಿಗುತ್ತಿತ್ತು. ಬದಲಾಗಿ ಮೋದಿಯ ಮಟ್ಟಿಗೆ ಇದು ಹೆಚ್ಚಾಗಿ ಉತ್ತರ ಭಾರತದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿ ಇರುವಂತೆಯೇ ಒಂದು ಚಳವಳಿಯ ಸಮಾಪ್ತಿಯಂತೆ ಕಾಣುತ್ತಿದೆ. ಮಂದಿರವು ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಪಕ್ಷಕ್ಕೆ ಹೆಚ್ಚುವರಿ ಬೆಂಬಲಿಗರನ್ನು ತಂದುಕೊಡುವ ಸಾಧ್ಯತೆಯಿಲ್ಲ. ಇದನ್ನು ಹೇಳುತ್ತಿರುವಂತೆಯೇ ಅದಿತಿ ಫಡ್ನವೀಸ್ ಮತ್ತು ಶಿಖಾ ಶಾಲಿನಿ ಇದು ಲಾಭ ತರಬಹುದಾದ ಬೇರೆಯವರನ್ನು ಸೂಚಿಸುತ್ತಾರೆ:

States cannot hire workers of the uttar pradesh without permission: Yogi Adityanath

“ಅಸ್ತಿತ್ವದ ಪ್ರಶ್ನೆ ಬದಿಗಿರಲಿ, ರಾಮಮಂದಿರದ ಪ್ರಮುಖ ಲಾಭ ಪಡೆಯುವಾತ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಆದಿತ್ಯನಾಥ ಎಂಬ ಬಗ್ಗೆ ಬಿಜೆಪಿ ಮತ್ತು ಆರೆಸ್ಸೆಸ್‌ನೊಳಗೆ ಸಹಮತವಿದೆ. ಆತ ವೈಯಕ್ತಿಕವಾಗಿ ಬ್ರಾಹ್ಮಣ ವಿರೋಧಿಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ಆತ ಬ್ರಾಹ್ಮಣ ವಿರೋಧಿ ಎಂಬ ಭಾವನೆ ಬ್ರಾಹ್ಮಣರಲ್ಲಿದೆ. ಮಂದಿರ ನಿರ್ಮಾಣ ಯೋಚನೆಯು ಆ ಕಲ್ಪನೆಯನ್ನು ಮರೆಮಾಚುತ್ತದೆ” ಎಂದು ರಾಮಮಂದಿರ ಚಳವಳಿಯ ಮುಂಚೂಣಿಯಲ್ಲಿದ್ದ ಗೋವಿಂದಾಚಾರ್ಯ ಹೇಳುತ್ತಾರೆ.

ಜಿ.ಬಿ. ಪಂತ್ ಸೋಷಿಯಲ್ ಸೈನ್ಸ್‌ ಇನ್ಸ್ಟಿಟ್ಯೂಟ್‌ನ ಪ್ರಾಧ್ಯಾಪಕ ಬದ್ರಿ ನಾರಾಯಣ್ ಅವರ ಪ್ರಕಾರ, “ಆದಿತ್ಯನಾಥ ಮಂದಿರ ನಿರ್ಮಾಣದ ಮೇಲುಸ್ತುವಾರಿ ನಡೆಸುತ್ತಾರೆ. ಮುಂದಿನ ಎರಡು ವರ್ಷಗಳ ಕಾಲ ಉತ್ಸಾಹವೂ ಇರುತ್ತದೆ. ಜನಕ್ರೋಢೀಕರಣವೂ ನಡೆಯಬಹುದು. ಇದರ ಲಾಭ ಅತನಿಗೇ ಹೋಗುತ್ತದೆ.”

ಇನ್ನೊಂದು ಎಳೆಯೆಂದರೆ, ವಾಸ್ತವವಾಗಿ 1980 ಮತ್ತು 1990ರ ದಶಕದಲ್ಲಿ ರಾಮಮಂದಿರ ಚಳವಳಿಯ ನಾಯಕತ್ವ ವಹಿಸಿದ್ದ ಬಿಜೆಪಿ ನಾಯಕರನ್ನು ಎಷ್ಟು ಸುಲಭವಾಗಿ ಬದಿಗೆ ಸರಿಸಲಾಯಿತು ಎಂಬುದು. ಈ ನಾಯಕರು 1984ರಲ್ಲಿ ಕೇವಲ ಎರಡು ಲೋಕಸಭಾ ಸ್ಥಾನಗಳನ್ನು ಹೊಂದಿದ್ದಲ್ಲಿಂದ 2014 ಮತ್ತು 2019ರಲ್ಲಿ ಭಾರೀ ಬಹುಮತ ಪಡೆಯಲು ಪಕ್ಷಕ್ಕೆ ನೆರವಾದವರು.

ರಾಮಮಂದಿರ ಚಳವಳಿ ಮತ್ತು ಅದು ಹುಟ್ಟುಹಾಕಿದ ಹಿಂಸಾಚಾರಕ್ಕೆ ಜವಾಬ್ದಾರರಾದ ಇಬ್ಬರು ನಾಯಕರಾದ ಎಲ್.ಕೆ. ಆಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅಯೋಧ್ಯೆಯ ಕಾರ್ಯಕ್ರಮದಲ್ಲಿ ಮೋದಿ ಜೊತೆ ನೇರವಾಗಿ ಭಾಗವಹಿಸದೇ, ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಅದೇನೇ ಇದ್ದರೂ, ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾಗೆ ಪಕ್ಷದ ನಿಯಂತ್ರಣ ಬಿಟ್ಟುಕೊಡಲು ಹಿಂದೇಟು ಹಾಕಿದಕ್ಕಾಗಿ ಅವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿದೆ ಎಂಬ ಭಾವನೆ ಬಲವಾಗಿ ಬೇರೂರಿದೆ.

ಇನ್ನೊಂದು ಕಡೆಯಲ್ಲಿ, ಬಿಜೆಪಿಯನ್ನು ನಿರಂತರವಾಗಿ ವಿರೋಧಿಸುವ ಮತ್ತು ಭಾರತದ ಜಾತ್ಯತೀತ ಆದರ್ಶಗಳ ರಕ್ಷಕನೆಂದು ಹೆಸರಿಗಾದರೂ ಭಾವಿಸಲಾಗುವ ಕಾಂಗ್ರೆಸ್ ಇದೆ. ಹಾಗಿದ್ದರೂ ಹಲವಾರು ರೀತಿಗಳಲ್ಲಿ ಮಂದಿರ ಪ್ರಕರಣವು ತೆಗೆದುಕೊಂಡ ತಿರುವುಗಳಿಗೆ ಅದು ಜವಾಬ್ದಾರ. ರಾಜೀವ್ ಗಾಂಧಿ ಪ್ರಧಾನಿಯಾದ ಬಳಿಕವಷ್ಟೇ ಬಾಬ್ರಿ ಮಸೀದಿಯ ಬೀಗ ತೆಗೆದು ಹಿಂದೂಗಳ ಪೂಜೆಗೆ ಅವಕಾಶ ಸಿಕ್ಕಿದ್ದು. ಕಾಂಗ್ರೆಸ್ ಈಗಲೂ ರಾಮಮಂದಿರ ನಿರ್ಮಾಣಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂಬ ಕುರಿತು ಸ್ಪಷ್ಟತೆ ಹೊಂದಿಲ್ಲ. ಇತರ ಪಕ್ಷಗಳು ಅದನ್ನು ಸ್ವಾಗತಿಸಿ, ತಮಗೆ ಆಹ್ವಾನ ನೀಡದಿರುವುದಕ್ಕಾಗಿ ದೂರುತ್ತಿದ್ದರೂ, ಕಾಂಗ್ರೆಸ್‌ನ ಉನ್ನತ ನಾಯಕತ್ವ ಮೌನವಾಗಿದೆ.

ಅಂತಿಮವಾಗಿ ಕಾಶ್ಮೀರದಿಂದ ಒಂದು ಅಭಿಪ್ರಾಯ. ನನ್ನ ಸಹೋದ್ಯೋಗಿ ಇಪ್ಸಿತಾ ಚಕ್ರವರ್ತಿ ಬರೆಯುತ್ತಾರೆ:

“ವಿಧಿ 370ನ್ನು ಕಿತ್ತುಹಾಕುವುದು ಮತ್ತು ರಾಮ ಮಂದಿರ ನಿರ್ಮಾಣ ಯಾವತ್ತೂ ಬಿಜೆಪಿಯ ಪ್ರಮುಖ ಕಾರ್ಯಕ್ರಮವಾಗಿತ್ತು. ಆದುದರಿಂದ, ವಿಧಿ 370ನ್ನು ಕಿತ್ತುಹಾಕಿದ ವಾರ್ಷಿಕ ದಿನದಂದೇ ಅಯೋಧ್ಯೆಯ ಕಾರ್ಯಕ್ರಮ ನಡೆಸುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಹೆಚ್ಚಿನ ಕಾಶ್ಮೀರಿಗಳ ಮಟ್ಟಿಗೆ ಇದೊಂದು ಉದ್ದೇಶಪೂರ್ವಕ ಯೋಜನೆ. ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ನೆಲಸಮ ಮಾಡಿದ ವಾರ್ಷಿಕ ದಿನದಂದೇ, ಬಾಬ್ರಿ ಮಸೀದಿ ನೆಲಸಮ ಮಾಡಿದ ಸ್ಥಳದಲ್ಲಿಯೇ ರಾಮಮಂದಿರ ನಿರ್ಮಾಣ ಕಾರ್ಯದ ಉದ್ಘಾಟನೆ ಮಾಡುವುದರ ಹಿಂದಿರುವ ಸಂದೇಶ ಗಟ್ಟಿಯಾಗಿದೆ ಮತ್ತು ಸ್ಪಷ್ಟವಾಗಿದೆ.”

ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವುದರಿಂದ ಈ ಪ್ರದೇಶಕ್ಕೆ ಅಭಿವೃದ್ಧಿ ಬರುವುದು, ದೇಶದ ಇತರ ಕಡೆಗಳಲ್ಲಿ ನಾಗರಿಕರು ಅನುಭವಿಸುತ್ತಿರುವ ಹಕ್ಕುಗಳು ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೂ ಸಿಗುವುದು ಎಂದು ಕೇಂದ್ರ ಸರಕಾರ ವಾದಿಸಿತ್ತು. ಆದರೆ, ಈ ವಾದವನ್ನು ಒಪ್ಪಿಕೊಳ್ಳುವವರು ಕಾಶ್ಮೀರದಲ್ಲಿ ಯಾರೂ ಇಲ್ಲ.

ವಿಶೇಷ ರಕ್ಷಣೆ, ಸ್ಥಾನಮಾನದ ಹಿಂತೆಗೆತವು ಮುಸ್ಲಿಂ ಬಾಹುಳ್ಯದ ಕಣಿವೆಯಲ್ಲಿ ಜನಸಂಖ್ಯಾ ಸ್ವರೂಪವನ್ನು ಬದಲಿಸುವುದಕ್ಕೆ ಮುನ್ನುಡಿ ಮತ್ತು ದೇಶದ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯದ ಸ್ವರೂಪದ ಮೇಲೆ ನಡೆಯುತ್ತಿರುವ ಹಿಂದೂ ಬಹುಸಂಖ್ಯಾತ ದಾಳಿ ಎಂದೇ ಇಲ್ಲಿನ ನಿವಾಸಿಗಳು ಭಾವಿಸುತ್ತಾರೆ.

ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮವು ಈ ಭಾವನೆಯನ್ನು ದೃಢ ನಂಬಿಕೆಯಾಗಿ ಪರಿವರ್ತಿಸಿದೆ.

ರೋಹನ್ ವೆಂಕಟರಾಮಕೃಷ್ಣನ್, ಸ್ಕ್ರೋಲ್.ಇನ್

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: 370 ನೇ ವಿಧಿ ರದ್ಧತಿಯ ಮೊದಲ ವಾರ್ಷಿಕೋತ್ಸವಕ್ಕೆ ಮುಂಚೆಯೇ ಶ್ರೀನಗರದಲ್ಲಿ ಮತ್ತೆ ಕರ್ಫ್ಯೂ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...