Homeಅಂತರಾಷ್ಟ್ರೀಯ15 ಲಕ್ಷ ಇಟಾಲಿಯನ್ನರು ಕೊರೊನಾ ವೈರಸ್ ಹೊಂದಿದ್ದರು ಎಂದ ’ಆಂಟಿಬಾಡಿ ಟೆಸ್ಟ್‌’

15 ಲಕ್ಷ ಇಟಾಲಿಯನ್ನರು ಕೊರೊನಾ ವೈರಸ್ ಹೊಂದಿದ್ದರು ಎಂದ ’ಆಂಟಿಬಾಡಿ ಟೆಸ್ಟ್‌’

ಅಧೀಕೃತವಾಗಿ ಇದುವರೆಗು 2.48 ಲಕ್ಷ ಜನರು ಕೊರೊನಾ ಪಾಸಿಟವ್ ಆಗಿದ್ದಾರೆ ಎಂದು ವರದಿ ಬಂದಿದೆ.

- Advertisement -
- Advertisement -

ಸುಮಾರು 65,000 ಇಟಾಲಿಯನ್ನರ ಮೇಲೆ ನಡೆಸಿದ ರಾಷ್ಟ್ರವ್ಯಾಪಿ ಪ್ರತಿಕಾಯ ಪರೀಕ್ಷೆಗಳ (ಆಂಟಿಬಾಡಿ ಟೆಸ್ಟ್) ಫಲಿತಾಂಶಗಳು ಸುಮಾರು 15 ಲಕ್ಷ ವ್ಯಕ್ತಿಗಳು ಅಥವಾ ಜನಸಂಖ್ಯೆಯ 2.5% ಜನರು ಕೊರೊನಾ ವೈರಸ್ ಹೊಂದಿದ್ದಾರೆಂದು ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಆ ಅಂಕಿ ಅಂಶವು ಇಟಲಿಯ ಅಧಿಕೃತ ವೈರಸ್ ಸಂಖ್ಯೆಯಲ್ಲಿ ದೃಡಪಡಿಸಿದ ಪ್ರಕರಣಗಳ ಸಂಖ್ಯೆಗಿಂತ ಆರು ಪಟ್ಟು ಹೆಚ್ಚಾಗಿದೆ. ದೇಶದ ಒಟ್ಟಾರೆ ಸಾವಿನ ಸಂಖ್ಯೆ 35,000 ಕ್ಕಿಂತಲೂ ಹೆಚ್ಚಾಗಿದೆ. ಇದು 2.3% ಅಂದಾಜು ಮರಣ ಪ್ರಮಾಣವಾಗಿದೆ.

ವೈಜ್ಞಾನಿಕ ಸರ್ಕಾರಿ ಸಲಹೆಗಾರರಾದ ಡಾ. ಫ್ರಾಂಕೊ ಲೊಕಾಟೆಲ್ಲಿ, ದೇಶಾದ್ಯಂತ ವೈರಸ್‌ನ ಪ್ರಸರಣವನ್ನು ಅರ್ಥಮಾಡಿಕೊಳ್ಳಲು ಈ ಪರೀಕ್ಷೆಗಳನ್ನು ವಿನ್ಯಾಸಗೊಳಿಸಲಾಗಿದೆ, ಪ್ರತಿಕಾಯಗಳನ್ನು ಹೊಂದಿರುವ ಇಟಾಲಿಯನ್ನರು ವೈರಸ್‌ನಿಂದ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ಫಲಿತಾಂಶಗಳಲ್ಲಿನ ಭಾರಿ ಭೌಗೋಳಿಕ ವ್ಯತ್ಯಾಸವಿದ್ದು, ಲೊಂಬಾರ್ಡಿಯಲ್ಲಿನ 7% ರಷ್ಟು ನಿವಾಸಿಗಳು ಸಿಸಿಲಿಯಲ್ಲಿ 0.3% ರಷ್ಟು ಜನ ವೈರಸ್ ಹೊಂದಿದ್ದಾರೆ. ಅಲ್ಲದೆ ಇಟಲಿಯ ಮೂರು ತಿಂಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ದೇಶದ ಕೆಲವು ಭಾಗಗಳಲ್ಲಿ ವೈರಸ್‌ ಹರಡುವುದನ್ನು ತಪ್ಪಸಿದೆ ಎಂದು ಅವರು ಹೇಳಿದ್ದಾರೆ.

ಇಟಲಿಯಲ್ಲಿ ಅಧೀಕೃತವಾಗಿ ಇದುವರೆಗು 2.48 ಲಕ್ಷ ಜನರು ಕೊರೊನಾ ಪಾಸಿಟವ್ ಆಗಿದ್ದಾರೆ ಎಂದು ವರದಿಯಾಗಿದೆ.


ಓದಿ: BCG ಲಸಿಕೆ ಕೊರೊನಾ ಹರಡುವಿಕೆಯನ್ನು ನಿಧಾನಗೊಳಿಸಬಹುದು: ವಿಜ್ಞಾನಿಗಳ ಸಂಶೋಧನೆ


ವಿಡಿಯೋ ನೋಡಿ:

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಹಿಡಿದು ತಮಿಳುನಾಡಿನ ರೈತರಿಂದ ಪ್ರತಿಭಟನೆ

0
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಸುಮಾರು 200ರೈತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ತಮಿಳುನಾಡಿನಿಂದ ದೆಹಲಿಗೆ ಹೊತ್ತೊಯ್ದಿದ್ದಾರೆ. ಕೃಷಿಯಲ್ಲಿ...