ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಜನವರಿ 22ರಂದು ನಡೆಯಲಿದೆ. ಅದಕ್ಕೂ ಮುನ್ನ ಇಂದು (ಡಿ.30) ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ಹೊಸ ರೈಲು ಮತ್ತು ವಿಮಾನ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಿದ್ದಾರೆ.
ಈ ಕಾರ್ಯಕ್ರಮದ ಸಲುವಾಗಿ ಮೋದಿ ಅಯೋಧ್ಯೆಗೆ ತೆರಳಿದ್ದಾಗ ಬಾಬಾರಿ ಮಸೀದಿಯ ಪರ ಅರ್ಜಿದಾರ ಇಕ್ಬಾಲ್ ಅನ್ಸಾರಿ ಮೋದಿಗೆ ಹೂ ಹಾಕಿ ಸ್ವಾಗತಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಮಜನ್ಮಭೂಮಿ ಮತ್ತು ಅಯೋಧ್ಯೆ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದ್ದಾಗ ಬಾಬರಿ ಮಸೀದಿ ಅಥವಾ ಮುಸ್ಲಿಮರ ಪರ ದಾವೆ ಹೂಡಿದವರಲ್ಲಿ ಇಕ್ಬಾಲ್ ಅನ್ಸಾರಿ ಪ್ರಮುಖರು. ಇಂದು ಅವರು ರಾಮ ಮಂದಿರ ಉದ್ಘಾಟನೆಯ ಭಾಗವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.
ಪ್ರಧಾನಿ ಮೋದಿ ಆಯೋಧ್ಯೆಗೆ ತಲುಪುತ್ತಿದ್ದಂತೆ ಇಕ್ಬಾಲ್ ಅನ್ಸಾರಿ ಹೂವಿನ ಸ್ವಾಗತ ಕೋರಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅನ್ಸಾರಿ, “ಅಯೋಧ್ಯೆಯ ಭೂಮಿ ಅತ್ಯಂತ ಮಹತ್ವದ್ದು. ಇಂದು ಪ್ರಧಾನಿ ಮೋದಿ ನಮ್ಮ ಊರಿಗೆ ಬಂದಿದ್ದಾರೆ. ಬಂದ ಅತಿಥಿಗಳನ್ನು ಸ್ವಾಗತಿಸುವುದು ನಮ್ಮ ಕರ್ತವ್ಯ” ಎಂದಿದ್ದಾರೆ.
#WATCH | Former Litigant in Ayodhya land dispute case advocate Iqbal Ansari says, " Ayodhya's land is unparalleled. Today PM Modi has come to our place, it is our duty to welcome guests…" pic.twitter.com/pr4NEUsHYF
— ANI (@ANI) December 30, 2023
ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸಮ್ಮುಖದಲ್ಲಿ ‘ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ವನ್ನು ಇಂದು ಉದ್ಘಾಟಿಸಿದ್ದಾರೆ.
ಇದರ ಜೊತೆಗೆ ನೂತನ ಅಯೋಧ್ಯಾ ಧಾಮ್ ರೈಲು ನಿಲ್ದಾಣದಿಂದ ಎರಡು ಹೊಸ ಅಮೃತ್ ಭಾರತ್ ರೈಲುಗಳು ಮತ್ತು ಆರು ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದಾರೆ.
ಇದನ್ನೂ ಓದಿ : ಶೇ.90ರಷ್ಟು ಮುಸ್ಲಿಮರಿರುವ ಇಂಡೋನೇಷ್ಯಾದಲ್ಲೂ ಇಲ್ಲ ರೋಹಿಂಗ್ಯನ್ನರಿಗೆ ಆಶ್ರಯ


