28 ವರ್ಷದ ಹಿಂದೆ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರಬಿದ್ದಿದ್ದು, ನ್ಯಾಯಾಲಯವು ಮಸೀದಿಯ ಧ್ವಂಸವು ಪೂರ್ವನಿರ್ಧರಿತ ಅಲ್ಲವೆಂದು ಹೇಳಿ ಎಲ್ಲಾ ಆರೋಪಿಗಳನ್ನು ದೋಷ ಮುಕ್ತಗೊಳಿಸಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ “ಹಾಗಾದರೆ ಬಾಬರಿಯನ್ನು ಯಾರು ಧ್ವಂಸ ಮಾಡಿಲ್ಲ?” (#NoOneDemolishedBabriMasjid) ಎಂದು ಪ್ರಶ್ನೆಗಳ ಸುರಿಮಳೆ ಪ್ರಾರಂಭವಾಗಿದೆ.
ಅಷ್ಟೇ ಅಲ್ಲದೆ ತೀರ್ಪಿನ ಬಗ್ಗೆ ಹಲವಾರು ಜನರು ಇನ್ನಷ್ಟು ಪ್ರಶ್ನೆಗಳನ್ನು ಎತ್ತಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸಿಪಿಐಎಂ ಪಾಲಿಟ್ ಬ್ಯೂರೊ ಸದಸ್ಯ ಸೀತಾರಾಮ್ ಯಚೂರಿ, “ಇದು ಸಂಪೂರ್ಣ ನ್ಯಾಯದ ಅಣಕವಾಗಿದೆ. ಬಾಬರಿ ಮಸೀದಿಯನ್ನು ಕೆಡವಲು ಕ್ರಿಮಿನಲ್ ಪಿತೂರಿ ನಡೆಸಿರುವ ಆರೋಪಿಗಳನ್ನು ದೋಷ ಮುಕ್ತಗೊಳಿಸಲಾಗಿದೆ. ಅದು ತಾನಾಗಿಯೆ ಬಿದ್ದು ಹೋಗಿದೆಯೆ? ಅಂದಿನ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಾಧೀಶರ ನೇತೃತ್ವದ ಸಂವಿಧಾನ ಪೀಠವು ಮಸೀದಿಯ ಧ್ವಂಸವೂ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಆದರೆ ಈಗ ಈ ತೀರ್ಪು!. ನಾಚಿಕೆಗೇಡು” ಎಂದು ಟ್ವೀಟ್ ಮಾಡಿದ್ದಾರೆ.
A complete travesty of Justice.
All charged with criminal conspiracy to demolish Babri Masjid acquitted.
It self imploded?
The Constitution Bench headed by then CJI had said that demolition was an “egregious” violation of law.
Now this verdict!
Shame.https://t.co/fAeTHwhhDg— Sitaram Yechury (@SitaramYechury) September 30, 2020
ಇದನ್ನೂ ಓದಿ: ಬಾಬರಿ ಮಸೀದಿ ದ್ವಂಸ ತೀರ್ಪು ಪ್ರಕಟಿಸಿದ ನ್ಯಾಯಾಲಯ: ಆರೋಪಿಗಳು ದೋಷಮುಕ್ತ
ಚಿಂತಕ ಶಿವಸುಂದರ್, “ಓ ನ್ಯಾಯಾಲಯವೇ, ನಿಮ್ಮ ದೊರೆಗಳು ಒಪ್ಪದವರ ಭಾಷಣಗಳ
ಪದದ ಪಕ್ಕ ಇರದ ಕಾಮಾ, ಫುಲ್ ಸ್ಟಾಪುಗಳನ್ನೇ, ಭಯೋತ್ಪಾದಕ ದೇಶದ್ರೋಹಿ ಸಂಚಿಗೆ ಪರಮ ಸಾಕ್ಷಿ
ಎಂದು ಪರಿಗಣಿಸುವ ನಿಮಗೆ, ವರ್ಷಾನುಗಟ್ಟಲೇ ನಡೆದ ರಕ್ತ ಸಿಕ್ತ ರಾಮರಥಯಾತ್ರೆ ಸಂಚೆಂದು ಕಾಣುವುದಿಲ್ಲವೇಕೆ?” ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ,
- ಪ್ರಾಸಿಕ್ಯೂಷನ್ ಒದಗಿಸಿದ 350 ಕ್ಕೂ ಹೆಚ್ಚು ಪುರಾವೆಗಳನ್ನು ಒಪ್ಪದ ನ್ಯಾಯಾಲಯ
- ಅಡ್ವಾನಿ ಮತ್ತಿತರರ ಪ್ರಚೋದನಕಾರಿ ಭಾಷಣಗಳ ವಿಡಿಯೋ ನಕಲಿ ಎಂದು ತಿರಸ್ಕರಿಸಿದ ನ್ಯಾಯಾಲಯ
- ಲಿಬರ್ಹಾನ್ ಕಮಿಷನ್ ಕೊಟ್ಟ ವರದಿಯನ್ನು ಕಣ್ಣೆತ್ತಿಯೂ ನೋಡದ ನ್ಯಾಯಾಲಯ
“ತಮ್ಮ ಪರವಾಗಿ ಆರೋಪಿಗಳು ಒಂದು ಸಾಕ್ಷಿಯನ್ನೂ ಹಾಜರು ಪಡಿಸದಿದ್ದರೂ, ಈ ಸತ್ಪುರುಷರು ಅಲ್ಲಿ ’ಮಸೀದೀಯನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದರು’ ಎಂದು ಕಂಡುಹಿಡಿದು ಬಿಡುಗಡೆ ಮಾಡಿದೆ ಹಾಗೂ ಮಸೀದಿಯನ್ನು ಅಲ್ಲಿದ್ದ ಯಾವ ಮನುಷ್ಯರೂ ನಾಶ ಮಾಡಿಲ್ಲವಾದ್ದರಿಂದ ಅದು “Act Of God” ಎಂದು ಪರೋಕ್ಷವಾಗಿ ಸೂಚಿಸಿದೆ. ಬಾಬ್ರಿ ಮಸೀದಿ ನಾಶ ಮಾಡಿದ್ದನ್ನು act of god ಎಂದು ಘೋಷಿಸಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಬಿಬಿಸಿ ಪತ್ರಕರ್ತ ಸೌತಿಕ್ ಬಿಸ್ವಾಸ್, “28 ವರ್ಷಗಳು, 850 ಸಾಕ್ಷಿಗಳು, 7,000 ಕ್ಕೂ ಹೆಚ್ಚು ದಾಖಲೆಗಳು, ಜೊತೆಗೆ 100 ವರದಿಗಳು, ಘಟನೆಯ ಛಾಯಾಚಿತ್ರಗಳು ಮತ್ತು ವಿಡಿಯೋ ಟೇಪ್‌ಗಳು, 49 ಆರೋಪಿಗಳು, ಹಲವಾರು ನ್ಯಾಯಾಲಯಗಳು. ಆದರೆ ಯಾವುದೇ ಶಿಕ್ಷೆಯಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
28 years, 850 witnesses, more than 7,000 documents, as well as 100 reports, photographs and video tapes of the incident, 49 accused, several courts. No punishment.#BabriVerdict https://t.co/dQpIdvIiBC
— Soutik Biswas (@soutikBBC) September 30, 2020
ದಿ ವೈರ್ ಪತ್ರಕರ್ತೆ ಅರ್ಫಾ ಖಾನುಂ ಶೇರ್‌ವಾನಿ, “ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಹಾಗಾದರೆ ಬಾಬರಿ ಮಸೀದಿಯನ್ನು ನೆಲಸಮ ಮಾಡಿದವರು ಯಾರು? ನಂತರದ ಗಲಭೆಯಲ್ಲಿ 1800 ಜನರನ್ನು ಕೊಂದವರು ಯಾರು? ಭಾರತದ ಆತ್ಮದ ಮೇಲೆ ಮಾಡಿದ ಅಪರಾಧಗಳಿಗೆ ಹೊಣೆ ಯಾರು?” ಎಂದು ಪ್ರಶ್ನಿಸಿದ್ದಾರೆ.
So all accused acquitted.
Then who demolished the Babri Masjid ?
Who killed the 1800 people in the riots that followed ?
Who is responsible for the crimes committed on the soul of India ?— Arfa Khanum Sherwani (@khanumarfa) September 30, 2020
SFI ಪ್ರಧಾನ ಕಾರ್ಯದರ್ಶಿ ಮಯುಕ್ ಬಿಸ್ವಾಸ್, “ಆ ದಿನ … ಅವರು ಸಂತೋಷದಿಂದ ಮುಳುಗಿದ್ದರು, ಇಂದು ಸಹ. ಈ ಮಧ್ಯೆ, ನನ್ನ ದೇಶದ ಚೈತನ್ಯವನ್ನು ಮಾತ್ರ ಸೋಲಿಸಲಾಗಿದೆ!” ಎಂದು ಅಡ್ವಾನಿ ಸೇರಿದಂತೆ ಹಲವಾರು ಜನರು ಖುಷಿಯಿಂದ ಇರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ.
That day…They were overwhelmed with joy. Today also…. They are.
In the meantime, only the spirit of my country is defeated! #BabriVerdict #BabriMasjidDemolition pic.twitter.com/A7qDeZgUrE
— Mayukh Biswas (@MayukhDuke) September 30, 2020
ಇದನ್ನೂ ಓದಿ: ಹಿಂದುತ್ವದ ಬೆಳವಣಿಗೆ: ಮೇಲ್ಜಾತಿಗಳ ಧ್ರುವೀಕರಣದ ಬಂಡಾಯವೇ? – ಜಾನ್ ಡ್ರೀಜ್ ವಿಶೇಷ ಲೇಖನ
ಪತ್ರಕರ್ತ ಸಾಹಿಲ್ ಮುರುಳಿ ಮೇಂಗಾನಿ, “ಎಲ್.ಕೆ.ಅಡ್ವಾಣಿ ಸೇರಿದಂತೆ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಆದರೆ ’ಎಲ್ಲೆಲ್ಲಿ ಕಳೆ ಇದಿಯೋ ಅದನ್ನೆಲ್ಲಾ ತೆಗೆದು ಹಾಕುತ್ತೇವೆ’ ಎಂದು ಕಾಶಿ ಮತ್ತು ಮಥುರಾ ಬಗ್ಗೆ ‘ಆಚಾರ್ಯ’ ಧರ್ಮೇಂದ್ರ ಹೇಳುತ್ತಾರೆ. ಧರ್ಮೇಂದ್ರ ಬಾಬರಿ ಧ್ವಂಸ ಪ್ರಕರಣದಲ್ಲಿ ಖುಲಾಸೆಗೊಂಡ 32 ಆರೋಪಿಗಳಲ್ಲಿ ಒಬ್ಬ. ಅವರನ್ನು ಖುಲಾಸೆಗೊಳಿಸಿದ ನ್ಯಾಯಾಲಯದ ಹೊರಗೆ ಅವರು ಈ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯವು ಟ್ವೀಟ್ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿತು. ಆದರೆ ಇದನ್ನು ಅಲ್ಲ?” ಎಂದು ಟ್ವೀಟ್ ಮಾಡಿದ್ದಾರೆ.
'Jaha-Jaha daag hain wo sab hataye jayenge,' says 'Acharya' Dharmendra about Kashi & Mathura.
He is one of the 32 accused acquitted in #BabriVerdict.
He has made this remark right outside the court which acquitted him. Court took suo-moto cognizance of a tweet, but not of this?
— Saahil Murli Menghani (@saahilmenghani) September 30, 2020
ಬರಹಗಾರ ಸಂಶೋಧಕ ಸಂಜುಕ್ತ ಬಸು, “ಡಿಸೆಂಬರ್ ತಿಂಗಳ ಚಳಿಯ ಒಂದು ದಿನ ಬಾಬರಿ ಮಸೀದಿ ಸ್ವಯಂ ಸ್ಫೋಟಗೊಂಡಿತು” ಎಂದು ಬರೆದಿದ್ದಾರೆ.
Breaking news. #BabriMasjid self exploded on a cold December day.
— Sanjukta Basu (@sanjukta) September 30, 2020
ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, “ಬಾಬರಿ ಮಸೀದಿ ಧ್ವಂಸ ಪ್ರಕರಣದ 2,000 ಪುಟಗಳ ತೀರ್ಪು ಎಲ್ಲ ತಪ್ಪಿತಸ್ಥರನ್ನು ದೋಷಮುಕ್ತಗೊಳಿಸಿದೆ! ಭಾರತೀಯ ಸಂವಿಧಾನಕ್ಕೆ ಶ್ರದ್ದಾಂಜಲಿ” ಎಂದು ಟ್ವೀಟ್ ಮಾಡಿದ್ದಾರೆ.
Breaking : A 2,000 page judgement acquits all Guilty in the Babri Masjid Demolition Case! RIP Indian Constitution #BabriMasjid #BabriMasjidDemolition #BabriVerdict #BabriVerdict
— Teesta Setalvad (@TeestaSetalvad) September 30, 2020
ಸಾಮಾಜಿಕ ಕಾರ್ಯಕರ್ತ ಗೌರವ್ ಅವರು ಮಾಜಿ ಪ್ರಧಾನಿ ವಾಜಪೇಯಿ ಮಾತನಾಡುವ ವಿಡಿಯೋ ಒಂದನ್ನು ಹಾಕಿ “ಈ ಭಾಷಣವು ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಮೊದಲು ಸಂಜೆ ವಾಜಪೇಯಿ ಮಾಡಿದ್ದಾಗಿದ್ದು, ಅದರಲ್ಲಿ ಆರೆಸ್ಸೆಸ್ ಗೂಂಡಾಗಳಿಗೆ ಮಸೀದಿಯನ್ನು ಕೆಡವಬೇಕೆಂದು ಸೂಚಿಸಿ, ’ಪ್ರದೇಶವನ್ನು ನೆಲಸಮ ಮಾಡಬೇಕು’ ಎಂದಿದ್ದರು. ಕಾನೂನಿನ ಕಣ್ಣು ಕುರುಡು ಎಂದು ಹೇಳಲಾಗುತ್ತದೆ, ಆದರೆ ಅದಕ್ಕೆ ಕಣ್ಣು ಕಾಣುವುದಿಲ್ಲ ಹಾಗೂ ಕಿವಿಯೂ ಕೇಳುವುದಿಲ್ಲ ಎಂದು ನನಗೆ ತಿಳಿದಿರಲಿಲ್ಲ!” ಎಂದು ಬರೆದಿದ್ದಾರೆ.
In this speech, given on the evening before #BabriMasjid was demolished, Vajpayee indicated to the RSS goons that the Majid should be demolished.
'Zameen ko samtal karna padega'
We were told LAW IS BLIND, but I didn't know it were DEAF & DUMB too! pic.twitter.com/GQo4ST77Gf
— Gaurav Pandhi (@GauravPandhi) September 30, 2020
#BabriMasjid demolition was not "Pre Planned". But don't forget whatever happened and was done after that was "Well Planned".#BabriDemolitionCase
— Sushant Sinha (@SushantBSinha) September 30, 2020
ಇದನ್ನೂ ಓದಿ: ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.
ವಿಡಿಯೋ ನೋಡಿ:


