Homeಮುಖಪುಟಡಿಸೆಂಬರ್‌ ಚಳಿಯ ಒಂದು ದಿನ ಬಾಬರಿ ಮಸೀದಿ ಸ್ವಯಂ ಸ್ಫೋಟಗೊಂಡಿತು: ತೀರ್ಪು ವಿರುದ್ದ ಟ್ವಿಟ್ಟರ್‌‌ನಲ್ಲಿ ಆಕ್ರೋಶ

ಡಿಸೆಂಬರ್‌ ಚಳಿಯ ಒಂದು ದಿನ ಬಾಬರಿ ಮಸೀದಿ ಸ್ವಯಂ ಸ್ಫೋಟಗೊಂಡಿತು: ತೀರ್ಪು ವಿರುದ್ದ ಟ್ವಿಟ್ಟರ್‌‌ನಲ್ಲಿ ಆಕ್ರೋಶ

’ಹಾಗಾದರೆ ಬಾಬರಿಯನ್ನು ಯಾರು ಧ್ವಂಸ ಮಾಡಿಲ್ಲ?’ #NoOneDemolishedBabriMasjid ಎಂದು ಟ್ವಿಟ್ಟರ್‌‌ನಲ್ಲಿ ಪ್ರಶ್ನೆಗಳ ಸುರಿಮಳೆ ಪ್ರಾರಂಭವಾಗಿದೆ.

- Advertisement -
- Advertisement -

28 ವರ್ಷದ ಹಿಂದೆ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರಬಿದ್ದಿದ್ದು, ನ್ಯಾಯಾಲಯವು ಮಸೀದಿಯ ಧ್ವಂಸವು ಪೂರ್ವನಿರ್ಧರಿತ ಅಲ್ಲವೆಂದು ಹೇಳಿ ಎಲ್ಲಾ ಆರೋಪಿಗಳನ್ನು ದೋಷ ಮುಕ್ತಗೊಳಿಸಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ “ಹಾಗಾದರೆ ಬಾಬರಿಯನ್ನು ಯಾರು ಧ್ವಂಸ ಮಾಡಿಲ್ಲ?” (#NoOneDemolishedBabriMasjid) ಎಂದು ಪ್ರಶ್ನೆಗಳ ಸುರಿಮಳೆ ಪ್ರಾರಂಭವಾಗಿದೆ.

ಅಷ್ಟೇ ಅಲ್ಲದೆ ತೀರ್ಪಿನ ಬಗ್ಗೆ ಹಲವಾರು ಜನರು ಇನ್ನಷ್ಟು ಪ್ರಶ್ನೆಗಳನ್ನು ಎತ್ತಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸಿಪಿಐಎಂ ಪಾಲಿಟ್ ಬ್ಯೂರೊ ಸದಸ್ಯ ಸೀತಾರಾಮ್ ಯಚೂರಿ, “ಇದು ಸಂಪೂರ್ಣ ನ್ಯಾಯದ ಅಣಕವಾಗಿದೆ. ಬಾಬರಿ ಮಸೀದಿಯನ್ನು ಕೆಡವಲು ಕ್ರಿಮಿನಲ್ ಪಿತೂರಿ ನಡೆಸಿರುವ ಆರೋಪಿಗಳನ್ನು ದೋಷ ಮುಕ್ತಗೊಳಿಸಲಾಗಿದೆ. ಅದು ತಾನಾಗಿಯೆ ಬಿದ್ದು ಹೋಗಿದೆಯೆ? ಅಂದಿನ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಾಧೀಶರ ನೇತೃತ್ವದ ಸಂವಿಧಾನ ಪೀಠವು ಮಸೀದಿಯ ಧ್ವಂಸವೂ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಆದರೆ ಈಗ ಈ ತೀರ್ಪು!. ನಾಚಿಕೆಗೇಡು” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬಾಬರಿ ಮಸೀದಿ ದ್ವಂಸ ತೀರ್ಪು ಪ್ರಕಟಿಸಿದ ನ್ಯಾಯಾಲಯ: ಆರೋಪಿಗಳು ದೋಷಮುಕ್ತ

ಚಿಂತಕ ಶಿವಸುಂದರ್‌, “ಓ ನ್ಯಾಯಾಲಯವೇ, ನಿಮ್ಮ ದೊರೆಗಳು ಒಪ್ಪದವರ ಭಾಷಣಗಳ
ಪದದ ಪಕ್ಕ ಇರದ ಕಾಮಾ, ಫುಲ್ ಸ್ಟಾಪುಗಳನ್ನೇ, ಭಯೋತ್ಪಾದಕ ದೇಶದ್ರೋಹಿ ಸಂಚಿಗೆ ಪರಮ ಸಾಕ್ಷಿ
ಎಂದು ಪರಿಗಣಿಸುವ ನಿಮಗೆ, ವರ್ಷಾನುಗಟ್ಟಲೇ ನಡೆದ ರಕ್ತ ಸಿಕ್ತ ರಾಮರಥಯಾತ್ರೆ ಸಂಚೆಂದು ಕಾಣುವುದಿಲ್ಲವೇಕೆ?” ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ,

  • ಪ್ರಾಸಿಕ್ಯೂಷನ್ ಒದಗಿಸಿದ 350 ಕ್ಕೂ ಹೆಚ್ಚು ಪುರಾವೆಗಳನ್ನು ಒಪ್ಪದ ನ್ಯಾಯಾಲಯ
  • ಅಡ್ವಾನಿ ಮತ್ತಿತರರ ಪ್ರಚೋದನಕಾರಿ ಭಾಷಣಗಳ ವಿಡಿಯೋ ನಕಲಿ ಎಂದು ತಿರಸ್ಕರಿಸಿದ ನ್ಯಾಯಾಲಯ
  • ಲಿಬರ್ಹಾನ್ ಕಮಿಷನ್ ಕೊಟ್ಟ ವರದಿಯನ್ನು ಕಣ್ಣೆತ್ತಿಯೂ ನೋಡದ ನ್ಯಾಯಾಲಯ

“ತಮ್ಮ ಪರವಾಗಿ ಆರೋಪಿಗಳು ಒಂದು ಸಾಕ್ಷಿಯನ್ನೂ ಹಾಜರು ಪಡಿಸದಿದ್ದರೂ, ಈ ಸತ್ಪುರುಷರು ಅಲ್ಲಿ ’ಮಸೀದೀಯನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದರು’ ಎಂದು ಕಂಡುಹಿಡಿದು ಬಿಡುಗಡೆ ಮಾಡಿದೆ ಹಾಗೂ ಮಸೀದಿಯನ್ನು ಅಲ್ಲಿದ್ದ ಯಾವ ಮನುಷ್ಯರೂ ನಾಶ ಮಾಡಿಲ್ಲವಾದ್ದರಿಂದ ಅದು “Act Of God” ಎಂದು ಪರೋಕ್ಷವಾಗಿ ಸೂಚಿಸಿದೆ. ಬಾಬ್ರಿ ಮಸೀದಿ ನಾಶ ಮಾಡಿದ್ದನ್ನು act of god ಎಂದು ಘೋಷಿಸಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಬಿಬಿಸಿ ಪತ್ರಕರ್ತ ಸೌತಿಕ್ ಬಿಸ್ವಾಸ್, “28 ವರ್ಷಗಳು, 850 ಸಾಕ್ಷಿಗಳು, 7,000 ಕ್ಕೂ ಹೆಚ್ಚು ದಾಖಲೆಗಳು, ಜೊತೆಗೆ 100 ವರದಿಗಳು, ಘಟನೆಯ ಛಾಯಾಚಿತ್ರಗಳು ಮತ್ತು ವಿಡಿಯೋ ಟೇಪ್‌ಗಳು, 49 ಆರೋಪಿಗಳು, ಹಲವಾರು ನ್ಯಾಯಾಲಯಗಳು. ಆದರೆ ಯಾವುದೇ ಶಿಕ್ಷೆಯಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ದಿ ವೈರ್‌ ಪತ್ರಕರ್ತೆ ಅರ್ಫಾ ಖಾನುಂ ಶೇರ್‌ವಾನಿ, “ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಹಾಗಾದರೆ ಬಾಬರಿ ಮಸೀದಿಯನ್ನು ನೆಲಸಮ ಮಾಡಿದವರು ಯಾರು? ನಂತರದ ಗಲಭೆಯಲ್ಲಿ 1800 ಜನರನ್ನು ಕೊಂದವರು ಯಾರು? ಭಾರತದ ಆತ್ಮದ ಮೇಲೆ ಮಾಡಿದ ಅಪರಾಧಗಳಿಗೆ ಹೊಣೆ ಯಾರು?” ಎಂದು ಪ್ರಶ್ನಿಸಿದ್ದಾರೆ.

SFI ಪ್ರಧಾನ ಕಾರ್ಯದರ್ಶಿ ಮಯುಕ್ ಬಿಸ್ವಾಸ್, “ಆ ದಿನ … ಅವರು ಸಂತೋಷದಿಂದ ಮುಳುಗಿದ್ದರು, ಇಂದು ಸಹ. ಈ ಮಧ್ಯೆ, ನನ್ನ ದೇಶದ ಚೈತನ್ಯವನ್ನು ಮಾತ್ರ ಸೋಲಿಸಲಾಗಿದೆ!” ಎಂದು ಅಡ್ವಾನಿ ಸೇರಿದಂತೆ ಹಲವಾರು ಜನರು ಖುಷಿಯಿಂದ ಇರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಹಿಂದುತ್ವದ ಬೆಳವಣಿಗೆ: ಮೇಲ್ಜಾತಿಗಳ ಧ್ರುವೀಕರಣದ ಬಂಡಾಯವೇ? – ಜಾನ್ ಡ್ರೀಜ್ ವಿಶೇಷ ಲೇಖನ

ಪತ್ರಕರ್ತ ಸಾಹಿಲ್ ಮುರುಳಿ ಮೇಂಗಾನಿ, “ಎಲ್.ಕೆ.ಅಡ್ವಾಣಿ ಸೇರಿದಂತೆ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಆದರೆ ’ಎಲ್ಲೆಲ್ಲಿ ಕಳೆ ಇದಿಯೋ ಅದನ್ನೆಲ್ಲಾ ತೆಗೆದು ಹಾಕುತ್ತೇವೆ’ ಎಂದು ಕಾಶಿ ಮತ್ತು ಮಥುರಾ ಬಗ್ಗೆ ‘ಆಚಾರ್ಯ’ ಧರ್ಮೇಂದ್ರ ಹೇಳುತ್ತಾರೆ. ಧರ್ಮೇಂದ್ರ ಬಾಬರಿ ಧ್ವಂಸ ಪ್ರಕರಣದಲ್ಲಿ ಖುಲಾಸೆಗೊಂಡ 32 ಆರೋಪಿಗಳಲ್ಲಿ ಒಬ್ಬ. ಅವರನ್ನು ಖುಲಾಸೆಗೊಳಿಸಿದ ನ್ಯಾಯಾಲಯದ ಹೊರಗೆ ಅವರು ಈ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯವು ಟ್ವೀಟ್‌ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿತು. ಆದರೆ ಇದನ್ನು ಅಲ್ಲ?” ಎಂದು ಟ್ವೀಟ್ ಮಾಡಿದ್ದಾರೆ.

ಬರಹಗಾರ ಸಂಶೋಧಕ ಸಂಜುಕ್ತ ಬಸು, “ಡಿಸೆಂಬರ್‌ ತಿಂಗಳ ಚಳಿಯ ಒಂದು ದಿನ ಬಾಬರಿ ಮಸೀದಿ ಸ್ವಯಂ ಸ್ಫೋಟಗೊಂಡಿತು” ಎಂದು ಬರೆದಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, “ಬಾಬರಿ ಮಸೀದಿ ಧ್ವಂಸ ಪ್ರಕರಣದ 2,000 ಪುಟಗಳ ತೀರ್ಪು ಎಲ್ಲ ತಪ್ಪಿತಸ್ಥರನ್ನು ದೋಷಮುಕ್ತಗೊಳಿಸಿದೆ! ಭಾರತೀಯ ಸಂವಿಧಾನಕ್ಕೆ ಶ್ರದ್ದಾಂಜಲಿ” ಎಂದು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಗೌರವ್ ಅವರು ಮಾಜಿ ಪ್ರಧಾನಿ ವಾಜಪೇಯಿ ಮಾತನಾಡುವ ವಿಡಿಯೋ ಒಂದನ್ನು ಹಾಕಿ “ಈ ಭಾಷಣವು ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಮೊದಲು ಸಂಜೆ ವಾಜಪೇಯಿ ಮಾಡಿದ್ದಾಗಿದ್ದು, ಅದರಲ್ಲಿ ಆರೆಸ್ಸೆಸ್ ಗೂಂಡಾಗಳಿಗೆ ಮಸೀದಿಯನ್ನು ಕೆಡವಬೇಕೆಂದು ಸೂಚಿಸಿ, ’ಪ್ರದೇಶವನ್ನು ನೆಲಸಮ ಮಾಡಬೇಕು’ ಎಂದಿದ್ದರು. ಕಾನೂನಿನ ಕಣ್ಣು ಕುರುಡು ಎಂದು ಹೇಳಲಾಗುತ್ತದೆ, ಆದರೆ ಅದಕ್ಕೆ ಕಣ್ಣು ಕಾಣುವುದಿಲ್ಲ ಹಾಗೂ ಕಿವಿಯೂ ಕೇಳುವುದಿಲ್ಲ ಎಂದು ನನಗೆ ತಿಳಿದಿರಲಿಲ್ಲ!” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಸುಪ್ರೀಮ್ ಕೋರ್ಟಿನ ನೇರ ಆದೇಶವನ್ನು ಜಾರಿಗೊಳಿಸುವಲ್ಲಿ ಭಾರತ ಸೋತಿದೆ.

ವಿಡಿಯೋ ನೋಡಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...