Homeಮುಖಪುಟಕೆಲವರು ಮುಂಬೈಗೆ ಬಂದು ದ್ರೋಹವೆಸಗುತ್ತಾರೆ: ಕಂಗನಾ ವಿರುದ್ಧ ಉದ್ಧವ್ ಠಾಕ್ರೆ ಕಿಡಿ

ಕೆಲವರು ಮುಂಬೈಗೆ ಬಂದು ದ್ರೋಹವೆಸಗುತ್ತಾರೆ: ಕಂಗನಾ ವಿರುದ್ಧ ಉದ್ಧವ್ ಠಾಕ್ರೆ ಕಿಡಿ

ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸುವುದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಡುವ ಅಪಮಾನ. ಏಕೆಂದರೆ ಮೋದಿಯವರು ಪಾಕ್ ಆಕ್ರಮಿತ ಪ್ರದೇಶವನ್ನು ಮರಳಿ ಪಡೆಯುವುದಾಗಿ ವಾಗ್ದಾನ ಮಾಡಿದ್ದಾರೆ.

- Advertisement -
- Advertisement -

ಬಾಲಿವುಡ್ ನಟಿ ಕಂಗನಾ ರಾಣಾವತ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವಿನ ವಾಕ್ಸಮರ ಮುಂದುವರೆದಿದೆ. ನಟ ಸುಶಾಂತ್ ಸಿಂಗ್ ರಜಪೂತ್‌ ಸಾವಿನಿಂದ ಆರಂಭಗೊಂಡ ಈ ಗುದ್ದಾಟ, ಏಮ್ಸ್ ವೈದ್ಯರು ಅದು ಆತ್ಮಹತ್ಯೆ ಎಂದು ಪ್ರತಿಪಾದಿಸಿದರೂ ಸಹ ಇನ್ನು ನಿಂತಿಲ್ಲ.

ನಿನ್ನೆ ಉದ್ಧವ್ ಠಾಕ್ರೆ ಕಂಗನಾ ಹೆಸರೇಳದೆ ಅವರನ್ನು ಟೀಕಿಸಿದ್ದರು. “ಕೆಲವು ಜನರು ತಮ್ಮ ರಾಜ್ಯಗಳಲ್ಲಿ ಜೀವನೋಪಾಯಕ್ಕಾಗಿ ಏನೂ ಇಲ್ಲದೆ ಮುಂಬೈಗೆ ಬರುತ್ತಾರೆ ಮತ್ತು ದ್ರೋಹವೆಸಗುತ್ತಾರೆ. ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸುವುದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಡುವ ಅಪಮಾನ. ಏಕೆಂದರೆ ಮೋದಿಯವರು ಪಾಕ್ ಆಕ್ರಮಿತ ಪ್ರದೇಶವನ್ನು ಮರಳಿ ಪಡೆಯುವುದಾಗಿ ವಾಗ್ದಾನ ಮಾಡಿದ್ದಾರೆ. ನಮ್ಮ ರಾಜ್ಯವನ್ನು ಹಳಿಯಲು ಕೆಲವರು ಯಾವ ಮಟ್ಟಕ್ಕೂ ಕೂಡ ಹೋಗಬಹುದು” ಎಂದು ಠಾಕ್ರೆ ಹೇಳಿದ್ದರು.

ಅದಕ್ಕೆ ಸರಣಿ ಟ್ವೀಟ್‌ಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕಂಗನಾ ರಾಣಾವತ್ “ಸಂಜಯ್ ರಾಣಾವತ್ ನನ್ನನ್ನು ಹರಮ್‌ಖೋರ್ ಎಂದು ಕರೆದರು. ಈಗ ಉದ್ಧವ್ ಠಾಕ್ರೆ ನಮಕ್ ಹರಾಮ್ (ವಿಶ್ವಾಸಘಾತುಕರು) ಎಂದು ಕರೆಯುತ್ತಿದ್ದಾರೆ. ಅವರು ಮುಂಬೈ ನನಗೆ ಆಶ್ರಯ ನೀಡದಿದ್ದರೆ ನನ್ನ ರಾಜ್ಯದಲ್ಲಿ ನನಗೆ ಆಹಾರ ಸಿಗುವುದಿಲ್ಲ ಎನ್ನುತ್ತಿದ್ದಾರೆ. ತನ್ನ ಮಗನ ವಯಸ್ಸಿನವಳಾದ ಒಬ್ಬಂಟಿ ಮಹಿಳೆಯ ಕುರಿತು ಹೀಗೆ ಮಾತನಾಡುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ಮುಖ್ಯಮಂತ್ರಿಗಳೇ ನೆಪೋಟಿಸಂನ (ಸ್ವಜನಪಕ್ಷಪಾತ) ಕೆಟ್ಟ ಉತ್ಪನ್ನ ನೀವು” ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿಗಳೇ, “ನಾನು ನಿಮ್ಮಂತೆ ನನ್ನ ತಂದೆಯ ಸಂಪತ್ತಿನಿಂದ ಬದುಕುತ್ತಿಲ್ಲ. ನಾನು ಸ್ವಜನಪಕ್ಷಪಾತದ ಉತ್ಪನ್ನವಾಗಬೇಕೆಂದು ಬಯಸಿದರೆ ನಾನು ಹಿಮಾಚಲದಲ್ಲಿಯೇ ಉಳಿಯಬಹುದಿತ್ತು. ನಾನು ಹೆಸರಾಂತ ಕುಟುಂಬದಿಂದ ಬಂದವಳು, ಅವರ ಸಂಪತ್ತಿನ ಮೇಲೆ ಬದುಕಲು ನಾನು ಬಯಸುವುದಿಲ್ಲ. ಕೆಲವು ಜನರು ಸ್ವಾಭಿಮಾನ ಮತ್ತು ಸ್ವಯಂ ಮೌಲ್ಯವನ್ನು ಹೊಂದಿದ್ದಾರೆ” ಎಂದು ಕಂಗನಾ ಕಿಡಿಕಾರಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವನ್ನು ಕಂಗನಾ ಸೇರಿದಂತೆ ಹಲವರು ಕೊಲೆ ಎಂದು ಆರೋಪಿಸಿದ್ದರು. ಆದರೆ ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸರು ಅದನ್ನು ಆತ್ಮಹತ್ಯೆ ಎಂದು ಕರೆದಿದ್ದರು. ಅಂದಿನಿಂದ ಬಿಜೆಪಿ ಮತ್ತು ಕಂಗನಾ ಮುಖ್ಯಮಂತ್ರಿಗಳ ವಿರುದ್ಧ ಸಮರ ಸಾರಿದ್ದರು. ಈಗ ಏಮ್ಸ್ ವೈದ್ಯರು ಸುಶಾಂತ್ ಸಾವು ಆತ್ಮಹತ್ಯೆ ಎಂದಿದ್ದಾರೆ. ಆದರು ಕಂಗನಾ ಟೀಕೆ ಮುಂದುವರೆಸಿದ್ದಾರೆ.

ಕಂಗನಾ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರವೆಂದು ಕರೆದಿದ್ದಾಗ ಶಿವಸೇನೆ ಕೆಂಡಾಮಂಡಲವಾಗಿತ್ತು. ಅಕ್ರಮ ಕಟ್ಟಡದ ನೆಪದಲ್ಲಿ ಕಂಗನಾ ಕಚೇರಿಯನ್ನು ಬಿಎಂಸಿ ನೆಲಸಮಗೊಳಿಸಲು ಮುಂದಾಗಿತ್ತು.

ಅಮಿತ್ ಷಾ ಅವರ ಮಗ ಬಿಸಿಸಿಐ ಸೆಕ್ರೆಟರಿ, ಅರುಣ್ ಜೇಟ್ಲಿಯ ಮಗ ಡಿಡಿಸಿಎ ಅಧ್ಯಕ್ಷ, ಅರ್ನಾಬ್ ಗೋಸ್ವಾಮಿಯ ಪತ್ನಿ ರಿಪಬ್ಲಿಕ್ ಟಿವಿಯಲ್ಲಿ ಕಾರ್ಯಕ್ರಮಗಳ ಮುಖ್ಯಸ್ಥರಾಗಿದ್ದಾರೆ. ಕಂಗನಾ ರಣಾವತ್ ಅವರ ಸಹೋದರ ಮತ್ತು ಸಹೋದರಿ ತನ್ನ ಪ್ರೊಡಕ್ಷನ್ ಹೌಸ್‌ನಲ್ಲಿ ಉನ್ನತ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ನೇಪಾಟಿಸಂ ವಾರಿಯರ್ ಭಕ್ತರು ಈ ಎಲ್ಲದರ ಬಗ್ಗೆ ಮೌನವಾಗಿರುತ್ತಾರೆ ಎಂದು ಖ್ಯಾತ ಯೂಟ್ಯೂಬರ್ ಧೃವ್ ರಾಠೀ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ಗೋವಾದಲ್ಲಿ ಬೀಫ್ ಬ್ಯಾನ್ ಯಾಕಿಲ್ಲ, ಇದ ನಿಮ್ಮ ಹಿಂದುತ್ವ?: ಉದ್ಧವ್ ಠಾಕ್ರೆ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...