Homeಮುಖಪುಟಹೋರಾಟಗಾರ್ತಿ ಕುರಿತು ಆಕ್ಷೇಪಾರ್ಹ ಟೀಕೆ: ಬೇಷರತ್ ಕ್ಷಮೆ ಕೇಳುವಂತೆ ಟೈಮ್ಸ್‌‌ನೌಗೆ NBSA ಆದೇಶ

ಹೋರಾಟಗಾರ್ತಿ ಕುರಿತು ಆಕ್ಷೇಪಾರ್ಹ ಟೀಕೆ: ಬೇಷರತ್ ಕ್ಷಮೆ ಕೇಳುವಂತೆ ಟೈಮ್ಸ್‌‌ನೌಗೆ NBSA ಆದೇಶ

ಪೂರ್ಣ ಪರದೆಯಲ್ಲಿ ದೊಡ್ಡ ಫಾಂಟ್ ಗಾತ್ರದಲ್ಲಿ ಸ್ಪಷ್ಟವಾಗಿ ಕೇಳಬಲ್ಲ ಧ್ವನಿಯ (ನಿಧಾನಗತಿಯಲ್ಲಿ) ಮೂಲಕ ಬೇಷರತ್ತಾಗಿ NBSA ಆದೇಶದಲ್ಲಿರುವಂತೆ TIMES NOW ಕ್ಷಮೆಯಾಚಿಸಬೇಕಾಗಿದೆ.

- Advertisement -
- Advertisement -

ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸಂಜುಕ್ತ ಬಸು ಅವರ ಬಗ್ಗೆ 2018 ರ ಏಪ್ರಿಲ್‌‌ನಲ್ಲಿ ನಡೆದ ಚರ್ಚೆಯ ಸಂದರ್ಭ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಕ್ಕಾಗಿ ಬೇಷರತ್ ಕ್ಷಮೆಯಾಚಿಸುವಂತೆ ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBSA)ಯು ಟೈಮ್ಸ್ ನೌ ಸುದ್ದಿ ವಾಹಿನಿಗೆ ನಿರ್ದೇಶಿಸಿದೆ.

ಟೈಮ್ಸ್ ನೌ ವಾಹಿನಿಯೂ 2018 ರ ಏಪ್ರಿಲ್ 6 ರಂದು ಸಂಜುಕ್ತ ಬಗ್ಗೆ ಮಾನಹಾನಿಕರ ಕಾರ್ಯಕ್ರಮವನ್ನು ನಡೆಸಿತ್ತು. ಚಾನೆಲ್ ತನ್ನ ಕಾರ್ಯಕ್ರಮದಲ್ಲಿ ಅವರನ್ನು “ಹಿಂದೂ ದ್ವೇಷಿ”, “ದುಷ್ಟ ಟ್ರೋಲರ್‌” ಎಂದು ಉಲ್ಲೇಖಿಸಿತ್ತು. ಅಷ್ಟೇ ಅಲ್ಲದೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ “ಟ್ರೋಲ್ ಸೇನೆಯ”ಯ ಭಾಗವೆಂದು ಹೇಳಿಕೊಂಡಿತ್ತು. ಮಾತ್ರವಲ್ಲದೆ ವಾಹಿನಿಯು ಸಂಜುಕ್ತಾ ಅವರ ಹೇಳಿಕೆಯನ್ನು ಪಡೆದಿಲ್ಲ ಮತ್ತು ಸುದ್ದಿಯನ್ನು ಪ್ರಸಾರ ಮಾಡುವ ಮೊದಲು ಸತ್ಯವನ್ನು ಪರಿಶೀಲಿಸಲಿಲ್ಲ ಎಂದು NBSA ಯ ಆದೇಶ ಹೇಳಿದ್ದು, ಆ ಮೂಲಕ ಸಂಘದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ.

ಇದನ್ನೂ ಓದಿ: ಸುಶಾಂತ್ ಕೇಸ್: ನಕಲಿ ಸುದ್ದಿ ಪ್ರಸಾರ, ಆಜ್‌ ತಕ್ ವಾಹಿನಿಗೆ 1 ಲಕ್ಷ ರೂ. ದಂಡ

NBSA ಆದೇಶದ ಪ್ರಕಾರ, ಟೈಮ್ಸ್ ನೌ ಅಕ್ಟೋಬರ್ 27, 2020 ರಂದು ರಾತ್ರಿ 9 ಗಂಟೆಗೆ ಕ್ಷಮೆಯಾಚನೆ ಪ್ರಸಾರ ಮಾಡಬೇಕಿದ್ದು ಅದು ಕೆಳಗಿನ ಪಠ್ಯವನ್ನು ಪೂರ್ಣ ಪರದೆಯಲ್ಲಿ ದೊಡ್ಡ ಫಾಂಟ್ ಗಾತ್ರದಲ್ಲಿ ಸ್ಪಷ್ಟವಾಗಿ ಕೇಳಬಲ್ಲ ಧ್ವನಿಯ (ನಿಧಾನಗತಿಯಲ್ಲಿ) ಮೂಲಕ ಬೇಷರತ್ತಾಗಿ ಕ್ಷಮೆಯಾಚಿಸಬೇಕಾಗಿದೆ.

“ನಾವು 6.4.2018 ರಂದು ಪ್ರಸಾರವಾದ ’ಇಂಡಿಯಾ ಅಪ್‌ಫ್ರಂಟ್ @pm 8’ ಮತ್ತು ‘ದಿ ನ್ಯೂಶೋರ್ ಡಿಬೇಟ್ @ 9’ ಕಾರ್ಯಕ್ರಮದಲ್ಲಿ ಸಂಜುಕ್ತ ಬಸು ಅವರ ಹೇಳಿಕೆಯನ್ನು ತೆಗೆದುಕೊಂಡಿಲ್ಲ, ಇದರಿಂದಾಗಿ ನಿಷ್ಪಕ್ಷಪಾತ, ವಸ್ತುನಿಷ್ಠತೆ, ವರದಿ ಮಾಡುವಲ್ಲಿ ತಟಸ್ಥತೆ ಮತ್ತು ನ್ಯಾಯಸಮ್ಮತತೆಯನ್ನು ಖಾತರಿಪಡಿಸುವುದು ಸೇರಿದಂತೆ ಸಂಬಂಧಿಸಿದ ತತ್ವಗಳನ್ನು ಉಲ್ಲಂಘಿಸಿದ್ದೇವೆ. ಶ್ರೀಮತಿ ಸಂಜುಕ್ತ ಬಸು ಅವರಿಗೆ ಅಪಖ್ಯಾತಿ ತರುವ ಉದ್ದೇಶವಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ”

ಅಷ್ಟೇ ಅಲ್ಲದೆ ತನ್ನ ವೆಬ್‌ಸೈಟ್, ಯೂಟ್ಯೂಬ್ ಅಥವಾ ಇನ್ನಾವುದೇ ಲಿಂಕ್‌ಗಳಿಂದ ಪ್ರಸಾರದ ವೀಡಿಯೊವನ್ನು ತೆಗೆದುಹಾಕಿ ಅದನ್ನು ಲಿಖಿತವಾಗಿ NBSA ಗೆ ಸಲ್ಲಿಸುವಂತೆ ಪ್ರಾಧಿಕಾರವು ಚಾನೆಲ್‌ಗೆ ಸೂಚಿಸಿದೆ.

ಈ ಆದೇಶದ ಅನುಸರಣೆಯ ಸಂಕೇತವಾಗಿ ಪ್ರಸಾರವಾದ ಒಂದು ವಾರದೊಳಗೆ ದಿನಾಂಕ ಮತ್ತು ಸಮಯದೊಂದಿಗೆ ಕ್ಷಮೆಯಾಚನೆ ಪ್ರಸಾರವನ್ನು ಒಳಗೊಂಡಿರುವ ಕಾಂಪ್ಯಾಕ್ಟ್ ಡಿಸ್ಕ್ ಅಥವಾ ಸಿಡಿಯನ್ನು ಸಲ್ಲಿಸಲು ಸುದ್ದಿ ವಾಹಿನಿಗೆ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಟಿವಿ ವಾಹಿನಿಗಳೇ ಲಿಂಚಿಂಗ್ ಕೇಂದ್ರಗಳಾಗಿರುವ ಕಾಲದಲ್ಲಿ… ನಾವೇನು ಮಾಡಬೇಕು?

ಇದಲ್ಲದೆ, ಟೈಮ್ಸ್ ನೌ ಈ ಆದೇಶವನ್ನು ಮಾಧ್ಯಮಗಳು, ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಶನ್ ಸದಸ್ಯರೊಂದಿಗೆ ಹಂಚಿಕೊಳ್ಳಬೇಕು ಮತ್ತು ಅದನ್ನು ತನ್ನ ವೆಬ್‌ಸೈಟ್‌ನಲ್ಲಿ ಇರಿಸಿ ಅದನ್ನು ತನ್ನ ವಾರ್ಷಿಕ ವರದಿಯಲ್ಲಿ ಸೇರಿಸಿಕೊಳ್ಳಬೇಕು ಎಂದೂ ಹೇಳಿದೆ.

ಈ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ಸಂಜುಕ್ತ ಬಸು ಟ್ವಿಟ್ಟರ್‌ನಲ್ಲಿ, “ಇಂದು ಟೈಮ್ಸ್ ನೌಗೆ ಸರಿಯಾದ ಶಿಕ್ಷೆಯಾಗಿದೆ. ನಾವು ಗೆದ್ದಿದ್ದೇವೆ” ಎಂದು ಬರೆದ್ದಾರೆ.

ಇದನ್ನೂ ಓದಿ: ಕಟ್ಟಬೇಕಿರುವುದು ಪರ್ಯಾಯ ಮಾಧ್ಯಮವನ್ನಲ್ಲ; ಹೊಸ ಮುಖ್ಯವಾಹಿನಿ ಮಾಧ್ಯಮವನ್ನು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...