Homeಮುಖಪುಟಬಹುರೂಪಿ ರಂಪಾಟ: ಸೈದ್ಧಾಂತಿಕ ವಿರೋಧಿಗಳಿಗೆ ರಂಗಾಯಣದಿಂದ ಗೇಟ್‌ ಪಾಸ್‌?

ಬಹುರೂಪಿ ರಂಪಾಟ: ಸೈದ್ಧಾಂತಿಕ ವಿರೋಧಿಗಳಿಗೆ ರಂಗಾಯಣದಿಂದ ಗೇಟ್‌ ಪಾಸ್‌?

- Advertisement -
- Advertisement -

ಮೈಸೂರು ರಂಗಾಯಣ ಇತ್ತೀಚಿನ ದಿನಗಳಲ್ಲಿ ವಿವಾದದ ಕೇಂದ್ರಬಿಂದುವಾಗಿದೆ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಬಿಜೆಪಿ ಪ್ರಚಾರಕರಾದ ಚಕ್ರವರ್ತಿ ಸೂಲಿಬೆಲೆ ಹಾಗೂ ಬಿಜೆಪಿ ವಕ್ತಾರರಾದ ಮಾಳವಿಕಾ ಅವಿನಾಶ್ ಅವರಿಗೆ ಆಹ್ವಾನ ನೀಡಿದ ಬಳಿಕ ರಂಗಾಯಣ ನಿರ್ದೇಶಕರ ನಡೆ ಚರ್ಚೆಗೆ ಗ್ರಾಸವಾಗಿದೆ. ಕೊರೊನಾ ಭೀತಿಯಿಂದಾಗಿ ಈ ಬಾರಿಯ ಬಹುರೂಪಿ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲಗಳೂ ಇವೆ. ಇದರ ನಡುವೆ ರಂಗಾಯಣ ನಿರ್ದೇಶಕರು ತನ್ನ ನಿಲುವನ್ನು ವಿರೋಧಿಸುವವರನ್ನೆಲ್ಲ ರಂಗಾಯಣದಿಂದ ಹೊರದೂಡುತ್ತಿರುವುದು ಹೊಸ ವಿದ್ಯಮಾನ.

ಈಗಾಗಲೇ ಸುಮಾರು ಹತ್ತು ಪ್ರದರ್ಶನಗಳನ್ನು ಕಂಡಿರುವ ಎಸ್‌.ಎಲ್‌.ಭೈರಪ್ಪ ಅವರ ‘ಪರ್ವ’ ಕಾದಂಬರಿಯ ರಂಗರೂಪಕ್ಕೆ ಮತ್ತೊಮ್ಮೆ ಹೊಸ ಕಲಾವಿದರನ್ನು ಕರೆದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

“ರಂಗಾಯಣದ ರಂಗಶಿಕ್ಷಣ ಹಾಗೂ ಇತರೆ ರಂಗಶಿಕ್ಷಣ ಕೇಂದ್ರಗಳಲ್ಲಿ ತರಬೇತಿ ಪಡೆದ, ನಾಟಕ ತಂಡಗಳಲ್ಲಿ ಅಭಿನಯಿಸಿ ಅನುಭವವಿರುವ ಕಲಾವಿದರಿಗೆ ಆದ್ಯತೆ ನೀಡಲಾಗುವುದು. 18ರಿಂದ 35 ವರ್ಷದೊಳಗಿನ ಕಲಾವಿದರು ಸ್ವವಿವರದೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ” ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಪ್ರಕಟಣೆ ನೀಡಿದ್ದಾರೆ.

ಮೈಸೂರಿನ ಪ್ರಾದೇಶಿಕ ಪತ್ರಿಕೆ ‘ಆಂದೋಲನ’ ವರದಿ

ಆದರೆ ರಂಗಾಯಣ ಅಂಗಳದ ಒಳಸುದ್ದಿ ಬೇರೆಯೇ ಇದೆ. ಬಹುರೂಪಿ ವಿಚಾರವಾಗಿ ಎದ್ದ ವಿವಾದದ ಬಳಿಕ ತನ್ನ ಸೈದ್ಧಾಂತಿಕ ವಿರೋಧಿಗಳನ್ನು ರಂಗಾಯಣ ಅಂಗಳದಿಂದ ಹೊರಹಾಕಲು ರಂಗಾಯಣ ನಿರ್ದೇಶಕರು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಬಂದಿವೆ.

ರಂಗಾಯಣವನ್ನು ಕಟ್ಟಿದ ಹಿರಿಯ ಕಲಾವಿದರನ್ನು ಹೊರಹಾಕುವ ಅಥವಾ ಮೂಲೆಗುಂಪು ಮಾಡುವ ಕೆಲಸವನ್ನು ನಿರ್ದೇಶಕರು ಮಾಡುತ್ತಿದ್ದಾರೆ ಎಂದು ‘ನಾನುಗೌರಿ.ಕಾಂ’ಗೆ ಮೂಲಗಳು ತಿಳಿಸಿವೆ.

ಹಿರಿಯ ಕಲಾವಿದರಾದ ಹುಲುಗಪ್ಪ ಕಟ್ಟೀಮನಿ, ವಿನಾಯಕ್‌ ಭಟ್‌ ಹಾಸಣಗಿ, ರಾಮು ಅವರು ನಿವೃತ್ತಿಯ ಬಳಿಕವೂ ‘ಪರ್ವ’ ನಾಟಕದಲ್ಲಿ ಭಾಗಿಯಾಗಿ ಪಾತ್ರಗಳನ್ನು ನಿರ್ವಹಿಸಿದ್ದರು. ಬಹುರೂಪಿ ವಿವಾದದ ಬಳಿಕ ಈ ಹಿರಿಯ ಕಲಾವಿದರು ನಿರ್ದೇಶಕರ ನಡೆಯನ್ನು ವಿರೋಧಿಸಿದ್ದರು. ಹೀಗಾಗಿ ಇವರನ್ನು ‘ಪರ್ವ’ ನಾಟಕದಿಂದ ಹೊರಗಿಡಲು ನಿರ್ದೇಶಕರು ನಿರ್ಧರಿಸಿದ್ದಾರೆ ಎಂಬ ಆರೋಪಗಳು ಬಂದಿವೆ. ಹಿರಿಯ ಕಲಾವಿದರೊಂದಿಗೆ ‘ನಾನುಗೌರಿ.ಕಾಂ’ ಮಾತನಾಡಿದಾಗ ಈ ಸುದ್ದಿಯನ್ನು ಅಲ್ಲಗಳೆಯಲಿಲ್ಲ.

“ರಂಗಭೂಮಿ ಯಾವುದೋ ಒಂದು ಪಂಥಕ್ಕೆ ಸೀಮಿತವಾಗಬಾರದು. ರಂಗಭೂಮಿ ಎಡವೂ ಹೌದು, ಬಲವೂ ಹೌದು. ಚರ್ಚೆಗಳಾಗಲಿ. ಆದರೆ ಹಿರಿಯ ಕಲಾವಿದರನ್ನು ಪರಿಗಣಿಸದೆ ಬಹುರೂಪಿ ವಿಚಾರವಾಗಿ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಕ್ಕೆ ವಿರೋಧವಿದೆ. ಇದನ್ನು ವ್ಯಕ್ತಪಡಿಸಿದ ಬಳಿಕ ಹಿರಿಯರನ್ನು ಮೂಲೆಗುಂಪು ಮಾಡಲಾಗುತ್ತಿದೆ. ರಂಗಾಯಣವನ್ನು ಮೂವತ್ತು ವರ್ಷಗಳ ಕಾಲ ಕಟ್ಟಿದ ಕಲಾವಿದರು ತಮ್ಮ ಅಭಿಪ್ರಾಯವನ್ನು ಹೇಳಬಾರದೆ” ಎಂದು ಕೇಳುತ್ತಾರೆ ರಂಗಾಯಣ ಹಿರಿಯ ಕಲಾವಿದ ವಿನಾಯಕ ಭಟ್ ಹಾಸಣಗಿ.

ರಂಗಾಯಣದ ಮತ್ತೊಬ್ಬ ಹಿರಿಯ ಕಲಾವಿದರಾದ ರಾಮು ಅವರು, “ನಮ್ಮನ್ನು ಪರ್ವ ನಾಟಕದಿಂದ ಕೈಬಿಡುತ್ತಾರೆಂಬ ಸುದ್ದಿ ಬಂದಿದೆ. ಅಧಿಕೃತವಾಗಿ ಯಾವುದೇ ಸೂಚನೆಯನ್ನು ನಿರ್ದೇಶಕರು ನೀಡಿಲ್ಲ. ಆದರೆ ಅಡ್ಡಂಡ ಕಾರ್ಯಪ್ಪ ಅವರ ವರ್ತನೆಗಳು ಬಹಳ ಬೇಸರ ತಂದಿದ್ದು, ಅವರು ಪರ್ವ ನಾಟಕಕ್ಕೆ ಕರೆದರೂ ನಾನು ಹೋಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು. (ಹುಲುಗಪ್ಪ ಕಟ್ಟೀಮನಿಯವರು ಕರೆ ಸ್ವೀಕರಿಸಲಿಲ್ಲ).

ಬಹುರೂಪಿ ಅತಿಥಿಗಳ ವಿಚಾರವಾಗಿ ಧ್ವನಿ ಎತ್ತಿದವರಲ್ಲಿ ಪರ್ವ ಕಿರಿಯ ಕಲಾವಿದರೂ ಸೇರಿದ್ದಾರೆ. ಅದರ ಮುಂದುವರಿದ ಭಾಗವಾಗಿ ದನಿ ಎತ್ತಿದ ಕಿರಿಯ ಕಲಾವಿದನೊಬ್ಬನನ್ನು ‘ಪರ್ವ’ ನಾಟಕದಿಂದ ಕೈಬಿಡಲಾಗಿದೆ.

ಪರ್ವ ನಾಟಕದ ಕಿರಿಯ ಕಲಾವಿದರು ಬರೆದಿದ್ದ ಪತ್ರ

ರಂಗಾಯಣದಿಂದ ಹೊರಬಿದ್ದ ಕಿರಿಯ ಕಲಾವಿದ ಅನುರಾಗ್‌‌ ತಮ್ಮ ಬೇಸರವನ್ನು ಹೇಳಿಕೊಂಡಿದ್ದಾರೆ. “ಕಿರಿಯ ಕಲಾವಿದರ ನಿಲುವನ್ನು ಸಹಿಸದ ನಿರ್ದೇಶಕರು ‘ಪರ್ವ’ ನಾಟಕದಿಂದ ತೆಗೆದು ಹಾಕಲಾಗುವುದೆಂದು ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಕಿರಿಯ ಕಲಾವಿದರು ಬರೆದ ಪತ್ರ ಮಾಧ್ಯಮಗಳಿಗೆ ಲಭ್ಯವಾಗಿತ್ತು. ಮಾಧ್ಯಮಗಳಿಗೆ ಪತ್ರವನ್ನು ರವಾನಿಸಿದ್ದರಿಂದ ನನ್ನನ್ನು ಹೊರಗಿಡಲಾಗಿದೆ. ನಾನು ಎರಡು ವರ್ಷಗಳಿಂದ ರಂಗಾಯಣದಲ್ಲಿ ಕೆಲಸ ಮಾಡುತ್ತಿದ್ದೆ” ಎಂದರು ಅನುರಾಗ್‌.

ಈ ಕುರಿತು ಅನುರಾಗ್‌ ಅವರು ರಂಗಾಯಣದ ಕಿರಿಯ ಕಲಾವಿದರನ್ನು ಉದ್ದೇಶಿಸಿ ಪತ್ರವನ್ನೂ ಬರೆದಿದ್ದಾರೆ. “ಒಂದು ಪಕ್ಷಕ್ಕೆ ನಿಷ್ಠರಾಗಿರುವ ಅತಿಥಿಗಳು ಬಹುರೂಪಿಗೆ ಬೇಡ ಎಂದೆನಿಸಿದಾಗ ನಾವೆಲ್ಲ ಒಟ್ಟಿಗೆ ಕೂತು ತಾನೇ ಪತ್ರ ಬರೆದಿದ್ದೆವು. ನೀವುಗಳು ಎಲ್ಲರೂ ಓದಿ ತಾನೇ ಪತ್ರಕ್ಕೆ ಸಹಿ ಹಾಕಿದ್ದು. ಆಗ ನಿಮ್ಮಲ್ಲಿ ಇದ್ದ ಪ್ರಶ್ನಿಸುವ ಗುಣ ಮತ್ತು ನಿಮ್ಮ ವ್ಯಕ್ತಿತ್ವ ಈಗ ಎಲ್ಲಿ ಹೋಯಿತು? ಆಗ ನಿಮ್ಮಲ್ಲಿ ಇದ್ದ ಒಗ್ಗಟ್ಟು ಈಗ ಎಲ್ಲಿ ಹೋಯಿತು? ಈಗ ಎಲ್ಲಿ ಕಳೆದುಹೋದಿರಿ?” ಎಂದು ಅನುರಾಗ್‌ ಪ್ರಶ್ನಿಸಿದ್ದಾರೆ.

“ರಂಗಾಯಣದ ಗೇಟಿನ ಮುಂದೆ ಒಂದಿಷ್ಟು ಪ್ರೇಕ್ಷಕರನ್ನು ಹವ್ಯಾಸಿ ರಂಗ ತಂಡದವರು ತಡೆದರೆಂದೂ ಕಾರ್ಯಪ್ಪನವರ ಮೇಲೆ ಮಸಿ ಬಳೆಯುವ ಕೆಲಸ ಆಗುತ್ತಿದೆ ಎಂದೂ ಪತ್ರಿಕಾ ಹೇಳಿಕೆ ಕೊಟ್ಟಿದ್ದೀರಿ. ಗೇಟಿನ ಮುಂದೆ ನನ್ನ ತಂಡದವರೂ ಇದ್ದರು. ತಾಲೀಮು ಮಾಡಲು ಬಂದಿದ್ದರು. ಕಾರ್ಯಪ್ಪನವರು ಪೊಲೀಸರಿಗೆ ಯಾರನ್ನೂ ಒಳಗೆ ಬಿಡಬೇಡ ಎಂದು ಹೇಳಿದ ಮೇಲೆ ಅವರಿಗೆ ಪ್ರೇಕ್ಷಕರು ಯಾರು, ಬೇರೆ ತಂಡದವರು ಯಾರು ಎಂದು ಹೇಗೆ ಗೊತ್ತಾಗಬೇಕು? ನೀವೇನು ಪ್ರತ್ಯಕ್ಷವಾಗಿ ಪ್ರೇಕ್ಷಕರನ್ನು ತಡೆಯುವುದನ್ನು ನೋಡಿದಿರಾ? ನೀವು ಮಾಡುತ್ತಿರುವುದೇನು? ಯಾರನ್ನು ಒಲೈಸುವುದಕ್ಕೆ ಹೊರಟಿದ್ದೀರಿ? ಈಗ ನೀವು ಕೊಡುತ್ತಿರುವ ಅಸಂಬದ್ಧ ಹೇಳಿಕೆಗಳಿಂದ ನಿಮ್ಮ ಭವಿಷ್ಯ ಭದ್ರವಾಗುತ್ತದೆಯೇ ? ಇನ್ನೊಂದೆರಡು ತಿಂಗಳು, ಅನಂತರ ಮತ್ತೆ ರಂಗ ಕಾಯಕ ಅರಸುತ್ತಾ ಹೋಗಲೇಬೇಕು. ರಂಗಾಯಣವೇ ಶಾಶ್ವತ ಅಲ್ಲ. ನಿಮ್ಮನ್ನು ಅವರೇನು ಕಾಯಂ ಮಾಡುವುದಿಲ್ಲ. ಕಾರ್ಯಪ್ಪನವರು ಇಷ್ಟು ದಿನ ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು ಎನ್ನುತ್ತೀರಿ, ಕೈತುಂಬಾ ಸಂಬಳ ಕೊಟ್ಟರು ಎನ್ನುತ್ತೀರಿ. ಆ ಸಂಬಳ ನಾನೂ ಪಡೆದಿದ್ದೇನೆ. ಆದರೆ ಅದು ಸರ್ಕಾರದ ಹಣ ಅವರ ಸ್ವಂತದ್ದಲ್ಲ” ಎಂದು ತನ್ನ ಸ್ನೇಹಿತರಿಗೆ ಅನುರಾಗ್‌ ತಿಳಿಸಿದ್ದಾರೆ.

ರಂಗಾಯಣದಿಂದ ಒಬ್ಬ ಮಹಿಳಾ ಸಿಬ್ಬಂದಿಯನ್ನೂ ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಆರೋಪಗಳೂ ಬಂದಿವೆ. ಈ ಕುರಿತು ಅಧಿಕೃತ ಮಾಹಿತಿ ದೊರೆತ್ತಿಲ್ಲ.


ಇದನ್ನೂ ಓದಿರಿ: ಮೈಸೂರು ರಂಗಾಯಣಕ್ಕೆ ಬಂದು ಮಕ್ಕಳಿಗೆ ‘ಕೈತುತ್ತು’ ನೀಡಿದ್ದರು ಅನಾಥ ಮಕ್ಕಳ ತಾಯಿ ‘ಸಪ್ಕಾಲ್‌’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...