Homeಮುಖಪುಟಆರ್‌ಎಸ್‌ಎಸ್‌ ಮುಖ್ಯಸ್ಥರ ಮಾತನ್ನು ಪಾಲಿಸುತ್ತವೆಯೇ ಬಜರಂಗದಳ, ಬಿಜೆಪಿ, ಎಬಿವಿಪಿ, ವಿಎಚ್‌ಪಿ ಇತ್ಯಾದಿ?

ಆರ್‌ಎಸ್‌ಎಸ್‌ ಮುಖ್ಯಸ್ಥರ ಮಾತನ್ನು ಪಾಲಿಸುತ್ತವೆಯೇ ಬಜರಂಗದಳ, ಬಿಜೆಪಿ, ಎಬಿವಿಪಿ, ವಿಎಚ್‌ಪಿ ಇತ್ಯಾದಿ?

ಮಸೀದಿ ಕೆಡವಿ ಮಂದಿರ ಹುಡುಕುವ ಹೋರಾಟದಲ್ಲಿ ಆರ್‌ಎಸ್‌ಎಸ್‌ ಇಲ್ಲ ಎಂದು ಮೋಹನ್‌ ಭಾಗವತ್‌ ಹೇಳಿದರೆ, ಮತ್ತೊಂದೆಡೆ ಪ್ರವಾದಿ ಮುಹಮ್ಮದ್‌ ಅವರನ್ನು ಅವಹೇಳನ ಮಾಡಿದ ವಕ್ತಾರರನ್ನು ಬಿಜೆಪಿ ಉಚ್ಚಾಟನೆ ಮಾಡಿದೆ. ಈ ವಿದ್ಯಮಾನಗಳನ್ನು ಹೇಗೆ ನೋಡಬೇಕು?

- Advertisement -
- Advertisement -

ಎರಡು ಸುದ್ದಿಗಳು. ಮೊದಲನೆಯದು, ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವುದು ಬೇಡ. ಆ ಹೋರಾಟದಲ್ಲಿ ಆರ್‌ಎಸ್‌ಎಸ್‌ ಇಲ್ಲ: ಮೋಹನ್ ಭಾಗವತ್. ಎರಡನೆಯದು, ಮೊಹಮ್ಮದ್ ಪೈಗಂಬರ್ ಅವರನ್ನು ಅವಮಾನಿಸಿದ, ಬಿಜೆಪಿ ಓರ್ವ ವಕ್ತಾರೆ ಅಮಾನತು, ಓರ್ವ ವಕ್ತಾರ ಉಚ್ಛಾಟನೆ.

ಅಯೋಧ್ಯೆ ರಾಮಮಂದಿರದ ನಂತರ ಕಾಶಿ ಜ್ಞಾನವ್ಯಾಪಿ ಮಸೀದಿ, ಮಥುರಾ ಶ್ರೀಕೃಷ್ಣ ದೇವಸ್ಥಾನಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂಬ ಕೂಗು ಇತ್ತು. ನಂತರ ಅದು ತಾಜಮಹಲ್, ಕುತುಬ್ ಮೀನಾರ್ ನಂತಹ ಜಾಗತಿಕ ಪ್ರಸಿದ್ಧ ಸ್ಥಳವೂ ಸೇರಿ, ಶ್ರೀರಂಗಪಟ್ಟಣ, ಮಂಗಳೂರು ಬಳಿ ಮಳಲಿ ಮಸೀದಿ ಸೇರಿದಂತೆ ದೇಶದ ಹಲವೆಡೆ ಮಸೀದಿ ದೇವಸ್ಥಾನವಾಗಿತ್ತು. ಅದರ ಸರ್ವೇ ಆಗಲಿ ಎಂಬ ಕೂಗು ವ್ಯಾಪಿಸಿತು.
ಇದೀಗ ಆರ್‌ಎಸ್‌ಎಸ್‌ನ ಸುಪ್ರೀಂ ಮೋಹನ್ ಭಾಗವತ್ ಸ್ಪಷ್ಟವಾಗಿ, “ಪ್ರತೀ ಮಸೀದಿಯಲ್ಲೂ ಹಿಂದೂ ದೇವರನ್ನು ಹುಡುಕುವ ಹೋರಾಟದಲ್ಲಿ ನಾವಿಲ್ಲ. ಇತಿಹಾಸದ ತಪ್ಪುಗಳನ್ನು ನಾವೂ ಮಾಡಿದ್ದಲ್ಲ, ಮುಸ್ಲಿಮರೂ ಮಾಡಿದ್ದಲ್ಲ. ಒಂದೆರಡು ಪ್ರಮುಖ ಕ್ಷೇತ್ರದ ಕುರಿತು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬೇಕು. ಉಳಿದಂತೆ ಹೋರಾಟಕ್ಕೆ ನಾವಿಲ್ಲ” ಎಂದು ಹೇಳಿಬಿಟ್ಟಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆರ್‌ಎಸ್‌ಎಸ್‌ನಲ್ಲಿ ಒಂದಿಷ್ಟು ನಿಯಮವಿದೆ. ಅದರಲ್ಲಿ ಒಂದು “ಸೂಚನೆ” ಇದೆ. ಅಂದರೆ ಸಂಘದ ಸ್ವಯಂ ಸೇವಕರಿಗೆ ಮೇಲಿನಿಂದ ಬರುವ ಸೂಚನೆ ಪಾಲಿಸುವುದು ಕಡ್ಡಾಯ. ಅದನ್ನು ಪ್ರಶ್ನಿಸುವಂತಿಲ್ಲ, ಉಲ್ಲಂಘಿಸುವಂತಿಲ್ಲ. ಹಾಗೇ ಮಾಡಿದವರನ್ನು ‘ಉಪೇಕ್ಷೆ’ ಮಾಡುವ ಮೂಲಕ ನಿರ್ಲಕ್ಷ್ಯ ಮಾಡುತ್ತಾರೆ. ಯಾವುದೇ ಜವಾಬ್ದಾರಿ ಕೊಡುವುದಿಲ್ಲ. ತನ್ನಿಂದ ತಾನೇ ಆತ ಮೂಲೆಗೆ ಸರಿಯಬೇಕಾದ ಪರಿಸ್ಥಿತಿ.

ಇದನ್ನೂ ಓದಿರಿ: ಕಾರ್ಕಳ: ಗೋಡ್ಸೆ ಬೋರ್ಡ್ ತೆರವು; ರಸ್ತೆಗೆ ನಾರಾಯಣಗುರುಗಳ ಹೆಸರಿಡುವಂತೆ ಕಾಂಗ್ರೆಸ್ ಆಗ್ರಹ

ಈಗ ಸಂಘದ ಸಂಯೋಜನೆಯಲ್ಲಿ (ಸಹ ಸಂಘಟನೆಗಳು) ಅನೇಕವಿವೆ. ವಿಹೆಚ್‌ಪಿ, ಬಿಜೆಪಿ, ಅಭಾವಿಪ, ಭಜರಂಗದಳ, ದುರ್ಗಾವಾಹಿನಿ ಇತ್ಯಾದಿ. (ರಾಮ ಸೇನೆ, ಹಿಂದೂ ಮಹಾಸಭಾ ಇದರ ಒಳಗಿರದ ಸ್ವತಂತ್ರ ಸಂಘಟನೆಗಳು. ಆದರೂ ಅವರು ಆರ್‌ಎಸ್‌ಎಸ್‌ಅನ್ನು ವಿರೋಧಿಸುವುದಿಲ್ಲ.)

ಈ ಸಹ ಸಂಘಟನೆಗಳು ಸರ ಸಂಘಚಾಲಕರ ಸೂಚನೆಯನ್ನು ಬೈಠಕ್ ಗಳ ಮೂಲಕ ಪ್ರತೀ ಕಾರ್ಯಕರ್ತರಿಗೆ ತಲುಪಿಸಲೇಬೇಕು. ಅದು ಅನುಶಾಸನದ ನೆಲೆಗಟ್ಟಿನಲ್ಲಿ. (ನಾನು ಸಂಘದಲ್ಲಿ ಇದ್ದಾಗ ಈ ಪದ್ಧತಿ ಇತ್ತು. ಇದೆಲ್ಲಾ ಬದಲಾಗಿರಲಿಕ್ಕಿಲ್ಲವೆಂದು ಭಾವಿಸಿದ್ದೇನೆ.)

ಈಗ ಮೋಹನ್ ಭಾಗವತರ ಮಾತನ್ನು ಸಂಘದ ಪ್ರತಿಯೊಬ್ಬನೂ ಕಡ್ಡಾಯವಾಗಿ ಪಾಲಿಸಲೇಬೇಕು. ಆತ ಬಿಜೆಪಿಯಲ್ಲಿರಲಿ, ಭಜರಂಗದಳದಲ್ಲಿರಲಿ. ಆತ ತಾನು ಆರ್‌ಎಸ್‌ಎಸ್‌ ಅಲ್ಲ, ಕೇವಲ ಬಿಜೆಪಿ ಅಥವಾ ಅಭಾವಿಪ ಎಂದು ಹೇಳಿಕೊಳ್ಳಬಹುದು. ಆಗ ಆತನ ನಿಲುವು ಸಂಘದ್ದು ಆಗಿರುವುದಿಲ್ಲ. ಅದಕ್ಕೆ ಬೆಲೆಯೂ ಇಲ್ಲ. ಸಂಘದ ಹೆಸರು ದುರುಪಯೋಗ ಮಾಡಿಕೊಂಡರೆ ಸಂಘದವರು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಅದರ ಬಹುತೇಕ ನಾಯಕರು ತಾವು ಆರ್‌ಎಸ್‌ಎಸ್‌ ಎಂದೇ ಹೇಳುವುದು. (ಶಾಖೆಗೆ ಹೋಗದವರೂ ಹಾಗೇ ಹೇಳಿಕೊಳ್ಳುತ್ತಿರುವುದೂ ಇದೆ.)

ಇದನ್ನೂ ಓದಿರಿ: ಬಿಜೆಪಿ ನಾಯಕರಿಂದ ಪ್ರವಾದಿ ನಿಂದನೆ ಪ್ರಕರಣ: ಕತಾರ್‌, ಕುವೈತ್‌, ಇರಾನ್‌ ದೇಶಗಳಿಂದ ಭಾರತ ರಾಯಭಾರಿಗೆ ಸಮನ್ಸ್‌

ಈಶ್ವರಪ್ಪನವರು “ಹೌದ್ರೀ, ಸಂಘದ ಆದೇಶದಂತೆ ನಾವು ನಡೆಯುವುದು… ಏನೀಗ?” ಎಂದು ವಿಧಾನಸೌಧದಲ್ಲೇ ಗುಡುಗಿರುವುದು ದಾಖಲಾಗಿದೆ. ಸಿ.ಟಿ.ರವಿ, ಯತ್ನಾಳ್‌, ಅಶೋಕ್‌, ನಳೀನ್‌ ಇತ್ಯಾದಿ ನಾಯಕರು ತಾವು ಆರ್‌ಎಸ್‌ಎಸ್‌ ಎಂದೇ ಹೇಳುವುದು. ಅದು ನಿಜ ಕೂಡಾ.

ಆರ್‌ಎಸ್‌ಎಸ್‌ನ ಕೆಳ ಹಂತದಿಂದ ರಾಷ್ಟ್ರ ಮಟ್ಟದವರಗೆ ನಿರಂತರವಾಗಿ ಪರಿವಾರ ಬೈಠಕ್ ನಡೆಯುತ್ತದೆ. ಅಲ್ಲಿ ಕೆಲವು ವಿಷಯಗಳಲ್ಲಿ ಅಭಿಪ್ರಾಯ ಕ್ರೂಢೀಕರಿಸಿ ಬೈಠಕ್ ಆಗುತ್ತದೆ. ಏಕ ಅಭಿಪ್ರಾಯ ಘೋಷಣೆಯಾಗುತ್ತದೆ. ಜಿಲ್ಲಾಮಟ್ಟದಿಂದ ರಾಷ್ಟ್ರ ಮಟ್ಟದತನಕ ಆರ್‌ಎಸ್‌ಎಸ್‌ನ ಓರ್ವ ವ್ಯಕ್ತಿಯನ್ನು ಸಂಘಟನಾ ಕಾರ್ಯದರ್ಶಿ ಎಂದು ಬಿಜೆಪಿಗೆ ನೀಡಲಾಗುತ್ತದೆ. ಆತ ಸಂಘ ಮತ್ತು ಬಿಜೆಪಿ ನಡುವೆ co-ordinator ಆಗಿ ಕಾರ್ಯ ನಿರ್ವಹಿಸುತ್ತಾನೆ. ಬಿಜೆಪಿಗೆ ಸಂಘ ಕೇವಲ ಸಲಹೆ ಕೊಡುವುದಲ್ಲ, ಆದೇಶ ಅಥವಾ ಸೂಚನೆಯನ್ನೂ ಕೊಡುತ್ತದೆ. ಅಲ್ಲಿಗೆ ಸಂಘ ಪಕ್ಷ ರಾಜಕಾರಣದಲ್ಲಿ ನೇರ ಪಾತ್ರ ವಹಿಸುತ್ತದೆ.

ಸಂಘ ಒಂದು ಸಂಘಟನೆಯಾಗಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಅದು ಸಾರ್ವಜನಿಕವಾಗಿ ತನ್ನನ್ನು ತಾನು ತೆರೆದುಕೊಂಡಿದೆ. ಹೀಗಿರುವಾಗ ನೀವು ಸಂಘದ ವಿಮರ್ಶೆ ಮಾಡಬಾರದು, ಪ್ರಶ್ನೆ ಕೇಳಬಾರದು ಅನ್ನುವುದು ಸರಿಯಲ್ಲ. ಅದು ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರೀಯತೆಯನ್ನು ಬೆಳೆಸುವ ಪಾರದರ್ಶಕ ಸಂಸ್ಥೆ ಎಂದು ಘೋಷಣೆ ಮಾಡಿಕೊಂಡಿರುವಾಗ ಮತ್ತು ದಿನನಿತ್ಯ ಒಂದಿಲ್ಲ ಒಂದು ದೇಶದ ಸಾರ್ವಜನಿಕ ಬದುಕಿನ ಸಂಗತಿಗಳಲ್ಲಿ ಪಾಲ್ಗೊಳ್ಳುವಾಗ ಅದರ ಕುರಿತು ಚರ್ಚೆ ತೀರಾ ಸಹಜ ಪ್ರತಿಕ್ರಿಯೆ ಆಗಿದೆ.

ಸಂಘದಿಂದಲೇ ಬಂದ ಮತ್ತು ಖಡಕ್ಕಾಗಿ ಹಾಗೇ ಹೇಳಿಕೊಳ್ಳುವ ಮಂತ್ರಿಗಳ ಭ್ರಷ್ಟಾಚಾರ ಅಥವಾ ಯಾವುದಾರೂ ತಪ್ಪು ಆದಾಗ ಅದು ವೈಯಕ್ತಿಕ ಎಂದು ಹೇಳಿ ಮುಗಿಸಲಾಗದು. ಅದು ಸಂಘದ product. ಕಾಂಗ್ರೆಸ್ ಕಮ್ಯುನಿಸ್ಟ್‌ನ productಗಳು ಸರಿ ಇಲ್ಲದಿದ್ದರೆ ಹೇಗೆ ಉತ್ತರದಾಯಿತ್ವವಾಗುತ್ತದೋ ಹಾಗೇ ಸಂಘವೂ ಉತ್ತರದಾಯಿತ್ವವಾಗುತ್ತದೆ.

ನಾವು ಸಂಘಕ್ಕೆ ಹೋಗುತ್ತಿದ್ದಾಗ, ನೀವು ಯಾವ ಪಕ್ಷಕ್ಕೇ ಬೇಕಾದರೂ ಹೋಗಿ, ಒಳ್ಳೆಯವರಾಗಿರಿ, ರಾಷ್ಟ್ರೀಯವಾದಿಗಳಾಗಿರಿ ಅಂತಿತ್ತು. 1989ರ ನಂತರ ಅದು ಹಿಂದುತ್ವ ಆಧರಿತ ಬಿಜೆಪಿಯನ್ನು ಬೆಂಬಲಿಸಿತು. ಈಗ ಸಂಘದವರು ನೇರ ಬಿಜೆಪಿಯೇ ಆಗಿರಬೇಕು ಅನ್ನುವ ಅಲಿಖಿತ ನಿಯಮ ಬಂದಾಗಿದೆ. ಹಾಗಾಗಿ ಬಿಜೆಪಿ ಅಂದರೆ ಸಂಘ. ಸಂಘದವರು ಬಿಜೆಪಿಯಾಗಿದೆ. ಇಲ್ಲಿ ರಾಜಕೀಯವಾಗಿ ಬೇರೆ ಪಕ್ಷದ ಪ್ರವೇಶವಾಗುವುದಿಲ್ಲ. ಬಿಜೆಪಿ ಪ್ರಮುಖ ನಾಯಕ ತಾನು ಆರ್‌ಎಸ್‌ಎಸ್‌ ಎಂದು ಪದೇ ಪದೇ ಹೇಳುತ್ತ, ರಾಜಕಾರಣದಲ್ಲಿ ಮಾತನಾಡುವಾಗ ಅದು ಆರ್‌ಎಸ್‌ಎಸ್‌ ಹೊರತುಪಡಿಸಿ ಅನ್ನುವುದು ಕಷ್ಟಸಾಧ್ಯ.

ಈಗ ಬಿಜೆಪಿ ಮುಸ್ಲಿಂ ಧರ್ಮಕ್ಕೆ ಅಪಮಾನ ಮಾಡಿದೆ ಎಂದು ವಕ್ತಾರರನ್ನು ತೆಗೆದಿದೆ. ಭಾಗವತ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ತಾವು ಆರ್‌ಎಸ್‌ಎಸ್‌ ಎಂದು ಹೇಳಿಕೊಳ್ಳುವ ಸ್ವಯಂ ಸೇವಕ ಬಿಜೆಪಿ ಅಥವಾ ಭಜರಂಗದಳ ಅಥವಾ ಜಾಗರಣ ವೇದಿಕೆ ಎಲ್ಲಿಯೇ ಇರಲಿ ಆತ ಇನ್ನು ಮುಂದೆ ಹೊಸ ಹೊಸ ಮಸೀದಿಯಲ್ಲಿ ದೇವರನ್ನು ಹುಡುಕುವಂತಿಲ್ಲ, ಇಸ್ಲಾಂ ಧರ್ಮವನ್ನು ಅವಹೇಳನ ಮಾಡುವಂತಿಲ್ಲ. ಹಾಗೆ ಮಾಡುವುದು ಮಾತೃ ದ್ರೋಹವಾಗುತ್ತದೆ. ಪರಿವಾರದಲ್ಲಿರದ, ಆದರೆ ಆರ್‌ಎಸ್‌ಎಸ್‌ ತನ್ನ ತಾಯಿ ಅನ್ನುವ ಮುತಾಲಿಕರಂಥವರೂ ಕೂಡಾ ತಮ್ಮ ನಿಲುವು ಬದಲಿಸಬೇಕು ಅಥವಾ ಆರ್‌ಎಸ್‌ಎಸ್‌ಗೆ ವಿರುದ್ದ ನಿಲ್ಲಬೇಕು.

ಜಗತ್ತಿನ ಹಳೆಯ ಇತಿಹಾಸ ಯುದ್ಧ ಯುಗ. ಹಿಂದೂಗಳ ಮೇಲೆ ಮೊಘಲರು, ಡಚ್ಚರು, ಪೋರ್ಚುಗೀಸರು, ಬ್ರಿಟಿಷರು, ಗ್ರೀಕರು ಹೀಗೆ ಹಲವರ ಆಕ್ರಮಣವಾಗಿದೆ. ಹಿಂದೂ ರಾಜರ ಮೇಲೆ ಹಿಂದೂ ರಾಜರ, ಮುಸ್ಲಿಂ ರಾಜನ ಮೇಲೆ ಮುಸ್ಲಿಂ ರಾಜನ, ಬೌದ್ಧರ ಮೇಲೆ ಹಿಂದೂಗಳ, ಜೈನರ ಮೇಲೆ ಹಿಂದೂಗಳ, ಹಿಂದೂಗಳ ಮೇಲೆ ಬೌದ್ಧರ ಹೀಗೆ ಯಾವುದೂ ಆಗಿಲ್ಲ ಅನ್ನುವಂತಿಲ್ಲ. ಅನೇಕ ದೇಶಗಳ ಇತಿಹಾಸವೂ ಇದೇ ರೀತಿ. ನಮ್ಮದು ಮಾತ್ರವಲ್ಲ. ಯಾಕೆಂದರೆ ಅದು ಯುದ್ಧ ಯಗ. ಹಾಗಾಗಿ ಭಾಗವತ್ ಅವರ ನಿರ್ಧಾರ ಸರಿ. ಅದನ್ನು ಜಾರಿಗೆ ತರಬೇಕಾದುದು ಮತ್ತು ಸಂಘದವರಲ್ಲದಿದ್ದರೂ ಸಂಘದ ಹೆಸರು ಹೇಳಿ, ಹಾದಿ ಬೀದಿಯಲ್ಲಿ ಹಿಂದುತ್ವದ ಗಲಾಟೆ ಮಾಡುವವರನ್ನು ನಿಯಂತ್ರಣ ಮಾಡಬೇಕಾದುದೂ ಅವರೇ. ಯಾಕೆಂದರೆ ಅವರದೇ ಸರ್ಕಾರ ಈಗ ಇರುವುದು.

ಇದನ್ನೂ ಓದಿರಿ: ಪಠ್ಯ ಪುಸ್ತಕದಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು: ಬರೆದವರ ಹೆಸರನ್ನೇ ಬದಲಿಸಿದ ಚಕ್ರತೀರ್ಥ ಸಮಿತಿ!

ಹಳೆಯದನ್ನೆಲ್ಲ, ಈಗ ಸರಿ ಮಾಡುತ್ತೇನೆ. ಭಾರತದ 30 ಸಾವಿರ ಮಸೀದಿ ಒಳಗಡೆ ಹುಡುಕುತ್ತೇನೆ, ಬೌದ್ಧರ ಸ್ತೂಪಗಳು, ಜೈನರ ಬಸದಿಗಳು ದೇವಸ್ಥಾನವಾಗಿದೆ ಅದನ್ನೂ ಅಗೆದು ನೋಡುತ್ತೇನೆ ಎನ್ನುವುದು ಹೊಸ ಜಗತ್ತಿನಲ್ಲಿ ಅಸಾಧ್ಯವಾದುದು. ಇಂದಿನ ಜಗತ್ತು ಪರಸ್ಪರ ತಳುಕು ಹಾಕಿಕೊಂಡಾಗಿದೆ. ಒಬ್ಬರನ್ನೊಬ್ಬರು ಬಿಟ್ಟು ಬದುಕದ ನಿಸರ್ಗ ನಿಯಮವೊಂದು ನಮ್ಮನ್ನು ಆವರಿಸಿಯಾಗಿದೆ. ಅದಕ್ಕೆ ಬಿಜೆಪಿ ವಕ್ತಾರರು ಹುದ್ದೆ ಕಳೆದುಕೊಂಡದ್ದು. ಮುಸ್ಲಿಂ ವ್ಯಾಪಾರಿಯೊಂದಿಗೆ ಕೋಟ್ಯಾಂತರ ವ್ಯವಹಾರ ಕುದುರಿಸಿದ ಮೋದಿ ಸರ್ಕಾರ, ಏಕಾಏಕಿ ಮುಸ್ಲಿಂ ಧರ್ಮ ಅವಹೇಳನ ಆಗುವಾಗ ಮೌನಕ್ಕೆ ಸರಿಯುವಂತಿಲ್ಲ. ಮುಸ್ಲಿಂ ರಾಷ್ಟ್ರಗಳಲ್ಲಿ ನಮ್ಮವರ ವರ್ತನೆಗಳನ್ನು ಗಂಭೀರವಾಗಿಸಿ, ಅಲ್ಲಿಯೂ ವ್ಯಾಪಾರ ವಹಿವಾಟು ಬಹಿಷ್ಕಾರ , ಭಾರತೀಯ ಉದ್ಯೋಗಿಗಳನ್ನು ಕೈಬಿಡುವ ಚಿಂತನೆ ಜೋರಾಗಿದೆ. ನಾವು ಸಾಮೂಹಿಕವಾಗಿ ಮಸೀದಿ ಅಗೆದರೆ, ನಿಮ್ಮ ದೇವಸ್ಥಾನದಲ್ಲಿ ಬಸದಿಯಿದೆ, ಬೌದ್ಧ ವಿಹಾರವಿದೆ, ಶೈವ ವೈಷ್ಣವ, ಹನುಮನ ಹುಟ್ಟು ಹೀಗೆ ಪಟ್ಟಿ ಬೆಳೆದರೆ ದೇಶ ಛಿದ್ರವಾಗುತ್ತದೆ. ಹಾಗೇ ಆಗಬಾರದು ಅನ್ನುವುದು ರಾಷ್ಟ್ರೀಯವಾದ.

ಇತಿಹಾಸ ಬೇಕು ನಿಜ. ಆದರೆ ಭೌತಿಕವಾಗಿ ಇತಿಹಾಸವನ್ನು ತಿದ್ದುವುದೇ ವರ್ತಮಾನವಾದರೆ ಭವಿಷ್ಯ ಭಯಾನಕವಾಗುತ್ತದೆ. ಯಾಕೆಂದರೆ ಇತಿಹಾಸ ಬಹುತೇಕ ಯುದ್ಧಯಗವಾಗಿತ್ತು. ಅದಕ್ಕೆ ವರ್ತಮಾನದ ನಾವು ಯಾರೂ ಉತ್ತರದಾಯಿಯೂ ಅಲ್ಲ, ಜವಾಬ್ದಾರಿಯೂ ಅಲ್ಲ. ನಾವು ಭವಿಷ್ಯದ ಸುಂದರ ಚಿತ್ರವೊಂದಕ್ಕೆ ನಕ್ಷೆ ಬರೆದು ಬರುವ ನಾಳೆಗೆ ಅದನ್ನು ಕಟ್ಟಿಕೊಡುವುದೇ ವರ್ತಮಾನವಾಗಬೇಕು. ನಮ್ಮ ವರ್ತಮಾನವೇ ನಾಳೆಗೆ ಇತಿಹಾಸ. ಹಳೆಯದನ್ನು ಬಿಟ್ಟು, ಹೊಸತನ್ನು ಕಟ್ಟುವ. ನಮ್ಮ ಮುಂದಿನ ಪೀಳಿಗೆ ನಮ್ಮ ಇತಿಹಾಸವನ್ನು ಕಣ್ಣರಳಿಸಿ ವಾವ್… ಎಂಬ ಉದ್ಗಾರ ತೆಗೆಯುವಂತೆ ಮಾಡೋಣ.

(ಲೇಖಕರು, ಸಂಘ ಪರಿವಾರದ ಮಾಜಿ ನಾಯಕರು, ಕರಾವಳಿಯ ಭಾಗದ ಶಿಕ್ಷಣತಜ್ಞರೂ ಹೌದು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...