ಪ್ರಧಾನ ಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ಮಹಿಳೆಗೆ ವೀಸಾ ಕೊಡಿಸುವುದಾಗಿ ಭರವಸೆ ನೀಡಿ ₹89 ಲಕ್ಷ ವಂಚಿಸಿದ ಆರೋಪದ ಮೇಲೆ 33 ವರ್ಷದ ಬೆಂಗಳೂರಿನ ನಿವಾಸಿಯೊಬ್ಬನನ್ನು ಬುಧವಾರ ಪೊಲೀಸರು ಬಂಧಿಸಲಾಗಿದೆ.
ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಮತ್ತು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ)ನಲ್ಲಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿರುವ ಅರಹಂತ್ ಮೋಹನ್ ಕುಮಾರ್ ಲಕ್ಕವಳ್ಳಿ ಅವರು ಬಿಕಾಂ ಪದವೀಧರರಾಗಿದ್ದು, ಬೆಂಗಳೂರಿನ ರಾಜಾಜಿನಗರದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಂತ್ರಸ್ತೆಯು 2019ರ ಜೂನ್‌ನಲ್ಲಿ ಕೌಲಾಲಂಪುರಕ್ಕೆ ಹೋಗುವಾಗ ವಿಮಾನದಲ್ಲಿ ಮೋಹನ್ ಕುಮಾರ್ ಅವರನ್ನು ಭೇಟಿಯಾಗಿದ್ದರು. ಏಪ್ರಿಲ್ 26 ರಂದು ಬೆಳ್ಳಂದೂರು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ.
ಇಟಾಲಿಯನ್ ಮತ್ತು ಜೆಕ್ ರಿಪಬ್ಲಿಕ್ ವೀಸಾಗಳಿಗಾಗಿ ಮಹಿಳೆ ಅರ್ಜಿಯನ್ನು ಸಲ್ಲಿಸಿದಾಗ ತಿರಸ್ಕೃತವಾಗಿದ್ದವು. ಜನವರಿ 2020ರಲ್ಲಿ ಅವರು ವೀಸಾವನ್ನು ಪಡೆದರು. ಆದರೆ ಅರ್ಜಿಯನ್ನು ಮೊದಲು ಏಕೆ ತಿರಸ್ಕರಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸಿದ್ದರು.
ಮಹಿಳೆಗೆ ಸಹಾಯ ಮಾಡಲು ಮುಂದಾಗಿ ವಿಮಾನದಲ್ಲಿ ಮಹಿಳೆಯನ್ನು ಭೇಟಿಯಾದಾಗ ತನ್ನನ್ನು IB ಅಧಿಕಾರಿ ಎಂದು ಪರಿಚಯಿಸಿಕೊಂಡ ಕುಮಾರ್, ನಿಮ್ಮ ಪಾಸ್‌ಪೋರ್ಟ್ ಅನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ನಿಮ್ಮನ್ನು “ಶಂಕಿತ ಭಯೋತ್ಪಾದಕ ಚಟುವಟಿಕೆಗಳ ಕಾಯ್ದೆ”ಯಡಿ ಹೆಸರಿಸಲಾಗಿದೆ ಎಂದು ನಂಬಿಸಿದ್ದನು.
ಇದನ್ನೂ ಓದಿರಿ: ವಿಶೇಷ ವರದಿ: ಬಿಜೆಪಿ ಅವಧಿಯಲ್ಲಿ ಪರೀಕ್ಷಾ ಅಕ್ರಮ, ಎಡವಟ್ಟುಗಳು & ಶೈಕ್ಷಣಿಕ ಅವ್ಯವಸ್ಥೆ
ಪೊಲೀಸರ ಪ್ರಕಾರ, ಮಹಿಳೆ ತನ್ನ ಹೆಸರನ್ನು ತೆರವುಗೊಳಿಸಲು ಕುಮಾರ್‌ನ ಸಹಾಯವನ್ನು ಕೋರಿದ್ದರು. ಆಸ್ಟ್ರಿಯಾ ಮತ್ತು ಜೆಕ್ ರಿಪಬ್ಲಿಕ್‌ನ ಅಧಿಕಾರಿಗಳಿಗೆ 5 ಲಕ್ಷ ಯುರೋ (ಅಂದಾಜು ₹ 4 ಕೋಟಿ) ಮತ್ತು 2 ಲಕ್ಷ ಯೂರೋ (ಅಂದಾಜು ₹ 2 ಕೋಟಿ) ಪಾವತಿಸಬೇಕಾಗುತ್ತದೆ ಎಂದು ಮೋಹನ್ ಬಂಬಿಸಿದ್ದನು. 2021ರ ಫೆಬ್ರವರಿ ಮತ್ತು ಸೆಪ್ಟೆಂಬರ್‌ನಲ್ಲಿ, ಈ ಉದ್ದೇಶಕ್ಕಾಗಿ ಮಹಿಳೆ ₹89 ಲಕ್ಷವನ್ನು ಮೋಹನ್‌ಗೆ ವರ್ಗಾಯಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆತನಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಸಂತ್ರಸ್ತ ಮಹಿಳೆ ಪೊಲೀಸರ ಮೊರೆ ಹೋಗಿದ್ದಾರೆ.
ಇದರ ಬೆನ್ನಲ್ಲೇ ಮರುದಿನ ಪೊಲೀಸರು ಆತನನ್ನು ಬಂಧಿಸಿದ್ದು, ಮಹಿಳೆಯಿಂದ ಸಾಕಷ್ಟು ದಾಖಲೆಗಳನ್ನು ಕೂಡ ಸಂಗ್ರಹಿಸಿರುವುದು ತಿಳಿದುಬಂದಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಉಪ ಪೊಲೀಸ್ ಕಮಿಷನರ್ (ವೈಟ್‌ಫೀಲ್ಡ್) ಎಸ್ ಗಿರೀಶ್ ಪ್ರತಿಕ್ರಿಯೆ ನೀಡಿದ್ದು, “ಆತ ಯುರೋಪ್ ಮತ್ತು ಇತರ ದೇಶಗಳಲ್ಲಿ ಪ್ರಯಾಣಿಸಿದ್ದು, ತನಿಖೆಗೆ ಸಹಕರಿಸುತ್ತಿಲ್ಲ. ಇತರರಿಗೆ ಆತ ಮೋಸ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆತನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದೇವೆ. ಹಣವನ್ನು ವಾಪಸ್ ಪಡೆಯುತ್ತೇವೆ” ಎಂದು ತಿಳಿಸಿದ್ದಾರೆ.


