Homeಮುಖಪುಟಬೆಂಗಳೂರು: ಗುಡಿಸಲುಗಳ ಧ್ವಂಸಗೈದ ಸರ್ಕಾರದಿಂದ 11 ತಿಂಗಳುಗಳ ನಂತರ ಪರಿಹಾರ ಹಣ ಬಿಡುಗಡೆ!

ಬೆಂಗಳೂರು: ಗುಡಿಸಲುಗಳ ಧ್ವಂಸಗೈದ ಸರ್ಕಾರದಿಂದ 11 ತಿಂಗಳುಗಳ ನಂತರ ಪರಿಹಾರ ಹಣ ಬಿಡುಗಡೆ!

ಅಕ್ರಮವಾಗಿ ಬಾಂಗ್ಲಾದೇಶಿಯರು ನೆಲೆಸಿದ್ದಾರೆ ಎಂಬ ಸುಳ್ಳು ವರದಿ ನಂಬಿ ಬಿಬಿಎಂಪಿ ಮಾಡಿದ ಧ್ವಂಸ ಕಾರ್ಯಾಚರಣೆಯಿಂದಾಗಿ ಒಬ್ಬೇ ಒಬ್ಬ ಅಕ್ರಮ ಬಾಂಗ್ಲಾದೇಶಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.

- Advertisement -
- Advertisement -

ಬೆಂಗಳೂರಿನ ಮಾರತ್ತಹಳ್ಳಿ, ಬೆಳ್ಳಂದೂರು ಬಳಿಯ ಕರಿಯಮ್ಮನ ಅಗ್ರಹಾರ ಎಂಬ ಸ್ಲಂ ಒಂದರಲ್ಲಿ ತಮ್ಮ ಪಾಡಿಗೆ ತಾವು ದುಡಿದು ಬದುಕುತ್ತಿದ್ದ 200ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳ ಗುಡಿಸಲುಗಳನ್ನು ಜನವರಿ 19, 2020ರಂದು ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಬಲದೊಂದಿಗೆ ಧ್ವಂಸಗೊಳಿಸಿದ್ದರು. ಅದಕ್ಕೆ ಸರ್ಕಾರ ಕೊಟ್ಟಿದ್ದ ಕಾರಣ ಅಲ್ಲಿ ಬಾಂಗ್ಲದೇಶಿಯರು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು. ಅದಕ್ಕೆ ಆಧಾರವಾಗಿದ್ದು ಎರಡು ದಿನಗಳ ಹಿಂದೆ ತಾನೇ ಸುವರ್ಣ ನ್ಯೂಸ್ ಮಾಡಿದ್ದು ಕಪೋಲಕಲ್ಪಿತ ಸುದ್ದಿ. ಆದರೆ ಸರ್ಕಾರದ ಈ ಕಾರ್ಯಾಚರಣೆಯಿಂದ ಬೀದಿಗೆ ಬಿದ್ದವರು ಮಾತ್ರ ಉತ್ತರ ಕರ್ನಾಟಕದಿಂದ ವಲಸೆ ಬಂದು ಬದುಕು ಕಟ್ಟಿಕೊಂಡಿದ್ದ ಅಮಾಯಕ ಕುಟುಂಬಗಳು. ಪಿಯುಸಿಎಲ್ ಸಂಘಟನೆಯು ಈ ವಿಚಾರದಲ್ಲಿ ಬಾಧಿತರಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೇ ಗುಡಿಸಲು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ತಾಕೀತು ಮಾಡಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಜಸ್ಟೀಸ್ ಶ್ರೀನಿವಾಸ ಶೆಟ್ಟಿಯವರನ್ನೊಳಗೊಂಡ ಪೀಠವು ಗುಡಿಸಲು ಧ್ವಂಸದಿಂದ ಬಾಧಿತರಾದ 131 ಕುಟುಂಬಗಳಿಗೆ ತಲಾ 14,100/- ರೂ ಪರಿಹಾರ ಹಣ ಮತ್ತು ಹೊಸದಾಗಿ ಗುಡಿಸಲು ನಿರ್ಮಾಣ ಮಾಡಲು ತಲಾ 29,000/- ಸೇರಿ ಕುಟುಂಬವೊಂದಕ್ಕೆ 43,100/- ರೂ ಬಿಡುಗಡೆ ಮಾಡುವಂತೆ ನವೆಂಬರ್ 19 ರಂದು ಆದೇಶಿಸಿತ್ತು. ಇದಕ್ಕೆ ಕರ್ನಾಟಕ ಸರ್ಕಾರ ಒಪ್ಪಿಕೊಂಡಿದ್ದು, ಇದೀಗ 11 ತಿಂಗಳುಗಳ ನಂತರ ಪರಿಹಾರ ಹಣ ಬಿಡುಗಡೆ ಮಾಡಲು ಮುಂದಾಗಿದೆ.


ಇದನ್ನೂ ಓದಿ: ಎನ್‌ಆರ್‌ಸಿ ಗುಮ್ಮ: ಬೆಂಗಳೂರಿನಲ್ಲಿ ಭಾರತೀಯರು ಬೀದಿಗೆ – ಎನ್‌ಆರ್‌ಸಿ, ಸಿಎಎ ಅಪಾಯವನ್ನು ಸಾಬೀತುಪಡಿಸಿದ ಬೆಂಗಳೂರು ಪೊಲೀಸ್


ಈ ವರ್ಷದ ಜನವರಿಯಲ್ಲಿ ನಡೆದ ಸರ್ಕಾರದ ಅನಾಗರಿಕ ಈ ಧ್ವಂಸ ಕಾರ್ಯಾಚರಣೆಯಿಂದಾಗಿ ನೂರಾರು ವಲಸೆ ಕುಟುಂಬಗಳು ಸಮರ್ಪಕ ನೆಲೆಯಿಲ್ಲದೆ ಇಂದಿಗೂ ಪರಿತಪಿಸುತ್ತಿವೆ. ಅಲ್ಲಿ ಅಕ್ರಮವಾಗಿ ಬಾಂಗ್ಲಾದೇಶಿಯರು ನೆಲೆಸಿದ್ದಾರೆ ಎಂಬ ಸುಳ್ಳು ವರದಿ ನಂಬಿದ ಬಿಬಿಎಂಪಿ ಕನಿಷ್ಠ ಪರಿಶೀಲಿಸದೇ ನಡೆಸಿದ ದಾಳಿಯಿಂದಾಗಿ ಸಾವಿರಾರು ಜನ ನಿರಾಶ್ರಿತರಾಗಿದ್ದರು. ಆಗ ನಾನುಗೌರಿ ಪತ್ರಿಕೆ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ಆದರೆ ಅಲ್ಲಿದ್ದವರು ಕರ್ನಾಟಕದ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರುಗಳಿಂದ ವಲಸೆ ಬಂದಿದ್ದ ಕಾರ್ಮಿಕರಾಗಿದ್ದರು. ಅವರ ಬಳಿ ವೋಟರ್ ಐಟಿ, ಆಧಾರ್ ಕಾರ್ಡ್, ವಿದ್ಯುತ್ ಬಿಲ್ ಎಲ್ಲ ಇದ್ದರೂ ಸಹ ಲೆಕ್ಕಿಸದೇ ಅವರ ಗುಡಿಸಲುಗಳನ್ನು ಧ್ವಂಸ ಮಾಡಲಾಗಿತ್ತು. ಆದರೆ ಒಬ್ಬೇ ಒಬ್ಬ ಅಕ್ರಮ ಬಾಂಗ್ಲಾದೇಶಿಯನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ.

ಅಂದು ಆ ಜನರ ಆಕ್ರೋಶ ಯಾವ ರೀತಿ ಇತ್ತು ಎಂಬುದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು.

ಮಾರತ್‌ಹಳ್ಳಿ, ವೈಟ್‌ಫೀಲ್ಡ್, ಮಹದೇವಪುರ, ಕಾಡುಗೋಡಿ, ಕೆ.ಆರ್.ಪುರ ಸೇರಿದಂತೆ ಬೆಂಗಳೂರು ನಗರದ ಹೊರವಲಯದಲ್ಲಿ ಉತ್ತರ ಭಾರತ ಮತ್ತು ಉತ್ತರ ಕರ್ನಾಟಕದಿಂದ ವಲಸೆ ಬಂದ ಸಾವಿರಾರು ಜನ ಕೂಲಿ ಕಾರ್ಮಿಕರು ಹಲವು ಸ್ಲಂಗಳಲ್ಲಿ ಬದುಕುತ್ತಿದ್ದಾರೆ. ಈ ‘ಸ್ಲಂ’ಗಳನ್ನು ನೆಲಬಾಡಿಗೆ ಸ್ಲಂಗಳೆಂದು ಕರೆಯುತ್ತಾರೆ. ಏಕೆಂದರೆ ಈ ಬಡವರು ಭೂಮಿಯ ಮಾಲೀಕರಿಗೆ ನೆಲಬಾಡಿಗೆ ಕೊಡುತ್ತಾ, ಅಲ್ಲಿ ಷೆಡ್ ನಿರ್ಮಿಸಿಕೊಂಡು ವಾಸಿಸುತ್ತಾರೆ.

ತುತ್ತು ಅನ್ನ ನೀಡುತ್ತಿರುವ ಬೆಂಗಳೂರು ಅವರಿಗೆ ಎಷ್ಟು ಅನಿವಾರ್ಯವೋ, ಬೆಂಗಳೂರಿಗೂ ಅವರು ಅಷ್ಟೇ ಅನಿವಾರ್ಯ ಎನ್ನುವುದು ಕಟು ಸತ್ಯ. ಏಕೆಂದರೆ ಮೇಲೆ ಹೆಸರಿಸಿದ ಏರಿಯಾಗಳಲ್ಲಿನ ಪೌರಕಾರ್ಮಿಕ ಕೆಲಸ, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಅಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗ ಮತ್ತು ಮೇಲ್ವರ್ಗದ ಮನೆ ಚಾಕರಿ, ಕಸವಿಂಗಡಣೆ, ಚಿಂದಿ ಆಯುವುದರಿಂದ ಹಿಡಿದು ಶಾಲಾ ವಾಹನಗಳ ಡ್ರೈವರ್‌ಗಳು, ಸೆಕ್ಯುರಿಟಿ ಗಾರ್ಡ್ ಕೆಲಸ, ಹೀಗೆ ವಿವಿಧ ರೀತಿಯ ಜೀವನೋಪಾಯ ಚಟುವಟಿಕೆಗಳಲ್ಲಿ ಕಡಿಮೆ ಕೂಲಿಗೆ ಈ ಜನ ದುಡಿಯುತ್ತಿದ್ದಾರೆ. ಇಂತಹ ಜನ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ನೆಲೆಯೂ ಇಲ್ಲದೆ, ಕೆಲಸವೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದರು.

ಇದೀಗ ಈ ವಿಷಯದಲ್ಲಿ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ ಅದು ಎಚ್ಚೆತ್ತುಕೊಂಡಿದೆ. ಆದರೆ ಕರಿಯಮ್ಮನ ಅಗ್ರಹಾರದಿಂದ 35 ಕಿ.ಮೀ ದೂರದ ಆನೇಕಲ್ ಬಳಿ ಪುನರ್ವಸತಿ ನಿರ್ಮಿಸಿಕೊಡುವುದಾಗಿ ಹೇಳುತ್ತಿದೆ. ಆದರೆ ಇಲ್ಲೆ ತಮ್ಮ ಕೆಲಸಗಳನ್ನು ಕಂಡುಕೊಂಡಿರುವ ಕಾರ್ಮಿಕರು ಅಲ್ಲಿಗೆ ತೆರಳಲು ನಿರಾಕರಿಸಿದ್ದಾರೆ. ಸದ್ಯಕ್ಕೆ 48 ಕುಟುಂಬಗಳಿಗೆ ತಲಾ 14,100/ ರೂ ಪರಿಹಾರ ಹಣ ನೀಡಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಗುಡಿಸಲು ಧ್ವಂಸದ ನೋವಿನ ದಿನಗಳು

ಈ ಅಮಾನುಷ ದಾಳಿ ನಡೆದ ಸಂದರ್ಭದಲ್ಲಿ ದೇಶಾದ್ಯಂತ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ತೀವ್ರ ಹೋರಾಟ ಆರಂಭವಾಗಿತ್ತು. ನೀವು ಭಾರತೀಯರೆಸಿಕೊಳ್ಳಲು ಸರ್ಕಾರ ಕೇಳುವ ದಾಖಲೆ ತೋರಿಸಬೇಕಾಗ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೇ ಸಂದರ್ಭದಲ್ಲಿ ಜನವರಿ 12ರಂದು ಮಹದೇವಪುರ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಯವರು ಟ್ವೀಟ್ ಮಾಡಿ ನನ್ನ ಕ್ಷೇತ್ರದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ಹಾಕಿಕೊಳ್ಳಲಾಗಿದೆ. ಅಲ್ಲಿ ಕಾನೂನುಬಾಹಿರ ಕೃತ್ಯಗಳು ನಡೆಯುತ್ತಿವೆ. ಇದರಿಂದ ಅಲ್ಲಿನ ನೈರ್ಮಲ್ಯ ಹಾಳಾಗಿದೆ. ಶಂಕಿತ ಬಾಂಗ್ಲಾದೇಶಿಯರಿದ್ದಾರೆ, ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ಹೇಳಿದ್ದರು.

ಅಂದು ಬಿಜೆಪಿ ಸಂಸದರೊಬ್ಬರ ಮಾಲೀಕತ್ವದಲ್ಲಿದ್ದು ಮುಸ್ಲಿಂ ವಿರೋಧಿ ಸುದ್ದಿ ಬಿತ್ತರಿಸುವ ಚಾನೆಲ್, ಬಿಜೆಪಿಯ ಸ್ಥಳೀಯ ಶಾಸಕ ಮತ್ತು ಬಿಜೆಪಿ ಆಡಳಿತದಡಿಯ ಪೊಲೀಸ್ ಕಮೀಷನರ್ ಮೂವರೂ ಸೇರಿ ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ಸುಮಾರು 200 ಗುಡಿಸಲುಗಳನ್ನು ಧ್ವಂಸವಾಗಲು ಕಾರಣರಾಗಿದ್ದಾರೆ.

ಇದೇ ಉತ್ತರ ಕರ್ನಾಟಕದಿಂದ ಬಂದ ಅರವಿಂದ ಲಿಂಬಾವಳಿಯವರಿಗೆ ಆಗ ಸಚಿವಗಿರಿ ಪಡೆಯುವುದೇ ಮುಖ್ಯವಾಗಿತ್ತು. ಅವರು ಗೆಲ್ಲುತ್ತಾ ಬಂದಿರುವುದು ಬೆಂಗಳೂರಿನ ಮಹದೇವಪುರ ಮೀಸಲು ಕ್ಷೇತ್ರದಿಂದ. ಮೊದಲ ಬಾರಿ ಅವರು ಗೆದ್ದಾಗ ‘ಬಾಂಗ್ಲಾದೇಶೀಯರು ವಾಸವಿದ್ದ ಈ ಜೋಪಡಿಗಳಿಂದಲೂ ಮತ ಪಡೆದಿದ್ದರು. ಇಲ್ಲಿ ಹಲವಾರು ಬಿಜೆಪಿ ಏಜೆಂಟರಿದ್ದು ಅವರೇ ಇವರಿಗೆ ವೋಟರ್‌ಐಡಿಯನ್ನೂ ಕೊಡಿಸಿದ್ದರು. ನಂತರ ಅವರಿಗೆ ಇಲ್ಲಿಂದ ಮತವೂ ಬೀಳಲಿಲ್ಲ. ಬಾಂಗ್ಲಾದೇಶೀಯರ ಕಥೆಯೂ ಶುರುವಾಯಿತು’ ಎಂದಿದ್ದರು ಸ್ಥಳೀಯ ಕಾರ್ಯಕರ್ತರು.

ಸದ್ಯಕ್ಕಾದರೂ ಬಾಧಿತ ಜನರಿಗೆ ಚೂರುಪಾರು ಪರಿಹಾರ ಸಿಗುತ್ತಿದೆ. ಶೆಡ್ಡುಗಳು ದೊರಕುತ್ತಿವೆ ಎನ್ನುವುದು ಸಮಾಧಾನದ ಸಂಗತಿಯಾಗಿದೆ.


ಇದನ್ನೂ ಓದಿ; ಎನ್‌ಆರ್‌ಸಿ ಗುಮ್ಮ: ಬೆಂಗಳೂರಿನಲ್ಲಿ ಭಾರತೀಯರು ಬೀದಿಗೆ – ಎನ್‌ಆರ್‌ಸಿ, ಸಿಎಎ ಅಪಾಯವನ್ನು ಸಾಬೀತುಪಡಿಸಿದ ಬೆಂಗಳೂರು ಪೊಲೀಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...