Homeಅಂಕಣಗಳುಪುಟಕ್ಕಿಟ್ಟ ಪುಟಗಳುಬೆಂಗಳೂರಿನ ಹುಟ್ಟು, ಒಬ್ಬರಿಂದ ಮತ್ತೊಬ್ಬರ ಕೈಬದಲಾದುದರ ರೋಚಕ ಇತಿಹಾಸ ತಿಳಿಯಲು ಈ ಪುಸ್ತಕ ಓದಿ

ಬೆಂಗಳೂರಿನ ಹುಟ್ಟು, ಒಬ್ಬರಿಂದ ಮತ್ತೊಬ್ಬರ ಕೈಬದಲಾದುದರ ರೋಚಕ ಇತಿಹಾಸ ತಿಳಿಯಲು ಈ ಪುಸ್ತಕ ಓದಿ

ಹೈದರ್ ಅಲಿ ಮರಾಠರ ದಾಳಿಗಳನ್ನು ಎದುರಿಸಲು ಕೆಂಪೇಗೌಡರು ಮಣ್ಣಿಂದ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಮರು ನಿರ್ಮಾಣ ಮಾಡಿದ ಮೇಲೆ ಇದು ಸೇನೆಯ ಕೇಂದ್ರವಾಯಿತು.

- Advertisement -
- Advertisement -

(ಇದು ಬೆಂಗಳೂರು ಮಿರರ್ ಪತ್ರಿಕೆಗಾಗಿ ಗೌರಿಲಂಕೇಶ್ 25, ಜುಲೈ 2016ರಲ್ಲಿ ಮಾಡಿದ ಪುಸ್ತಕ ವಿಮರ್ಶೆಯ ಭಾವಾನುವಾದ)

“ಭಾರತದ ಅರಸೊತ್ತಿಗೆಗಳ ರಾಜಕಾರಣದಲ್ಲಿ ಬೆಂಗಳೂರೊಂದು ಚದುರಂಗದಾಟದ ಕಾಯಿಯಂತಾಗಿದ್ದೇ ಒಂದು ಕುತೂಹಲಕರ ವಿಷಯ. ಕೆಂಪೇಗೌಡರು ನಿರ್ಮಿಸಿದರು. ಬಿಜಾಪುರದ ಸುಲ್ತಾನರಿದನ್ನು ಗೆದ್ದರು. ಮೊಘಲರು ಮಾರಿದರು. ಚಿಕ್ಕದೇವರಾಜ ಒಡೆಯರ್ ಕೊಂಡರು. ಇತಿಹಾಸದ ಭಿನ್ನ ಕಾಲಘಟ್ಟಗಳಲ್ಲಿ ಇದು ಶಹಾಜಿ ಭೋಸ್ಲೇ ಮತ್ತು ಹೈದರ್ ಅಲಿಯವರಿಗೆ ವ್ಯಕ್ತಿಗತವಾಗಿ ಗಳಿಸಿದ ಜಹಗೀರ್ ಆಗಿತ್ತು. ಬ್ರಿಟಿಷ್ ರಾಜ್ ಕಾಲದಲ್ಲಿ ಇಂಗ್ಲೆಂಡಿನ ಗಮನವಾಗಿತ್ತು,” ಇವು ಮೈಸೂರಿನ ರಾಜ್ಯಪಾಲರಾದ ಧರ್ಮವೀರರವರು ಎಂ ಫಜ್ಲುಲ್ ಬರೆದಿರುವ ‘ದ ಸೆಂಚುರೀಸ್’ ಪುಸ್ತಕದ ಮುನ್ನುಡಿಯಲ್ಲಿ ಹೇಳಿರುವ ಮಾತುಗಳು. ಫಜ್ಲುಲ್ ಅವರ ಬಗ್ಗೆ ಹೆಚ್ಚು ತಿಳಿದಿಲ್ಲದಿದ್ದರೂ, 1970ರಲ್ಲಿ ಪ್ರಕಟವಾದ (ಈಗ ಪ್ರತಿಗಳು ದೊರಕುತ್ತಿಲ್ಲ) ಈ ಪುಸ್ತಕ, ಬೃಹತ್ತಾಗಿ ಬೆಳೆಯುತ್ತಿರುವ, ಆಕರ್ಷಕವಾದ ಮತ್ತು ಬಹುಭಾಷಿಕ ನಗರವಾದ ಬೆಂಗಳೂರನ್ನು ತಿಳಿಯಲು ಓದಲೇಬೇಕಾದ ಪುಸ್ತಕ.

ಒತ್ತೊತ್ತಾಗಿ ಬೆಳೆದಿರುವ ಕಾಡುಗಳಿಂದ ಮತ್ತು ಕುರುಚಲು ಕಳೆಗಳಿಂದ ತುಂಬಿದ್ದ ಈ ಪ್ರದೇಶವನ್ನು ಕೆಂಪೇಗೌಡರು ತಮ್ಮ ಕನಸಿನ ನಗರವನ್ನಾಗಿ ರೂಪಿಸಿದರು ಎಂಬುದೇನೋ ಎಲ್ಲರಿಗೂ ಗೊತ್ತು. ಆದರೆ, ಎತ್ತುಗಳು ನಮ್ಮ ಈ ನಗರದ ಮೊದಲ ದಾರಿಯನ್ನು ರೂಪಿಸಿದ್ದು ಎಂದು ಯಾರಿಗೆ ಊಹಿಸಲು ಸಾಧ್ಯ. ತಮ್ಮ ಜ್ಯೋತಿಷಿಗಳು ಗೊತ್ತುಪಡಿಸಿದ 1537ರ ಒಂದು ಶುಭ ಮುಂಜಾನೆಯಲ್ಲಿ ಗೌಡರು ಸಾಂಪ್ರದಾಯಿಕವಾಗಿ ನಿರ್ಮಾಣದ ಕೆಲಸವನ್ನು ಆರಂಭಿಸಿದ್ದರು. ನಗರದ ಹೃದಯಭಾಗವಾಗಿರುವ, ಈಗ ಯಾವುದನ್ನು ದೊಡ್ಡಪೇಟೆ ಚೌಕವೆನ್ನುತ್ತೇವೆಯೋ, ಅಲ್ಲಿ ಹಾಲು ಬಿಳುಪಿನ ನಾಲ್ಕು ಜೊತೆ ಎತ್ತುಗಳು, ಸಿಂಗರಿಸಿದ ನೇಗಿಲುಗಳಿಂದ ನಾಲ್ಕೂ ದಿಕ್ಕುಗಳಿಗೆ ಮುಖ ಮಾಡಿ ಚಲಿಸುತ್ತಾ ಉತ್ತಿದವು. ಹಾಗೆ ನಾಲ್ಕು ದಿಕ್ಕುಗಳಿಗೆ ಮುಖ ಮಾಡಿ ಉತ್ತಲ್ಪಟ್ಟ ಕೇಂದ್ರಭಾಗದಿಂದಲೇ ನಾಲ್ಕು ಮುಖ್ಯ ನಗರಗಳು ತಲೆಯೆತ್ತಿದವು. ಬೆಂಗಳೂರಿನ ಹಳೆಯ ರಸ್ತೆಗಳನ್ನು ಗಮನಿಸಿ. ಚಿಕ್ಕಪೇಟೆ ಮತ್ತು ದೊಡ್ಡಪೇಟೆಯ ರಸ್ತೆಗಳು ಪೂರ್ವದಿಂದ ಪಶ್ಚಿಮಕ್ಕೆ, ಹಲಸೂರು ಗೇಟಿಂದ ಸೊಂಡೇಕೊಪ್ಪ ಗೇಟಿಗಾದರೆ, ಉತ್ತರದಿಂದ ದಕ್ಷಿಣಕ್ಕೆ ಯಲಹಂಕ ಗೇಟಿನಿಂದ ಆನೇಕಲ್ ಗೇಟಿಗೆ ರಸ್ತೆಗಳಾದವು. ಈಗ ಇಕ್ಕಟ್ಟೆನಿಸುವ ದಾರಿಗಳು ಈಗಲೂ ಬೆಂಗಳೂರಿನ ಸದಾ ಚಟುವಟಿಕೆಯಿಂದ ಕೂಡಿರುವ ವಾಣಿಜ್ಯದ ಕೇಂದ್ರವಾಗಿವೆ.

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು ಯಲಹಂಕದಲ್ಲಿದ್ದ ತಮ್ಮ ರಾಜಧಾನಿಯನ್ನು ಬೆಂಗಳೂರಿಗೆ ಬದಲಿಸಿ ಮಣ್ಣಿನ ಕೋಟೆಯನ್ನೂ ಕೂಡ ಕಟ್ಟಿಸಿದರು. ಆಗಲೇ ಇದು ಯಶಸ್ವೀ ವಾಣಿಜ್ಯ ನಗರಿಯಾಗಿ ಇವರ ಕೀರ್ತಿ ಹಬ್ಬಿತು. ಇದರಿಂದ ಪ್ರಭುಗಳು ತಾವು ಸಾಮಂತರೆಂಬುವ ಚೌಕಟ್ಟಿನಿಂದಾಚೆಗೂ ಒಂದು ಹೆಜ್ಜೆ ಇಟ್ಟರು. ಟಂಕಸಾಲೆಯನ್ನು ಸ್ಥಾಪಿಸಿ ತಾವೇ ವೀರಭದ್ರ ವರಹವೆಂದು ನಾಣ್ಯವನ್ನು ಚಲಾವಣೆಗೆ ತಂದರು. ಇದು ವಿಜಯನಗರದ ಆಗಿನ ಅರಸು ಸದಾಶಿವ ರಾಯನನ್ನು ಕೆರಳಿಸಿತು. ಇದು ಕೆಂಪೇಗೌಡರ ಬಂಧನಕ್ಕೆ ಕಾರಣವಾಗಿ ಐದು ವರ್ಷಗಳ ಕಾಲ ಕಾರಾಗೃಹದಲ್ಲಿರಬೇಕಾಯಿತು. ಸದಾಶಿವರಾಯನ ನಂತರ ಪಟ್ಟಕ್ಕೆ ಬಂದ ರಾಮರಾಯ. ಆಗ ಅಹಮದ್ ನಗರ, ಬಿಜಾಪುರ ಮತು ಗೋಲ್ಕಂಡದ ಅರಸರು ಒಟ್ಟಾಗಿ ವಿಜಯನಗರದ ಮೇಲೆ ದಾಳಿ ಮಾಡುವ ಭೀತಿಯಿಂದ ತಮ್ಮ ಅವರು ಖಜಾನೆಯನ್ನು ಹಿಗ್ಗಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಭಾರೀ ಮೊತ್ತದ ಹಣವನ್ನು ಸಂದಾಯ ಮಾಡುವ ಷರತ್ತಿನ ಮೇಲೆ ಕೆಂಪೇಗೌಡರನ್ನು ಬಿಡುಗಡೆ ಮಾಡಿದರು.

ಹಿರಿಯ ಕೆಂಪೇಗೌಡರ ಮಗ ಇಮ್ಮಡಿ ಕೆಂಪೇಗೌಡರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದೇ ಅಲ್ಲದೇ ಪ್ರಖ್ಯಾತವಾದ ನಾಲ್ಕು ಗೋಪುರಗಳನ್ನು ಕಟ್ಟಿಸಿದರು. ಅವರು ಮಹಾನ್ ಯೋಧರಾಗಿದ್ದರೂ ಬಿಜಾಪುರ ಸುಲ್ತಾನರ ವಿರುದ್ಧವಾಗಿ ಹೋರಾಡಲಾಗಲಿಲ್ಲ. ಬಿಜಾಪುರದ ಸುಸಜ್ಜಿತ ಸೇನೆಯಿಂದ ಕೋಟೆಯ ದ್ವಾರಗಳನ್ನು ತೆರೆಯಲು ಒತ್ತಡ ತಂದಾಗ ವಿಧಿಯಿಲ್ಲದೇ ವಿಜಯಿಗಳಿಗೆ ಬೆಂಗಳೂರನ್ನು ಒಪ್ಪಿಸಿ ಮಾಗಡಿಗೆ ಸರಿಯಬೇಕಾಯಿತು.

ಕುತೂಹಲಕರವಾದ ಸಂಗತಿಯೆಂದರೆ, ಛತ್ರಪತಿ ಶಿವಾಜಿಯ ತಂದೆ ಶಹಜಿ ಭೋನ್‍ಸ್ಲೇ ಬಿಜಾಪುರ ಸೇನೆಯ ಮುಂದಾಳಾಗಿದ್ದವರು. ಶಹಜಿಯ ಶೌರ್ಯದಿಂದ ಸಂಪ್ರೀತನಾದ ಎರಡನೆಯ ಅಲಿ ಆದಿಲ್ ಷಾ ಬೆಂಗಳೂರನ್ನು ಜಹಗೀರಾಗಿ ಶಹಜಿಗೇ ಕೊಟ್ಟರು. ಇದರಿಂದಾಗಿ ಶಹಜಿಯ ಇಬ್ಬರು ಮಕ್ಕಳು ಶಿವಾಜಿ ಮತ್ತು ವೆಂಕೋಜಿ ಇಬ್ಬರೂ ಬೆಂಗಳೂರಲ್ಲಿ ಬೆಳೆದರು. ಶಹಜಿಯ ಮರಣಾನಂತರ ಶಿವಾಜಿಗೆ ಪುಣೆಯ ಭಾಗವೂ, ವೆಂಕೋಜಿಗೆ ಬೆಂಗಳೂರಿನ ಭಾಗವೂ ಲಭಿಸಿತು. ಸ್ವಯಂ ಸೇನಾನಿಯಾಗಿದ್ದ ವೆಂಕೋಜಿಯು ತಂಜಾವೂರನ್ನು ವಶಪಡಿಸಿಕೊಂಡು ತನ್ನ ಕೇಂದ್ರವನ್ನು ಅಲ್ಲಿಗೆ ವರ್ಗಾಯಿಸಲು ಆಲೋಚಿಸಿದರು. ತನ್ನ ತುಂಬಿದ ಕೈಗಳಿಂದಾಗಿ ಬೆಂಗಳೂರಿನ ಬಿರುಸಿನ ಚಟುವಟಿಕೆಗಳನ್ನು ನಿರ್ವಹಿಸುವ ಒತ್ತಡವನ್ನು ತಾಳದೇ ಇದನ್ನು ಚಿಕ್ಕದೇವರಾಜ ಒಡೆಯರಿಗೆ ಮೂರು ಲಕ್ಷ ರೂಪಾಯಿಗಳ ರಾಯಧನಕ್ಕೆ ಮಾರುವ ನಿರ್ಧಾರ ಮಾಡಿದರು.

ಬೆಂಗಳೂರಿನೊಂದಿಗೆ ಬಹಳ ಭಾವನಾತ್ಮಕ ಸಂಬಂಧವಿದ್ದ ಶಿವಾಜಿಗೆ ವೆಂಕೋಜಿಯ ಆಲೋಚನೆ ತಿಳಿದು ಭಲೇ ಕೋಪ ಬಂತು. ಬೆಂಗಳೂರನ್ನು ಮಾರದಿರಲು ತಮ್ಮ ಸೋದರನನ್ನು ಕೋರಿಕೊಂಡರು. ವೆಂಕೋಜಿ ಮತ್ತು ಒಡೆಯರ್ ನಡುವೆ ಮಾತುಕತೆಗಳು ನಡೆಯುತ್ತಿರುವಾಗಲೇ ಶಿವಾಜಿಯ ದೇಹಾಂತ್ಯವಾಯಿತು. ಮೊಘಲರು ಮತ್ತು ಮರಾಠರಿಬ್ಬರೂ ಬೆಂಗಳೂರನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದ್ದರು. ಆದರೆ, ಮರಾಠರ ದುರದೃಷ್ಟಕ್ಕೆ ಮೊಘಲರ ಸೇನೆ ಮುಂದಾಗಿ ಬಂತು ಮತ್ತು 1687ರಲ್ಲಿ ವೆಂಕೋಜಿಯನ್ನು ಪರಾಜಯಗೊಳಿಸಿತು.

ಹಸನ್ ಗುರುತಿಸುವಂತೆ ಕಾಸ್ಮಾಪಾಲಿಟನ್ (ಸಮದರ್ಶಿ ಅಥವಾ ವಿಶ್ವಪ್ರಜೆ) ಗುಣ ಈ ನಗರದ ಚರಿತ್ರೆಯಲ್ಲೇ ಬೇರುಬಿಟ್ಟಿದೆ. ಮೊಘಲರ ಅಧಿಕಾರಿಗಳು ಮತ್ತು ಯೋಧರು ಪುಶ್ತು, ಪಂಜಾಬಿ, ಗುಜರಾತಿ, ರಾಜಸ್ತಾನಿ, ಮೊಘಲಾಯಿ ಮತು ಪಾರ್ಸಿ ಭಾಷೆಗಳನ್ನು ಆಡುತ್ತಿದ್ದರು. ಸ್ಥಳೀಯರು ಮತ್ತು ಹೊರಗಿಂದ ಬಂದವರಿಗೆ ಸಂಪರ್ಕ ಭಾಷೆಯಾಗಿದ್ದದ್ದು ದಕ್ಷಿಣದಲ್ಲಿ ದಖನಿ ಎಂದು ಕರೆಯಿಸಿಕೊಳ್ಳಲ್ಪಡುವ ರೆಖ್ತಾ ಮತ್ತು ವಿಂಧ್ಯ ಪ್ರಾಂತ್ಯವನ್ನು ದಾಟಿ ರೂಪುಗೊಂಡಿದ್ದ ಉರ್ದು. ಮೊಘಲರು ಬೆಂಗಳೂರಿನಲ್ಲಿ ತಮ್ಮ ಚಟುವಟಿಕೆಗಳಲ್ಲಿ ನಿರತವಾಗಿರುವಾಗಲೇ ಒಡೆಯರ್ ತಮ್ಮ ಬೆಂಗಳೂರು ಕೊಳ್ಳುವ ಪ್ರಸ್ತಾಪವನ್ನು ಮತ್ತೆ ಮುಂದಿಟ್ಟರು. ಆಗ 1690ರಲ್ಲಿ ಮೊಘಲರು ಒಡೆಯರಿಗೆ, ಮೊದಲು ವೆಂಕೋಜಿಯ ಜೊತೆ ಮಾತಾಡಿದ್ದ ಮೊತ್ತಕ್ಕೇ ಮಾರಿದರು.

ಚಿಕ್ಕದೇವರಾಜ ಒಡೆಯರ್ ಕೂಡಾ ಕೆಂಪೇಗೌಡರಂತೆ ಬೆಂಗಳೂರಿನ ಅಭಿವೃದ್ಧಿಗೆ ಹಾತೊರೆದರು. ಆದರೆ ಅವರ ಮರಣಾನಂತರ ತಮ್ಮ ನೆರೆಹೊರೆಯ ಪ್ರಾಂತ್ಯಗಳ ನಿರಂತರ ದಾಳಿ ಮತ್ತು ಕಿರುಕುಳಗಳಿಂದ ಮೈಸೂರು ಸೊರಗಿತು. ಆಗ ಮೈಸೂರು ಅರ್ಕಾಟಿನ ನವಾಬನಿಗೆ ನಾಲ್ಕು ಕೋಟಿಗಳ ಬಾಕಿಯನ್ನು ಸಲ್ಲಿಸಬೇಕಿತ್ತು, ಸಲಾಬತ್ ಜಂಗ್ 56 ಲಕ್ಷ ರೂಪಾಯಿಗಳನ್ನು ಕಸಿದುಕೊಂಡ. ಪೇಶ್ವೆ ಬಾಲಾಜಿ ರಾವ್ ಒತ್ತಾಯಪೂರ್ವಕವಾಗಿ 32 ಲಕ್ಷ ರೂಪಾಯಿಗಳನ್ನು ಪಡೆದರು. ಒಡೆಯರ್ ಅರಸೊತ್ತಿಗೆಯು ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವಾಗ ನೆರವಿಗೆ ಬಂದಿದ್ದು ಪರಾಕ್ರಮಿ ಯೋಧ ಹೈದರ್ ಅಲಿ. ಮತ್ತೊಮ್ಮೆ ಮರಾಠ ಸೈನ್ಯ ಮೈಸೂರಿನ ಮೇಲೆ ದಾಳಿ ಮಾಡಿದಾಗ ಎದುರಿಸಿದ್ದು ಇದೇ ಹೈದರ್ ಅಲಿ. ತಮ್ಮ ಅರಸೊತ್ತಿಗೆಯನ್ನು ಕಾಪಾಡಿದ್ದಕ್ಕೆ ಸಂತುಷ್ಟಗೊಂಡ ಮೈಸೂರಿನ ಅರಸರು ಫತೇ ಹೈದರ್ ಬಹಾದ್ದೂರ್ ಎಂದು ಬಿರುದು ನೀಡಿ ಗೌರವಿಸಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಜಹಗೀರಾಗಿ ನೀಡಿದರು. ಹೈದರ್ ಅಲಿ ಮರಾಠರ ದಾಳಿಗಳನ್ನು ಎದುರಿಸಲು ಕೆಂಪೇಗೌಡರು ಮಣ್ಣಿಂದ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಮರು ನಿರ್ಮಾಣ ಮಾಡಿದ ಮೇಲೆ ಇದು ಸೇನೆಯ ಕೇಂದ್ರವಾಯಿತು. ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪಕರಣಗಳ ತಯಾರಿಕೆಗಳಾಗತೊಡಗಿದವು.

ನಂತರ ಬಂದ ಬ್ರಿಟಿಷರು ಬೆಂಗಳೂರಿನ ಮಹತ್ವವನ್ನು ಅರಿತು ಅದನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಮೊದಲಿನ ಪ್ರಯತ್ನಗಳು ವಿಫಲವಾದರೂ 1791ರಲ್ಲಿ ಮಾಡಿದ ಮಹಾಯುದ್ಧದಲ್ಲಿ ಬೆಂಗಳೂರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದರು. ಹಸನ್ ದಾಖಲಿಸುವಂತೆ ಈ ಯುದ್ಧ ಅದೆಷ್ಟು ಭೀಕರವಾಗಿತ್ತೆಂದರೆ ಕೋಟೆಯ ವಿಸ್ತಾರದ ಪ್ರದೇಶಗಳು ಮತ್ತು ಹಳೆಯ ಪಟ್ಟಣ ಜರ್ಜರಿತವಾಗಿ ಅಕ್ಷರಶಃ ಸ್ಮಶಾನವಾಗಿತ್ತು. ಆದರೆ ಒಂದು ವರ್ಷ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದವರು ನಂತರ ಶ್ರೀರಂಗಪಟ್ಟಣದ ಸಂಧಾನದಂತೆ ಟಿಪ್ಪುವಿಗೆ ಮರಳಿ ನೀಡಬೇಕಾಯಿತು.

1799ನಲ್ಲಿ ಟಿಪ್ಪುವಿನ ಮರಣಾನಂತರ ಬೆಂಗಳೂರನ್ನು ಒಡೆಯರವರ ಅಧೀನಕ್ಕೆ ನೀಡಲಾಯಿತು. 1809ರಲ್ಲಿ ಬ್ರಿಟಿಷರು ಬೆಂಗಳೂರು ನಗರದಲ್ಲಿ ಸೇನೆಯ ದಂಡುಪ್ರದೇಶವನ್ನು (ಕಂಟೋನ್ಮೆಂಟ್) ನಿರ್ಮಿಸಿದರು. ಈ ದಂಡು ಪ್ರದೇಶ ವಿಸ್ತಾರವಾದಂತೆ ನಗರದ ಭಾಗವಾಗಿಬಿಟ್ಟಿತು. ಇಲ್ಲೊಂದು ವಿಲಕ್ಷಣ ಸನ್ನಿವೇಶವಿತ್ತು. ಅದೇನೆಂದರೆ, ಮೈಸೂರು ಮಹಾರಾಜರು ನಗರ ಭಾಗದ ಮುಖ್ಯಸ್ಥರಾದರೆ, ದಂಡುಪ್ರದೇಶದ ಯಜಮಾನಿಕೆ ಬ್ರಿಟಿಷರಲ್ಲಿಯೇ ಇತ್ತು. ಸ್ವಾತಂತ್ರ್ಯ ಹೋರಾಟವು ತೀವ್ರತೆಯನ್ನು ಪಡೆದುಕೊಳ್ಳುತ್ತಿದ್ದ ಸಮಯವದು. ಮಹಾರಾಜರು ದಂಡುಪ್ರದೇಶವೂ ತಮ್ಮ ಅಧಿಪತ್ಯಕ್ಕೇ ಒಳಪಡಬೇಕೆಂದು ಒತ್ತಾಯಿಸತೊಡಗಿದರು. ಭಾರತವು ಸ್ವಾತಂತ್ರ್ಯದ ಹೊಸ್ತಿಲಿನಲ್ಲಿರುವಾಗಲೇ 1947ನೇ ವರ್ಷದಲ್ಲೇ ಜುಲೈ 26ರಂದು ಬ್ರಿಟಿಷರು ದಂಡುಪ್ರದೇಶವನ್ನು ಮಹಾರಾಜರಿಗೆ ನೀಡಿದರು. ಎರಡು ವರ್ಷಗಳ ತರುವಾಯ, 1948ರಲ್ಲಿ ಕಂಟೋನ್ಮೆಂಟ್ ಪ್ರದೇಶವು ಬೆಂಗಳೂರು ನಗರದೊಳಗೇ ಸೇರಲ್ಪಟ್ಟು ಬೆಂಗಳೂರು ಮುನ್ಸಿಪಲ್ ಕಾರ್ಪೋರೇಶನ್ ರಚನೆಯಾಯಿತು.

ಇಲ್ಲಿಗೆ ಗೌರಿ ಲಂಕೇಶ್ ಪುಸ್ತಕದ ಬಗ್ಗೆ ಬರೆಯುವಲ್ಲಿ ಲೇಖನಿಗೆ ವಿರಾಮ ನೀಡುತ್ತಾರೆ.

175 ಪುಟಗಳ ಈ ಪುಸ್ತಕದಲ್ಲಿ ಎಂ ಫಜ್ಲುಲ್ ಹಸನ್ ಹಲವಾರು ಹಳೆಯ ಚಿತ್ರಗಳ ದಾಖಲೆಗಳನ್ನು ನೀಡುತ್ತಾರೆ. ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಂತಹ ಐತಿಹಾಸಿಕ ಮಹತ್ವದ ಅನೇಕ ದೇವಾಲಯಗಳ ಚರಿತ್ರೆಯನ್ನೂ, ಬೆಂಗಳೂರಿನ ಪ್ರಖ್ಯಾತ ಕರಗವು ಮೈದಳೆದಿರುವುದನ್ನೂ ವಿವರಿಸುತ್ತಾರೆ. ಬೆಂಗಳೂರಿನ ಮುಖ್ಯ ಆಯುಕ್ತರ ಕಚೇರಿಗಳು ಮತ್ತು ಇತರ ಸಾರ್ವಜನಿಕ ಕಚೇರಿಗಳು ಸ್ಥಾಪಿತವಾಗಿ ಬೆಳೆದುಬಂದ ರೀತಿಯನ್ನು ವಿವರಿಸುತ್ತಾರೆ. ಬೆಂಗಳೂರು ಉದ್ಯಾನ ನಗರವಾಗಿರುವುದರ ಐತಿಹಾಸಿಕ ವಿವರಗಳೊಂದಿಗೆ ಪುಸ್ತಕವನ್ನು ಮುಗಿಸುತ್ತಾರೆ. ಒಟ್ಟಾರೆ ನಾವಿರುವ ನೆಲದ ಕತೆ ಅದೆಷ್ಟು ಥ್ರಿಲ್ ಆಗಿದೆ ಎಂದು ಪುಳಕಗೊಳ್ಳಲು ಪುಸ್ತಕ ಪ್ರೇರೇಪಿಸುತ್ತದೆ. ಜಯನಗರದ ಹಿಸ್ಟಾರಿಕಲ್ ಪಬ್ಲಿಕೇಶನ್ಸ್ 1970ರಲ್ಲಿ ಇದನ್ನು ಪ್ರಕಟಿಸಿದ್ದು ಸದ್ಯಕ್ಕೆ ಪ್ರತಿಗಳು ಸಿಗುವ ಅವಕಾಶದ ಬಗ್ಗೆ ತಿಳಿಯದು. ಆದರೆ Digital Rare Book ನ ರೇರ್ ಬುಕ್ ಸೊಸೈಟಿ ಆಫ್ ಇಂಡಿಯಾದ ಅಂತರ್ಜಾಲದಲ್ಲಿ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಇಡೀ ಪುಸ್ತಕ ಓದಬಹುದು.


ಇದನ್ನೂ ಓದಿ: ಪುಟಕಿಟ್ಟ ಪುಟಗಳು: ದಿವ್ಯ ಜೀವನಕೆ ಪ್ರವೇಶಿಕೆ ಎಂಬ ಆಪ್ತ ಸಮಾಲೋಚನೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...