ಚುನಾವಣೆಯ ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರು ಮಸೀದಿ ಮುಂಭಾಗ ಜೈ ಶ್ರೀರಾಮ್, ಜೈ ಮೋದಿ ಎಂದು ಘೋಷಣೆ ಕೂಗಿ ಕುಣಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕರೋಪಾಡಿ ಗ್ರಾಮದ ಗುಂಡಮಜಲು ಮಸೀದಿ ಮುಂಭಾಗದ ಘಟನೆಯ ವಿಡಿಯೋ ಇದು ಎಂದು ಹೇಳಲಾಗುತ್ತಿದ್ದು, ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕರೋಪಾಡಿ ಗ್ರಾಮದ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದರು. ಈ ವೇಳೆ ಮಸೀದಿ ಮುಂಭಾಗ ಬ್ರಿಜೇಶ್ ಚೌಟ, ಕೋಟಾ, ಜೈ ಶ್ರೀರಾಮ್ ಹಾಗೂ ಜೈ ಮೋದಿ ಎಂದು ಘೋಷಣೆ ಕೂಗುತ್ತ ಕುಣಿದಾಡಿದ್ದಾರೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ SDPI ದ.ಕ. ಜಿಲ್ಲಾಧ್ಯಕ್ಷ ಅನ್ವರ್ ಸಾದತ್, ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮದ ಗುಂಡಮಜಲು ಮಸೀದಿಯ ಮುಂಭಾಗದಲ್ಲಿ ಬಿಜೆಪಿ ಸಂಘಪರಿವಾರದ ಗೂಂಡಾಗಳು ವಿಜಯೋತ್ಸವದ ಹೆಸರಿನಲ್ಲಿ ಅಕ್ರಮ ಕೂಟ ಕಟ್ಟಿ, ಪ್ರಚೋದನಕಾರಿ ಘೋಷಣೆ ಕೂಗಿ ಭಯದ ವಾತಾವರಣ ನಿರ್ಮಾಣ ಮಾಡಿ, ನಾಡಿನ ಶಾಂತಿಗೆ ಭಂಗ ತರುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಪರಿಸ್ಥಿತಿ ಕೈ ಮೀರುವ ಮುನ್ನ ಕಿಡಿಗೇಡಿಗಳ ಮೇಲೆ ಕಠಿಣ ಸೆಕ್ಷನ್ ಹಾಕಿ ಬಂಧಿಸಿ ಕಾನೂನಿನ ರುಚಿ ತೋರಿಸಬೇಕಿದೆ ಎಂದು ಹೇಳಿದ್ದು, ವಿಡಿಯೋವನ್ನು ದಕ್ಷಿಣ ಕನ್ನಡದ ಎಸ್ಪಿ, ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಡಿಜಿಪಿ ಅವರಿಗೆ ಟ್ಯಾಗ್ ಮಾಡಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕವಾದ ಅಕ್ರೋಶ ವ್ಯಕ್ತವಾಗಿದ್ದು, ಇದು ಶಾಂತಿಗೆ ಭಂಗ ತರುವ ಪ್ರಯತ್ನ ಎಂದು ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮದ ಗುಂಡಮಜಲು ಮಸೀದಿಯ ಮುಂಭಾಗದಲ್ಲಿ ಬಿಜೆಪಿ ಸಂಘಪರಿವಾರದ ಗೂಂಡಾಗಳು ವಿಜಯೋತ್ಸವದ ಹೆಸರಿನಲ್ಲಿ ಅಕ್ರಮ ಕೂಟ ಕಟ್ಟಿ, ಪ್ರಚೋದನಕಾರಿ ಘೋಷಣೆ ಕೂಗಿ ಭಯದ ವಾತಾವರಣ ನಿರ್ಮಾಣ ಮಾಡಿ, ನಾಡಿನ ಶಾಂತಿಗೆ ಭಂಗ ತರುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ 1/2 pic.twitter.com/P8ETQh0guY
— Anwar Sadath Bajathur (@Shadathbajathor) June 8, 2024
ಇದನ್ನು ಓದಿ: ‘ದಿ ಕಾರವಾನ್’ ಪತ್ರಕರ್ತರ ವಿರುದ್ಧದ ಎಫ್‌ಐಆರ್ ಖಂಡಿಸಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾ


