Homeಮುಖಪುಟರಾಯ್‌ಬರೇಲಿ-ವಯನಾಡ್: ಎರಡು ಕಡೆ ಗೆದ್ದಿರುವ ರಾಹುಲ್ ಉಳಿಸಿಕೊಳ್ಳುವ ಕ್ಷೇತ್ರ ಯಾವುದು?

ರಾಯ್‌ಬರೇಲಿ-ವಯನಾಡ್: ಎರಡು ಕಡೆ ಗೆದ್ದಿರುವ ರಾಹುಲ್ ಉಳಿಸಿಕೊಳ್ಳುವ ಕ್ಷೇತ್ರ ಯಾವುದು?

- Advertisement -
- Advertisement -

2024ರ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಅವರು ವಯನಾಡ್ ಕ್ಷೇತ್ರವನ್ನು ತ್ಯಜಿಸಬಹುದು ಎನ್ನಲಾಗುತ್ತಿದ್ದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಜೂನ್ 8ರಂದು ನಡೆದ ಸಭೆಯಲ್ಲಿ 18 ನೇ ಲೋಕಸಭೆಯಲ್ಲಿ ರಾಹುಲ್ ಗಾಂಧಿಯನ್ನು ವಿರೋಧ ಪಕ್ಷದ ನಾಯಕರಾಗಿ (ಎಲ್‌ಒಪಿ) ನೇಮಿಸುವ ನಿರ್ಣಯವನ್ನು ಅಂಗೀಕರಿಸಿದೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ವಹಿಸುವಂತೆ ರಾಹುಲ್ ಗಾಂಧಿ ಅವರಿಗೆ ಸಿಡಬ್ಲ್ಯುಸಿ ಸರ್ವಾನುಮತದಿಂದ ಮನವಿ ಮಾಡಿದೆ. ಸಂಸತ್ತಿನ ಒಳಗೆ ಈ ಅಭಿಯಾನವನ್ನು ಮುನ್ನಡೆಸಲು ಅವರೇ ಉತ್ತಮ ವ್ಯಕ್ತಿ ಎಂದು ಸಭೆಯ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಹೇಳಿದರು. ಪಕ್ಷದ ಮಾಜಿ ಮುಖ್ಯಸ್ಥರು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಕೇರಳದ ವಯನಾಡ್ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ ಪುನರುಜ್ಜೀವನ ಪ್ರಾರಂಭವಾಗಿದೆ ಮತ್ತು ಸಿಡಬ್ಲ್ಯೂಸಿಯಲ್ಲಿನ ವಾತಾವರಣವು ನಾಲ್ಕು ತಿಂಗಳ ಹಿಂದೆ ಇದ್ದದ್ದಕ್ಕಿಂತ ಈಗ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ವೇಣುಗೋಪಾಲ್ ಹೇಳಿದರು.

“ಭಾರತದ ಜನರು ಮಾತನಾಡಿದ್ದಾರೆ, ಕಾಂಗ್ರೆಸ್‌ಗೆ ಮತ್ತೊಂದು ಅವಕಾಶ ನೀಡಲಾಗಿದೆ, ಅದನ್ನು ಕಟ್ಟುವುದು ನಮಗೆ ಬಿಟ್ಟದ್ದು” ಎಂದು ಅವರು ಹೇಳಿದರು.

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಅಲಪ್ಪುಳದಿಂದ ಹೊಸದಾಗಿ ಚುನಾಯಿತ ಸಂಸದ ಕೆಸಿ ವೇಣುಗೋಪಾಲ್ ಅವರು “ಸಿಡಬ್ಲ್ಯೂಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ರಾಹುಲ್ ಗಾಂಧಿ ಜಿ ಅವರಿಗೆ ಸರ್ವಾನುಮತದಿಂದ ವಿನಂತಿಸಿದೆ” ಎಂದು ಹೇಳಿದರು.

ಸಿಡಬ್ಲ್ಯುಸಿ ನಿರ್ಣಯವು ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿಯವರ ಪ್ರಯತ್ನಗಳನ್ನು ಶ್ಲಾಘಿಸಿದೆ.

“ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ವಿನ್ಯಾಸಗೊಳಿಸಿ, ಅದರ ನೇತೃತ್ವ ವಹಿಸಿದ ಕಾರಣದಿಂದ ಪ್ರತ್ಯೇಕಿಸಬೇಕಾಗಿದೆ. ಅವರ ಚಿಂತನೆ ಮತ್ತು ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಈ ಎರಡೂ ಯಾತ್ರೆಗಳು ನಮ್ಮ ರಾಷ್ಟ್ರದ ರಾಜಕೀಯದಲ್ಲಿ ಐತಿಹಾಸಿಕ ತಿರುವುಗಳು ಮತ್ತು ಭರವಸೆಯನ್ನು ಹುಟ್ಟುಹಾಕಿದವು. ಮತ್ತು ನಮ್ಮ ಲಕ್ಷಗಟ್ಟಲೆ ಕಾರ್ಯಕರ್ತರು ಮತ್ತು ಕೋಟ್ಯಂತರ ಮತದಾರರಲ್ಲಿ ವಿಶ್ವಾಸವಿಟ್ಟುಕೊಂಡಿದ್ದ ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರವು ಏಕ-ಮನಸ್ಸಿನಿಂದ ಕೂಡಿತ್ತು. 2024 ರ ಚುನಾವಣೆಯಲ್ಲಿ ನಮ್ಮ ಗಣರಾಜ್ಯದ ಸಂವಿಧಾನದ ರಕ್ಷಣೆಯನ್ನು ಕೇಂದ್ರ ವಿಷಯವನ್ನಾಗಿ ಮಾಡಿದವರು. ಚುನಾವಣಾ ಪ್ರಚಾರದಲ್ಲಿ ಅತ್ಯಂತ ಶಕ್ತಿಯುತವಾಗಿ ಪ್ರತಿಧ್ವನಿಸಿದ ಪಂಚನ್ಯಾಯ್-ಪಚೀಸ್ ಗ್ಯಾರಂಟಿ ಕಾರ್ಯಕ್ರಮವು ರಾಹುಲ್‌ಜಿ ಅವರ ಯಾತ್ರೆಗಳ ಫಲಿತಾಂಶವಾಗಿದೆ. ಇದರಲ್ಲಿ ಅವರು ವಿಶೇಷವಾಗಿ ಯುವಕರು, ಮಹಿಳೆಯರು, ರೈತರು, ಕಾರ್ಮಿಕರು, ದಲಿತರು, ಆದಿವಾಸಿಗಳು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಜನರ ಭಯ, ಕಾಳಜಿ ಮತ್ತು ಆಕಾಂಕ್ಷೆಗಳನ್ನು ಆಲಿಸಿದರು” ಎಂದು ಹೇಳಿದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯು ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮನೀಶ್ ತಿವಾರಿ, ಡಿಕೆ ಶಿವಕುಮಾರ್, ರೇವಂತ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೂನ್ 17 ರೊಳಗೆ ನಿರ್ಧಾರ

“ವಯನಾಡ್ ಅಥವಾ ರಾಯ್‌ಬರೇಲಿ ಸ್ಥಾನವನ್ನು ತೆರವು ಮಾಡುವ ಬಗ್ಗೆ, ಜೂನ್ 17 (ಸೋಮವಾರ) ಅಥವಾ ಅದಕ್ಕೂ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುವುದು. ಒಬ್ಬರು ಕೇವಲ ಒಂದು ಸ್ಥಾನವನ್ನು ಮಾತ್ರ ಹಿಡಿಯಬಹುದು ಎಂಬುದು ಸ್ಪಷ್ಟವಾಗಿದೆ. ಎರಡೂ ಕ್ಷೇತ್ರಗಳು ಅವರಿಗೆ ಬಹಳ ಹತ್ತಿರದಲ್ಲಿವೆ. ಹಾಗಾಗಿ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೇಣುಗೋಪಾಲ್ ಇಂದು ಮುಂಜಾನೆ ಹೇಳಿದರು.

ಕೇರಳದ ಕಾಂಗ್ರೆಸ್ ನಾಯಕರು ವಯನಾಡ್ ಅನ್ನು ಉಳಿಸಿಕೊಳ್ಳಲು ರಾಹುಲ್ ಗಾಂಧಿಯವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಅವರ ಅವರು ಕ್ಷೇತ್ರವನ್ನು ತೆರವು ಮಾಡಲು ನಿರ್ಧರಿಸಿದರೆ ಆ ಸ್ಥಾನದಿಂದ ಪಕ್ಷವು ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಸಿಡ್ಲ್ಯೂಸಿ ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಡಿಕೆ ಶಿವಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದನ್ನೂ ಓದಿ; ‘ಪಾಂಡಿಯನ್ ನನ್ನ ಉತ್ತರಾಧಿಕಾರಿ ಅಲ್ಲ, ಅದನ್ನು ಜನರು ನಿರ್ಧರಿಸುತ್ತಾರೆ..’; ನಿರ್ಗಮಿತ ಒಡಿಶಾ ಸಿಎಂ ನವೀನ್ ಪಟ್ನಾಯಕ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಆರ್‌ಎಫ್‌ಟಿಐ ವಿದ್ಯಾರ್ಥಿಗಳ ಹೋರಾಟಕ್ಕೆ ನಾಸಿರುದ್ದೀನ್ ಶಾ, ಪಾಯಲ್ ಕಪಾಡಿಯಾ ಬೆಂಬಲ; ಬಿಜೆಪಿ ವಿರುದ್ಧ ನಟನ ವಾಗ್ದಾಳಿ

ಕೋಲ್ಕತ್ತಾ: ಕೋಲ್ಕತ್ತಾದ ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಸ್‌ಆರ್‌ಎಫ್‌ಟಿಐ)ಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಹಿರಿಯ ನಟ ನಾಸಿರುದ್ದೀನ್ ಶಾ ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕಿ ಪಾಯಲ್ ಕಪಾಡಿಯಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ...

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ: ದೆಹಲಿ ಮೂಲದ ರಿತೇಶ್ ಪಾಂಡೆ ಬಂಧನ: ತನಿಖೆ ಚುರುಕು 

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆಪಾದಿತ ಕುಟುಕು ಕಾರ್ಯಾಚರಣೆಯ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರ ಅಪರಾಧ ವಿಭಾಗದ ವಿಶೇಷ ತಂಡ ದೆಹಲಿ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಪ್ರಕರಣದಲ್ಲಿ ನಡೆದಿರುವ ಮೊದಲ...

ಕೆಪಿಎಸ್‌ಸಿ ನೇಮಕಾತಿ ಹಗರಣ : ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಿಎಂ ಅನುಮತಿ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ (ಅ.24) ಅನುಮತಿ ನೀಡಿದ್ದಾರೆ. ಈ...

ಶಾಂತಿ ಬಾಂಡ್‌ಗೆ ಸಹಿ ಹಾಕಲು ನಿರಾಕರಿಸಿದ ನೇಹಾ ಬೋರಾ; ನೋಟಿಸ್‌ನ ಔಚಿತ್ಯದ ಬಗ್ಗೆ ಪ್ರಶ್ನೆ

ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ) ಅಧ್ಯಕ್ಷೆ ನೇಹಾ ಬೋರಾ ಅವರು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ (ಎಸ್‌ಇಎಂ) ಮುಂದೆ ಶಾಂತಿ ಬಾಂಡ್‌ಗೆ ಸಹಿ ಹಾಕುವುದಿಲ್ಲ ಎಂದು ಶನಿವಾರ (ಅ. 24) ಹೇಳಿದ್ದಾರೆ. ರೂ....

ಚುನಾವಣಾ ಆಯೋಗದ ಕಾರ್ಯವೈಖರಿ ಪರಿಶೀಲಿಸಲು ನಿವೃತ್ತ ಸಿಜೆಐ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಭಾರತೀಯ ಚುನಾವಣಾ ಆಯೋಗದ (ಇಸಿಐ) ಕಾರ್ಯನಿರ್ವಹಣೆಯಲ್ಲಿರುವ ಸಾಂಸ್ಥಿಕ ನ್ಯೂನತೆಗಳನ್ನು ಪರಿಶೀಲಿಸಲು, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ನಿವೃತ್ತ ನ್ಯಾಯಾಧೀಶರೊಬ್ಬರ ಅಧ್ಯಕ್ಷತೆಯಲ್ಲಿ ಸ್ವತಂತ್ರ ತಜ್ಞ ಸಮಿತಿಯೊಂದನ್ನು ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ...

ಗೋವು ಕಳ್ಳಸಾಗಣೆ ಆರೋಪ: ಮುಸ್ಲಿಮರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸುತ್ತಿರುವ ಉತ್ತರ ಪ್ರದೇಶ ಪೊಲೀಸರು!

ಪೊಲೀಸರು ಬಿಡುಗಡೆ ಮಾಡುವ ವಿಡಿಯೊಗಳಲ್ಲಿ ಒಂದೇ ರೀತಿಯ ದೃಶ್ಯಗಳು ಮರುಕಳಿಸುತ್ತವೆ: ಕಾಲಿನ ಕೆಳಭಾಗಕ್ಕೆ ಗುಂಡೇಟು ತಗುಲಿದ ವ್ಯಕ್ತಿಯೊಬ್ಬರು ಕತ್ತಲಿನಲ್ಲಿ ಕುಂಟುತ್ತಾ ಸಾಗುತ್ತಿದ್ದರೆ, ಪೊಲೀಸರು ಅವರನ್ನು ಸುತ್ತುವರಿದು ಕರೆದೊಯ್ಯುತ್ತಾರೆ. ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ...

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ₹13.97 ಕೋಟಿ ಅನಧಿಕೃತ ವಹಿವಾಟು: ಎಫ್‌ಐಆರ್ ದಾಖಲು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜೊತೆಗಿನ ತನ್ನ ಸೆಟಲ್‌ಮೆಂಟ್ ಖಾತೆಯಿಂದ ರೂ 13.97 ಕೋಟಿ ಹಣವನ್ನು ಅನಧಿಕೃತವಾಗಿ ವರ್ಗಾಯಿಸಲಾಗಿದೆ (ಸೈಫನ್ ಮಾಡಲಾಗಿದೆ) ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಆರೋಪಿಸಿದೆ. ಹಿಂದುಸ್ತಾನ್ ಟೈಮ್ಸ್...

ಡಿ.ಕೆ ಶಿವಕುಮಾರ್, ಕೇರಳ ಸಿಎಂ ಸತೀಶನ್‌ಗೆ ಸ್ಟಿಂಗ್ ಆಪರೇಷನ್ ಬಲೆ? ಉನ್ನತ ಮಟ್ಟದ ತನಿಖೆಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲು ಯತ್ನಿಸಲಾಗಿದೆ ಎಂಬ ಆರೋಪದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಕಾಂಗ್ರೆಸ್ ಹೈಕಮಾಂಡ್...

‘ಬಿಳೇಕಹಳ್ಳಿ’ ಮೆಟ್ರೋ ನಿಲ್ದಾಣಕ್ಕೆ ಕೇವಲ ‘ಐಐಎಂಬಿ’ ಹೆಸರಿಟ್ಟಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ : ಮರುನಾಮಕರಣಕ್ಕೆ ಆಗ್ರಹ

ಬೆಂಗಳೂರಿನ 'ನಮ್ಮ ಮೆಟ್ರೋ' ಗುಲಾಬಿ ಮಾರ್ಗದ (Pink Line) 'ಬಿಳೇಕಹಳ್ಳಿ' ನಿಲ್ದಾಣಕ್ಕೆ ಕೇವಲ ಐಐಎಂಬಿ (ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು) ಎಂದು ಹೆಸರಿಟ್ಟಿರುವುದಕ್ಕೆ ಊರಿನ ಜನರು ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದು,...

ಬಾಲ್ಯದಲ್ಲಿ ಮಾಡಿದ ಕೃತ್ಯಗಳಿಗಾಗಿ ಸೌದಿಯಲ್ಲಿ ಮರಣದಂಡನೆ: ವಿಶ್ವಸಂಸ್ಥೆ ತಜ್ಞರ ತೀವ್ರ ಖಂಡನೆ, ಇಬ್ಬರ ಜೀವ ಉಳಿಸಲು ಆಗ್ರಹ

ಸೌದಿ ಅರೇಬಿಯಾದಲ್ಲಿ ಬಾಲ್ಯದಲ್ಲಿ ಮಾಡಿದ ಕೃತ್ಯಗಳಿಗಾಗಿ ಮರಣದಂಡನೆಗೆ ಗುರಿಯಾಗಿದ್ದ ಹಸನ್ ಝಾಕಿ ಅಲ್-ಫರಾಜ್ ಅವರನ್ನು ಗಲ್ಲಿಗೇರಿಸಿರುವುದಕ್ಕೆ ವಿಶ್ವಸಂಸ್ಥೆಯ ತಜ್ಞರು ತೀವ್ರ ಆಘಾತ ಮತ್ತು ಖಂಡನೆ ವ್ಯಕ್ತಪಡಿಸಿದ್ದಾರೆ. ಇದೇ ಪ್ರಕರಣದ ಮಾದರಿಯಲ್ಲಿ ಮರಣದಂಡನೆ ಎದುರಿಸುತ್ತಿರುವ...