Homeಮುಖಪುಟಬಿಬಿಸಿ ಸಾಕ್ಷ್ಯಾಚಿತ್ರ: ಭಾಗ ಎರಡರಲ್ಲಿ ಪ್ರಧಾನಿ ಮೋದಿ ಕುರಿತು ಹೇಳಿರುವುದೇನು?

ಬಿಬಿಸಿ ಸಾಕ್ಷ್ಯಾಚಿತ್ರ: ಭಾಗ ಎರಡರಲ್ಲಿ ಪ್ರಧಾನಿ ಮೋದಿ ಕುರಿತು ಹೇಳಿರುವುದೇನು?

ಮೊದಲ ಭಾಗದಲ್ಲಿ ಗುಜರಾತ್ ಗಲಭೆಯ ಕುರಿತು ಚಿತ್ರಿಸಿದ್ದರೆ, ಮೋದಿ ಪ್ರಧಾನಿಯಾದ ಬಳಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಆಗಿರುವ ಬೆಳವಣಿಗೆಗಳ ಕುರಿತು ಎರಡನೇ ಭಾಗ ಚರ್ಚಿಸಿದೆ.

- Advertisement -
- Advertisement -

ಲಂಡನ್: ಪ್ರಧಾನಿ ಮೋದಿಯರವರ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರವಾದ ‘ಇಂಡಿಯಾ: ದಿ ಮೋದಿ ಕ್ವಶ್ಚನ್‌’ ಎರಡನೇ ಭಾಗ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ 2002ರ ಗುಜರಾತ್‌ ಗಲಭೆಯ ಕುರಿತು ಬೆಳಕು ಚೆಲ್ಲಿದ್ದು ಸಾಕ್ಷ್ಯಾಚಿತ್ರ ವಿವಾದಕ್ಕೆ ಕಾರಣವಾಗಿತ್ತು. ಮೋದಿಯವರು ಪ್ರಧಾನಿಯಾದ ಬಳಿಕ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಆಗಿರುವ ಬೆಳವಣಿಗೆಗಳನ್ನು ಸಾಕ್ಷ್ಯಾಚಿತ್ರದ ಎರಡನೇ (ಹಾಗೂ ಕೊನೆಯ) ಭಾಗದಲ್ಲಿ ಚರ್ಚಿಸಲಾಗಿದೆ.

ಮುಸ್ಲಿಮರ ಮೇಲೆ ಮಾಬ್‌ ಲಿಂಚಿಂಗ್‌, ಆರ್ಟಿಕಲ್ 370 ಮತ್ತು ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯಿದೆ, 2020ರಲ್ಲಿ ಈಶಾನ್ಯ ದೆಹಲಿಯಲ್ಲಿದ್ದಾಗ ಕೋಮು ಹಿಂಸಾಚಾರದ ಕುರಿತು ಈ ಸಾಕ್ಷ್ಯಾಚಿತ್ರ ಚರ್ಚಿಸಿದೆ. ಈ ಅಂತಿಮ ಸರಣಿಯಲ್ಲಿ ಬಿಬಿಸಿ ಮಾಧ್ಯಮವು ಸ್ವತಂತ್ರ ವರದಿಗಳು, ಸಾಕ್ಷ್ಯಗಳು, ಬಾಧಿತರು, ಶಿಕ್ಷಣ ತಜ್ಞರು, ಪತ್ರಿಕರ್ತರು ಮತ್ತು ನಾಗರಿಕ ಸಮಾಜದ ಅಭಿಪ್ರಾಯಗಳನ್ನು ದಾಖಲಿಸಿದೆ. ಬಿಜೆಪಿಯ ದೃಷ್ಟಿಕೋನವನ್ನು ಪ್ರತಿನಿಧಿಸುವ ಮೂರು ವ್ಯಕ್ತಿಗಳ ಅಭಿಪ್ರಾಯಗಳನ್ನೂ ಇದು ಒಳಗೊಂಡಿದೆ. ಪ್ರಮುಖವಾಗಿ ಪತ್ರಕರ್ತ ಮತ್ತು ಬಿಜೆಪಿಯ ಮಾಜಿ ಸಂಸದ ಸ್ವಪನ್ ದಾಸ್‌ಗುಪ್ತಾ ಅವರ ಹೇಳಿಕೆಗಳು ಇಲ್ಲಿವೆ.

‘ಅಭ್ಯುದಯದ ಹೊಸ ಯುಗ’ ಮತ್ತು ‘ನವ ಭಾರತ’ದ ಭರವಸೆಯನ್ನು ಮೋದಿಯವರು ನೀಡಿದರೂ, ಅವರ ಅಧಿಕಾರವಧಿಯಲ್ಲಿ ದೇಶವು ‘ಧಾರ್ಮಿಕ ಪ್ರಕ್ಷುಬ್ಧತೆಯಿಂದ ಹಾಳಾಗಿದೆ’ ಎಂದು ಸಾಕ್ಷ್ಯಚಿತ್ರ ಪ್ರತಿಪಾದಿಸುತ್ತದೆ. ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ಭಾರತದ ಅತ್ಯುನ್ನತ ನ್ಯಾಯಾಲಯವು ತೆರವುಗೊಳಿಸಿದ್ದರೂ, ‘ಆತಂಕಗಳು ದೂರವಾಗುವುದಿಲ್ಲ’ ಎಂದು ಹೊಸ ಸಂಚಿಕೆ ಪ್ರತಿಪಾದಿಸಿದೆ.

ಮಾಬ್ ಲಿಂಚಿಂಗ್‌ (ಗೋರಕ್ಷಣೆ ನೆಪದಲ್ಲಿ ಹಿಂಸೆಗಳು)

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೂರು ವರ್ಷಗಳ ನಂತರ, ಮುಸ್ಲಿಮರ ವಿರುದ್ಧ ವ್ಯಾಪಕವಾಗಿ ಹಲ್ಲೆ ಪ್ರಕರಣಗಳು ನಡೆದಿವೆ. ಗೋಮಾಂಸ ಸಾಗಣೆ ವಿಚಾರ ಹೆಚ್ಚಾಗಿ ವಿವಾದಾಸ್ಪದವಾಗಿದೆ.  ನಂತರ ಅನೇಕ ಭಾರತೀಯ ರಾಜ್ಯಗಳಲ್ಲಿ ಗೋಮಾಂಸವನ್ನು ಕಾನೂನುಬಾಹಿರ ಮಾಡಲಾಯಿತು. ಏಕೆಂದರೆ ಗೋವುಗಳನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಗೋವಿನ ರಕ್ಷಣೆ ವಿಷಯವನ್ನು ಕೇಂದ್ರೀಕರಿಸುವ ಈ ಭಾಗವು 2017ರಲ್ಲಿ ಗೋರಕ್ಷಕರಿಂದ ಕೊಲ್ಲಲ್ಪಟ್ಟ ಅಲಿಮುದ್ದೀನ್ ಅನ್ಸಾರಿ ಅವರ ಕಥೆಯನ್ನು ಹೇಳುತ್ತದೆ. ಸುದೀರ್ಘ ಮೌನದ ನಂತರ ಪ್ರಧಾನಿ ಮೋದಿಯವರು ಈ ಕುರಿತು ಮಾತನಾಡಿದ್ದರು.

ಅಲಿಮುದ್ದೀನ್‌ನ ಹತ್ಯೆಯಲ್ಲಿ ಬಿಜೆಪಿ ವಕ್ತಾರ ನಿತ್ಯಾನಂದ ಮಹತೋ ಹೇಗೆ ತಪ್ಪಿತಸ್ಥರೆಂದು ಸಾಬೀತಾಯಿತು ಮತ್ತು ಜೀವಾವಧಿ ಶಿಕ್ಷೆಗೆ ಗುರಿಯಾದರು ಎಂಬುದನ್ನು ಸಾಕ್ಷ್ಯಚಿತ್ರವು ವರದಿ ಮಾಡಿದೆ. ಆದರೆ ಮೋದಿಯವರ ಮಂತ್ರಿಗಳಲ್ಲಿ ಒಬ್ಬರು ಅವರಿಗೆ ಸಹಾಯ ಮಾಡಿದ್ದನ್ನು, ತಪ್ಪಿತಸ್ತರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದ ಬೆಳವಣಿಗೆಗಳ ಕುರಿತು ಇಲ್ಲಿ ದಾಖಲಿಸಲಾಗಿದೆ.

“ಅವರು ಇಡೀ ದೇಶದ ಆಡಳಿತಗಾರರು. ಅಂಥವರು ಈ ಜನರನ್ನು ಬೆಂಬಲಿಸಿದಾಗ, ನಾವು ಬಡವರು ಏನನ್ನೂ ಮಾಡಲು ಸಾಧ್ಯವಿಲ್ಲ” ಎಂದು ಚಿತ್ರದಲ್ಲಿ ಅನ್ಸಾರಿ ಅವರ ಪತ್ನಿ ಅಳಲು ತೋಡಿಕೊಂಡಿದ್ದಾರೆ. ಹಲ್ಲೆ ನಡೆಸಿದವರು ನಾಲ್ಕು ವರ್ಷಗಳ ನಂತರವೂ ಸ್ವತಂತ್ರರಾಗಿದ್ದಾರೆ ಎಂದು ವಿಷಾದಿಸಿದ್ದಾರೆ.

ಹ್ಯೂಮನ್‌ ರೈಟ್ಸ್‌ ವಾಚ್ ಪ್ರಕಾರ, “ಮೇ 2015 ಮತ್ತು ಡಿಸೆಂಬರ್ 2018ರ ನಡುವೆ ಮೂರೂವರೆ ವರ್ಷಗಳಲ್ಲಿ, ಗೋರಕ್ಷಕರು, ಗೋಸಂಬಂಧಿ ಹಿಂಸಾಚಾರದಲ್ಲಿ 44 ಜನರನ್ನು ಕೊಂದು ಸುಮಾರು 280 ಮಂದಿಯನ್ನು ಗಾಯಗೊಳಿಸಿದ್ದಾರೆ, ಅದರಲ್ಲಿ ಹೆಚ್ಚಿನ ಬಲಿಪಶುಗಳು ಮುಸ್ಲಿಮರು” ಎನ್ನುತ್ತದೆ. ಈ ವಿಷಯಗಳನ್ನು ಸಾಕ್ಷ್ಯಾಚಿತ್ರ ದಾಖಲಿಸಿದೆ.

ವಿಧಿ 370 ರದ್ಧತಿ

ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ಆಗಸ್ಟ್ 2019ರಲ್ಲಿ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶಗಳನ್ನು ರೂಪಿಸಿದ್ದರ ಕುರಿತು ಸಾಕ್ಷಾಚಿತ್ರ ಮಾತನಾಡುತ್ತದೆ.  “ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂಬತ್ತು ವಾರಗಳ ನಂತರ” ಸೇನಾ ಬಲ ಹೆಚ್ಚಿಸಲಾಯಿತು. ಕೇಂದ್ರದ ಹಿಡಿತಕ್ಕೆ ಕಾಶ್ಮೀರವನ್ನು ತೆಗೆದುಕೊಳ್ಳಲಾಯಿತು. ಆದಾಗ್ಯೂ, ಸರ್ಕಾರವು ತನ್ನ ನೀತಿಗಳಿಂದ ಈ ಪ್ರದೇಶದಲ್ಲಿ “ಶಾಂತಿ ಮತ್ತು ಅಭಿವೃದ್ಧಿ ಸಾಧ್ಯವಾಗುತ್ತಿದೆ” ಎಂದು ಹೇಳಿಕೊಂಡಿದೆ.

ವಿದ್ವಾಂಸ, ಲೇಖಕ ಕ್ರಿಸ್ಟೋಫ್ ಜಾಫ್ರೆಲಾಟ್ ಪ್ರಕಾರ, “ಭಾರತೀಕರಣ”ದ ಹೊಸ ನೀತಿಯು ನಡೆಯುತ್ತಿದೆ. ಆರ್ಟಿಕಲ್ 370 ರದ್ದುಗೊಳಿಸಲಾದ ಬಳಿಕ “ಮೊದಲ ತಿಂಗಳಲ್ಲೇ ಸುಮಾರು 4,000 ಜನರನ್ನು ಬಂಧಿಸಲಾಗಿದೆ” ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಈ ಸಾಕ್ಷ್ಯಾಚಿತ್ರ ಎರಡನೇ ಭಾಗ ಮಾತನಾಡಿದೆ.

ಸಿಎಎ ಮತ್ತು ಈಶಾನ್ಯ ದೆಹಲಿ ಹಿಂಸಾಚಾರ

ಭಾರತದ ಪೌರತ್ವದೊಂದಿಗೆ ಧರ್ಮವನ್ನು ಥಳುಕು ಹಾಕಿದ್ದರಿಂದ ‘ಪೌರತ್ವ ತಿದ್ದುಪಡಿ ಕಾಯ್ದೆ’ (ಸಿಸಿಎ) ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ಭುಗಿಲೆದ್ದವು. ಇದು ಮಹತ್ವದ ವಿಭಾಗಗಳಲ್ಲಿ ಎಚ್ಚರಿಕೆಯ ಗಂಟೆಗಳನ್ನು ಬಾರಿಸಿತು. ಫೆಬ್ರವರಿ 2020ರಲ್ಲಿ ದೆಹಲಿಯಲ್ಲಿ ಕನಿಷ್ಠ 53 ಜೀವಗಳನ್ನು ಬಲಿ ತೆಗೆದುಕೊಂಡ ಕೋಮು ಹಿಂಸಾಚಾರದ ಕುರಿತು ಸಾಕ್ಷ್ಯಾಚಿತ್ರವು ಆತಂಕ ವ್ಯಕ್ತಪಡಿಸಿದೆ. “ಕಟ್ಟರ್‌ ಹಿಂದುತ್ವ ಧರ್ಮಗುರುಗಳು ಮುಸ್ಲಿಂ ಪ್ರತಿಭಟನಾಕಾರರ ವಿರುದ್ಧ ಬೆದರಿಕೆ ಹಾಕಿದರು” ಎನ್ನುತ್ತದೆ.

ಫೈಜಾನ್ ಎಂಬ 23 ವರ್ಷದ ಮುಸ್ಲಿಂ ಯುವಕನನ್ನು “ಪೊಲೀಸರು ಹೊಡೆದು ಸಾಯಿಸಿದ್ದಾರೆ” ಎಂದು ಸಾಕ್ಷ್ಯಚಿತ್ರವು ವೈರಲ್ ವೀಡಿಯೊವೊಂದನ್ನು ಉಲ್ಲೇಖಿಸುತ್ತದೆ. ಫೈಜಾನ್‌ನ ತಾಯಿ ಮಾತನಾಡಿದ್ದು, “ನನಗೆ ಮತ್ತು ನನ್ನ ಮಗನಿಗೆ ನ್ಯಾಯ ಬೇಕು. ಆತ ನಿರಪರಾಧಿ ಮತ್ತು ಯಾವುದೇ ಕಾರಣವಿಲ್ಲದೆ ಕೊಲೆಯಾಗಿದ್ದಾನೆ” ಎಂದಿದ್ದಾರೆ.

ಇದನ್ನೂ ಓದಿರಿ: ಜನರು ದೂರದರ್ಶನ ನಂಬದಿದ್ದರೂ BBC ನಂಬುತ್ತಾರೆ: ಮೋದಿಯ ಹಳೆಯ ವಿಡಿಯೊ ವೈರಲ್‌

“2020ರ ದೆಹಲಿ ಹಿಂಸಾಚಾರದಲ್ಲಿ ಸತ್ತವರಲ್ಲಿ ಮೂರನೇ ಎರಡರಷ್ಟು ಜನರು ಮುಸ್ಲಿಮರಾಗಿದ್ದಾರೆ ಎಂದು ವರದಿಯಾಗಿದೆ” ಎಂದು ಸಾಕ್ಷ್ಯಾಚಿತ್ರ ಹೇಳುತ್ತದೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ ಸಂಸ್ಥೆಯ ತನಿಖೆಯನ್ನು ಉಲ್ಲೇಖಿಸುತ್ತದೆ. “ಪೊಲೀಸರು ಚಿತ್ರಹಿಂಸೆ ನೀಡಿದರು, ಪ್ರತಿಭಟನಾಕಾರರ ಮೇಲೆ ಅತಿಯಾದ ಮತ್ತು ಅನಿಯಂತ್ರಿತ ಬಲ ಪ್ರಯೋಗ ಮಾಡಿದರು, ಹಿಂಸಾಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಸೇರಿದಂತೆ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯಾಯಿತು” ಎಂದು ಅಮ್ನೆಸ್ಟಿ ಹೇಳಿದೆ.

ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಅಧ್ಯಕ್ಷ ಆಕರ್ ಪಟೇಲ್, “ದೆಹಲಿಯಲ್ಲಿ ನಡೆದ ಹಿಂಸಾಚಾರದ ಕುರಿತು ಆಮ್ನೆಸ್ಟಿ ವರದಿಯು ಪೊಲೀಸರು ನಡೆದುಕೊಳ್ಳಬೇಕಾದಂತೆ ನಡೆದುಕೊಂಡಿಲ್ಲ ಎಂದು ತೋರಿಸಿದೆ” ಎಂದಿದ್ದಾರೆ.

ಕೊನೆಯಲ್ಲಿ…

“ಪತ್ರಕರ್ತರು ತಮ್ಮ ವೃತ್ತಿ ಕಾರಣಗಳಿಂದಾಗಿ ಹಿಂಸೆ, ಬೆದರಿಕೆ ಮತ್ತು ಬಂಧನವನ್ನು ಎದುರಿಸುತ್ತಿದ್ದಾರೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಪತ್ರಿಕಾ ಸ್ವಾತಂತ್ರ್ಯ ಕ್ಷೀಣಿಸಿದೆ ಮತ್ತು ಈಗ ಬಿಕ್ಕಟ್ಟಿನಲ್ಲಿದೆ ಎಂದು ಹೋರಾಟಗಾರರು ಹೇಳುತ್ತಾರೆ. ಮಾನವ ಹಕ್ಕುಗಳ ಹೋರಾಟಗಾರರು ತಮ್ಮ ಮೇಲೆ ದಾಳಿ ನಡೆಯುತ್ತಿವೆ” ಎನ್ನುವುದನ್ನು ಡಾಕ್ಯುಮೆಂಟರಿ ಒಳಗೊಂಡಿದೆ.

(ಈ ವರದಿಯು ‘ದಿ ವೈರ್‌’ನಲ್ಲಿ ಪ್ರಕಟಿಸಲಾದ ಬರಹದಿಂದ ಆಯ್ದ ಅಂಶಗಳನ್ನು ಒಳಗೊಂಡಿದೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...