Homeಮುಖಪುಟದ್ವೇಷ, ಯುದ್ಧ, ಪ್ರೀತಿ ಮತ್ತು ಮಳೆ : ಬಿಫೋರ್ ದ ರೇನ್ ಎಂಬ ಕಲಾಕೃತಿ

ದ್ವೇಷ, ಯುದ್ಧ, ಪ್ರೀತಿ ಮತ್ತು ಮಳೆ : ಬಿಫೋರ್ ದ ರೇನ್ ಎಂಬ ಕಲಾಕೃತಿ

- Advertisement -
- Advertisement -

“Time never dies, circle is not round”
ಸಿನೆಮಾ ರಚಿಸುವಲ್ಲಿ ಜಕ್ಸ್ಟಾಪೊಜಿಷನ್ (juxtaposition) ಎನ್ನುವ ಪದಕ್ಕೆ ತುಂಬಾ ಮಹತ್ವವಿದೆ. ಒಂದು ದೃಶ್ಯದ ನಂತರ ಇನ್ನೊಂದು ದೃಶ್ಯ, ಒಂದು ಶಾಟ್ ನಂತರ ಇನ್ನೊಂದು ದೃಶ್ಯ; ಈ ದೃಶ್ಯಗಳ ಸರಣಿಗಳೇ ಒಂದು ಕಥೆಯನ್ನು ಹೇಳುತ್ತವೆ. ಮೊದಲು ಬರುವ ದೃಶ್ಯ/ಶಾಟ್ ಮುಂದೆ ಬರುವ ದೃಶ್ಯ/ಶಾಟ್‍ಗೆ ಯಾವ ರೀತಿಯ ಸಂಬಂಧ ಹೊಂದಿರಬೇಕು? ಮುಂದಿನ ಶಾಟ್ ಕಥೆಯನ್ನು ಮುಂದುವರೆಸಲೇಬೇಕೆ? ನೇರಾನೇರ ಸಂಬಂಧ ಹೊಂದಿರಲೇಬೇಕೆ? ಇಲ್ಲಿ ನಾನು ಐಸೆನ್‍ಸ್ಟೇನ್ ಅವರ ಮೊಂಟಾಜ್ ಥಿಯರಿಯ ಬಗ್ಗೆ ಹೇಳುತ್ತಿಲ್ಲ. (ಮೋಂಟಾಜ್ ಥಿಯರಿಯ ಬಗ್ಗೆ ಇನ್ನೊಂದು ಕಡೆ ಬರೆದಿದ್ದೇನೆ.) ಕಥೆಯೊಂದು ಹಿಂದಿನಿಂದ ಮುಂದಕ್ಕೆ ಹೋಗಲೇಬೇಕೆ?

ನಮ್ಮ ಜೀವನದ ಕಥೆಯನ್ನು ನೆನಪಿಸಿಕೊಳ್ಳುವ. ಮೊದಲು ಯಾವ ಚಿತ್ರಗಳು ಕಣ್ಣುಮುಂದೆ ಮೂಡುತ್ತವೆ? ತುಂಬಾ ಮಹತ್ವದ ಸಂಗತಿಗಳೇ? ಮಹತ್ವವಲ್ಲದ ಸಂಗತಿಗಳೇ? ನಮ್ಮ ಜೀವನದಲ್ಲಿ ಏನೂ ಪರಿಣಾಮ ಬೀರದ ಒಂದು ಯಾವುದೋ ಚಿತ್ರವು ಮೂಡಿಬರುವುದೇ? ಯಾವ ಶಬ್ದಗಳು ನೆನಪಿನಲ್ಲಿಳಿದಿವೆ? ಯಾವ ಪದಗಳು? ಯಾವೆಲ್ಲ ವಾಸನೆಗಳು? ಎಲ್ಲದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧವಿದೆಯೇ? ಸಂಬಂಧ ಕಾಣಿಸಿಕೊಳ್ಳದಿದ್ದರೂ ಯಾವುದೋ ಒಂದು ಸಂಬಂಧ ಇರಲೇಬೇಕಲ್ಲವೇ? ಯಾವುದೀ ಸಂಬಂಧ? ಯಾವುದೀ ಕಥೆ?

ಇನ್ನು ನಮ್ಮ ಸಮಾಜದ ಕಥೆಯನ್ನು ಅದೇ ರೀತಿ ಪರಿಶೀಲಿಸುವ. ಹೇಗೆ ರೂಪುಗೊಂಡಿತು ಈ ಸಮಾಜ, ಈ ದೇಶ? ಯುದ್ಧದಿಂದಲೋ, ಶಾಂತಿಯಿಂದಲೋ? ಬಲಿದಾನದಿಂದಲೋ? ಸ್ವಾರ್ಥದಿಂದಲೋ? ಇಂದು ಆಗುವ ಘಟನೆಗೂ ಮೊನ್ನೆ ಆದ ಘಟನೆಗೂ ನೂರಾರು ವರ್ಷ ಹಿಂದೆ ಎಲ್ಲೋ ಆದ ಘಟನೆಗೂ ಯಾವುದೇ ಸಂಬಂಧವಿದೆಯೇ? ಆ ಘಟನೆ ಇಂದು ಆದ ಘಟನೆಗೆ ಕಾರಣವಾಗಿದೆಯೇ? ಏನೆಲ್ಲ ಮಾಡಿದರೂ ಇತಿಹಾಸ ಮರುಕಳಿಸುತ್ತೆ ಎನ್ನುತ್ತಾರೆ, ಅದು ನಿಜವೇ? ಸಮಾಜದ ಆಗುಹೋಗುಗಳಲ್ಲಿ ಒಬ್ಬ ವ್ಯಕ್ತಿ ಎಂತಹ ಪಾತ್ರ ವಹಿಸುತ್ತಾನೆ? ಅವಳು ಅಥವಾ ಅವಳು ಪರಿಣಾಮಕಾರಿಯಾದ ಪಾತ್ರ ವಹಿಸಬಲ್ಲಳೇ? ಒಂದು ಪಾತ್ರ ವಹಿಸಬಲ್ಲಳು ಎನ್ನುವ ನಂಬಿಕೆ ಹುಸಿಯಾದರೆ?

ಇನ್ನು ದ್ವೇಷ ಮತ್ತು ಅದರೊಂದಿಗೆ ಬರುವ ಕಲಹ, ಯುದ್ಧಗಳಿಗೆ ಅರ್ಥವಿದೆಯೇ? ಇತಿಹಾಸದಿಂದ ನಾವು ಏನನ್ನೂ ಕಲಿಯುವುದೇ ಇಲ್ಲವೇ?
1994 ರಲ್ಲಿ ಬಿಡುಗಡೆಯಾದ ಚಿತ್ರ ಬಿಫೋರ್ ದ ರೇನ್ ಎನ್ನುವ ಚಿತ್ರ ಈ ಎಲ್ಲ ಪ್ರಶ್ನೆಗಳನ್ನು ಹುಟ್ಟುಹಾಕುತ್ತೆ ಎಂದು ಹೇಳಲಾಗುವುದಿಲ್ಲ. ಆದರೆ ಇಂತಹ ಅನೇಕ ಪ್ರಶ್ನೆಗಳು ಮೂಡುವುದಂತೂ ನಿಜ.

ಈ ಚಿತ್ರವನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ; ಪದಗಳು (words), ಚಿತ್ರಗಳು (pictures) ಮತ್ತು ಚಹರೆಗಳು (faces). ಕೆಲವು ಮಕ್ಕಳು ಆಟವಾಡುತ್ತ ಒಂದು ಆಮೆಯನ್ನು ಒಂದು ಕಡೆ ಇರಿಸಿ, ಅದರ ಸುತ್ತಲೂ ಕಟ್ಟಿಗೆಗಳನ್ನಿಟ್ಟು, ಆ ಕಟ್ಟಿಗೆಗಳಿಗೆ ಬೆಂಕಿ ಹಚ್ಚುತ್ತಾರೆ. ಆಗ ಒಬ್ಬ ಬಾಲಕ ತನ್ನಲ್ಲಿದ್ದು ಜೀವಂತ ಗುಂಡುಗಳನ್ನು ಆ ಬೆಂಕಿಯಲ್ಲಿ ಹಾಕುತ್ತಾನೆ. ಆಮೆ ಸುಟ್ಟುಕರಕಲಾಗುತ್ತದೆ. ಈ ಮಕ್ಕಳ ಆಟದೊಂದಿಗೆ ಎರಡು ವರ್ಷಗಳಿಂದ ಮೌನವ್ರತ ಪಾಲಿಸುತ್ತಿರುವ ಒಬ್ಬ ಯುವ ಪಾದ್ರಿಯ ಕಥೆ ತೋರಿಸಲಾಗುತ್ತದೆ. ಒಬ್ಬ ಹದಿವಯಸ್ಸಿನ ಬಾಲಕಿ ಈ ಪಾದ್ರಿಯ ಕೊಠಡಿಯನ್ನು ಸೇರಿಕೊಳ್ಳುತ್ತಾಳೆ. ಅವಳನ್ನು ಹುಡುಕುತ್ತ ಗನ್‍ಗಳನ್ನು ಹಿಡಿದುಕೊಂಡು ಕೆಲವರು ಬರುವರು. ಅವಳು ಯಾರು, ಅವಳನ್ನು ಇವರೇಕೆ ಹುಡುಕುತ್ತಿದ್ದಾರೆ ಎನ್ನುವುದು ನಂತರ ತಿಳಿಯುತ್ತೆ.

ಎರಡನೇ ಭಾಗದಲ್ಲಿ ಅಲೆಕ್ಸಾಂಡರ್ ಕಿರ್ಕೊವ್ ಎನ್ನುವ ಯುದ್ಧಗಳನ್ನು ಕವರ್ ಮಾಡುವ ಛಾಯಾಚಿತ್ರಗ್ರಾಹಕ ಮತ್ತು ಅವನ ಗೆಳತಿ ಆ್ಯನ್‍ನ ಕಥೆಗೆ ಬರುತ್ತೇವೆ. ಆ್ಯನ್ ತನ್ನ ಗಂಡನನ್ನು ಬಿಟ್ಟು ಅಲೆಕ್ಸಾಂಡರ್ ಜೊತೆಗೆ ಹೋಗಬೇಕೆನ್ನುವ ಬಯಕೆ, ಗೊಂದಲದಲ್ಲಿದ್ದಾಳೆ. ಅಲೆಕ್ಸಾಂಡರ್ ಯಾವುದೋ ದ್ವಂದ್ವದಲ್ಲಿದ್ದಾನೆ. ತನ್ನ ತವರು ದೇಶ, ಮತ್ತು ಇತರ ಕಡೆ ನಡೆಯುತ್ತಿರುವ ಯುದ್ಧ, ತನ್ನ ಕಾರಣದಿಂದಾದ ಸಾವಿನಿಂದ ತಪ್ಪಿತಸ್ಥ ಭಾವನೆಯಿಂದ ಬಳಲುತ್ತಿದ್ದಾನೆ. ಈ ಕಥೆಯೂ ಕೊನೆಗೊಳ್ಳುವುದು ಒಂದು ದುರಂತದಿಂದಲೇ.

ಮೂರನೇ ಭಾಗದಲ್ಲಿ ಅಲೆಕ್ಸಾಂಡರ್‍ನೊಂದಿಗೆ ಮತ್ತೇ ಮೆಸಿಡೋನಿಯಾ ದೇಶದ ಅಂತಃಕಲಹಕ್ಕೆ ಮರಳುತ್ತೇವೆ. ಅಲೆಕ್ಸಾಂಡರ್ ತನ್ನ ಹುಟ್ಟೂರಿಗೆ ಯಾವ ಕಾರಣಕ್ಕೆ ಬಂದನು ಎನ್ನುವುದು ತಿಳಿಯುವುದಿಲ್ಲ. ಅಲ್ಲಿ ತನ್ನ ಸಂಬಂಧಿಕರು, ತನ್ನ ಸಂಬಂಧಿಕರೊಂದಿಗೆ ದ್ವೇಷ ಸಾಧಿಸುತ್ತಿರುವ ಇನ್ನೊಂದು ಧರ್ಮದವರು ಇರುವ ಇನ್ನೊಂದೂರಿನಲ್ಲಿ ತನ್ನ ಗೆಳತಿ ಮತ್ತು ಅವರ ಕುಟುಂಬದವರನ್ನು ಭೇಟಿ ಆಗಬೇಕಿದೆ. ಅಂತರ್ ಯುದ್ಧದಿಂದ ಬಳಲುತ್ತಿರುವ ಈ ಪ್ರದೇಶದಲ್ಲಿ ಪ್ರೀತಿ, ಕರಳು ಸಂಬಂಧಕ್ಕಿಂತ ದ್ವೇಷವೇ ಮೇಲುಗೈ ಸಾಧಿಸಿದೆ. ಅಲ್ಲಿ ಇವನು ಸಾಧಿಸುವುದಾದರೂ ಏನು? ಸಾಧಿಸುವುದಕ್ಕಾಗಿ ಬಂದಿದ್ದಾನೆಯೇ? ಮರಳಿ ಮೌನವ್ರತ ಆಚರಿಸುತ್ತಿದ್ದ ಪಾದ್ರಿಗೆ ಆ ಬಾಲಕಿ ಭೇಟಿಯಾಗುವುದಕ್ಕೂ ಮುಂಚಿನ ಕಥೆಯನ್ನು ಹೇಳಲಾಗುತ್ತದೆ. ಆಗ ಸರ್ಕಲ್ ಈಸ್ ನಾಟ್ ರೌಂಡ್ ಎನ್ನುವ ವಾಕ್ಯಕ್ಕೆ ಅರ್ಥಬರುತ್ತೆ.

ದ್ವೇಷಕ್ಕಾಗಿ ತಮ್ಮ ಪ್ರೀತಪಾತ್ರರನ್ನೇ ಕೊಲ್ಲುವ ಪ್ರವೃತ್ತಿಗೆ ಕಾರಣಗಳನ್ನು ಈ ಚಿತ್ರ ಹುಡುಕುವುದಿಲ್ಲ. ಹದಗೆಟ್ಟಿರುವ ಪರಿಸ್ಥಿತಿಯ ಭಾಗಶಃ ಚಿತ್ರಣವನ್ನು ಮಾತ್ರ ನೀಡಲಾಗುತ್ತದೆ. ಇಂತಹ ಒಂದು ಪರಿಸ್ಥಿತಿಯಲ್ಲೂ ಪ್ರೀತಿ ಹುಟ್ಟಬಲ್ಲದೇ, ಇರುವ ಪ್ರೀತಿ ಮುಂದುವರೆಯುವುದೇ? ಆಳವಾದ ಪ್ರೀತಿ, ಉತ್ಕಟವಾದ ಬಯಕೆಯನ್ನು ಹತ್ತಿಕ್ಕಲು ಸಾಧ್ಯವಾಗದೇ ಇರಬಹುದು, ಆದರೆ ಪ್ರೀತಿಸುವವರನ್ನೇ ಹತ್ತಿಕ್ಕಿದರೆ ಪ್ರೀತಿಯನ್ನೂ ಕೊಂದಂತೆಯೇ?

ಎಷ್ಟಾದರೂ ಇದೊಂದು ಸಿನೆಮಾ, ಒಂದು ಚಿತ್ರಕ್ಕೆ ಇರಬೇಕಾದ ಸ್ಟ್ರಕ್ಚರ್‍ ಅನ್ನು ಪಾಲಿಸದೇ, ಸ್ವಾತಂತ್ರವನ್ನು ಬಳಸಿ ಯುದ್ಧ ಮತ್ತು ಪ್ರೀತಿಯ ಕಥೆಯನ್ನು ಹೆಣೆದಿರುವ ಈ ಚಿತ್ರ ಒಂದು ಅದ್ಭುತ ಕಲಾಕೃತಿ. ಈ ಚಿತ್ರದ ಹಿನ್ನೆಲೆ ಸಂಗೀತ (ಅತ್ಯಂತ ಮಿತವಾಗಿ ಬಳಸಿದ), ಕೇಳಿಬರುವ ನೈಜ ಶಬ್ದಗಳು ಚಿತ್ರದ ಆಳವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದು ಮೆಸೆಡೋನಿಯಾದ ನಿರ್ದೇಶಕ ಮ್ಯೂಚೊ ಮಾಂಚೆಸ್ಕಿಯ (Milcho Manchevski) ಮೊದಲ ಚಿತ್ರ. ತನ್ನ ಮೊದಲ ಚಿತ್ರದಲ್ಲೇ ಕಥನಗಾರಿಕೆಯಲ್ಲಿ ಆಟವಾಡಿ ಯಶಸ್ವಿಯಾಗಿದ್ದಾರೆ. ಕಥೆಗಾರಿಕೆಯಲ್ಲಿ ಈ ಚಿತ್ರವನ್ನು ಅನೇಕರು ಅಮೆರಿಕ ಕ್ವೆಂಟಿನ್ ಟ್ಯಾರಂಟಿನೋ ಅವರ ಪಲ್ಪ್ ಫಿಕ್ಷನ್ ಜೊತೆಗೆ ಹೋಲಿಸಿದ್ದಾರೆ. ಆದರೆ ಈ ಇಬ್ಬರೂ ದಿಗ್ಗಜರೂ ಪರಸ್ಪರ ಪ್ರಭಾವಿತರಾಗಿಲ್ಲ ಎನ್ನುವುದು ಸ್ಪಷ್ಟ. ಹಾಲಿವುಡ್‍ನ ಟ್ಯಾರಂಟಿನೊ ಕಥೆಗಾರಿಕೆಯಲ್ಲಿ ಆಟವಾಡುವುದಕ್ಕಾಗಿಯೇ ಆಟವಾಡಿದ್ದಾರೆ ಎನ್ನುವುದಾದರೆ, ಬಿಫೋರ್ ದ ರೇನ್ ಚಿತ್ರದಲ್ಲಿ ಮ್ಯಾಂಚೆಸ್ಕಿ, ಕಥೆಯ ಆಳವನ್ನು, ಆಯಾ ಪಾತ್ರಗಳ ಪಯಣದ ಆಳವನ್ನೂ, ದೇಶಕಾಲದ ಪಯಣ, ಯುದ್ಧ ದ್ವೇಷದ ಪರಿಣಾಮಗಳನ್ನು ಗಟ್ಟಿಯಾಗಿ ಅನುಭವಿಸಲು ತಮ್ಮ ಕಥನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.

ಚಿತ್ರದ ಹೆಸರೇ ಹೇಳುವಂತೆ, ಏನೆಲ್ಲ ಆದರೂ ಎಲ್ಲರೂ ಇಂದೋ ನಾಳೆಯೋ ಬರಲಿರುವ ಮಳೆಯನ್ನೇ ಎದುರುನೋಡುತ್ತಿದ್ದಾರೆ. ಹಿಂಸೆ, ಪ್ರೀತಿ, ಹುಟ್ಟು, ಸಾವುಗಳೆಲ್ಲವೂ ಮಳೆಯಲ್ಲಿ ತೊಯ್ದುಹೋಗುವುದರ ಮೂಲಕ ಚಿತ್ರ ಕೊನೆಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...