ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸೋಮವಾರ ಸಂಭವಿಸಿದ ಸ್ಫೋಟದ ನಂತರ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ, ಬೀರ್ಭೂಮ್‌ನ ಲೋಕಪುರ ಪ್ರದೇಶದಲ್ಲಿರುವ ಗಂಗಾರಾಮ್‌ಚಕ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಕಾಲೇರಿಯಲ್ಲಿ ಕಲ್ಲಿದ್ದಲು ಹೊರತೆಗೆಯಲು ಸ್ಫೋಟ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸ್ಫೋಟದ ನಂತರ, ಗಂಗಾರಾಮಚಕ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್‌ನ ಹಲವಾರು ಕಾರ್ಮಿಕರು ಮತ್ತು ಹಿರಿಯ ಅಧಿಕಾರಿಗಳು ಸುರಕ್ಷಿತ ಸ್ಥಳಗಳತ್ತ ಓಡಿಹೋದರು.
ಘಟನೆಯ ಬಗ್ಗೆ ಮಾಹಿತಿ ಸ್ವೀಕರಿಸಿದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಸಂಸ್ಥೆಗೆ ರವಾನಿಸಿದರು.
ಇದಕ್ಕೂ ಮೊದಲು ಜನವರಿ 2023 ರಲ್ಲಿ, ಪಶ್ಚಿಮ ಬಂಗಾಳದ ಕುಲ್ಟಿಯಲ್ಲಿ ಕಲ್ಲಿದ್ದಲು ಗಣಿ ಅಕ್ರಮವಾಗಿ ಅಗೆಯುತ್ತಿದ್ದ ಹಲವಾರು ಜನರು ಗಣಿ ಮೇಲ್ಛಾವಣಿ ಕುಸಿದು ಬಿದ್ದ ನಂತರ ಸಿಕ್ಕಿಬಿದ್ದರು. ಈ ಗಣಿ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್‌ಗೆ (ಬಿಸಿಸಿಎಲ್) ಸೇರಿದ್ದು, ಸಿಕ್ಕಿಬಿದ್ದ ಜನರು ಗಣಿಯಿಂದ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ; ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಸಾಮೂಹಿಕ ಕೃತ್ಯ ಆರೋಪ ತಳ್ಳಿಹಾಕಿದ ಸಿಬಿಐ


