Homeಮುಖಪುಟಬಂಗಾಳದಲ್ಲಿ ಎಸ್‌ಐಆರ್ ಭಯದಿಂದ 110 ಮಂದಿ ಆತ್ಮಹತ್ಯೆ : ಸಿಎಂ ಮಮತಾ ಬ್ಯಾನರ್ಜಿ

ಬಂಗಾಳದಲ್ಲಿ ಎಸ್‌ಐಆರ್ ಭಯದಿಂದ 110 ಮಂದಿ ಆತ್ಮಹತ್ಯೆ : ಸಿಎಂ ಮಮತಾ ಬ್ಯಾನರ್ಜಿ

- Advertisement -
- Advertisement -

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಭಯದಿಂದ ಪ್ರತಿದಿನ ಪಶ್ಚಿಮ ಬಂಗಾಳದಲ್ಲಿ ಮೂರ್ನಾಲ್ಕು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ (ಜ.23) ಹೇಳಿದ್ದಾರೆ. ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಈ ಸಾವುಗಳ ಹೊಣೆ ಹೊತ್ತುಕೊಳ್ಳಬೇಕು ಎಂದಿದ್ದಾರೆ.

ಎಸ್‌ಐಆರ್ ಸಂಬಂಧಿತ ಸಾವುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವಿರುದ್ದ ಏಕೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. “110ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಚುನಾವಣಾ ಆಯೋಗದ ವಿರುದ್ದ ಏಕೆ ಪ್ರಕರಣ ದಾಖಲಿಸಿಲ್ಲ. ಭಾರತೀಯ ಚುನಾವಣಾ ಆಯೋಗ ಈ ಸಾವುಗಳ ಹೊಣೆ ಹೊರಬೇಕು, ಕೇಂದ್ರ ಸರ್ಕಾರ ಕೂಡ ಹೊಣೆ ಹೊರಬೇಕು. ರಾಜ್ಯದಲ್ಲಿ ಚುನಾವಣಾ ಆಯೋಗದ ವಿರುದ್ಧ ಜನರು ಪೊಲೀಸ್ ದೂರುಗಳನ್ನು ದಾಖಲಿಸಿರುವ ನಿದರ್ಶನಗಳಿವೆ” ಎಂದು ಕೋಲ್ಕತ್ತಾದ ರೆಡ್‌ರೋಡ್‌ನಲ್ಲಿ ನೇತಾಜಿ ಸುಭಾಶ್‌ ಚಂದ್ರ ಬೋಸ್‌ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಸೇರಿದಂತೆ ದೇಶದಲ್ಲಿ ಚುನಾವಣಾ ಆಯೋಗ ಎಸ್‌ಐಆರ್‌ ಕೈಗೊಂಡಿರುವುದನ್ನು ಮಮತಾ ಬ್ಯಾನರ್ಜಿ ಆರಂಭದಿಂದಲೇ ವಿರೋಧಿಸುತ್ತಾ ಬಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 2025ರ ನವೆಂಬರ್ ತಿಂಗಳಲ್ಲಿ ಎಸ್‌ಐಆರ್ ಪ್ರಾರಂಭಗೊಂಡ ಬಳಿಕ, ಇದುವರೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಮಮತಾ ಬ್ಯಾನರ್ಜಿ ಐದು ಪತ್ರಗಳನ್ನು ಬರೆದಿದ್ದಾರೆ.

ನೇತಾಜಿ ಸುಭಾಶ್ ಚಂದ್ರ ಬೋಸ್‌ ಏನಾದರು ಬದುಕಿದ್ದರೆ ಅವರನ್ನೂ ಎಸ್‌ಐಆರ್ ವಿಚಾರಣೆಗೆ ಕರೆಸಲಾಗುತ್ತಿತ್ತು. ರವೀಂದ್ರನಾಥ ಟ್ಯಾಗೋರ್‌ನಿಂದ ಬೋಸ್‌ವರೆಗಿನ ರಾಷ್ಟ್ರೀಯ ಐಕಾನ್‌ಗಳನ್ನು ಅಗೌರವಿಸುವ ಮತ್ತು ದೇಶದ ಇತಿಹಾಸವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಭಾಷೆ ಮತ್ತು ಸಂಸ್ಕೃತಿಗೆ ಅಗೌರವ ತೋರಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

“ಕಾಂಗ್ರೆಸ್ ಪರಂಪರೆಯನ್ನು ನಂಬಿಕೊಂಡು ರಾಜಕೀಯದಲ್ಲಿರುವವರು ರಾಷ್ಟ್ರೀಯ ಐಕಾನ್‌ಗಳನ್ನು ನಡೆಸಿಕೊಳ್ಳುವ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು” ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರಿಗೆ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.

“ವಸಾಹತುಶಾಹಿ ಹ್ಯಾಂಗೊವರ್” ಅನ್ನು ತೊಡೆದುಹಾಕುವ ಮೂಲಕ ಬಿಜೆಪಿ ನಿಜಕ್ಕೂ ದೇಶದ “ಇತಿಹಾಸವನ್ನು ಬದಲಾಯಿಸುತ್ತಿದೆ” ಎಂದು ಭಟ್ಟಾಚಾರ್ಯ ಈ ಹಿಂದೆ ಹೇಳಿದ್ದರು.

ಚುನಾವಣೆ ಸಮೀಪಿಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ರಾಜಕೀಯ ಗರಿಗೆದರಿದೆ. ಮೊದಲ ಹಂತದ ಎಸ್‌ಐಆರ್ ಪ್ರಕ್ರಿಯೆ ಬಳಿಕ, ಸುಮಾರು 58 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ, ಇದರಿಂದಾಗಿ ರಾಜ್ಯದಲ್ಲಿ ಮತದಾರರ ಸಂಖ್ಯೆ 7.66 ಕೋಟಿಯಿಂದ 7.08 ಕೋಟಿಗೆ ಕಡಿಮೆಯಾಗಿದೆ.

ಎಸ್‌ಐಆರ್ ಸಂಬಂಧ “ತಾರ್ಕಿಕ ವ್ಯತ್ಯಾಸಗಳ” ಹಿನ್ನೆಲೆ ಮತದಾರರಿಗೆ ನೋಟಿಸ್‌ಗಳನ್ನು ನೀಡಿರುವುದನ್ನು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಸುಮಾರು 1.36 ಕೋಟಿ ಅಂತಹ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಈ ತಿಂಗಳ ಆರಂಭದಲ್ಲಿ ಫರಕ್ಕಾದಲ್ಲಿರುವ ಬ್ಲಾಕ್ ಅಭಿವೃದ್ಧಿ ಕಚೇರಿಯನ್ನು ಧ್ವಂಸ ಮಾಡಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಮುನೀರುಲ್ ಇಸ್ಲಾಂ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಚುನಾವಣಾ ಆಯೋಗ ಗುರುವಾರ (ಜ.22) ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ ಬಜೆಟ್ 2026| ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಹಂಚಿಕೆ ನಿರಾಶದಾಯಕ

ಶಿಕ್ಷಣಕ್ಕೆ 47,224 ಕೋಟಿ (ಶೇ.10) ಹಂಚಿಕೆ ಮಾಡಿದ್ದಾರೆ. ಇದು ತುಂಬಾ ಕಡಿಮೆ ಅನುದಾನವಾಗಿದೆ. ವಾಸ್ತವದಲ್ಲಿ ಬಜೆಟ್ ವೆಚ್ಚದ ಶೇ.20-24ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಶಿಕ್ಷಣವನ್ನು ಅನುತ್ಪಾದಕ ವಲಯ ಎಂದು...

ಕೇರಳ : ಪ್ರಧಾನಿ ಮೋದಿ ‘ದೇಶದ್ರೋಹಿ’ ಎಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಪ್ರಧಾನಿ ನರೇಂದ್ರ ಮೋದಿ 'ದೇಶದ್ರೋಹಿ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಹಾಕಿದ ಆರೋಪದ ಮೇಲೆ ಕೇರಳದ ಕಣ್ಣೂರಿನ ಶ್ರೀಕಂಡಪುರಂ ಪೊಲೀಸರು ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿಂದೂ ಶನಿವಾರ (ಮಾ.7) ವರದಿ...

ಕೋಲ್ಕತ್ತಾ| ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿರೋಧಿಸಿ ಅಹೋರಾತ್ರಿ ಧರಣಿ ಮುಂದುವರೆಸಿದ ಮಮತಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಸತತ ಎರಡನೇ ದಿನವಾದ ಶನಿವಾರವೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ, ಅವರು ಅಹೋರಾತ್ರಿ ಧರಣಿ ಸ್ಥಳದಲ್ಲಿ ರಾತ್ರಿ ಕಳೆದರು. ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ "ಬಂಗಾಳದ ಮತದಾರರ...

ಇಂಡೋನೇಷ್ಯಾ | ನಾಲ್ವರು ಪ್ರಮುಖ ಹೋರಾಟಗಾರರು ಖುಲಾಸೆ : ಪ್ರತಿಭಟನೆಯ ಹಕ್ಕಿಗೆ ಹೊಸ ಭರವಸೆ ಎಂದ ಆಮ್ನೆಸ್ಟಿ

2025ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ಹಿಂಸಾತ್ಮಕ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ನಾಲ್ವರು ಪ್ರಮುಖ ಹೋರಾಟಗಾರರನ್ನು ಇಂಡೋನೇಷ್ಯಾದ ಕೇಂದ್ರ ಜಕಾರ್ತಾ ಜಿಲ್ಲಾ ನ್ಯಾಯಾಲಯವು ಶುಕ್ರವಾರ (ಮಾ.6) ಖುಲಾಸೆಗೊಳಿಸಿದೆ. ದೇಶದಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ...

‘ಆಕ್ರಮಣ ಮಾಡುವ ಉದ್ದೇಶವಿಲ್ಲ..’; ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷರು

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ನೆರೆಯ ರಾಷ್ಟ್ರಗಳಿಗೆ ಶನಿವಾರ ಕ್ಷಮೆಯಾಚಿಸಿದ್ದಾರೆ. ಉಲ್ಬಣಗೊಳ್ಳುತ್ತಿರುವ ಪ್ರಾದೇಶಿಕ ಸಂಘರ್ಷಕ್ಕೆ ಸಂಬಂಧಿಸಿದ ಇತ್ತೀಚಿನ ದಾಳಿಗಳಿಗೆ ಟೆಹ್ರಾನ್ ಇತರ ರಾಷ್ಟ್ರಗಳನ್ನು ಆಕ್ರಮಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಇರಾನ್ ಸಾರ್ವಜನಿಕರನ್ನು...

ತೈಲ ಆಮದು ವಿಚಾರದಲ್ಲಿ ಅಮೆರಿಕದ ಒಪ್ಪಿಗೆ ಪಡೆಯುವುದು ‘ಅತಿರೇಕದ’ ಸಂಗತಿ: ಪಿಣರಾಯಿ ವಿಜಯನ್

ತೈಲ ಆಮದುಗಳಂತಹ ನಿರ್ಧಾರಗಳಿಗೆ ಭಾರತವು ಅಮೆರಿಕದ ಅನುಮೋದನೆಯನ್ನು ಪಡೆಯುವಂತೆ ಬಿಂಬಿತವಾಗುತ್ತಿರುವುದು 'ಅತಿರೇಕದ' ಸಂಗತಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಹೇಳಿದ್ದಾರೆ. ಭಾರತದ ಸಾರ್ವಭೌಮತ್ವವು ವಿದೇಶಿ ಅನುಮತಿಗೆ ಒಳಪಡುವುದಿಲ್ಲ ಎಂದು ವಿಜಯನ್ ಸಾಮಾಜಿಕ...

ಪತ್ರಕರ್ತನ ಹತ್ಯೆ ಪ್ರಕರಣ : ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಖುಲಾಸೆ

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ (ಮಾ.7) ಖುಲಾಸೆಗೊಳಿಸಿರುವುದಾಗಿ livelaw.in ಎಂದು ವರದಿ...

ಗೃಹ ಬಳಕೆಯ ಎಲ್‌ಪಿಜಿ ದರ 60 ರೂ. ಹೆಚ್ಚಳ : 11 ತಿಂಗಳಲ್ಲಿ ಎರಡನೇ ಬಾರಿ ಬೆಲೆ ಏರಿಕೆ

ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ (ಮಾ.7) ದೇಶದಲ್ಲಿ ಗೃಹ ಬಳಕೆಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕ್ರಮವಾಗಿ ರೂ. 60 ಮತ್ತು ರೂ. 115 ಹೆಚ್ಚಿಸಿವೆ. ಈ ಹೆಚ್ಚಳದ ನಂತರ ರಾಷ್ಟ್ರ ರಾಜಧಾನಿ...

ಟಿವಿ ನ್ಯೂಸ್ ಚಾನೆಲ್‌ಗಳಲ್ಲಿ ಅನಗತ್ಯ ಯುದ್ಧೋನ್ಮಾದ, ಸುಳ್ಳು ವರದಿ : ನಾಲ್ಕು ವಾರ TRP ಸ್ಥಗಿತಕ್ಕೆ ಕೇಂದ್ರ ಆದೇಶ

ಅಮೆರಿಕ, ಇಸ್ರೇಲ್, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ಸಂಘರ್ಷದ ಕುರಿತು ಟಿವಿ ನ್ಯೂಸ್‌ ಚಾನೆಲ್‌ಗಳು ಅನಗತ್ಯ ಯುದ್ಧೋನ್ಮಾದ ಸೃಷ್ಟಿಸುತ್ತಿರುವ ಹಾಗೂ ಸುಳ್ಳು ವರದಿಗಳನ್ನು ಪ್ರಸಾರ ಮಾಡುತ್ತಿರುವ ಹಿನ್ನೆಲೆ, ಮುಂದಿನ ನಾಲ್ಕು ವಾರಗಳ ಕಾಲ...

‘ಮಿಯಾ ಮುಸ್ಲಿಮರು ನಮ್ಮ ಶತ್ರುಗಳಲ್ಲ..’; ಚುನಾವಣೆ ಸನಿಹದಲ್ಲಿ ಮಾತು ಬದಲಿಸಿದ ಅಸ್ಸಾಂ ಸಿಎಂ

ಭಾರತೀಯ ಜನತಾ ಪಕ್ಷವು (ಬಿಜೆಪಿ) ಅಸ್ಸಾಂನಲ್ಲಿರುವ ಬಂಗಾಳಿ ಮೂಲದ ಮುಸ್ಲಿಂ ಸಮುದಾಯವಾದ ಮಿಯಾ ಮುಸ್ಲಿಮರನ್ನು ತನ್ನ ಶತ್ರುಗಳೆಂದು ಪರಿಗಣಿಸುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ. ಇದೇ ವರ್ಷದ...