Homeಮುಖಪುಟಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಬಂಗಾಳಿ ಹಿರಿಯ ಗಾಯಕಿ!

ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಬಂಗಾಳಿ ಹಿರಿಯ ಗಾಯಕಿ!

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯುನಿಷ್ಟ್‌ ನಾಯಕ ಬುದ್ಧದೇವ್‌ ಭಟ್ಟಾಚಾರ್ಯ ಕೂಡಾ ಪ್ರಶಸ್ತಿ ನಿರಾಕರಿಸಿದ್ದಾರೆ

- Advertisement -
- Advertisement -

ಒಕ್ಕೂಟ ಸರ್ಕಾರ ಘೋಷಿಸಿರುವ ಪದ್ಮಶ್ರೀ ಪ್ರಶಸ್ತಿಯನ್ನು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯುನಿಷ್ಟ್‌ ನಾಯಕ ಬುದ್ಧದೇವ್‌ ಭಟ್ಟಾಚಾರ್ಯ ನಿರಾಕರಿಸಿದ ಬೆನ್ನಿಗೆ ಮತ್ತೊಬ್ಬ ಸಾಧಕಿ ಕೂಡಾ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಸುಮಾರು 8 ದಶಕಗಳ ಕಾಲ ಗಾಯನ ವೃತ್ತಿಯನ್ನು ಹೊಂದಿರುವ 90 ವರ್ಷದ ಸಂಧ್ಯಾ ಮುಖರ್ಜಿ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

ತಮಗೆ ಪದ್ಮಶ್ರೀಯ ಅಗತ್ಯವಿಲ್ಲ ಎಂದು ಹೇಳಿರುವ ಅವರು, “ಪ್ರಶಸ್ತಿಯು ತನಗಿಂತಲೂ ಕಿರಿಯ ಕಲಾವಿದರಿಗೆ ನೀಡುವುದು ಹೆಚ್ಚು ಸೂಕ್ತವಾಗಿದೆ” ಎಂದು ಸಂಧ್ಯಾ ಮುಖೋಪಾಧ್ಯಾಯ ಎಂದೂ ಕರೆಯಲ್ಪಡುವ ಬಂಗಾಳಿ ಗಾಯಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಪಿಐ(ಎಂ) ನಾಯಕ, ಪ.ಬಂ. ಮಾಜಿ ಸಿಎಂ ಬುದ್ಧದೇಬ್‌‌ ಭಟ್ಟಾಚಾರ್ಯ ‘ಪದ್ಮಭೂಷಣ’ ನಿರಾಕರಣೆ

ದೆಹಲಿಯಿಂದ ಕರೆ ಮಾಡಿದ ಹಿರಿಯ ಅಧಿಕಾರಿಗೆ, ತನ್ನ ತಾಯಿ ಪದ್ಮಶ್ರೀ ಪುರಸ್ಕೃತೆ ಎಂದು ಕರೆಯುವುದನ್ನು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾಗಿ ಅವರ ಪುತ್ರಿ ಸೌಮಿ ಸೆಂಗುಪ್ತಾ ಹೇಳಿದ್ದಾರೆ. ಅವರಿಗೆ ಇಳಿ ವಯಸ್ಸಿನಲ್ಲಿ ಪ್ರಶಸ್ತಿ ನೀಡುವುದು ಅವಮಾನವಾಗಿದೆ ಎಂದು ಅವರು ತಿಳಿಸಿದ್ದಾರೆ. ಗಣರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯಲ್ಲಿ ಪದ್ಮಶ್ರೀ ಎಂದು ಹೆಸರಿಸಲು ಒಪ್ಪಿಗೆ ಕೋರಿ ಅಧಿಕಾರಿಗಳು ಅವರನ್ನು ಸಂಪರ್ಕಿಸಿದ್ದರು.

ಪಶ್ಚಿಮ ಬಂಗಾಳದಿಂದ ಈ ಪ್ರಶಸ್ತಿಯನ್ನು ತಿರಸ್ಕರಿಸಿದವರಲ್ಲಿ ಮುಖರ್ಜಿ ಎರಡನೇ ವ್ಯಕ್ತಿಯಾಗಿದ್ದಾರೆ. ಅವರಿಗಿಂತ ಮೊದಲು ಬುದ್ಧದೇವ್ ಭಟ್ಟಾಚಾರ್ಯ ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಮುಖರ್ಜಿ ಅವರ ನಿರ್ಧಾರವು ರಾಜಕೀಯವಲ್ಲ ಎಂದು ಅವರು ಮಗಳು ಸೇನ್‌ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ: ತಾಲಿಬಾನಿಗಳಿಂದ ಹತರಾದ ದಾನಿಶ್ ಸಿದ್ದೀಕಿಗೆ ಮರಣೋತ್ತರವಾಗಿ ’ವರ್ಷದ ಪತ್ರಕರ್ತ’ ಪ್ರಶಸ್ತಿ

“90 ನೇ ವಯಸ್ಸಿನಲ್ಲಿ, ಸುಮಾರು ಎಂಟು ದಶಕಗಳ ಕಾಲ ಗಾಯನ ವೃತ್ತಿಜೀವನ ಹೊಂದಿರುವ ಅವರು ಪದ್ಮಶ್ರೀಗೆ ಆಯ್ಕೆಯಾಗಿರುವುದು ಅವರ ಸ್ಥಾನಮಾನದ ಗಾಯಕರಿಗೆ ಮಾಡಿದ ಅವಮಾನವಾಗಿದೆ. ಪದ್ಮಶ್ರೀಗೆ ಕಿರಿಯ ಕಲಾವಿದೆಗೆ ಹೆಚ್ಚು ಅರ್ಹರೇ ಹೊರತು, ಸಂಧ್ಯಾ ಮುಖೋಪಾಧ್ಯಾಯ ಅಲ್ಲ” ಎಂದು ಅವರು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಅವರು, ಪ್ರಶಸ್ತಿಗೆ ನಾನು ಆಯ್ಕೆಯಾಗಿದ್ದೇನೆ ಎಂದು ಸರ್ಕಾರದ ಕರೆ ಬಂದಿಲ್ಲ, ಒಂದು ವೇಳೆ ನಾನು ಆಯ್ಕೆಯಾಗಿದ್ದರೆ, ನಾನದನ್ನು ನಿರಾಕರಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಕೇಂದ್ರ ಸಚಿವಾಲಯವು ಅವರ ಪರವಾಗಿ ಅವರ ಪತ್ನಿಯನ್ನು ಸಂಪರ್ಕಿಸಿದೆ ಎಂದು ಹೇಳಿದೆ.

ಇದನ್ನೂ ಓದಿ:ನೊಬೆಲ್‌ ಪ್ರಶಸ್ತಿ ಪುರಸ್ಕೃತ ಆಂಗ್‌ ಸಾನ್‌ ಸೂಕಿಗೆ ನಾಲ್ಕು ವರ್ಷ ಜೈಲು ಶಿಕ್ಷೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...