Homeಮುಖಪುಟಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ಪಾಲಾರ್, ಗಾಂಧಿ ಮತ್ತು ನೋಟು ಸಿನಿಮಾ ಆಯ್ಕೆ ಮಾಡದಿರುವುದಕ್ಕೆ ಆಕ್ರೋಶ

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ಪಾಲಾರ್, ಗಾಂಧಿ ಮತ್ತು ನೋಟು ಸಿನಿಮಾ ಆಯ್ಕೆ ಮಾಡದಿರುವುದಕ್ಕೆ ಆಕ್ರೋಶ

"ಜ್ಯೂರಿಗಳ ತೀರ್ಮಾನವೆ ಅಂತಿಮ ತೀರ್ಮಾನವಾದ್ದರಿಂದ ಅದನ್ನು ನಾವೆಲ್ಲರೂ ತೆಲೆಬಾಗಿ ಸ್ವೀಕರಿಸಬೇಕು ಎನ್ನುತ್ತಾರೆ" ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಅಶೋಕ್ ಕಶ್ಯಪ್‌ರವರು.

- Advertisement -
- Advertisement -

14ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 23 ರಿಂದ 30 ರವರೆಗೆ ನಡೆಯಲಿದ್ದು, ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪಾಲಾರ್ ಹಾಗೂ ಗಾಂಧಿ ಮತ್ತು ನೋಟು ಸಿನಿಮಾಗಳನ್ನು ಆಯ್ಕೆ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಕನ್ನಡ ವಿಭಾಗದಲ್ಲಿ 19.20.21, ಗಂಧದಗುಡಿ, ಗುರುಶಿಷ್ಯರು, ಹದಿನೇಳೆಂಟು, ಕನಕ ಮಾರ್ಗ, ಕೊರಮ್ಮ (ತುಳು), ಕುಬುಸ, ಮೇಡ್ ಇನ್ ಬೆಂಗಳೂರು, ನಲ್ಕೆ, ನಾನು ಕುಸುಮ, ಆರ್ಕೆಸ್ಟ್ರಾ ಮೈಸೂರು, ಫೋಟೋ, ಸ್ವಚ್ಚ ಕರ್ನಾಟಕ ಮತ್ತು ವಿಜಯಾನಂದ ಸಿನಿಮಾಗಳು ಈ ಬಾರಿಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿವೆ.

“ಕನ್ನಡದಲ್ಲೇ ಮೊದಲ ಬಾರಿ ನೇರ ದಲಿತರ ಕಥೆಯ ಪಾಲಾರ್ ಸಿನಿಮಾ ಬಂದಿದೆ. ಸಿನಿಮಾ ನೋಡಿದ ಪ್ರತಿ ಒಬ್ಬರಿಗೂ ಇಷ್ಟ ಆಗಿತ್ತು ಮತ್ತು ಎಲ್ಲಾ ಕಡೆ ಪಾಸಿಟಿವ್ ರಿವ್ಯೂ ಬಂದಿತ್ತು. ಮೀಡಿಯಾ ಮತ್ತು ಕ್ರಿಟಿಕ್ಸ್ ಸಹ ಪಾಲಾರ್ ಸಿನಿಮಾ ಚೆನ್ನಾಗಿದೆ ಅವಾರ್ಡ್ ಬರುತ್ತೆ ಅಂತಿದ್ರು..ಆದರೆ ಇಲ್ಲಿರುವ ಕರ್ನಾಟಕ ಸರ್ಕಾರದ ಕನ್ನಡ ಚಲನಚಿತ್ರ ಅಕಾಡೆಮಿ ಮತ್ತು ಅದರ ಸದಸ್ಯರು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಲಿತರ ಬಗ್ಗೆ ಕಥೆ ಇರುವ, ದಲಿತರೇ ಸ್ವಂತವಾಗಿ ಸಿನಿಮಾ ನಿರ್ದೇಶನ ಮಾಡಿರುವ, ದಲಿತರೇ ನಿರ್ಮಾಣ ಮಾಡಿರುವ, ದಲಿತರೇ ಹೆಚ್ಚಾಗಿ ನಟಿಸಿರುವ ಪಾಲಾರ್ ಸಿನಿಮಾ ತಿರಸ್ಕರಿಸುವ ಮೂಲಕ ನಮ್ಮ ಪಾಲಾರ್ ಸಿನಿಮಾಗೆ ಇಲ್ಲಿಯೂ ಅಸ್ಪೃಶ್ಯತೆ ಆಚರಣೆಗೆ ಮುಂದಾಗಿದ್ದಾರೆ” ಎಂದು ಪಾಲಾರ್ ಚಿತ್ರದ ನಿರ್ದೇಶಕ ಜೀವಾ ನವೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸೆಲೆಕ್ಟ್ ಆದ ಸಿನಿಮಾಗಳಲ್ಲಿ ಎಷ್ಟು ಸಿನಿಮಾಗಳ ಹೆಸರು ನಿಮಗೆ ಗೊತ್ತು? Ok ಬಿಡಿ ನಾವು ಇನ್ನೂ ಮುಂದೆ ಕಮಲ, ಕರು, ಹಸು, ದೇವರ ಸಿನಿಮಾ ಮಾಡಿ ಅಂತ ಹೇಳ್ತೀವಿ. ಬಾಬಾ ಸಾಹೇಬರ ಫೋಟೋ ಸಿನಿಮಾಗಳಲ್ಲಿ ತೋರಿಸಿದರೆ ನಿಮಗೆ ಉರಿ ಅಂತ ಗೊತ್ತು. ಇನ್ನು ಮುಂದೆ ದಲಿತರು ಬೇರೆ ಅವರ ಸಿನಿಮಾಗಳು ನೋಡುವುದನ್ನು ನಿಲ್ಲಿಸುತ್ತೇವೆ. ದಲಿತರ ಬಗ್ಗೆ ಅದೆಷ್ಟೋ ವರ್ಷಗಳ ನಂತರ ಬಂದ ಪಾಲಾರ್ ಸಿನಿಮಾ ಸೆಲೆಕ್ಟ್ ಮಾಡುವಷ್ಟು ಯೋಗ್ಯತೆ ನಿಮಗಿಲ್ಲ. ಈ ಸರ್ಕಾರಕ್ಕೆ ಕಾಶ್ಮೀರಿ ಫೈಲ್ಸ್ ಬೇಕು, ನಾಯಿ ಬಗ್ಗೆ ಕಾಲ್ಪನಿಕ ಕಥೆ ಚಾರ್ಲಿ ಬೇಕು. ಅದಕ್ಕೆಲ್ಲಾ ಟಾಕ್ಸ್ ಫ್ರೀ ಬೇರೆ ಮಾಡ್ತಾರೆ. ಜಾತಿ ಭೇದ ಭಾವ ಮಾಡೋದು ಈಗ ನೀವೇ ಅಂತ ಗೊತ್ತಾಯ್ತು ಬಿಡಿ” ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಗಾಂಧಿ ಮತ್ತು ನೋಟು’ ಇದು ಗಾಂಧಿಯ ಆದರ್ಶಗಳ ಬಗ್ಗೆ ಇರುವ ಚಿತ್ರ. ಮೊನ್ನೆ ಮಕ್ಕಳ ಚಲನಚಿತ್ರೋತ್ಸವದಲ್ಲಿ ನಾಲ್ಕು ಅವಾರ್ಡ್‌ಗಳನ್ನು ತೆಗೆದುಕೊಂಡ ಚಿತ್ರ.. ಆದರೆ ಈ #BIffs ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುವ ಭಾಗ್ಯವಿಲ್ಲ.. ಕಾರಣವೆಂದರೆ ಅಕಾಡಮಿಯ ಅಧ್ಯಕ್ಷರು, ತಂಡ ಮತ್ತು ಮಹಾನ್ ಜ್ಯೂರಿಗಳು ಹಣದ ಬೇಡಿಕೆಯ ಸದ್ದು ನನ್ನ ಕಿವಿಗೂ ಬಿದ್ದಿದೆ.. ಯಾಕ್ ಕೋಡಬೇಕು? ಎಂದು ಸಿನಿಮಾದ ನಿರ್ದೇಶಕರಾದ ಯೋಗಿ ದಾವಣಗೆರೆಯವರು ಕಿಡಿಕಾರಿದ್ದಾರೆ.

ಈ ಕುರಿತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಅಶೋಕ್ ಕಶ್ಯಪ್‌ರವರನ್ನು ಪ್ರಶ್ನಿಸಿದಾಗ “ಒಂದು ಸಿನಿಮಾ ಆಯ್ಕೆಯಾಗಬೇಕಾದರೆ ಉಳಿದ ಸಿನಿಮಾಗಳ ಜೊತೆ ಸ್ಪರ್ಧಿಸಿ ಗೆಲ್ಲಬೇಕು. ಸ್ಪರ್ಧೆಯಲ್ಲಿ ಗೆಲ್ಲದೆ ನಮ್ಮ ಸಿನಿಮಾವನ್ನು ಆಯ್ಕೆ ಮಾಡಿಲ್ಲ ಎಂದು ಕೇಳುವುದು ಯಾವ ನ್ಯಾಯ? ಕಲೆಗೆ ಮೀಸಲಾತಿ ಕೊಡಿ ಎಂದು ಕೇಳುವುದು ಸರಿಯಲ್ಲ. ಜ್ಯೂರಿಗಳಿಗೆ ನಾವು ಮರ್ಯಾದೆ ಕೊಡಬೇಕು. ಅವರ ತೀರ್ಮಾನವೆ ಅಂತಿಮ ತೀರ್ಮಾನವಾದ್ದರಿಂದ, ಜ್ಯೂರಿ ಅಧ್ಯಕ್ಷರು ಸೆಲೆಕ್ಟ್ ಮಾಡಿರುವುದಕ್ಕೆ ನಾವೆಲ್ಲರೂ ತೆಲೆಬಾಗಿ ಸ್ವೀಕರಿಸಬೇಕು” ಎಂದರು.

ಕೆಲ ಕಳಪೆ ಸಿನಿಮಾಗಳನ್ನು ಸಹ ಸೆಲೆಕ್ಟ್ ಮಾಡಲಾಗಿದೆ. ಅದಕ್ಕಿಂತಲೂ ಉತ್ತಮ ಕನ್ನಡ ಚಿತ್ರಗಳು ಇದ್ದವಲ್ಲ ಎಂಬ ಪ್ರಶ್ನೆಗೆ “ನೀವಾಗಲಿ, ಪ್ರೇಕ್ಷಕರಾಗಲಿ ಇಂತಹ ಸಿನಿಮಾ ಇರಲಿ, ಬಿಡಲಿ ಎಂದು ಹೇಳಲು ಬರುವುದಿಲ್ಲ. ಜೇಮ್ಸ್ ಸಿನಿಮಾ ಬರಬೇಕೆಂದು ನಾನು ಬಯಸಿದ್ದೆ. ಆದರೆ ಬಂದಿಲ್ಲ ಏನು ಮಾಡುವುದು? ಹೊರಗಿನವರ ಮಾತಿಗೆ ನಾವು ಕಿವಿಗೊಡುವುದಿಲ್ಲ, ಜ್ಯೂರಿ ಅಧ್ಯಕ್ಷರಾದ ಎಂ.ಎಸ್ ರಮೇಶ್ ರವರೇ ತಮ್ಮ ವಿಟೋ ಪವರ್ ಬಳಸಿ ಸಿನಿಮಾಗಳನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ನನ್ನ ಪಾತ್ರವಿಲ್ಲ ಮತ್ತು ನನಗೂ ಅದಕ್ಕೂ ಸಂಬಂಧವಿಲ್ಲ” ಎಂದರು.

ಬೆಂಗಳೂರು ಅಂತರಾಷ್ಟ್ರೀಯ ಚಲನಚತ್ರೋತ್ಸವಗಳಿಗೆ ಪ್ರತಿ ಬಾರಿಯೂ ಹಾಜರಾಗುವ ಸಿನಿಮಾಸಕ್ತ ವಿ.ಎಲ್ ಬಾಲುರವರು ನಾನುಗೌರಿಯೊಂದಿಗೆ ಮಾತನಾಡಿ, “ಪಾಲಾರ್ ಸಿನಿಮಾ ಇರಲಿ, ಮತ್ತೊಂದು ಸಿನಿಮಾ ಇರಲಿ- ಸಿನಿಮಾದ ಆಶಯದ ಮೇಲೆ ಜ್ಯೂರಿಗಳು ಸಿನಿಮಾಗಳನ್ನು ಆಯ್ಕೆ ಮಾಡಬೇಕು. ಅದು ಬಿಟ್ಟು ಮೆರಿಟ್ ಬಗ್ಗೆ ಮಾತನಾಡುವುದು ಎಲ್ಲಾ ಬೋಗಸ್ ಅಂತ ಸಿನಿಮಾ ಮಾತ್ರವಲ್ಲದೆ ಎಲ್ಲಾ ರಂಗದಲ್ಲಿಯೂ ಏನಾಗುತ್ತಿದೆ ಅಂತ ಎಲ್ಲರಿಗೂ ತಿಳಿದಿದೆ” ಎಂದರು.

Biffes ವಿಚಾರದಲ್ಲಿ ಕನ್ನಡ ಮತ್ತು ಇತರ ಸಿನಿಮಾಗಳ ಆಯ್ಕೆಯ ಮಾನದಂಡಗಳು ಏನು, ಜ್ಯೂರಿಗಳನ್ನು ಯಾರು ಆಯ್ಕೆ ಮಾಡುತ್ತಾರೆ? ಅದರ ಪ್ರಕ್ರಿಯೆಯೇನು ಎಂಬುದರ ಕುರಿತು ಎಲ್ಲಿಯೂ ಸರಿಯಾದ ಮಾಹಿತಿ ಇಲ್ಲ. ಈ ಕುರಿತು Biffes ವೆಬ್‌ಸೈಟ್‌ನಲ್ಲಿ ಪಾರದರ್ಶಕವಾಗಿ ಪ್ರಕಟಿಸಿದರೆ ಸಾಕಷ್ಟು ವಿವಾದಗಳನ್ನು ತಪ್ಪಿಸಬಹುದು. ಇಂತಹ ಕೆಲಸವನ್ನು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಮಾಡಬೇಕು ಎಂದು ಒತ್ತಾಯಿಸಿದರು.

ನಾವು Biffesಗೆ ಬರುವುದು ಪ್ರಪಂಚದ ಅಪರೂಪದ ಬೇರೆ ಬೇರೆ ದೇಶದ ಜನರ – ಸರ್ಕಾರದ ಬಗ್ಗೆ ಹೆಚ್ಚು ಹೇಳುವ ಸಿನಿಮಾಗಳನ್ನು ನೋಡುವುದಕ್ಕಾಗಿ. ಅಂತಹ ಸಿನಿಮಾಗಳು ಆಯ್ಕೆ ಆಗಬೇಕು. ಆದರೆ ಈ ಬಾರಿಯ ಸಿನಿಮಾದ ಪಟ್ಟಿ ನೋಡಿದರೆ ಕೆಲವೊಂದು ಸಿನಿಮಾಗಳನ್ನು ಹೊರತುಪಡಿಸಿ ನಿರಾಶೆ ಅನಿಸುತ್ತದೆ. ಆದರೂ Biffes ನೋಡಿದಮೆಲೆ ಸಿಗುವ ಅನುಭವಕ್ಕಾಗಿ ಕಾಯುತ್ತಿರುವ ಸಿನಿ ಅಭಿಮಾನಿಗಳಲ್ಲಿ ನಾನು ಒಬ್ಬ. ನನ್ನಂಥಹ ಬಹಳಷ್ಟು ಸಿನಿಪ್ರೇಮಿಗಳ ಆಶಯವನ್ನು ಅಧ್ಯಕ್ಷರು ಅರ್ಥಮಾಡಿಕೊಳ್ಳಬೇಕು ಎಂದರು.

ಇದನ್ನೂ ಓದಿ: ‘ಬಿಫೆಸ್‌’ನಲ್ಲಿ ಸಾವರ್ಕರ್‌ ಪ್ರತ್ಯಕ್ಷ; ಮಾದರಿ ವ್ಯಕ್ತಿಗಳ ಪೈಕಿ ‘ಅಂಬೇಡ್ಕರ್‌’ ನಾಪತ್ತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...